Spread the love

ಪ್ರಿಯ ಓದುಗರರಿಗೆ ನಮಸ್ಕಾರ, ಇದು ಒಂದು ಸಾಮಾನ್ಯ ಮನುಷ್ಯ ಕೃಷಿಯಲ್ಲಿ ಯಶಸ್ಸು ಕಂಡಂತ ಕತೆ, ಒಬ್ಬ ಪ್ರಗತಿಪರ ರೈತ ಸೋತು ಗೆದ್ದ ಕತೆ . ಇದು ಕವಿತಾ ಮಿಶ್ರ ಅವರ ಕತೆ , ಇಗಾಗಲೆ‌ ನಿವು ಇವರ ಬಗ್ಗೆ ಕೇಳಿರಬಹುದು , ಪತ್ರಿಕೆಗಳಲ್ಲಿ ಓದಿರಬಹುದು ಇವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೊನ ಬನ್ನಿ. ಕವಿತಾ ಮಿಶ್ರರವರು ಮೂಲತಃ ರಾಯಚೂರಿನವರು. ಓದಿದ್ದು ಸಾಫ್ಟ್‌ವೇರ್‌ ಎಂಜಿನಿಯರಿಂಗ್‌. 25 ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಕವಿತಾಳಕ್ಕೆ ಇವರನ್ನು ಮದುವೆ ಮಾಡಿಕೊಟ್ಟರು.‌‌ ಅಸ್ತಿತ್ವವಕ್ಕೆ‌ ಇಲ್ಲದ ಊರು ಕವಿತಾಳ. ಇವರನ್ನು ಮದುವೆ ಮಾಡಿಕೊಟ್ಟ‌‌ ಕೂಡಲೆ ಮಿಶ್ರ ರವರಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿ ಸಿಕ್ಕಿತು. ಆದರೆ ನೌಕರಿಗೆ ಹೋಗುವುದಾಗಿ ಅವರು ತಮ್ಮ ಗಂಡನಲ್ಲಿ ಕೇಳಿದಾಗ, ಅವರು ಮಿಶ್ರ ರವರ ಸಂದರ್ಶನ ಪತ್ರವನ್ನೇ ಹರಿದು ಹಾಕಿದರು. ಹೊಲ ಮನಿ ಕೆಲಸ ನಡೆಸಿಕೊಂಡು ಹೊಗು ಎಂದು ಬೈದು ಮನೆಯಲ್ಲಿ ಕುರಿಸಿದರು.ಆದರೆ ಮಿಶ್ರ ರವರು ಇದಕ್ಕೆ‌ ಕುಗ್ಗಲಿಲ್ಲ ತಮ್ಮ‌‌ ತಾಯಿಯವರಾದರು ತಮಗೆ ಸಹಾಯ ಮಾಡಬಹುದು ಎಂದು ತಿಳಿದು, ಅಮ್ಮ ನೀನು ಬರುವುದಾದರೆ ನಾನು ಬೆಂಗಳೂರಿನಲ್ಲಿ ನೌಕರಿ ಮಾಡ್ತೇನೆ ಎಂದು ಕೆಳಿದಾಗ ಅದಕ್ಕವರು ಕೊಟ್ಟ ಉತ್ತರ–ಹೆಣ್ಣು ಕುಲಕ್ಕೆ ಹೊರಗೆ. ನೀನು ನಿನ್ನ ಗಂಡನ ಮನೆಯಲ್ಲಿ ಹೇಗೆ ಹೇಳುತ್ತಾರೋ ಹಾಗೇ ಮಾಡು ಎಂದರು. 40 ಸಾವಿರ ರೂ. ವೇತನ ಸಂಬಳದ ಕೆಲಸ ಸಿಕ್ಕರು , ಸಾಂಪ್ರದಾಯಿಕ ಕುಟುಂಬಕ್ಕೆ ಸೊಸೆಯಾಗಿ ಹೋದಂತಹ ಇವರು ಬೆಂಗಳೂರಿಗೆ ಕೆಲಸ ಮಾಡಲು ಕಳಿಸಲು ಇವರ ಗಂಡನ ಮನೆಯವರು ಒಪ್ಪಲಿಲ್ಲ. ಆದರೆ ಸಾಮಾನ್ಯರ ಹಾಗೆ ಮನೆ ಕೆಲಸ ನೋಡಿಕೊಂಡು ಹೋಗುವುದು ಅವರಿಗೆ ಇಷ್ಟವಿರಲಿಲ್ಲರವರು ಆದರೆ ಅವರಲ್ಲಿ ಎನಾದರು ಸಾದಿಸಬೇಕೆಂಬ ಚಲವಿತ್ತು.

