
ಎಲ್ಲಾ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಈ ಬಾರಿ ಬಜೆಟ್ ನಲ್ಲಿ ಕೃಷಿಗೆ ಪ್ರಾಮುಖ್ಯತೆ ನೀಡಲಾಗಿದ್ದು, 2023 ಹಣಕಾಸಿನ ವರ್ಷದಲ್ಲಿ , ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಅದರಲ್ಲಿ ಪಿಎಂ ಪ್ರಣಾಮ ಯೋಜನೆ ಕೂಡ ಒಂದು . ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಈ ಘೋಷಣೆಯು ಎಲ್ಲರ ಮನ ಸೆಳೆದಿದೆ.
ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ pan card ಅಪ್ಲೈ ಮಾಡಿ https://mahitisara.com/index.php/2023/01/14/how-to-apply-for-pancard-through-online-for-childrens/
ಇದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರ್ಯಾಯ ರಸಗೊಬ್ಬರಗಳಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುವ ಯೋಜನೆಯಾಗಿದ್ದು, ರಾಸಾಯನಿಕ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಕಡಿಮೆ ಬಳಸುವುದು ಮತ್ತು ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಭೂಮಿಯನ್ನು ರಾಸಾಯನಿಕ ಗೊಬ್ಬರದಿಂದ ಸಂರಕ್ಷಿಸಲು ಈ ಯೋಜನೆಯನ್ನು ಜಾರಿಗೆ ಗೊಳಿಸಲಾಗಿದೆ. ಅತ್ಯಧಿಕ ರಸಗೊಬ್ಬರ ಬಳಕೆಯಿಂದ ಮಣ್ಣಿನ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ದೇಶಾದ್ಯಂತ ಕೃಷಿಕರಲ್ಲಿ ಅರಿವು ಮೂಡಿಸಲು ಈ ಯೋಜನೆ ನೆರವು ನೀಡಲಿದೆ.
ಏನಿದು ಪಿಎಂ ಪ್ರಣಾಮ ಯೋಜನೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪಿಎಂ ಪ್ರಣಾಮ ಯೋಜನೆಯ ಪೂರ್ಣ ಹೆಸರು ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಆಲ್ಟರ್ನೇಟಿವ್ ನ್ಯುಟಿಯೆಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೇಜ್ ಮೆಂಟ್ ಯೋಜನೆ. ಇದು ಭೂಮಿಯನ್ನು ರಾಸಾಯನಿಕ ಗೊಬ್ಬರ ಗಳಿಂದ ಸಂರಕ್ಷಣೆ ಮಾಡಲುರೂಪಿಸುವ ಕಾರ್ಯಕ್ರಮ.
ಈ ಯೋಜನೆಯ ಉದ್ದೇಶವೇನು ?
*ರಸಗೊಬ್ಬರ ಮೇಲಿನ ಸಬ್ಸಿಡಿ ಅನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಸಬ್ಸಿಡಿ ಹೊರೆ 2022-2023ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಶೇ.39ರಷ್ಟು ಅಂದ್ರೆ 2.25ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಹಿಂದಿನ ವರ್ಷ ಇದು 1.62ಲಕ್ಷ ಕೋಟಿ ರೂ. ಆಗಿತ್ತು.
*ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರ ಕೃಷಿ ಅಭ್ಯಾಸಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
*ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
ಈ ಯೋಜನೆ ಪ್ರಯೋಜನಗಳು
- ಇದರಲ್ಲಿ ಕೆಲವು ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಲಾಗುತ್ತದೆ .
*ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚು ಮಾಡಲು ಸಾಧ್ಯವಾಗುತ್ತದೆ.
*ನೈಸರ್ಗಿಕ ಪೌಷ್ಟಿಕಾಂಶಗಳು ಸೇರಿದಂತೆ ಪರ್ಯಾಯ ಪೌಷ್ಟಿಕಾಂಶಗಳು ಹಾಗೂ ರಸಗೊಬ್ಬರಗಳ ಬಳಕೆಯನ್ನುಇದು ಉತ್ತೇಜಿಸಲಿದೆ.
*ದೀರ್ಘಾವಧಿಯಲ್ಲಿ ರಾಸಾಯನಿಕಯುಕ್ತ ರಸಗೊಬ್ಬರಗಳ ಬಳಕೆಯನ್ನು ತಗ್ಗಿಸೋದ್ರಿಂದ ಮಣ್ಣಿನ ಗುಣಮಟ್ಟ ಹೆಚ್ಚಲಿದೆ.
*ದೇಶದಲ್ಲಿ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
ಮಾಹಿತಿಸಾರ ವಾಟ್ಸಾಪ್ ಗ್ರೂಪ್ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9