
ಆತ್ಮೀಯ ರೈತರ ನಿಮಗೆಲ್ಲರಿಗೂ ಮಾಹಿತಿ ಸರದ ಅಧಿಕೃತ ಜಾಲತಾಣದ ವತಿಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆ ಗೊತ್ತಿರುವಂತೆ ರೈತರಿಗೆ ಅನೇಕ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಪರಿಹಾರ ನೀಡುವಂತಹ ಹಲವಾರು ಸರ್ಕಾರದ ಸಹಾಯ ವಾಣಿಗಳು ತುಂಬಾ ಇವೆ, ಇತರ ತುರ್ತು ಸಹಾಯವಾಣಿಗಳು ರೈತರಿಗೆ ತುಂಬಾ ಅನುಕೂಲಕರವಾಗಿದ್ದು, ಇದರಲ್ಲಿ ಯಾವ ಯಾವ ಕೃಷಿ ಸಂಬಂಧಿಸಿದ ಉಚಿತ ಕರೇ ಸಹಾಯವಾಣಿಗಳನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.
1. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಗ್ರಿವಾರ್ರೂಮ್ ಅಥವಾ ರೈತ ಚೇತನ ಸಹಾಯವಾಣಿ 1800-425-1150, ಈ ಸಹಾಯ ವಾಣಿಯ ಮೂಲಕ ರೈತರ ಬೆಳೆದ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟವಾಗದೆ ಇರುವಂತಹ ಉತ್ಪನ್ನಗಳನ್ನು ಶೇಖರಣೆ ಮಾಡಿ ಮಾರುಕಟ್ಟೆ ಬೆಲೆ ಹೆಚ್ಚಾದಾಗ ಅವುಗಳನ್ನು ಸರಿಯಾದ ಟೈಮ್ ನಲ್ಲಿ ರೈತರಿಗೆ ಒದಗಿಸಲು ಶೇಖರಣೆ ಮಾಡಿ ಇಟ್ಟುಕೊಳ್ಳುತ್ತಾರೆ.
ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-schemes/
2. ಬಾಗಲಕೋಟೆ ಕೃಷಿ ವಿಶ್ವ ವಿದ್ಯಾಲಯದ ಉದ್ಯಾನ ಸಹಾಯವಾಣಿ 1800-425- 7910 ರೈತರಿಗೆ ಯಾವುದೇ ತೋಟಗಾರಿಕೆ ಬೆಳೆಗಳಲ್ಲಿ ಸಮಸ್ಯೆ ಉಂಟಾದಲ್ಲಿ ಮತ್ತು ಉದ್ಯಾನವನದ ಸಮಸ್ಯೆಯಾಗಿದ್ದಲ್ಲಿ ಯಾವುದೇ ತೋಟಗಾರಿಕಾ ಸಮಸ್ಯೆ ಉಂಟಾದಾಗ ಈ ನಂಬರ್ ಗೆ ಕರೆ ಮಾಡಿ ತಮ್ಮ ಗೊಂದಲ ಮತ್ತು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ.
3. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ರೈತರ ಸಹಾಯವಾಣಿ 1800- 425-3553 ಈ ಸಹಾಯ ವಾಣಿಯೂ ಕೃಷಿ ಇಲಾಖೆಯಿಂದ ನಿಮಗೆ ಇರುವಂತಹ ಸೌಲಭ್ಯಗಳು ಮತ್ತು ಯೋಜನೆಯ ಬಗ್ಗೆ ಮತ್ತು ಕೃಷಿ ಅಪ್ಲಿಕೇಶನ್ ಅನ್ನು ಉಪಯೋಗ ಮಾಡುವ ಬಗ್ಗೆ ಮತ್ತು ಯೋಜನೆಗೆ ಬೇಕಾದಂತಹ ದಾಖಲಾತಿಗಳನ್ನು ಯಾವ ರೀತಿಯಲ್ಲಿ ತರಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ನಂಬರ್ ಒದಗಿಸಿ ಕೊಡುತ್ತೇದೆ.
4. ಕರ್ನಾಟಕದ ಪಶುಪಾಲನೆ ಇಲಾಖೆ ನಂಬರ್ 1800-425-0012 ಈ ಸಹಾಯವಾಣಿ ಹೈನುಗಾರಿಕೆ ಮತ್ತು ಕುರಿ ಕೋಳಿಗಳ ಸಾಕಾಣಿಕೆಯಲ್ಲಿ ಏನೇ ಸಮಸ್ಯೆಗಳು ಅಥವಾ ಏನೇ ರೋಗಗಳ ಬಂದರು ಅದರ ಮುಂಜಾಗ್ರತೆಯನ್ನು ಕೈಗೊಳ್ಳುವುದು ಮತ್ತು ಅದರಲ್ಲಿ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಈ ನಂಬರಿಗೆ ಕರೆ ಮಾಡಿ.
5. ರೈತರ ಇದು ನಿಮಗೆ ಅಗತ್ಯವಾದ ನಂಬರ್ ಕಿಸಾನ್ ಕಾಲ್ ಸೆಂಟರ್ 1800-180-1551 ಈ ನಂಬರ್ ನಿಮಗೆ ಕಿಸಾನ್ ಕಾಲ್ ಸೆಂಟರ್ ನಂಬರ್ ಆಗಿದೆ. ನಿಮಗೆ ಯಾವುದೇ ರೀತಿ ಸಮಸ್ಯೆಗಳು ಮತ್ತು ಗೊಂದಲಗಳು ಬಂದರೆ ಈ ನಮ್ಮಗೆ ಕರೆ ಮಾಡಿ ವಿಚಾರಿಸಿ.
ಗಮನಿಸಿ :- ರೈತರಿಗೆ ಅಗತ್ಯವಾಗಿ ಕೃಷಿ ಮಾರುಕಟ್ಟೆಯಲ್ಲಿ ಯಾವ ಯಾವ ಉತ್ಪನ್ನಗಳಿಗೆ ಎಷ್ಟು ಎಷ್ಟು ಬೆಲೆ ಇದೆ ಎಂಬ ಮಾಹಿತಿಯನ್ನು ಕರ್ನಾಟಕ ಸರ್ಕಾರದಿಂದ ಉಚಿತವಾಗಿ ಕರೆ ಮಾಡಿ ತೆಗೆದುಕೊಳ್ಳುವ ಅವಕಾಶ ನೀಡಿದೆ ಇವನ್ನೆಲ್ಲ ತಿಳಿದುಕೊಳ್ಳಲು ಈ ನಂಬರಿಗೆ ಕರೆ ಮಾಡಿ 1800-425-1552. ಈ ನಂಬರಿಗೆ ಕರೆ ಮಾಡಿ ನಿಮಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಎಷ್ಟು ಬೆಲೆ ಇದೆ ಎಂದು ತಿಳಿದುಕೊಳ್ಳಿ.