ಇತ್ತೀಚಿನ ದಿನಗಳಲ್ಲಿ ಜನತೆ ಆಧುನಿಕತೆಯ ಮೋಡಿಗೆ ಒಳಗಾಗಿ ವ್ಯವಸಾಯದ ಚಟುವಟಿಕೆಯಿಂದ ಹಿಂದೆ ಸಾಗಿದ್ದಾರೆ. ಆದರೆ‌ ಕವಿತಾ ಮಿಶ್ರ ರವರು ವ್ಯವಸಾಯದಲ್ಲಿ ಹೆಚ್ಚಿಗೆ ಅನುಭವ ಹೊಂದದೆ ಇದ್ದರು ಜಗತ್ತಿಗೆ ತಿಳಿಸುವ ಹಾಗೆ ಸಾಧನೆ ಮಾಡಿದ್ದಾರೆ. ಕವಿತಾ ‌ ಮಿಶ್ರರವರು ವೃತ್ತಿ ಯಲ್ಲಿ ಎಂಜಿನಿಯರರಾಗಿದ್ದು ಅವರು ಎಂ.ಎ (ಸೈಕಾಲಜಿ) ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಮತ್ತು ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದಾರೆ. ಅವರು ಇನ್ಫೋಸಿಸ್ನಲ್ಲಿ ಕೆಲಸ ಪಡೆದರು,ಆ ಕೆಲಸವನ್ನು ತೊರೆದು ಅವರು ಕೃಷಿಯತ್ತ‌ ಅವರ ಪಯಣ ಆರಂಭಿಸಿದರು. ಅವರು 8 ಎಕರೆ ಭೂಮಿಯನ್ನು ಹೊಂದಿದ್ದಾರೆ. ನೈಸರ್ಗಿಕ ಕೃಷಿಯನ್ನು ಆಧರಿಸಿದ ತೋಟಗಾರಿಕೆ, ಅರಣ್ಯ ಬೆಳೆಗಳಲ್ಲಿನ ತನ್ನ ಕೃಷಿ ಅನುಭವದ ಪ್ರಕಾರ, ಅವರು ಸಾವಯವ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ ಮತ್ತು ಇದರ ಜೊತೆಗೆ ಅವರು ಹೈನುಗಾರಿಕೆಯನ್ನು ಸಹ ಮಾಡುತ್ತಾರೆ. ಆದ್ದರಿಂದ, ಸೀತಾಫಲ , ಪೇರಲ, ನುಗ್ಗೆಕಾಯಿ ಮುಂತಾದ ಬೆಳೆಗಳನ್ನು‌ ಕೂಡ ಎಂದಿನ ದಿನಗಳಲ್ಲಿ‌ ಬೆಳೆಯುತ್ತಾರೆ. ಮಿಶ್ರರವರಿಗೆ ಈ ಹಾದಿ ಸುಲಭವಾಗಿ ಇರಲಿಲ್ಲ ಅವರು ಹಲವಾರು ಕಷ್ಟ ವನ್ನು ಅನುಭವಿಸಿದ ನಂತರವೆ ಇಷ್ಟು ಸಾಧನೆ ಮಾಡಿದ್ದಾರೆ.

