Spread the love

ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ. ನೀಡಲು ಮನಸ್ಸು ಮಾಡಿದ್ದ ರಾಜ್ಯ ಸರ್ಕಾರ ಇದೀಗ ಕಬ್ಬು ಬೆಳೆಗಾರರಿಗೆ ಹೊಸ ವರ್ಷಕ್ಕೆ ಮತ್ತೊಂದು ಕೊಡುಗೆ ನೀಡಿ ಆದೇಶ ಹೊರಡಿಸಿದೆ.

ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಮೊಲ್ಯಾಸಿಸ್‌ನಿಂದ ಬರುವ ಲಾಭಾಂಶದಲ್ಲಿ ರೈತರಿಗೆ ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ಆದೇಶಿಸಿದೆ.

ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 2023ರ ಹೊಸವರ್ಷಕ್ಕೆ ವಿಶೇಷ ಕೊಡುಗೆ ನೀಡಿದೆ ಎನ್ನಬಹುದು. ಈ ಹಿಂದೆ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ.ಗಳಂತೆ ಒಟ್ಟು ಎಥೆನಾಲ್‌ನಿಂದ 204 ಕೋಟಿ ರೂ.ಹಣವನ್ನು ಬೆಳಗಾರರಿಗೇ ನೀಡಲು ಸರ್ಕಾರ ಆದೇಶಿಸಿತ್ತು.

ಕಬ್ಬು ಬೆಳಗಾರರಿಗೆ 1ನೇ ಹಂತದಲ್ಲಿ 21ಕೋಟಿ ರೂ. ಪಾವತಿ ಶೀಘ್ರ: ಬೊಮ್ಮಾಯಿ

ಕಬ್ಬು ಬೆಳಗಾರರಿಗೆ 1ನೇ ಹಂತದಲ್ಲಿ 21ಕೋಟಿ ರೂ. ಪಾವತಿ ಶೀಘ್ರ: ಬೊಮ್ಮಾಯಿ

ಕಬ್ಬು ಬೆಳಗಾರರಿಗೆ 1ನೇ ಹಂತದಲ್ಲಿ 21ಕೋಟಿ ರೂ. ಪಾವತಿ ಶೀಘ್ರ: ಬೊಮ್ಮಾಯಿ

ಹೌದು. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಇಂದು(ಡಿಸೆಂಬರ್ 29) ಆದೇಶ ಹೊರಡಿಸಿದೆ. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್‌ಆರ್‌ಪಿ ದರ ಹೊರತುಪಡಿಸಿ, ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಈವರೆಗೆ ಆದೇಶಿಸಲಾಗಿದೆ.

ರೈತರ ಬೇಡಿಕೆ ಆಗಿರುವ ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ಬೆಲೆ) ದರ ಹೊರತುಪಡಿಸಿ, ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ಕಾರ್ಖಾನೆಗಳಿಗೆ ಆದೇಶದಡಿ ಸೂಚಿಸಲಾಗಿದೆ. ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂ. ಹೆಚ್ಚುವರಿಯಾಗಿ ಸಂದಾಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಪ್ರತಿಭಟನೆ ಮಾಡಿದ್ದ ರೈತರು

ರಾಜ್ಯದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಲ್ಲಿ ಕಬ್ಬು ಬೆಳೆಗಾರರು ಸಹ ಇದ್ದಾರೆ. ಈ ವರ್ಷ ರೈತರು ಚೇತರಿಸಿಕೊಂಡರು ಎನ್ನುವಷ್ಟರಲ್ಲಿ ಹವಾಮನಾ ಬದಲಾವಣೆಗಳಿಂದ ಅಕಾಲಿಕ ಮಳೆ ಸುರಿದು ಗಾಯದ ಮೇಲೆ ಬರೆ ಎಳೆಯಿತು. ನೆರೆಯಿಂದ ಕೃಷಿ ಹಾನಿಯಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ವಾಣಿಜ್ಯ ಬೆಳೆ ಕಬ್ಬು ಸಹ ಲಾಭದಾಯಕವಾಗಲಿಲ್ಲ ಎಂಬ ಕೊರಗು ಬೆಳೆಗಾರರಲ್ಲಿದೆ. ಹೀಗಾಗಿಯೇ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಕಬ್ಬಿಗೆ ಬಂದಿರುವ ಮುಪ್ಪು ಕಾಯಿಲೆ ಆತಂಕಕ್ಕೆ ದೂಡಿತ್ತು. ಕಬ್ಬಿಗೆ ಬೆಂಬಲ ಬೆಲೆ, ಉಪ ಉತ್ಪನ್ನಗಳ ಲಾಭಾಂಶ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದ್ದರು.

Leave a Reply

Your email address will not be published. Required fields are marked *