
ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ಎಲ್ಲರಿಗೂ ನಮಸ್ಕಾರಗಳು, ಭಾರತ ಸರಕಾರವು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಲೇ ಬಂದಿದ್ದು, ರೈತನಿಗೆ ಆರ್ಥಿಕ ರೀತಿಯಿಂದ ಸಹಾಯವಾಗಲೆಂದು ನಾನಾ ರೀತಿಯ ಯೋಜನೆಯನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ಟ್ರಾಕ್ಟರ್ ಸಬ್ಸಿಡಿ ಇದು ಅವಕಾಶ ನೀಡುತ್ತದೆ.
ಇದನ್ನು ಓದಿ : ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿ? https://mahitisara.com/pm-kisan-13th-installment-deposit-27th-at-3-pm/%e0%b2%95%e0%b3%83%e0%b2%b7%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/
ರೈತರ ಸಮುದಾಯಕ್ಕೆ ಸಹಾಯವಾಗಲೆಂದು, ಖರ್ಚು ಕಡಿಮೆಯಾಗಲೆಂದು , ಹೆಚ್ಚಿನ ಆದಾಯ ಮತ್ತು ಹೆಚ್ಚಿನ ಉತ್ಪಾದನಾಕ್ಕಾಗಿ ಮೋದಿ ಸರಕಾರವು , ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಪಿಎಂ ಕಿಸಾನ್ ಯೋಜನೆ ಅಡಿ ಎಲ್ಲ ರೈತರು ಪ್ರತಿ ವರ್ಷ 6,000ಗಳನ್ನು ಪಡೆಯುತ್ತಲಿದ್ದಾರೆ , ಈ ಯೋಜನೆಯಿಂದ ರೈತರು ಐವತ್ತು ಪರ್ಸೆಂಟ್ ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಅನ್ನು ಖರೀದಿಸಬಹುದು. PM ಕಿಸಾನ್ ಟ್ರ್ಯಾಕ್ಟರ್ ಯೋಜನೆ 2023. ಈ ಯೋಜನೆ ಅಡಿಯಲ್ಲಿ ರೈತನಿಗೆ ಟ್ರ್ಯಾಕ್ಟರ್ ಖರೀದಿಸಲು ಮಾಡುವ ಸಾಲದ ಮೇಲೆ ಸಬ್ಸಿಡಿ ಅನ್ನು ನೀಡಲಾಗುತ್ತದೆ. ಇದರಿಂದ ರೈತನಿಗೆ ಖರ್ಚು ಕಡಿಮೆ ಆಗುತ್ತದೆ , ತೊಂದರೆಗಳು ತಪ್ಪುತ್ತವೆ ಮತ್ತು ಟ್ರ್ಯಾಕ್ಟರ್ ಖರೀದಿಸಲು ಸುಲಭವಾಗುತ್ತದೆ.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಫಲಾನುಭವಿಯಾಗಲು ಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸುವುದು ಹೇಗೆ ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಯೋಜನೆಗೆ ಬೇಕಾದ ಅರ್ಹತೆಗಳು.
ಈ ಯೋಜನೆಯ ಫಲಾನುಭವಿಗಳಾಗಬೇಕೆಂದರೆ ರೈತರು ಭಾರತದ ಖಾಯಂ ನಿವಾಸಿಗಳಾಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು. ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಶೇಕಡ 40 ರಿಂದ 90ರಷ್ಟು ಸಹಾಯಧನ ಸರಕಾರ ನೀಡಲಿದ್ದು . ಸರಾಸರಿ 4 ಲಕ್ಷ ರೂಪಾಯಿವರೆಗೆ ರೈತನಿಗೆ ನೀಡಲಾಗುತ್ತದೆ. ಕೃಷಿ ಯಂತ್ರಗಳನ್ನು ಪಡೆಯಲು ಶೇಕಡ 40 ರಿಂದ 90 ರಷ್ಟು ಸಹಾಯಧನ.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಆನ್‌ಲೈನ್‌ನಲ್ಲಿ ಮಾತ್ರ ಪೂರ್ಣಗೊಳಿಸಬಹುದು. ಅದರ ಆಧಾರದ ಮೇಲೆ ನೀವು ಸರ್ಕಾರ ಜಾರಿಗೆ ತಂದ ಈ ಯೋಜನೆಯ ಲಾಭವನ್ನು ಪಡೆಯುತ್ತೀರಿ. ಯೋಜನೆಯ ಪ್ರಯೋಜನಗಳನ್ನು ಪಡೆಯಲು ನಮ್ಮ ಪುಟದಲ್ಲಿ ನೀಡಿರುವ ಪ್ರಕ್ರಿಯೆ ಮತ್ತು ವಿವರಗಳನ್ನು ನೀವೆಲ್ಲರೂ ಎಚ್ಚರಿಕೆಯಿಂದ ಓದಬೇಕು ಇದರಿಂದ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಇದು,ಕೃಷಿ ಯಾಂತ್ರೀಕರಣ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (RKVY) ಯ ಒಂದು ಭಾಗವಾಗಿದೆ ಮತ್ತು ಇದನ್ನು ಮಿಷನ್ ಮೋಡ್‌ನಲ್ಲಿ ಅಳವಡಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ, ಟ್ರ್ಯಾಕ್ಟರ್ ಖರೀದಿಸಲು ಒಟ್ಟು ಆದಾಯದ 40 ರಿಂದ 90 ಪ್ರತಿಶತವನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ. ಈ ಸಬ್ಸಿಡಿಯು ಟ್ರ್ಯಾಕ್ಟರ್ ಬೆಲೆಯನ್ನು ಅವಲಂಬಿಸಿರುತ್ತದೆ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ 2023 ಆನ್‌ಲೈನ್‌ನಲ್ಲಿ ಅನ್ವಯಿಸಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿ ಗಳೇನು?
ಆಧಾರ್ ಕಾರ್ಡ್
ಹೊಲದ ಉತಾರ
ಪ್ರಮಾಣ ಪತ್ರ
ಪಾಸ್ಪೋರ್ಟ್ ಗಾತ್ರದ ಫೋಟೋ
ಬ್ಯಾಂಕ್ ಪಾಸ್ ಬುಕ್
ಪ್ಯಾನ್ ಕಾರ್ಡ್
ಗುರುತಿನ ಪುರಾವೆ
ವೋಟರ್ ಐಡಿ.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/DWwuT4zbwG379nGfgQTydZ