ಕೃಷಿ ಕೆಲಸ ಮಾಡೋದು ಅನಿವಾರ್ಯವಾದಗ ಕಲ್ಲುಗಳೇ ತುಂಬಿದ ೨೨ ಎಕರೆ ಬರಡು ಹೊಲದಲ್ಲಿ ೪೫ ಡಿಗ್ರಿ ಟೆಂಪರೇಚರ್‌ನಲ್ಲಿ ಅವರು ದುಡಿದರು.
ಗಂಡ ಹೊತ್ತಿಸಿದ ಕೃಷಿಯ ಕಿಡಿ ಅವರ ಮನದಲ್ಲಿ ಅದಾಗಲೇ ಹೊತ್ತಿಕೊಂಡಿತ್ತು. ೧೨ ಕೊಳವೆ ಬಾವಿ ಹೊಡೆಸಿದರೂ ನೀರು ಸಿಗಲಿಲ್ಲ. ೧೩ನೇ ಕೊಳವೆ ಬಾವಿಯಲ್ಲಿ ‌ಕೂಡ ಒಂದೂವರೆ ಇಂಚು ನೀರು ಅಷ್ಟೇ ಬಂದಿತ್ತು. ಅಷ್ಟೇ ನೀರಿನಲ್ಲಿ‌ ಮಿಶ್ರ ರವರು ಪ್ರಥಮವಾಗಿ ದಾಳಿಂಬೆ ಬೇಸಾಯಕ್ಕೆ ಕೈಹಾಕಿದರು. ಮೊದಲ ಬೆಳೆಯ ಆರು ಲಕ್ಷ ರು. ಆದಾಯ ಮಾಡಿ ಕೊಟ್ಟಿತ್ತು. ಆಗ ಅವರು‌ ನೌಕರಿಗೆ ಹೋಗಿದ್ದರೆ ಅಲ್ಲಿ ಸಿಗುವುದಕ್ಕಿಂತಲೂ ಹೆಚ್ಚು ವರಮಾನ ಕೃಷಿಯಲ್ಲಿ ಸಿಕ್ಕಿತು ಎಂದು‌ ಖುಷಿಯಾಗಿದ್ದರು . ಇದೆ ಆದಾಯ ೨ನೇ ಬೆಳೆಯಲ್ಲಿ ೧೮ ಲಕ್ಷಕ್ಕೇರಿತು. ೬ನೇ ಬೆಳೆ ಯಲ್ಲಿ ೨೩ ಲಕ್ಷಕ್ಕೇರಿತು. ವಿದೇಶಗಳಿಗೆ ಕೂಡ ಇವರು ಬೆಳೆದ ದಾಳಿಂಬೆ ಸಾಗಲು ಆರಂಭವಾಯಿತು. ಆದರೆ ಮುಂದಿನ ಹಾದಿ ಮಿಶ್ರ ರವರಿಗೆ ಕಷ್ಟಕರವಾಗಿ ‌ಇತ್ತು.‌ ೫೦ ಲಕ್ಷ ಆದಾಯ ಗಳಿಕೆ ಅವರ ಮುಂದಿದ್ದಾಗ ಕೈಯಲ್ಲಿದ್ದ ಎಲ್ಲ ಹಣದ ಜತೆ ಸಾಲದ ಮೊತ್ತವನ್ನು ಸೇರಿಸಿ ದಾಳಿಂಬೆ ಬೆಳೆಗೆ ಸುರಿದರು. ಕೆಲವು ಕಡೆಗಳಿಂದ ದಾಳಿಂಬೆ ರಿಜೆಕ್ಟ್ ಆಗಿ ವಾಪಸ್ ಬಂದವು. ಗುಡ್ಡದಿಂದ ಜಾರಿ ಕೆಳಗೆ ಬಿದ್ದ ಅನುಭವ ಮಿಶ್ರರವರಿಗೆ ಆಯಿತು ಸಾಲಗಾರರು ಬೆನ್ನತ್ತಿದರು. ಸಂಬಂಧಿಗಳು ದೂರ ಉಳಿದರು. ಆಗ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆ ಸಮಯದಲ್ಲಿ ಅವರ ಕೈ ಹಿಡಿದವರು ಅವರ ಗಂಡ. ಎಲ್ಲರೂ ಅವರ ಮೇಲೆ ವಿಶ್ವಾಸ ಕಳೆದುಕೊಂಡಾಗ, ಅವರ ಗಂಡ ಅವರ ಮೇಲೆ ವಿಶ್ವಾಸವಿಟ್ಟರು.

