Spread the love

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿಯ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಪಟ್ಟಣದ ಆಡಳಿತಸೌಧದ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾತನಾಡಿದರು. ರೈತರು ಬೆವರು ಹರಿಸಿ ಬೆಳೆಸಿದ ಬೆಳೆಗೆ ಉತ್ತಮ ಬೆಲೆ ನೀಡುವುದರ ಜೊತೆಗೆ ಸಕ್ಕರೆ ಕಾರ್ಖಾನೆಯವರಿಂದ ಕಮೀಷನ್‌ ಅನ್ನು ಪಡೆಯುವುದನ್ನು ನಿಲ್ಲಿಸಬೇಕು. ಆದಷ್ಟುಬೇಗನೆ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದ ಹೇಳಿದರು. ಆಮರಣಾಂತಿಕ ಉಪವಾಸವನ್ನು ಕೈಗೊಂಡಿರುವ ಪರಮಾತ್ಮಜೀ ಮಹಾರಾಜ್‌ ಸ್ವಾಮೀಜಿ ಅವರು, ಸೊಗಲ ಕ್ಷೇತ್ರದ ಜ್ಞಾನಾನಂದ ಸ್ವಾಮಿ ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೂಬಾಟಿ, ಶಂಕರ ಕಾಜಗಾರ, ಎಂ.ವಿ. ಘಾಡಿ ಘೋಡಿಮನಿ, ನಾಗೇಂದ್ರ ಜಿವೋಜಿ, ಮಂಜುಳಾ ಗೌಡ, ಬಸವರಾಜ ಬೆಂಡಿಗೇರಿಮಠ, ಅಪ್ಪಾಜಿ ಶಹಾಪುರಕರ, ಅಪ್ಪಾರಾವ್‌ ಪೂಜಾರಿ ಸೇರಿದಂತೆ ಹಲವರು ಹಾಜರಿದ್ದರು. ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ವಿಫಲವಾದಲ್ಲಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿಕೆ ನೀಡಿದ್ದಾರೆ. ಪಟ್ಟಣದ ಆಡಳಿತಸೌಧದ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಜಾಗಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಬಿಜೆಪಿಯಿಂದ ಧರಣಿ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೂಬಾಟಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್‌ ಹೆಗಡೆ ವಿರುದ್ಧ ಅಸಾಂವಿಧಾನಿಕ ಪದ ಬಳಸಿ, ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 200ಕ್ಕೂ ಅಧಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ತುತುಸರ್ಭೆ ನಡೆಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಮೂಲಕ ಶಿವಾಜಿ ವೃತ್ತಕ್ಕೆ ಆಗಮಿಸಿಧರಣಿನಿರತರು ಕುಮಾರ ಬೂಬಾಟಿ ಅವರನ್ನು ಸ್ಥಳಕ್ಕೆ ಕರೆಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಈ ವೇಳೇ ಪ್ರತಿಭಟನೆಯಲ್ಲಿ ಅನಿಲ್‌ ಮುತ್ನಾಳೆ, ಶ್ರೀಪತಿ ಭಟ್‌, ಅಜೋಬಾ ಕರಂಜೇಕರ, ಸಂತೋಷ ಘಟಕಾಂಬಳೆ, ರಾಮಚಂದ್ರ ವಡ್ಡರ, ಯಲ್ಲಪ್ಪ ಹೊನ್ನೋಜಿ, ಸಂಗೀತಾ ಜಾಧವ, ರೂಪಾ ಗಿರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಮುಂಬರುವ ವಿಧಾನಸಭೆ ಚುನಾವಣೆಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಡಿಸೆಂಬರ್‌ನ ಮೊದಲನೆಯ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ, ಪಕ್ಷೇತರನಾಗಿ ಕಣಕ್ಕಿಳಿಯುವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉತ್ತರ, ದಕ್ಷಿಣ, ಧಾರವಾಡ, ಉಡುಪಿ, ಪುತ್ತೂರು, ಕಾರ್ಕಳ, ಶೃಂಗೇರಿ, ಜಮಖಂಡಿ, ತೇರದಾಳ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಕಬ್ಬಿನ‌ ಬಗ್ಗೆ ಹೊಸ ವಿಚಾರವೆಂದರೆ ಇನ್ನು ಮುಂದೆ ಕಬ್ಬು ಮಾರಾಟಕ್ಕೆ ಹೊಸ ಆ್ಯಪ್ ಬರಲಿದೆ. ಹೌದು, ಕಬ್ಬು ಸಕಾಲದಲ್ಲಿ ಮತ್ತು ಎಲ್ಲಾ ರೈತರ ಕಬ್ಬು ಮಾರಾಟವಾಗುವಂತೆ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆಯಲಾಗುವ ಕಬ್ಬು ಮತ್ತು ಎಲ್ಲಾ ರೈತರ ಕಬ್ಬು ಮಾರಾಟವಾಗುವಂತೆ ದೀರ್ಘಾವಧಿ ವ್ಯವಸ್ಥೆಯಾಗಿ ಜಿಲ್ಲಾಡಳಿತದಿಂದ ವಿನೂತನವಾಗಿ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಕಬ್ಬು ಖರೀದಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಪ್ರಯತ್ನ ಮಾಡಲು ಮುಂದಾಗಿದ್ದೇವೆ. ಮೂರು ತಿಂಗಳಲ್ಲಿ ಆ್ಯಪ್ ಅಭಿವೃದ್ಧಿಪಡಿಸಿ ಮುಂದಿನ ವರ್ಷದಿಂದ ಇದನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ರೈತರು ಆ್ಯಪ್ ನಲ್ಲಿಯೇ ತಮ್ಮ ತಮ್ಮ ಜಮೀನಿನ ಸರ್ವೆ ನಂಬರ್ ಜೊತೆಗೆ ಕಬ್ಬು ಕಟಾವಿಗೆ ವೈಯಕ್ತಿಕ ವಿವರಗಳ ಜೊತೆಗೆ ಮನವಿ ಸಲ್ಲಿಸಬೇಕು.ಈ ಮಾಹಿತಿ ಸಕ್ಕರೆ ಕಾರ್ಖಾನೆ ಮತ್ತು ಜಿಲ್ಲಾಡಳಿತಕ್ಕೆ ಒಂದೆ ಸಮಯದಲ್ಲಿ ರವಾನೆಯಾಗಲಿದೆ. ಅದರಂತೆ ಸಕ್ಕರೆ ಕಾರ್ಖಾನೆಯವರು ಕ್ಷೇತ್ರಕ್ಕೆ ಹೋಗಿ ಕಟಾವು ಮಾಡಿಕೊಳ್ಳುತ್ತಾರೆ. ಈ ರೀತಿಯ ತಂತ್ರಾಂಶ ಕಾರ್ಯನಿರ್ವಹಿಸಲಿದ್ದು, ಇದರ ಮೇಲೆ ಜಿಲ್ಲಾಡಳಿತ ನಿಗವಹಿಸಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಆಳಂದ ಎಂಬ ತಾಲೂಕಿನ ಭೂಸನೂರಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಬಾಕಿ ಉಳಿದಂತಹ 4೦೦೦ ಕ್ಕು ಅಧಿಕ ಎಕರೆ ಪ್ರದೇಶದಲ್ಲಿ ಬೆಳೆಯಲಾದ ಕಬ್ಬನ್ನುಕಟಾವು ಮಾಡಲು ದಿನಾಂಕ ವನ್ನು ನಿಗದಿ . ಪಡಿಸಲಾಗಿದೆ. ಏಪ್ರೀಲ್ 10ರೊಳಗೆ  ಕಾರ್ಖಾನೆ ವ್ಯಾಪ್ತಿಯ ಎಲ್ಲಾ ಕಬ್ಬುನ್ನು ಕಟಾವು ಮಾಡುವಂತೆ ಪ್ರಾಯೋಗಿಕ ಯೋಜನೆಯಾಗಿ ಎನ್ಎಸ್ಎಲ್ ಕಾರ್ಖಾನೆಯ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜಾರಿಗೆ ತರಲಾಗುವುದು.