Spread the love

ಎಲ್ಲ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು. ರೈತರೇ ಈಗ ನಿಮ್ಮ ಫೋನ್ ಅಲ್ಲಿಯೇ ನಿಮ್ಮ ಹೊಲದ ಅಥವಾ ತೋಟದ ನಕ್ಷೆ.
ರಾಜ್ಯದ ರೈತರಿಗೆ ಕರ್ನಾಟಕ ಸರಕಾರವು ಮತ್ತೊಂದು ಭರ್ಜರಿ ಬಹುಮಾನ ನೀಡಿದೆ. ಅದುವೇ ರೈತರ ತಮ್ಮ ಮೊಬೈಲ್ ನಲ್ಲಿ ಹೊಲದ ಅಥವಾ ತೋಟದ ಮ್ಯಾಪ್ ಮತ್ತು ಅದರ ನಕ್ಷೆಯನ್ನು ತಮ್ಮ ಮೊಬೈಲ್ ನಲ್ಲೇ ಲಭ್ಯವಿರುವಂತೆ ಮಾಡಲಾಗಿದೆ.



ಈ ಆಪ್ ಯಾವುದು?? ಇದರಿಂದ ಆಗುವ ಪ್ರಯೋಜನಗಳು??
ಕರ್ನಾಟಕ ಸರ್ಕಾರದ ಭೂಮಪನ ಮತ್ತು ಕಂದಾಯ ಇಲಾಖೆಯವರು ರೈತರಿಗೋಸ್ಕರ ಜಮೀನಿನ ನಕ್ಷೆಯನ್ನು ಮತ್ತು ಅದರ ಮ್ಯಾಪ್ ಅದರಲ್ಲಿ ರೈತರು ಓಡಾಡುವ ಕಾಲುದಾರಿ ಹಾಗೂ ರಸ್ತೆ ದಾರಿ ಇನ್ನು ಎಲ್ಲಾ ಹಲವು ಬೇಕಾದ ಮಾಹಿತಿಯನ್ನು ಈ ಆಪ್ ನಲ್ಲಿ ಸ್ಪಷ್ಟಪಡಿಸಲಾಗಿದೆ.



ರೈತರಿಗೆ ತಮ್ಮ ಕೈ ಬೆರಳ ತುದಿಗೆ ಎಲ್ಲವೂ ಕೂಡ ಸಿಗುವಂತೆ ಕರ್ನಾಟಕ ಸರ್ಕಾರವು ಈ ಅಪ್ ಅನ್ನು ಸೃಷ್ಟಿಸಲಾಗಿದೆ, ಇದರಲ್ಲಿ ಜಮೀನ ಮ್ಯಾಪ್ ಅಥವಾ ಎಲ್ಲಿ ಬೇಕಾದರೂ ನೋಡಬಹುದು.



ಸ್ವಲ್ಪ ವರ್ಷದ ಹಿಂದೆ ರೈತರಿಗೆ ತಮ್ಮ ಹೊಲದ ಅಥವಾ ತೋಟದ ನಕ್ಷೆ ಬೇಕಾಗಿದ್ದರೆ, ಅವರು ಕಂದಾಯ ಇಲಾಖೆ ತಾಲೂಕು ಕಚೇರಿ ಈ ರೀತಿ ಇಲಾಖೆಗಳಿಗೆ ಭೇಟಿ ನೀಡಿ ತಮ್ಮ ನಕ್ಷೆಯನ್ನು ಪಡೆಯಬೇಕಾಗಿತ್ತು. ಮತ್ತು ಅಲ್ಲಿ ಅರ್ಜಿ ಸಲ್ಲಿಸುವುದು ಇದೆಲ್ಲಾ ಕಷ್ಟಕರವಾದ ಮತ್ತು ಸಮಯ ವ್ಯರ್ಥ ಮಾಡುವಂತ ಪದ್ಧತಿ ಆಗಿತ್ತು. ಈಗ ಎಲ್ಲವೂ ಕೂಡ ರೈತರ ಬೆರಳ ತುದಿಗೆ ಸಿಗುವಂತೆ ಸರ್ಕಾರ ಮಾಡಲಾಗಿದೆ.



ಮೊಬೈಲ್ ನಲ್ಲಿ ಹೊಲದ ನಕ್ಷೆ ಅಥವಾ ತೋಟದ ನಕ್ಷೆ ನೋಡುವುದು ಹೇಗೆ??
ರೈತರ ನಿಮ್ಮ ಹೊಲದ ಅಥವಾ ತೊಟದ ನಕ್ಷೆಯನ್ನು ನೋಡಲು, ನೀವು ಮೊದಲು ಸರ್ಕಾರದ ಅಫಿಶಿಯಲ್ ವೆಬ್ ಸೈಟನ್ನು open ಮಾಡಬೇಕು.
http://www.landrecords.karnataka.gov.in/

ಈ ಮೇಲಿನ ಲಿಂಕ್ ಅನ್ನು ತೆಗೆದ ನಂತರ ರಾಜ್ಯ ಸರ್ಕಾರ ಕಂದಾಯ ಇಲಾಖೆ ಮುಖಪುಟ ಓಪನ್ ಆಗುತ್ತದೆ, ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಮುಖ್ಯವಾಗಿ ಹೊಲಕ್ಕೆ ಸಂಬಂಧಪಟ್ಟ ತಾಲೂಕು, ಜಿಲ್ಲೆ, ಹೋಬಳಿ ಮತ್ತು ಹಳ್ಳಿ ವಿವರಗಳನ್ನು ಕೇಳುತ್ತದೆ.



ನಂತರ ನಿಮಗೆ ಬೇಕಾದ ಊರಿನ ಮಾಹಿತಿ ಪಿಡಿಎಫ್(pdf )ರೀತಿಯಲ್ಲಿ ಓಪನ್ ಆಗುತ್ತದೆ, ಅಲ್ಲಿ ನಿಮಗೆ ಬೇಕಾದ ಊರಿನ ತೋಟದ ಮಾಹಿತಿಯನ್ನು ತೆಗೆದುಕೊಳ್ಳಬಹುದು.
ಮತ್ತು ಅದೇ ರೀತಿಯಲ್ಲಿ ಸುತ್ತಮುತ್ತ ವಿನ ಸರ್ವೆ ನಂಬರ್ ಗಳು. ಮತ್ತು ಆ ಸರ್ವೇ ನಂಬರಗಳಿಗೆ ಸಂಬಂಧಿಸಿದಂತೆ ಸುತ್ತಮುತ್ತಲಿನ ಎಲ್ಲಾ ಹಳ್ಳ, ಕೊಳ್ಳ,ನದಿ, ಕಾಲುವೆ, ಹಾಗೂ ಕಾವಲು ದಾಳಿಗಳು ಮುಖ್ಯ ರಸ್ತೆಗಳು. ಇದರ ಎಲ್ಲ ಮಾಹಿತಿಯನ್ನು ರೈತರು ಕೂತಲ್ಲಿ ತಮ್ಮ ಬೆರಳ ತುದಿಯಲ್ಲಿ ನೋಡಬಹುದಾಗಿದೆ.

2 thoughts on “ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ”

Leave a Reply

Your email address will not be published. Required fields are marked *