ಕಂಪ್ಯೂಟರ್ ಸೈ ಡಿಪ್ಲೋಮಾ ಜತೆಗೆ ಎಂಎ ಸೈಕಾಲಜಿ ಓದಿರುವ ಕವಿತಾ ಮಿಶ್ರಾ ಅವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ ೧೦ ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ ಆ ಬರಡು ಭೂಮಿಯನ್ನು ಸ್ವರ್ಗ ಮಾಡಿದ್ದಾರೆ. ಕವಿತಾ ಅವರು ತಮ್ಮ ಜಮೀನಿನಲ್ಲಿ ೨,೫೦೦ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. ಅವು ಉತ್ಪನ್ನ ಕೊಡುವ ತನಕ
ಏನಾದರೂ ಬೆಳೆ ಬೆಳೆಯಬೇಕೆಂಬ ತೀರ್ಮಾನಕ್ಕೆ ಬಂದ ಅವರು, ಅದರ ಜತೆಗೆ ೬೦೦ ಪೇರಲ, ೬೦೦ ಸೀತಾಫಲ, ೬೦೦ ಮಾವಿನ ಸಸಿ, ೧೦೦ ಹುಣಿಸೆ,
೧೦೦ ಕರಿಬೇವು, ೧೦೦ ನೇರಳೆ, ೧೦೦ ಬೆಟ್ಟದ ನೆಲ್ಲಿಕಾಯಿ, ೧೦೦ ನಿಂಬೆ, ೧೦೦ ಬಾರಿ ಹಣ್ಣಿನ ಗಿಡ, ೧೦೦ ಮೂಸಂಬಿ, ೧೦೦ ತೆಂಗು ಹಾಗೂ ೧,೦೦೦
ಸಾಗುವಾನಿ ಸಸಿಗಳು ನೆಟ್ಟಿದ್ದಾರೆ. ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕುಳಿತುಕೊಂಡೇ ತೋಟವನ್ನು ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋ ಚಿಪನ್ನು ಅಳವಡಿಸಲಾಗುವುದು. ಕಳ್ಳ ಮರದ ಹತ್ತಿರ ೨ ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್ ಕೂಗುತ್ತದೆ. ಅಷ್ಟೆ ಅಲ್ಲ, ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಇರುವುದರಿಂದ ಅಲ್ಲೂ ಸೈರನ್ ಹೊಡೆದುಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್ ಕಳ್ಳ ಕದ್ದೋಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆ ಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೆ ಮಾರಬಹುದು ಎಂದು ಕವಿತಾ ಮಿಶ್ರಾ ಅವರು ಮಾಹಿತಿ ನೀಡಿದ್ದಾರೆ. ಗಂಡನ ಹೆಸರಿನಲ್ಲಿದ್ದ ಜಮೀನು ಫಲವತ್ತಾದ ಜಮೀನಾಗಿದ್ದಿಲ್ಲ ಅದು ಒಂದು