
ಎಲ್ಲ ರೈತ ಬಾಂಧವರಿಗೂ ಮಾಹಿತಿ ಸಾರ ಅಧಿಕೃತ ವೆಬ್ಸೈಟ್ ಇಂದ ನಮಸ್ಕಾರಗಳು. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿಯ ಪಾಲು ಮಹತ್ವದ್ದಾಗಿದೆ. ದೇಶದ ಬೆಳವಣಿಗೆ ಕೃಷಿಯ ಬೆಳವಣಿಗೆಯಲ್ಲಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರವು ರೈತನಿಗೆ ಸಹಾಯವಾಗಲೆಂದು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ರೈತ ಶಕ್ತಿ ಯೋಜನೆಯು ಕೂಡ ಒಂದು.
ರಾಜ್ಯ ಸರ್ಕಾರವು ರೈತನ ಏಳಿಗೆಗೆ ಎಂದು ಹೊಸ ಯೋಜನೆ ಒಂದು ಜಾರಿಗೆ ತಂದಿದೆ. ಈ ಯೋಜನೆ ಅಡಿ ಫ್ರೂಟ್ಸ್ ಐಡಿ ಹೊಂದಿರುವ ಪ್ರತಿಯೊಂದು ರೈತನ ಖಾತೆಗೆ ಗರಿಷ್ಠ 1250 ರೂಪಾಯಿ ಜಮಾ ಆಗಿದೆ , ನಿಮ್ಮ ಖಾತೆಗೂ ಕೂಡ ಈ ಹಣ ಜಮಾ ಆಗಿದೆಯೋ ಇಲ್ಲವೋ ನೋಡಿಕೊಳ್ಳಿ.
ರೈತ ಶಕ್ತಿ ಯೋಜನೆ ಅಂದರೇನು ?
ಸರಕಾರವು ಕೃಷಿಯ ಉತ್ಪನ್ನಗಳನ್ನು ಹೆಚ್ಚಿಸಲು, ಯಂತ್ರೋಪಕರಣಗಳನ್ನು ಹೆಚ್ಚಾಗಿ ಬಳಿಸಲು ಮತ್ತು ಡೀಸೆಲ್ ದರವನ್ನು ರೈತನ ಹೆಗಲಿನಿಂದ ಇಳಿಸಲು ರೈತ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿ ಪ್ರತಿ ರೈತನಿಗೆ ಒಂದು ಎಕರೆಗೆ ಕನಿಷ್ಠ 250 ರೂಪಾಯ ಡೀಸೆಲ್ ಸಬ್ಸಿಡಿ ನೀಡಲಾಗುತ್ತದೆ ಮತ್ತು ಗರಿಷ್ಠ 5 ಎಕರೆಗೆ ಸುಮಾರು 1250 ರೂಪಾಯಿ ಸರ್ಕಾರವು ನೇರವಾಗಿ ರೈತನ ಖಾತೆಗೆ ಹಣ ಜಮಾ ಮಾಡುತ್ತದೆ.
ಇದನ್ನೂ ಓದಿ :- 1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು??? https://mahitisara.com/uses-of-nano-dap-and-how-to-use-nano_dap/agripedia/
ರಾಜ್ಯದ ಎಲ್ಲ ರೈತರಿಗೆ ವಿಷಯ ಸಂಬಂಧಿಸಿದ ಎಲ್ಲಾ ಯೋಜನೆಗಳ ಉಪಯೋಗ ಪಡೆದುಕೊಳ್ಳಲೆಂದು (FID) ನೊಂದಣಿ ನಂಬರ್ ನೀಡಲಾಗಿದೆ. ಈ ನೋಂದಣಿ ನಂಬರ್ ಬಳಕೆ ಮಾಡಿ ಕೆ ಕಿಸಾನ್ ಹೋಟೆಲ್ ಮುಖಾಂತರ ರೈತನ ಖಾತೆಗೆ ಹಣ ನೇರವಾಗಿ ಜಮಾ ಆಗುತ್ತದೆ.
ಇದನ್ನೂ ಓದಿ :- ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ?? https://mahitisara.com/how-to-download-adhar-card-in-mobile/news/
ಇನ್ನೂ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು?
ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಹೆಸರಿನಲ್ಲಿ FID ನೊಂದಣಿ ನಂಬರ್ ಮಾಡಿಸಿ . ಮತ್ತು ನಿಮ್ಮ ಜಮೀನನ್ನು ಈ ನಂಬರಿಗೆ ಲಿಂಕ್ ಮಾಡಿಸಿ.
ನಿಮ್ಮ ಹೆಸರಿನಲ್ಲಿ ಎಷ್ಟು ಹೊಲ ಇದೆ ಅದರ ಆಧಾರದ ಮೇಲೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
ಒಂದು ಎಕರೆ ಹೊಲಕ್ಕೆ 250 ರೂಪಾಯಿ, ಎರಡು ಎಕರೆ ಹೊಲಕ್ಕೆ 500 ರೂಪಾಯಿ, ಮೂರು ಎಕರೆ ಹೊಲಕ್ಕೆ 750 ರೂಪಾಯಿ, ನಾಲ್ಕು ಎಕರೆ ಹೊಲಕ್ಕೆ 1000 ರೂಪಾಯಿ ಮತ್ತು ಗರಿಷ್ಠ ಅಂದರೆ 5 ಎಕರೆ ಹೊಲಕ್ಕೆ 1250 ರೂಪಾಯಿ ಡೀಸೆಲ್ ಸಬ್ಸಿಡಿ ದನ ಜಮಾ ಆಗುತ್ತದೆ.