ಇದು ಯಶಕಂಡಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯ ಇತರೆ ಸಕ್ಕರೆ ಕಾರ್ಖಾನೆಯು ವ್ಯಾಪ್ತಿಯಲ್ಲಿಯೂ ಜಾರಿಗೆ ತರಲಾಗುವುದು ಎಂದರು. ನಿಂಬರ್ಗಾ ವಿಭಾಗದಲ್ಲಿ ಸುಮಾರು 550 ಎಕರೆ, ಆಳಂದ ವಿಭಾಗದಲ್ಲಿ ಸುಮಾರು 410 ಎಕರೆ, ಕಲಬುರಗಿ ವಿಭಾಗದಲ್ಲಿ 1205 ಎಕರೆ, ಚೌಡಾಪುರ ವಿಭಾಗದಲ್ಲಿ 1458, ಅಫಜಲ್ಪುರ ವಿಭಾಗದಲ್ಲಿ 184 ಎಕರೆ, ಕರಜಗಿ ವಿಭಾಗದಲ್ಲಿ 130 ಎಕರೆ ಮತ್ತು ಕಡಗಂಚಿ ವಿಭಾಗದಲ್ಲಿ 302 ಸೇರಿ ಒಟ್ಟು 4239 ಎಕರೆ ಪ್ರದೇಶಗಳಿಂದ ಅಂದಾಜಿ 1,24,768 ಮೆಟ್ರಿಕ್ ಟನ್ ಬಾಕಿ ಕಬ್ಬು  ಕಟಾವು ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಕಬ್ಬಿನ ಸಸ್ಯವು ಸುಮಾರು 15 ರಿಂದ 16 ಅಡಿ ಎತ್ತರಕ್ಕೆ ಬೆಳೆಯಬಹುದು

ಕಬ್ಬಿನ ಬೆಳೆಯಲ್ಲಿ ಶೇಕಡ 25ರಷ್ಟು ಹೆಚ್ಚಿನ ಇಳುವರಿ ಪಡೆಯುವ ವಿಧಾನ ಕಬ್ಬು ಬೆಳೆಗಾರರು ಸಾಮಾನ್ಯವಾಗಿ ಬಿತ್ತನೆ ಮಾಡುವಾಗ ಗೊಬ್ಬರ ಮತ್ತು ನೀರನ್ನು ಚಾಚು ತಪ್ಪದೆ ಕೊಡುತ್ತಾರೆ ಆದರೆ ಕೆಲವು ಅಗತ್ಯ ನಿರ್ವಹಣೆ ಮಾಡುವುದಿಲ್ಲ ಕಬ್ಬಿನ ಸಸ್ಯ ಬೆಳೆಯುತ್ತಿದ್ದಂತೆ ಒಣ ರವದಿಯನ್ನು ತೆಗೆಯಬೇಕು ಮತ್ತು ಬೆಳೆದ ಕಬ್ಬನ್ನು ಸಣಬಿನಿಂದ ಕಟ್ಟಬೇಕು. ಕಬ್ಬಿನ ಸಸ್ಯವು ಸುಮಾರು 15 ರಿಂದ 16 ಅಡಿ ಕಬ್ಬಿನ ಸಸ್ಯವು ಸುಮಾರು 15 ರಿಂದ 16 ಅಡಿ ಒಂದೊಂದು ಕಬ್ಬಿನ ದಂಟು ಸುಮಾರು ಹತ್ತು ಕಿಲೋ ತನಕ ತೂಗುತ್ತದೆ. ಇಂತಹ ಕಬ್ಬಿನ ಬೆಳೆಯನ್ನು ಜಮಖಂಡಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಬೆಳೆಯಲಾಗುವುದು. ಇದು ಸುಮಾರು ಎಕ್ರೆಗೆ ಸರಾಸರಿ ಆಗಿ ಒಂದು ನೂರು ಟನ್ ಕೂ ಹೆಚ್ಚಿಗೆ ಇಳುವರಿ ಕೊಡುತ್ತದೆ.ಹೋದ ವರ್ಷವು ಹಿಂದೆಂದೂ ಕಂಡಿರದಂತ ರೀತಿಯಲ್ಲಿ ಉಂಟಾಗಿದ್ದ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಕಬ್ಬು ಬೆಳೆಗಾರರು ನಷ್ಟ ಅನುಭವಿಸಿದ್ದರು, ಈ ಸಾಲಿನಲ್ಲಿ ಹುಳುಗಳ ಕಾಟದಿಂದಾಗಿ ಕಬ್ಬು ನಿರೀಕ್ಷಿತ ಬೆಳವಣಿಗೆ ಕಾಣದೆ ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಇಳುವರಿ ಪ್ರಮಾಣ ಕೂಡ ಇಳಿಕೆಯಾಗುವ ಭೀತಿ ಅವರನ್ನು ಕಾಡುತ್ತಿದೆ.
