Spread the love

ನೀವು ಉತ್ತಮ ಲಾಭ ಗಳಿಸುವ ಕೃಷಿಯನ್ನು ಮಾಡಲು ಬಯಸಿದರೆ ನೀವು ಮಖಾನಾ ಕೃಷಿ ಯನ್ನು ಮಾಡಬಹುದು. ಇದರ ಕೃಷಿಯಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು.

ಎಲ್ಲರಿಗೂ ಈಗ ಸ್ವಂತ ಬ್ಯುಸಿನೆಸ್ ಶುರು ಮಾಡಿ ಜೀವನ ಸಾಗಿಸಬೇಕೆಂಬ ಆಸೆ ಕಂಡಿತ ಇರುತ್ತೆ. ಕೆಲವರಿಗೆ ಕೈನಲ್ಲಿ ದುಡ್ಡಿ ರುವುದಿಲ್ಲ, ಇನ್ನೂ ಕೆಲವರಿಗೆ ದುಡ್ಡಿರುತ್ತೆ ಆದರೆ, ಯಾವ ಬ್ಯುಸಿನೆಸ್ ಮಾಡಬೇಕು, ಹೇಗೆ ಬ್ಯುಸಿನೆಸ್ ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಅಂಥವರಿಗೆ ಸೂಪರ್ ಬ್ಯುಸಿನೆಸ್ ಐಡಿಯಾ ಗಳನ್ನು ನಿಮ್ಮ ಮುಂದೆ ತಂದಿದೆ. ಇದಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. ನೀವು ಉತ್ತಮ ಲಾಭ ಗಳಿಸುವ ಕೃಷಿಯನ್ನು ಮಾಡಲು ಬಯಸಿದರೆ ನೀವು ಮಖಾನಾ ಕೃಷಿ ಯನ್ನು ಮಾಡಬಹುದು. ಇದರ ಕೃಷಿಯಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು. ಇದು ಚಳಿಗಾಲ, ಬೇಸಿಗೆ ಅಥವಾ ಮಾನ್ಸೂನ್ ಆಗಿರಲಿ ಪ್ರತಿ ಋತುವಿನಲ್ಲೂ ತಿನ್ನುವ ಉತ್ಪನ್ನವಾಗಿದೆ.

ಇದಲ್ಲದೇಈ ಪದಾರ್ಥ ಕಂಡರೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ತುಂಬಾ ಇಷ್ಟ. ಅಷ್ಟೇ ಅಲ್ಲ, ಈ ಉತ್ಪನ್ನಕ್ಕೆ ಹಳ್ಳಿಗಳಿಂದ ನಗರಗಳವರೆಗೆ ಬೇಡಿಕೆ ಸದಾ ಇರುತ್ತದೆ. ಅಲ್ಲದೆ ಇದರ ಕೃಷಿಯಿಂದ ರೈತರ ಆದಾಯವೂ ಹಲವು ಪಟ್ಟು ಹೆಚ್ಚುತ್ತದೆ.

ಮಖಾನ ಕೃಷಿಯಲ್ಲಿದೆ ಹೆಚ್ಚಿನ ಲಾಭ!

ಬಿಹಾರದ ಕೆಲವು ಜಿಲ್ಲೆಗಳಲ್ಲಿ ಮಖಾನಾ ಕೃಷಿಯು ದೇಶದಲ್ಲೇ ಅತಿ ಹೆಚ್ಚು. ಬಿಹಾರದ ನಿತೀಶ್ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಖಾನಾ ವಿಕಾಸ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರಿಗೆ 72,750 ರೂ ಸಹಾಯಧನ ನೀಡಲಾಗುತ್ತದೆ. ನಮ್ಮ ರಾಜ್ಯದಲ್ಲೂ ಇದೇ ರೀತಿಯ ಕೃಷಿ ಮಾಡುವುದಕ್ಕೆ ಸಹಾಯಧನ ನೀಡಲಾಗುತ್ತೆ.

ಮಖಾನಾ ಬೆಳೆಯುವುದು ಹೇಗೆ?


ಮಖಾನಾವನ್ನು ಎರಡು ರೀತಿಯಲ್ಲಿ ಬೆಳೆಸಬಹುದು. ಮೊದಲ ಮಾರ್ಗವೆಂದರೆ ಕೆರೆಗಳಲ್ಲಿ ಕೃಷಿ ಮತ್ತು ಎರಡನೆಯದು ಹೊಲಗಳಲ್ಲಿ ಕೃಷಿ. ಇದರ ಕೃಷಿಯಲ್ಲಿ ಎರಡು ಬೆಳೆಗಳನ್ನು ತೆಗೆದುಕೊಳ್ಳಬಹುದು. ಮಾರ್ಚ್‌ನಲ್ಲಿ ಮೊದಲು ನಾಟಿ ಮಾಡಿ ನಂತರ ಆಗಸ್ಟ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ. ಮತ್ತೊಂದೆಡೆ, ಎರಡನೇ ಬೆಳೆಯನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಬಿತ್ತಲಾಗುತ್ತದೆ. ಅದು ಫೆಬ್ರವರಿ-ಮಾರ್ಚ್‌ನಲ್ಲಿ ಕಟಾವು ಆಗುತ್ತದೆ.

ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಕಮಾಲ್ ಮಾಡಿದ ವ್ಯಕ್ತಿ! ಇದ್ರಿಂದಲೇ 30 ಲಕ್ಷ ಆದಾಯ ಅಂದ್ರೆ ಸುಮ್ನೆನಾ?


ಮೊದಲು ಅದರ ನರ್ಸರಿ ಸಿದ್ಧಪಡಿಸಿ ನಂತರ ಕನಿಷ್ಠ ಒಂದೂವರೆ ಎರಡು ಅಡಿ ನೀರು ಇರುವ ಗದ್ದೆ ಅಥವಾ ಕೆರೆಯಲ್ಲಿ ನಾಟಿ ಮಾಡಲಾಗುತ್ತದೆ. ಸುಮಾರು 6 ತಿಂಗಳಲ್ಲಿ ಇದರ ಬೆಳೆ ಸಿದ್ಧವಾಗುತ್ತದೆ.

ಮಖಾನ ಕೃಷಿಯಿಂದ ಸಿಗುವ ಆದಾಯವೆಷ್ಟು?

ಒಂದು ಎಕರೆ ಹೊಲದಲ್ಲಿ ಮಖಾನ ಸಾಗುವಳಿ ಮಾಡಲಾಗಿದ್ದು, ವರ್ಷಕ್ಕೆ ಅಂದಾಜು 5 ರಿಂದ 6 ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಇದಕ್ಕಾಗಿ ಗದ್ದೆಯಲ್ಲಿ ಒಂದರಿಂದ ಒಂದೂವರೆ ಅಡಿ ಗುಂಡಿ ತೋಡಿ ಕೆರೆ ನಿರ್ಮಿಸಬೇಕು. ಈ ಕೆರೆಯಲ್ಲಿ ಮಖಾನ ಸಾಗುವಳಿ ಮಾಡಿದ ನಂತರದ ದೊಡ್ಡ ಸಂಗತಿಯೆಂದರೆ, ಅದರ ಗಡ್ಡೆ ಮತ್ತು ಕಾಂಡಗಳಿಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆಯಿದೆ.

ಇದನ್ನೂ ಓದಿ: ಕೈಯಲ್ಲಿ 5 ಸಾವಿರ ಇದ್ರೆ ಈ ಬ್ಯುಸಿನೆಸ್ ಆರಂಭಿಸಿ, ತಿಂಗಳಿಗೆ 30 ಸಾವಿರ ಪ್ರಾಫಿಟ್ ಗುರು!

ಒಂದು ಎಕೆರೆಗೆ ಬೇಕು 97 ಸಾವಿರ ಹೂಡಿಕೆ!

ಒಂದು ಹೆಕ್ಟೇರ್ ನಲ್ಲಿ ಮಖಾನ ಕೃಷಿ ಮಾಡಲು 97,000 ರೂಪಾಯಿಯ ಅಗತ್ಯವಿದೆ. ಅದರ ಬೀಜಗಳನ್ನು ಖರೀದಿಸಲು ಹೆಚ್ಚು ವೆಚ್ಚವಾಗುವುದಿಲ್ಲ ಏಕೆಂದರೆ ಹಿಂದಿನ ಬೆಳೆಗಳಿಂದ ಉಳಿದ ಬೀಜಗಳಿಂದ ಹೊಸ ಸಸ್ಯಗಳು ಬೆಳೆಯುತ್ತವೆ. ಕೃಷಿಯಲ್ಲಿ ಮಾಡುವ ವೆಚ್ಚದ ಬಹುಪಾಲು ವಿಶೇಷವಾಗಿ ಕೂಲಿಗಾಗಿ. ಈ ಬೇಸಾಯದಲ್ಲಿ ಕೂಲಿಯೇ ಪ್ರಮುಖ ವೆಚ್ಚ. ಇದರಲ್ಲಿ ನೀರಿನ ಮೇಲೆ ಬೆಳೆದ ಬೆಳೆಗಳನ್ನು ಕಟಾವು ಮಾಡಬೇಕು. ಅದರ ನಂತರ ಬೆಳೆಯ ಧಾನ್ಯಗಳನ್ನು ಮೊದಲು ಹುರಿಯಲಾಗುತ್ತದೆ

Leave a Reply

Your email address will not be published. Required fields are marked *