
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿ ಸಾರದ ಅಧಿಕೃತ ಜಾಲತಾಣದ ವತಿಯಿಂದ ನಮಸ್ಕಾರಗಳು, ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಸರ್ಕಾರವು ಯೂರಿಯಾದ ಕಾಳುಗಳ ಬದಲು ನ್ಯಾನೋ ಯೂರಿಯಾ ಎಂದು ಲಿಕ್ವಿಡ್ ರೂಪದಲ್ಲಿ ಬಿಡುಗಡೆ ಮಾಡಲಾಯಿತು, ಇದು ಯೂರಿಯಾದ ಕಾಳುಗಳಿಗಿಂತ, ಅಧಿಕ ಉಪಯೋಗವನ್ನು ರೈತರು ಪಡೆದುಕೊಂಡರು.
ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-schemes/
ಅದೇ ರೀತಿಯಾಗಿ ಈಗ ಸರ್ಕಾರವು DAP ಗೊಬ್ಬರದ ಬದಲು ನ್ಯಾನೋ ಡಿಎಪಿ ಎಂದು ವಾಣಿಜ್ಯವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ನ್ಯಾನೋ ಡಿಎಪಿ 500 ml ಲಿಕ್ವಿಡ್ ಬಾಟಲ್ ಒಂದು ಚೀಲದ ಡಿಎಪಿಗೆ ಸಮ ಎಂದು ಹೇಳಲಾಗುತ್ತಿದೆ. ಈ ನ್ಯಾನೋ ಡಿಎಪಿಯನ್ನು ಮುಂದಿನ ಮುಂಗಾರು ಹಂಗಾಮಿನೊಳಗೆ ರೈತರ ಕೈಗೆ ಸಿಗುವಂತೆ ಮಾಡುವುದು ಸರ್ಕಾರದ ಮುಖ್ಯ ಕೆಲಸವಾಗಿದೆ ಎಂದು ತಿಳಿಸಲಾಗಿದೆ. ಇದನ್ನು ಕೃಷಿ ಸಚಿವಾಲಯವು ನಿರ್ಧಾರ ಮಾಡಿ ಆದಷ್ಟು ಕಮ್ಮಿ ಬೆಲೆಗೆ ರೈತರಿಗೆ ಸಿಗುವಂತೆ ಮಾಡುವ ನಿರ್ಧಾರ ಹೊಂದಿದೆ.
ಸಾಮಾನ್ಯವಾಗಿ ರೈತರು ಒಂದು ಚೀಲ 50 kg ಡಿಎಪಿ ಗೊಬ್ಬರಕ್ಕೆ 1350 ರಿಂದ 1450 ರೂ ಗಳನ್ನು ಕೊಟ್ಟು ಖರೀದಿ ಮಾಡಿ ಹಾಕೋದಿದ್ದರು ಈಗ IFFCO ಕಂಪನಿ ವತಿಯಿಂದ ಅದೇ ಐವತ್ತು ಕೆಜಿ DAP ಯ ಬದಲಿಗೆ ಒಂದು ಬಾಟಲ್ ನ್ಯಾನೋ DAP ಯನ್ನು ಉತ್ಪನ್ನ ಮಾಡತೊಡಗಿದೆ. ಇದನ್ನು ಕೋರಮಂಡಲ ಇಂಟರ್ನ್ಯಾಷನಲ್ ನ್ಯಾನೋ DAP ಗೆ ಅನುಮೋದನೆ ಅರ್ಜಿಯನ್ನು ಸಲ್ಲಿಸಿದೆ.
ಸರ್ಕಾರವು ಮುಂದಿನ ಮುಂಗಾರು ಹಂಗಾಮಿ ನೊಳಗೆ ರಸಗೊಬ್ಬರದ ಸಚಿವಾಲಯದ ಕಡೆಯಿಂದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆಯನ್ನು ಹೆಚ್ಚಿಗೆ ಮಾಡಲು ಮತ್ತು ರೈತರಿಗೆ ಅದರ ಬಗ್ಗೆ ಅದರ ಸದುಪಯೋಗ ಪಡೆಯಲು ಮತ್ತು ಅದರ ಉಪಯೋಗಗಳನ್ನು ತಿಳಿಸಿ ಹೆಚ್ಚು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಬಳಸಲು ಸಬ್ಸಿಡಿಯ ಮೂಲಕ ರೈತರನ್ನು ಅತಿ ಹೆಚ್ಚು ಬಳಸಲು ಉರಿದುಂಬಿಸಿದಂತೆ ಆಗುತ್ತದೆ.
[…] ಇದನ್ನೂ ಓದಿ :- 1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು??? https://mahitisara.com/uses-of-nano-dap-and-how-to-use-nano_dap/agripedia/ […]