ಕೃಷಿ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2.4 ಲಕ್ಷ ಹೆಕ್ಟೇರ್‌ ಕಬ್ಬನ್ನು ಬಿತ್ತನೆ ಮಾಡಲಾಗುತ್ತದೆ. ಬೆಳವಣಿಗೆ ಹಂತದಲ್ಲಿರುವಾಗ ಅಲ್ಲಲ್ಲಿ ಗೊಣ್ಣೆ ಹುಳು ಮತ್ತು ಇತರ ಕಾಂಡ ಕೊರೆಯುವ ಹುಳುಗಳ ಹಾವಳಿ ಕಂಡುಬಂದಿದೆ. ಮತ್ತು ಇವುಗಳ ಕಬ್ಬಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿರುವುದನ್ನು ರೈತರು ಗಮನಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆ ಸಾವಿರಾರು ಎಕರೆ ಬೆಳೆಯಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದಿರುವುದು ರೈತರ ತಲೆನೋವಿಗೆ ಕಾರಣವಾಗಿದೆ. ಮತ್ತು ಕಬ್ಬಿಗೆ ಬಂದೆರಗಿರುವ ರೋಗ ಬಾಧೆಯ ಕುರಿತು ಹಲವು ರೈತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಗೊಣ್ಣೆ ಹುಳು ಸ್ಥಾನಿಕ ಪೀಡೆಯಾಗಿದ್ದು, ಬೆಳೆ ೫೦ ರಿಂದ ೬0ರಷ್ಟು ಹಾನಿ ಮಾಡುತ್ತದೆ. ಇವು ಬೇರುಗಳನ್ನು ತಿಂದು ನಾಶ ಪಡಿಸುತ್ತದೆ ಮತ್ತು ಪೈರು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭಿಸುತ್ತದೆ ಮತ್ತು ಬಳಿಕ ನಾಶವಾಗುತ್ತದೆ. ಈ ಬಾಧೆ ಆಗಸ್ಟ್‌–ಸೆಪ್ಟೆಂಬರ್‌ ಅಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ತೇವಾಂಶದ ಕೊರತೆಯಾಗದಲ್ಲಿ ಬಾಧೆಯು ಹೆಚ್ಚಾಗುತ್ತದೆ. ಆಗ ಶೇ 80ರಿಂದ 100ರಷ್ಟು ಹಾನಿ ಸಂಭವಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರೂ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ಜಿಲ್ಲೆಯ ಹಿರೇಬಾಗೇವಾಡಿ ಭಾಗದಲ್ಲಿ ಕಬ್ಬು ಬೆಳೆಗೆ ಗೊಣ್ಣೆ ಹುಳು ಮತ್ತು ಇತರ ಕಾಂಡ ಕೊರೆಯುವ ಹುಳುಗಳ ಕಾಟ ಕಾಣಿಸಿಕೊಂಡಿರುವುದು ಹಾಗೂ ಇದರಿಂದ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿರುವ ಬಗ್ಗೆ ರೈತರು ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ಅವರಿಗೆ ತಕ್ಷಣವೇ ಧಾವಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅವರು ನನ್ನ ನಿರ್ದೇಶನದಂತೆ ರೈತರ ಸಹಾಯಕ್ಕೆ ಕ್ರಮ ಕೈಗೊಂಡಿದ್ದಾರೆ. ಗದ್ದೆಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ಆರಂಭಿಸಿದ್ದಾರೆ. ರೈತರಿಗೆ ಅಗತ್ಯವಾದ ರಸಗೊಬ್ಬರ ಮತ್ತು ಕೀಟನಾಶಕ ಒದಗಿಸುವಂತೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು ‘ಕಬ್ಬಿನ ಗದ್ದೆಗಳಲ್ಲಿ ಅಲ್ಲಲ್ಲಿ ಹುಳುಗಳು ಕಾಣಿಸಿಕೊಂಡಿರುವುದನ್ನು ರೈತರು ತಿಳಿಸಿದ್ದಾರೆ. ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ನಿಖರವಾಗಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆಯಾಗಿದೆ ಎನ್ನುವುದರ ಸಮೀಕ್ಷೆ ಇನ್ನೂ ನಡೆಸಿಲ್ಲ. ಆದರೆ, ನಿರ್ವಹಣೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯ ಸಲಹೆ ನೀಡುತ್ತಿದ್ದೇವೆ. ಕ್ಲೋರ್‌ಫೈರಿಪಾಸ್ ಸಿಂಪಡಿಸುವಂತೆ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
‘ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಮಾರ್ಗದರ್ಶನ ಪಡೆಯಬಹುದು. ದೊಡ್ಡ ಮಳೆಯಾದರೆ ಈ ಹುಳುಗಳ ಕಾಟ ಮುಂದುವರಿಯುವುದಿಲ್ಲ. ನಿರ್ವಹಣೆಗೆ ಬೇಕಾದ ಔಷಧಿಗಳ ದಾಸ್ತಾನಿದೆ. ನೆರವಾಗಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು. ಕಬ್ಬು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು,ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪುಮಿಶ್ರಿತ ಮಣ್ಣು ಈ ಬೆಳೆಗೆ ಸೂಕ್ತ.ದೇಶದಲ್ಲಿ ಈ ಬೆಳೆಯನ್ನು 5.06 ದಶಲಕ್ಷ ಹೆಕ್ಟೇರ್‌ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು,ಒಟ್ಟು ಉತ್ಪಾದನೆ 36,110 ದಶ ಲಕ್ಷ ಟನ್‌ ಇರುವುದು. ರಾಜ್ಯದಲ್ಲಿ ಈ ಬೆಳೆಯನ್ನು 4.20 ಲಕ್ಷ ಹೆಕ್ಟೇರ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 379.0 ಲಕ್ಷ ಟನ್‌ ಉತ್ಪಾದನೆ ಇರುವುದು.

ಕೆಂಪು ಭೂಮಿ ಮತ್ತು ನೀರಿನ ಕೊರತೆಯಿದ್ದಲ್ಲಿ ಗುಣಿ ನಾಟಿ ಪದ್ಧತಿ ಲಾಭದಾಯಕ.ಒ೦ದು ಮೀಟರ್‌ ಉದ್ದ, ಒಂದು ಮೀಟರ್‌ ಅಗಲ ಮತ್ತು’ 45 ಸೆಂ. ಮೀ. | ಆಳದ ಗುಣಿಗಳನ್ನು ತೆಗೆಯಬೇಕು. ಗುಣಿಗಳು ಸಾಲಿನಿಂದ ಸಾಲಿಗೆ 90 ಸೆಂ.ಮೀ. ಹಾಗೂ ಸಾಲಿನಲ್ಲಿ 45 ಸೆಂ. ಮೀ. ಅ೦ತರ ಇರುವಂತೆ ನೋಡಿಕೊಳ್ಳಬೇಕು.ಗುಣಿಯ ತಳ ಭಾಗದಲ್ಲಿ 15 ಸೆಂ. ಮೀ. ಮಣ್ಣನ್ನು ಹಾಕಿ ನಂತರ 15 ಸೆಂ. ಮೀ. ಹಾಗೂ 4 ಸೆಂ. ಮೀ. ದಪ್ಪ ಕಾ೦ಪೋಸ್ಟ್‌ ಮತ್ತು ಹಸಿರೆಲೆ ಗೊಬ್ಬರ ಹಾಕಬೇಕು. ಇನ್ನು ಳಿದ 15 ಸೆಂ.