
ಎಲ್ಲಾ ರೈತ ಬಾಂಧವರಿಗೆ ಆದರದ ಸ್ವಾಗತ, ಸರ್ಕಾರವು ರೈತರಿಗೋಸ್ಕರ ಹಲವಾರು ಯೋಜನೆಗಳನ್ನು ತಂದಿದೆ ಅದರಲ್ಲಿ ಈ ಯೋಜನೆಯ ಕೂಡ ಒಂದು.
ಜಿಲ್ಲೆಗೆ ಜಾತಿವಾರು ಪ್ರಕಾರ, S C – 8,ST-2, ಮತ್ತು ಸಾಮಾನ್ಯವಾಗಿದವರಿಗೆ 52, ಮತ್ತು ಒಟ್ಟು 62. ಗುರಿಯನ್ನು ನಿಗದಿಪಡಿಸಲಾಗಿದೆ.
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯತ್ವವನ್ನು ಹೊಂದಿರುವ ಯಾವುದೇ ವ್ಯಕ್ತಿ ಅಂದರೆ 18 ರಿಂದ 60 ವರ್ಷದ SC ಅಥವಾ ST ಹಾಗೂ ಇತರ ಸಾಮಾನ್ಯ ವರ್ಗದ ಸದಸ್ಯರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದರ ಮುಂದಿನ ಅರ್ಜಿಯನ್ನು ಕಚೇರಿಯಲ್ಲಿ ಅಥವಾ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಕಚೇರಿಗಳಲ್ಲಿ, ಫೆಬ್ರವರಿ 6 ರಿಂದ ಫೆಬ್ರವರಿ 20, 2023 ಒಳಗಾಗಿ ಬೇಕಾದ ಅವಶ್ಯಕವಾದ ದಾಖಲೆಗಳನ್ನು ಜೋಡಿಸಿ ಮತ್ತು ಅರ್ಜಿಯೊಂದಿಗೆ ಕಚೇರಿಯಲ್ಲಿ ಅಥವಾ ತಿಗಮದಲ್ಲಿ ಸಲ್ಲಿಸಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು, ಇದು ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಉಪನಿರ್ದೇಶಕರು ಬೆಳಗಾವಿ,ಇವರು ತಿಳಿಸಿದ್ದಾರೆ.
72 ವರ್ಷದ ಹಿಂದಿನ ಬಂಗಾರದ ಬೆಲೆ ನಿಮಗೆ ಗೊತ್ತೇ ?https://mahitisara.com/index.php/2023/01/30/gold-price-in-1960s-bill-of-customer-goes-viral-on-internet/
ಈ ಅರ್ಜಿಯನ್ನು ಸಲ್ಲಿಸಲು ಬೇಕಾದ ಅಥವಾ ಅವಶ್ಯಕವಾದ ದಾಖಲೆಗಳು ಯಾವುವು ಈ ಕೆಳಗಿನ ನೋಡಿ??
- ಜಾತಿ ಪ್ರಮಾಣ ಪತ್ರ
- ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸದಸ್ಯತ್ವ ಪ್ರಮಾಣ ಪತ್ರ.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಮತ್ತು ಅರ್ಜಿ ಸಲ್ಲಿಸುವ ಮತದಾನದ ಗುರುತಿನ ಚೀಟಿ.
- ಮತ್ತು ಅರ್ಜಿದಾರನು ಕುರಿಯನ್ನು ಕಾಯುವ ( ಕುರಿಗರೆoಬ ) ಗುರುತಿನ ಚೀಟಿ.
ಈ ಸಬ್ಸಿಡಿಯನ್ನು ಸರ್ಕಾರ ನೀಡಲು ಮುಖ್ಯ ಉದ್ದೇಶಗಳು!!?
ಕುರಿಗಾರರು ತಮ್ಮ ಆದ್ಯತೆಗಳನ್ನು ರೂಪಿಸಲು ಅನುಗುಣ ವಾಗುವಂತಹ ವೇದಿಕೆಯನ್ನು ನಿರ್ಮಿಸಲು, ಹಾಗೂ ಕುರಿ ಮತ್ತು ಉಣ್ಣೆಯ ಉತ್ಪಾದನೆ ಜಾಸ್ತಿ ಮಾಡಲು, ಸರ್ಕಾರದಿಂದ ಗುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು ಈ ಸೊಸೈಟಿಗಳ ಮೂಲಕ ಆಡಳಿತವನ್ನು ಹೆಚ್ಚಾಗಿ ಕುರಿ ಮತ್ತು ಮೇಕೆಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ.