ಬಂಜರು ಭೂಮಿಯಾಗಿತ್ತು. ಅಲ್ಲಿ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ. ಹೀಗಾಗಿ ಆ ಜಮೀನಿನಲ್ಲಿ ಏನಾದರೂ ಬೆಳೆ ಬೆಳೆಯಬೇಕೆಂದುಕೊಳ್ಳುವುದು ಕೂಡ ಒಂದು ದೊಡ್ಡ ಸಾಹಸವೇ ಆಗಿತ್ತು. ಆದರೆ ಮನುಷ್ಯನಲ್ಲಿ ಚಲವಿದ್ದರೆ ಎನನ್ನಾದರು ಸಾದಿಸಬಲ್ಲ‌ ಎಂಬುದಕ್ಕೆ ಮಿಶ್ರ ರವರು ಒಂದು ಒಳ್ಳೆ ಉದಾಹರಣೆಯಾಗಿರುವರು ಆವರು ಅಂತಹ ಬರಡು ಜಮೀನಿನಲ್ಲೂ ಏನಾದರೂ ಬೆಳೆ ತೆಗೆಯಲೇಬೇಕೆಂಬ ಛಲದ ಮೊಳಕೆ ಆಗಲೇ ಬೆಳೆದು ನಿಂತಿತ್ತು. ಅವರ ಆ ಸಾಹಸಕ್ಕೆ ಅವರ ಗಂಡ ಕೂಡ ಕೈ ಜೋಡಿಸಿದರು. ಮದುವೆಗೆ ಹಾಕಿದ್ದ ಬಂಗಾರದ ಆಭರಣಗಳನ್ನೆಲ್ಲ ಮಾರಿ ತಮ್ಮ ಜಮೀನಿನಲ್ಲಿ ಒಂದು ಕೊಳವೆ ಬಾವಿ ತೋಡಿಸಿದರು. ಅಲ್ಲಿ ಕೇವಲ ಒಂದೂವರೆ ಇಂಚಿನಷ್ಟು ನೀರಿನ ಲಭ್ಯತೆ ಮಾತ್ರ ಇತ್ತು. ಅಷ್ಟು ಅಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಅವರು ಜಮೀನನ್ನು ಹದಗೊಳಿಸಿ ನಿಯಮಿತ ಬೆಳೆಗಳ ಬದಲು ಉಳ್ಳಾಗಡ್ಡಿ, ದಾಳಿಂಬೆ ಮುಂತಾದವುಗಳನ್ನು ಬೆಳೆದರು. ಆದರೆ ಅದರಲ್ಲಿ ಹೇಳಿಕೊಳ್ಳುವಂತಹ ಲಾಭವೇನೂ ಸಿಗಲಿಲ್ಲ. ಆದರೂ ಕವಿತಾ ಧೈರ್ಯ ಕಳೆದುಕೋಳ್ಳಲಿಲ್ಲ.

ಒಂಟಿ ಬೆಳೆ ಮಾರಕ, ಬಹುಬೆಳೆ ಪೂರಕ:ರೈತರ ಬದುಕು ಬಹಳ ಕಷ್ಟದ ಜೀವನ, ಎಲ್ಲವನ್ನೂ ಹಾಕುತ್ತೇವೆ, ಜತೆಗೆ ನಮ್ಮನ್ನು ನಾವೇ ಹಾಕುತ್ತೇವೆ. ಒಂದು ಎಕರೆಗೆ 10-15 ಕ್ವಿಂಟಲ್ ಧಾನ್ಯ ಬೆಳೆಯುತ್ತೇವೆ. ಅದಕ್ಕೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತರ ಪ್ರಯತ್ನಕ್ಕೆ ಅರ್ಥವಿರುವುದಿಲ್ಲ. ಹೀಗಾಗಿ ರೈತನಿಗೆ ಬೆಲೆ ಸಿಗುತ್ತಿಲ್ಲ. ಅವನ ಹೆಂಡತಿ, ಮಕ್ಕಳಿಗೂ ಗೌರವ ಸಿಗುತ್ತಿಲ್ಲ. ಎಲ್ಲದಕ್ಕಿಂತ ಸ್ವಾಭಿಮಾನದ ಜೀವನ ರೈತನದ್ದು. ರೈತ ಅನ್ನದಾತ, ಅವರು ಕೊಡುವವನೇ ಹೊರತು ಬೇಡುವವನಲ್ಲ. ರೈತರಿಗೆ ಪ್ರತಿ ತಿಂಗಳಿಗೆ ಸಂಬಳ ಬರುವುದಿಲ್ಲ, ನಿವೃತ್ತಿ ಬಳಿಕ ಪೆನ್ಷನ್ ಬರುವುದಿಲ್ಲ. ಹೀಗಾಗಿ ರೈತರಿಗೆ ಹೆಣ್ಣು ಕೊಡಲು ಜನ ಯೋಚಿಸುತ್ತಿದ್ದಾರೆ. ರೈತರು ಈ ಕುರಿತು ಚಿಂತಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ಪ್ರತಿ ತಿಂಗಳು ಸಂಬಳದ ರೀತಿ ಆದಾಯ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿಯನ್ನು ಮಾಡಬೇಕು. ನಾನೂ ಸಹ 8 ಎಕರೆ 10 ಗುಂಟೆ ಕೃಷಿ ಭೂಮಿಯಲ್ಲಿ ನಾನು 2,100 ಶ್ರೀಗಂಧ, 1,000 ದಾಳಿಂಬೆ, 600 ಮಾವು, 600 ಸೀಬೆ ಹಣ್ಣು, 450 ಸೀತಾಫಲ, 100 ನೀರಲ ಹಣ್ಣು, 100 ಬೆಟ್ಟದ ನೆಲ್ಲಿಕಾಯಿ, 200 ನಿಂಬೆ ಗಿಡ, 200 ಮೋಸಂಬೆ ಗಿಡ, 200 ಸಾಗವಾನಿ, 50 ಕರಿಬೇವು ಗಿಡ, ನುಗ್ಗೆಕಾಯಿ ಗಿಡ ಬೆಳೆಯುತ್ತಿದ್ದೇನೆ. ಇದರೊಂದಿಗೆ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಹೈನುಗಾರಿಕೆ ಇವೆಲ್ಲವನ್ನೂ ಮಾಡಿದ್ದೇನೆ. ಇದರಿಂದ ಮಾವಿನ ಸೀಸನ್‍ನಲ್ಲಿ ಮಾವಿನ ಹಣ, ದಾಳಿಂಬೆ ಸೀಸನ್‍ನಲ್ಲಿ ದಾಳಿಂಬೆ ಹಣ ಹೀಗೆ ಸತತವಾಗಿ ಹಣ ಬರುವಂತೆ ಬೆಳೆಗಳನ್ನು ಬೆಳೆಯಬೇಕು. ಆಗ ಪ್ರತಿ ತಿಂಗಳೂ ಆದಾಯ ನಿರೀಕ್ಷಿಸಲು ಸಾಧ್ಯ. ಮಾರುಕಟ್ಟೆ ವಿರುದ್ಧ ನಿಲಾಧ್ಯವಿಲ್ಲ. ಎಂದು ತಿಳಿಸಿದ್ದಾರೆ. 45 ಡಿಗ್ರಿ ತಾಪಮಾನದಲ್ಲೂ ಶ್ರೀಗಂಧದ ಮರಗಳನ್ನು ಬೆಳೆಯಬಹುದೆಂಬ ಆತ್ಮವಿಶ್ವಾಸವನ್ನು ರೈತರಲ್ಲಿ ಮೂಡಿಸಿದರು ಕವಿತಾ ಮಿಶ್ರಾ. ಅದರ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ನರ್ಸರಿ, ಜೇನು ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ನಿಜವಾದ ಕೃಷಿ ಸಾಧಕಿ. ಈ ರೀತಿಯ ವಿಶಿಷ್ಟ ಸಾಧನೆ ಮಾಡಲು ಕವಿತಾ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿಯನ್ನೇನೂ ಪಡೆದಿಲ್ಲ! ಹೌದು ಇದು ನಿಜ. ಕಂಪ್ಯೂಟರ್‌ ಎಂಜಿನಿಯರಿಂಗ್‌ ಪದವಿಧರೆಯೊಬ್ಬಳು ಕೃಷಿ ಕ್ಷೇತ್ರಕ್ಕೆ ಬಂದು ಅದರ ದಿಕ್ಕುದೆಸೆಯನ್ನೇ ಬದಲಿಸಿದ್ದು ಮಾತ್ರ ಅಚ್ಚರಿಯ ಸಂಗತಿಯೇ ಸರಿ. ಶೂನ್ಯ ಬಂಡವಾಳದಲ್ಲಿ ತೋಟಗಾರಿಕೆ, ಅರಣ್ಯ ಕೃಷಿಗೆ ಸಹಾಯ ಎಂದಂತೆ ಕವಿತಾ, ತಮ್ಮ ತೋಟದ ಮನೆಯಲ್ಲಿ ಹಲವು ಹಸು, ಮೇಕೆ, ಕೋಳಿಗಳನ್ನು ಕೂಡ ಸಾಕಿದ್ದಾರೆ. ಹಸುವಿನ ಹಾಲು ಮತ್ತು ಮುಖ್ಯವಾಗಿ ಅವುಗಳಿಂದ ಲಭಿಸುವ ಗೋಮೂತ್ರ ಹಾಗೂ ಸಗಣಿ ಸಾವಯವ ಕೃಷಿಗೆ ಸಹಾಯವಾಯಿತು. ಅವರು‌ ತಮ್ಮ ಜಮೀನಿನಲ್ಲಿ ತೀರಾ ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕ್ರಿಮಿ ಮತ್ತು ಕೀಟನಾಶಕ ಔಷಧಿಗಳನ್ನಂತೂ ಬಳಸುವುದೇ ಇಲ್ಲ. ಬೇವಿನ ಹಿಂಡಿ ಹಾಗೂ  ದಶಪರಣಿ ಎಲೆಗಳನ್ನು ನೀರಲ್ಲಿ ಕುದಿಸಿ ಅದನ್ನೇ ಕ್ರಿಮಿನಾಶಕವಾಗಿ ಸಿಂಪಡಣೆ ಮಾಡುತ್ತಾರೆ.

ಕವಿತಾ ಮಿಶ್ರ ‌ಒಬ್ಬ ಶ್ರಮಜೀವಿ, ವಿಚಾರವಾದಿ. ಅವರ ತಲೆಯಲ್ಲಿ ಯಾವಾಗಲೂ ಹೊಸ ಹೊಸ ವಿಚಾರಗಳು ಹೊಳೆಯುತ್ತಲೇ ಇರುತ್ತವೆ. ತಮ್ಮ ಜಮೀನಿಗೆ ನೆಡಲು ಅಗತ್ಯವಿರುವ ಸಸಿಗಳನ್ನು ತಮ್ಮದೇ ತೋಟದ ಆವರಣದಲ್ಲಿ ಸಿದ್ಧಪಡಿಸಿಕೊಳ್ಳಲು ನರ್ಸರಿಯೊಂದನ್ನು ಶುರು ಮಾಡಿದ್ದಾರೆ. ಉತ್ಕೃಷ್ಟ ದರ್ಜೆಯ ಶ್ರೀಗಂಧದ ಸಸಿಗಳು ಸೇರಿದಂತೆ ಬೇರೆ ಬೇರೆ ಹಣ್ಣಿನ ಸಸಿಗಳನ್ನು ಸಿದ್ಧಪಡಿಸಿ ಅವುಗಳನ್ನು ಬೇರೆ ರೈತರಿಗೆ ಪೂರೈಸುತ್ತಿದ್ದಾರೆ. ಶ್ರೀಗಂಧದ ಸಸಿಗಳನ್ನು ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಢದ ರಾಯಪುರದ ತನಕ ಮುಟ್ಟಿದವು. ಇದರ ಜೊತೆಗೆ ಶ್ರೀಗಂಧದ ಉತ್ಕೃಷ್ಟ ದರ್ಜೆಯ ಬೀಜಗಳನ್ನು ಕೂಡ ಉತ್ಪಾದಿಸಿ ರೈತರಿಗೆ ಮಾರಾಟ ಮಾಡುತ್ತಿರುವರು. ಕವಿತಾ ಮಿಶ್ರ ಬೆಳೆದದನಾಡ ಮಲೆನಾಡ ಸೆರಗಿನ ಧಾರವಾಡದಲ್ಲಿ. ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಅವರಿಗೆ ಬೆಂಗಳೂರಿಗೆ ಹೋಗಿ ಯಾವುದಾದರೊಂದು ಸಾಫ್ಟ್ ವೇರ್‌ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಅಪೇಕ್ಷೆ ಇತ್ಬೇರೆಆದರೆ ಆದದ್ದೇ ಬೇರೆ. ಮನೆಯವರು ಆಗಲೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದ ಯುವಕನ ಜೊತೆಗೆ ಮದುವೆ ಫಿಕ್ಸ್ ಮಾಡಿಬಿಟ್ಟಿದ್ದರು. ಮನೆಯವರ ಅಪೇಕ್ಷೆಗೆ ಕವಿತಾ ವಿರೋಧವನ್ನೇನೂ ವ್ಯಕ್ತಪಡಿಸಲಿಲ್ಲ. ಮದುವೆಯ ನಂತರವಾದರೂ ಅವರನ್ನು ಒಪ್ಪಿಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್‌ ಉದ್ಯೋಗ ಮಾಡಬೇಕೆಂಬ ತುಡಿತ ಅವರ ಒಳಮನಸ್ಸಿನಲ್ಲಿ ಇದ್ದೇ ಇತ್ತು. ಮದುವೆ ಮಾಡಿಕೊಂಡು ಹೋದ ಬಳಿಕ ಅಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಬಾರದು ಎಂಬ ಅಲಿಖಿತ ನಿಯಮ ಇರುವುದು ಅವರ ಗಮನಕ್ಕೆ ಬಂತು. ಅದನ್ನು ಕೂಡ ಅವರು ವಿರೋಧಿಸಲಿಲ್ಲ.
ಕವಿತಾ ಮಿಶ್ರರ ತೋಟವನ್ನು ನಂಬಿ ಹಲವು ಕುಟುಂಬಗಳು ಉದ್ಯೋಗ ನಡೆಸುತ್ತಿವೆ. ಸುಮಾರು ೪-೫ ಕುಟುಂಬದ 10 ಜನರು ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ತಮ್ಮ ತೋಟದಲ್ಲಿ ಅವರಿಗೆ ಮನೆಗಳನ್ನು ಕೂಡ ಕಟ್ಟಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಉತ್ಪನ್ನಗಳನ್ನು ಬೇರೆ ಬೇರೆ ನಗರಗಳಿಗೆ ಸಾಗಿಸಲು ಹಲವು ವಾಹನ ಚಾಲಕರಿಗೂ ಉದ್ಯೋಗ ಲಭಿಸಿದೆ. ಕೃಷಿಯಲ್ಲೆ ಜೀವನ ಕಟ್ಟಿಕೊಳ್ಳಿ ಎಂದು ಜಗತ್ತಿಗೆ ಹೇಳಿದರು. ಇವರಿಗೆ ಕೃಷಿಯಲ್ಲಿ ರಾಷ್ಟ್ರ ಪ್ರಶಸ್ತಿ , ಕಾರಂತ ಹುಟ್ಟುರು ಪ್ರಶಸ್ತಿ , ಹೀಗೆ ಮುಂತಾದ ಪ್ರಶಸ್ತಿಗಳು ಲಬಿಸಿವೆ. ಕವಿತಾ ಮಿಶ್ರ ರವರು ಸುಮಾರು ರೈತರಿಗೆ ಒಂದು ಒಳ್ಳೆ ಉದಾಹರಣೆ ಆಗಿದ್ದಾರೆ.

Leave a Reply

Your email address will not be published. Required fields are marked *