ಮೀ. ಸ್ಥಳದಲ್ಲಿ ಉಳಿದ ಮಣ್ಣು, 150 ಗ್ರಾಂ ಯೂರಿಯಾ, 130 ಗ್ರಾಂ ಸೂಪರ್‌ ಫಾಸ್ಟೇಟ್‌ ಮತ್ತು 85 ಗ್ರಾಂ ಮ್ಯುರೇಟ್‌ ಆಫ್‌ ಪೋಟ್ಯಾಷಗಳನ್ನು ಸೇರಿಸಬೇಕು. ಇ೦ತಹ ಪತಿಯೊಂದು ಗುಣಿಯಲ್ಲಿ ನಾಟ ಮಾಡಲು ಎರಡು ಕಣ್ಣುಗಳುಳ್ಳ 20 ಬೀಜದ ತುಂಡುಗಳನ್ನು ಉಪಯೋಗಿಸಬೇಕು. ಸಾಲಿನಿಂದ ಸಾಲಿಗೆ ಇರುವ 90 ಸೆಂ. ಮೀ. ಸ್ಥಳವನ್ನು ನೀರು ಬಿಡಲು ಕಾಲುವೆಯನ್ನಾಗಿ ಬಳಸಬೇಕು. ಪ್ರತಿ ಎರಡು ಗುಣಿ ಸಾಲುಗಳ ನಂತರ ಕಾಲುವೆಯನ್ನು ಮಾಡಿ ಉಪಯೋಗಿಸಬೇಕು. ಒಂದು ಎಕರೆಗೆ 1460 ಗುಣಿಗಳು ಬೇಕಾಗುತ್ತವೆ. ಕಬ್ಬು ಮುಖ್ಯವಾದ ವಾಣಿಜ್ಯ ಬೆಳೆಯಾಗಿರುವುದರಿ೦ದ ಹನಿ ನೀರಾವರಿಯನ್ನು ವಲಯ 3 ಮತ್ತು 8 ರಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಹನಿ ನೀರಾವರಿ ಪದತಿಯಲ್ಲಿ ನೀರನ್ನು ಉಳಿತಾಯ ಮಾಡಬಹುದಲ್ಲ್ಬದೆ, ವಿದ್ಕುತ್‌. ರಸಗೊಬ್ಬರ ಮತ್ತು ಕೃಷಿ ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡಬಹುದು. ಕಜಿನಲ್ಲಿ ಹನಿ ನೀರಾವರಿಯನ್ನು ಅಳವಡಿಸುವುದರಿಂದ ಖರ್ಚು ಹೆಚ್ಚಾದರೂ ಉಳಿತಾಯವಾದ ನೀರಿನಿ೦ದ ನೀರಾವರಿ ಕ್ಷೇತ್ರವನ್ನು ದ್ವಿಗುಣಗೊಳಿಸಿ ಇದರ ವೆಚ್ಚವನ್ನು 2 ರಿಂದ 3 ರ್ಷಗಳಲ್ಲಿ ಮರಳಿ ಪಡೆಯಬಹುದು. ಆದ್ದರಿಂದ ಕಜ್ಜಿನಲ್ಲಿ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿಯನ್ನು ಸೂಕ್ತವಾಗಿ ಅಳವಡಿಸಬಹುದು. ಕಬ್ಬಿನಲ್ಲಿ ಹನಿ ನೀರಾವರಿ ಪದ್ಧತಿಯಿಂದ ಶೇ. ೫೦ಕ್ಕು ಹೆಚ್ಚಿನ ಪ್ರಮಾಣ ದಲ್ಲಿ ನೀರನ್ನು ಉಳಿತಾಯ ಮಾಡಬಹುದು. ಹನಿ ನೀರಾವರಿ ಪದ್ಧತಿಯನ್ನು ಸಾಮಾನ್ಯ ಸಾಲುಗಳ ಪದ್ಧತಿಗೆ ಬದಲಾಗಿ 60-180-60 ಸೆಂ.ಮೀ (2-6-2 ಅಡಿ) ಜೋಡು ಸಾಲು ಪದ್ಧತಿಯನ್ನು ಅಥವಾ 5, 6, 7 ಅಡಿ ಅಂತರದ ಒ೦ದೇ ಸಾಲಿನಲ್ಲಿ ಅಳವಡಿಸುವುದರಿಂದ 6 ಅಡಿ ಅಂತರದಲ್ಲಿ ಒಂದು ಲ್ಯಾಟರಲ್‌ ಪೈಪನ್ನು ಅಳವಡಿಸಬಹುದು. ಹನಿ ನೀರಾವರಿಯಲ್ಲಿ ನೀರನ್ನು ಪ್ರತಿ ದಿನಕ್ಕೊಮ್ಮೆ ವಿವಿಧ ಹಂಗಾಮಿನಲ್ಲಿ ಕೋಷ್ಟಕದಲ್ಲಿ ತಿಳಿಸಿದಂತೆ ಒದಗಿಸಬೇಕು.

Leave a Reply

Your email address will not be published. Required fields are marked *