ಈ ಸಹಕಾರ ಸಂಘಗಳು ಜನರಿಗೆ ಅತಿ ಹೆಚ್ಚು ಸೌಲಭ್ಯಗಳು ಮತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ, ಈ ಕಾರ್ಯಲಯವು ಹೋಬಳಿ ಮಠದಲ್ಲಿ ಪ್ರತಿ 15000 ಕುರಿ ಮತ್ತು ಮೇಕೆಗಳಿಗೆ ಒಂದಾಗಿದೆ, ಇದೇ ರೀತಿಯಾಗಿ ಎಲ್ಲಾ ಹೋಬಳಿಯಲ್ಲೂ ಇದೇ ರೀತಿಯಾಗಿ ಹಲವಾರು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿಯಲ್ಲಿ ಸುಮಾರು 600 ರಿಂದ 650 ಸಹಕಾರ ಸಂಘಗಳು ಇದರ ಕಾರ್ಯರೂಪದಲ್ಲಿದೆ.
ಈ ಸಹಕಾರ ಸಂಘದ ಮೂಲಕ ಅತಿ ಹೆಚ್ಚು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವವರನ್ನು ಆರ್ಥಿಕ ಮತ್ತು ಸಾಮಾಜಿಕ ಹಾಗೂ ತಾಂತ್ರಿಕವಾಗಿ, ಮತ್ತು ಅತಿ ಹೆಚ್ಚು ಮುಖ್ಯವಾಗಿ ಕುರಿ ಮತ್ತು ಮೇಕೆಗಳಿಗೆ ಏನೇ ಆರೋಗ್ಯದ ಸಮಸ್ಯೆ ಬಂದಲ್ಲಿ ಅದರ ರಕ್ಷಣೆ ಹಾಗೂ ರೋಗದ ನಿಯಂತ್ರಣ, ಇನ್ನೂ ಹೆಚ್ಚಾಗಿ ರೋಗಗಳು ಬರುವುದಕ್ಕಿಂತ ಮುಂಚೆ ಏನೆಲ್ಲಾ ಮುಂಜಾಗ್ರತೆ ಕಾರ್ಯವನ್ನು ಮಾಡಬೇಕೆಂದು ತಿಳಿಸಲಾಗುತ್ತದೆ.
ಈ ಸಂಘವು ಕರ್ನಾಟಕ ಸರ್ಕಾರದ ಅಡಿಯಲ್ಲಿ 1975 ರಂದು ಕರ್ನಾಟಕ ಕುರಿ ಮತ್ತು ಉಣ್ಣೆ ಉತ್ಪನ್ನಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು. ನಂತರ ಕುರಿಯಿಂದ ಬರುವ ಹಲವಾರು ಉತ್ಪನ್ನಗಳಾದ ಮಾಂಸ ಚರ್ಮ ಉಣ್ಣೆ ಹಾಗೂ ಗೊಬ್ಬರ ಮತ್ತು ಮುಖ್ಯವಾಗಿ ಹಾಲು ಸಂಸ್ಕಾರಣ ಮತ್ತು ಮುಂದಿನ ಮಾರುಕಟ್ಟೆಗಳ ಸಂಬಂಧಿಸಿದಂತೆ, ಅದರ ಮಾರುಕಟ್ಟೆಯ ವ್ಯವಹಾರವನ್ನು ಸಂಬಂಧಿಸಿದ ಹಲವು ಕಾರ್ಯಗಳನ್ನು ನಿಭಾಯಿಸುತ್ತಾ ಬಂದಿದೆ.
ಮಾಹಿತಿಸಾರ್ ವಾಟ್ಸಾಪ್ ಗ್ರೂಪ್ ದಿನ ನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Iaa2LrQV1IDHl8rbkKlxlu