Spread the love

ಪ್ರಿಯ ರೈತಮಿತ್ರರೆ , ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಕುಸುಮ್ ಯೋಜನೆ ಅಡಿ ರಾಜ್ಯದ ಸುಮಾರು 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಘೋಷಿಸಿದ್ದಾರೆ. ಸರ್ಕಾರವು ದೇಶದ ಕೃಷಿಯ ಸ್ತಿತಿಯನ್ನು ಸುಧಾರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ‘ಪ್ರಧಾನ ಮಂತ್ರಿ ಕುಸುಮ್ ಯೋಜನೆಯನ್ನು ಆರಂಭಿಸಿದ್ದಾರೆ‌. ಈ ಯೋಜನೆಯಡಿ ಕೃಷಿ ನೀರಾವರಿಗಾಗಿ ಸೌರಶಕ್ತಿ ಪಂಪ್‌ ಸೆಟ್‌ಗಳನ್ನು ನಿರ್ಮಿಸಲಾಗುವುದು. ಈ ಕುರಿತ ಪೂರ್ಣ ವಿವರ ಇಲ್ಲಿದೆ.ಕೃಷಿಯು ಇಂದಿಗೂ ಭಾರತದ ಆರ್ಥಿಕತೆಯ ಪ್ರಮುಖ ಶಕ್ತಿಯಾಗಿದೆ. ದೇಶವು ಕೃಷಿಯಿಂದ ಉದ್ಯಮದತ್ತ ಸಾಗಿದ್ದರೂ, ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ದೇಶದ ಕೃಷಿಯನ್ನು ಸುಧಾರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ಕೃಷಿ ನೀರಾವರಿಗಾಗಿ ಸೌರಶಕ್ತಿ ಪಂಪ್‌ ಸೆಟ್‌ಗಳನ್ನು ನಿರ್ಮಿಸಲಾಗುವುದು. ನವೀಕರಿಸಬಹುದಾದ ಶಕ್ತಿಯ ಮೂಲಗಳು ಭವಿಷ್ಯದ ಏಕೈಕ ಪರ್ಯಾಯ ಇಂಧನಗಳಾಗಲಿವೆ. ಅದನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ 30 ಮಿಲಿಯನ್ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಗುರಿ ಅಳವಡಿಸಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ, ದೇಶದ ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಆಧುನೀಕರಣ ಸಾಧಿಸಬಹುದಾಗಿದೆ. ಪರ್ಯಾಯ ಇಂಧನ ಬಳಕೆಯಿಂದ ದೇಶದ ಆರ್ಥಿಕತೆಯೂ ಸುಧಾರಣೆಯಾಗಲಿದೆ. ರೈತರ ಆದಾಯ ಹೆಚ್ಚಿಸಲು ಹಾಗೂ ವ್ಯವಸಾಯದ ವೆಚ್ಚವನ್ನು ಕಡಿಮೆಮಾಡಲು ಸರ್ಕಾರವು ಅನೇಕ ಯೋಜನೆ ರೂಪಿಸಿವೆ. ಇದರಲ್ಲಿ ರೈತರಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಒದಗಿಸುವ ಉದ್ದೇಶದಿಂದ 2019ರಲ್ಲಿ ಜಾರಿಗೆ ತಂದ ‘ಪಿಎಂ ಕುಸುಮ ಯೋಜನೆ’ಯು ಕೂಡ ಒಂದಾಗಿದೆ. ಈ ಯೋಜನೆ ಇಂದ ರೈತರು ಸೋಲಾರ್ ಪಂಪ್ ಗಳನ್ನು ಅಳವಡಿಸಿಕೊಂಡು ವಿದ್ಯುತ್ ಮತ್ತು ಕಾರ್ಮಿಕರಿಗೆ ತಗುಲುವ ವೆಚ್ಚ ವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಕೂಡ ಮಾಡಬಹುದಾಗಿದೆ. ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರವು ಶೇ. 90ರಷ್ಟು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
ಸಣ್ಣ ಹಾಗೂ ದೊಡ್ಡ ಪ್ರಮಾಣ ದಲ್ಲಿ ವ್ಯವಸಾಯ ಮಾಡುವ ರೈತರಿಗೆ ಆದಾಯ ತರುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಈ ಎರಡು ವರ್ಗದ ರೈತರು ಸಹಾಯಧನ ಪಡೆಯಲು ಕೆಲವು ಮಾನದಂಡಗಳನ್ನು ಸೂಚಿಸಲಾಗಿದೆ.
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಅರ್ಜಿ ಸಲ್ಲಿಕೆಗೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕಿದ್ದು, ಇಂತವರು ಯೋಜನೆಯ ಅರ್ಜಿ ಹಾಕಬಹುದು. ಪುರಸ್ಕೃತ ಅರ್ಜಿದಾರರಿಗೆ ಸರ್ಕಾರ 0.5mw ನಿಂದ 2mw ಸಾಮರ್ಥ್ಯದ ವಿದ್ಯುತ್ ಸ್ಥಾವರ ಖರೀದಿಸಲು ಸರ್ಕಾರ ನೆರವು ನಿಡಲಿದೆ. ರೈತರ ತಮ್ಮ ಕೃಷಿ ಅಗತ್ಯತೆಗಳು ಎಷ್ಟಿದೆ ಎಂಬುದು ಹಾಗೂ ವಿತರಣಾ ನಿಗಮ ತಿಳಿಸಿದ ಸಾಮರ್ಥ್ಯದ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆಗೆ ರೈತರು ತಮ್ಮ ಆಧಾರ್, ಪಡಿತರ ಚೀಟಿ ನಕಲು ಪ್ರತಿ ಸಹಿತ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಸೋಲಾರ್ ವಿದ್ಯುತ್ ಅನ್ನು ಹೊಸ ಸೋಲಾರ್ ಚಾಲಿತ ಪಂಪ್ಸೆಟ್ಗಳಿಗೆ ಮಾತ್ರ ನೀಡಲಾಗುವುದು ಈಗಾಗಲೇ ಐಪಿ ಸೆಟ್‌ಗಳಿಗೆ ಶಕ್ತಿ ತುಂಬಿದವರಿಗೆ ನೀಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಪಿಎಂ ಕುಸುಮ್ ಯೋಜನೆಯಡಿ ಫಲಾನುಭವಿಗಳನ್ನು ಆನ್‌ಲೈನ್ ಮೂಲಕ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಪಿಸಿಎಲ್) ಆಯ್ಕೆ ಮಾಡುತ್ತದೆ ಎಂಬುದನ್ನು ಗಮನಿಸಬೇಕು.
ರೈತರು ಬಳಸುವ ಪಂಪ್‌ಗಳು ಸಾಮಾನ್ಯವಾಗಿ ಡೀಸೆಲ್ ಅಥವಾ ಪೆಟ್ರೋಲ್‌ನಿಂದ ಕೆಲಸ ಮಾಡುತ್ತವೆ. ಆದರೆ ಈ ಯೋಜನೆಯಿಂದ ರೈತರ ಪಂಪ್ಸೆಟ್ಗಳನ್ನು ಸೌರಶಕ್ತಿಯಿಂದ ಚಾಲಿತ ಪಂಪ್‌ಗಳನ್ನಾಗಿ ಪರಿವರ್ತಿಸಲಾಗುವುದು. ಈ ಮೂಲಕ ರೈತರು ಸ್ವಾವಲಂಬಿಗಳಾಗಬಹುದು. ಅಲ್ಲದೇ ರೈತರ ಕೃಷಿ ಭೂಮಿಯಲ್ಲಿ ಸೋಲಾರ್ ಪವರ್ ಗ್ರಿಡ್ ಸ್ಥಾಪಿಸಿ ಅಲ್ಲಿ ಸಂಗ್ರಹವಾಗುವ ವಿದ್ಯುತ್ ಶಕ್ತಿಯನ್ನು ಸರ್ಕಾರವೇ ಖರೀದಿ ಮಾಡುತ್ತದೆ. ಇದರಿಂದ ರೈತರ ಕೈಗೆ ಹಣವೂ ಸೇರುತ್ತದೆ. ಇದರಿಂದ ವಿದ್ಯುತ್ ನಿಗಮಗಳು ಕೃಷಿ ವಲಯಕ್ಕೆ ಪೂರೈಕೆಯನ್ನು ಕಡಿಮೆ ಮಾಡದೇ ಇರಬಹುದು. ವಿದ್ಯುತ್ ಹೊರೆ ಮತ್ತು ರೈತರ ಹೊಲಗಳಿಗೆ ಅದರ ವಿದ್ಯುತ್ ಜಾಲವನ್ನು ವಿಸ್ತರಿಸಲು ತಗಲುವ ವೆಚ್ಚದಿಂದ ವಿದ್ಯುತ್ ನಿಗಮಗಳು ಈ ಯೋಜನೆಯಿಂದ ಮುಕ್ತವಾಗುತ್ತವೆ. ಸರ್ಕಾರಕ್ಕೆ ಸಬ್ಸಿಡಿ ಮೇಲೆ ತಗಲುವ ವೆಚ್ಚವನ್ನು ಸಹ ಈ ಯೋಜನೆ ಉಳಿಸುತ್ತದೆ. ಇದಲ್ಲದೇ ರಾಜ್ಯ ಸಚಿವ ಸಂಪುಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ 2,500 ಕೋಟಿ ರೂ ಸಾಲ ಪಡೆಯಲು ಕೆಪಿಸಿಎಲ್‌ಗೆ ಒಪ್ಪಿಗೆ ನೀಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯಡಿ ಸೋಲಾರ್ ಪಂಪ್ ಸ್ಥಾಪಿಸಲು ರೈತರಿಗೆ 30-90% ದರದಲ್ಲಿ ಸಹಾಯಧನ ನೀಡುತ್ತವೆ. ಸರ್ಕಾರಗಳು ನೀಡುವ ಸಹಾಯಧನ ಪೈಕಿ 40%ರಷ್ಟು ಹಣದಲ್ಲಿ ಸೋಲಾರ್ ಪವರ್ ಪಂಪ್. ನಿರ್ಮಿಸಿಕೊಳ್ಳಬಹುದು.ರೈತರಿಗೆ ಬಾಕಿ ಮೊತ್ತ ಭರಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳೂ ಮತ್ತು ನಬಾರ್ಡನಿಂದ 30 % ಸಾಲ ಪಡೆಯಲು ಅವಕಾಶ ವಿದೆ. ಬಾಕಿ 10%ರಷ್ಟು ಹಣ ರೈತನೆ ಪಾವತಿಸಬೇಕಾಗುತ್ತದೆ.ನೀರಾವರಿಗಾಗಿ ಖರ್ಚಾಗುತ್ತಿದ್ದ ವಿದ್ಯುತ್ ಉಳಿತಾಯವಾಗಲಿದೆ. ಒಮ್ಮೆ ಸೋಲಾರ್ ಪವರ್ ಪಂಪ್ ಅಳವಡಿಸಿಕೊಂಡರೆ ಸುಮಾರು ಭವಿಷ್ಯ 25ವರ್ಷ ನಿಶ್ಚಿಂತೆಯಿಂದ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬಹುದು. ರೈತರಿಗೆ ಕಾಂಪೋನೆಂಟ್ ಅನ್ನುವ ಬಿ ಯೋಜನೆಯಲ್ಲಿ ರೈತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಯಾವ ದೇಶಕ್ಕಾಗಿ ಅಂದರೆ ಜಾಲ ಮುಕ್ತ ಸೌರಜಲ ಪಂಪ್ ಸೆಟ್ ವಿತರಣೆ ಮಾಡಲಾಗುತ್ತಿದೆ.
ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು:https://kredl.karnataka.gov.in/
ರೈತರು ಜಮೀನಿನಲ್ಲಿ ಕೊಳವೆಯನ್ನು ಮೊದಲು ಕೊರೆಸಿರಬೇಕು. ಈ ಯೋಜನೆ ಅಡಿಯಲ್ಲಿ ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಮಾತ್ರ ಅನ್ವಯವಿರುತ್ತದೆ.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಮೊದಲೇ ಲಾಭವನ್ನು ಪಡೆದಿರುವ ಫಲಾನುಭವಿಗಳಿಗೆ ಈ ಯೋಜನೆಯು ಅರ್ಹರಾಗಿರುವುದಿಲ್ಲ.
ಅರ್ಜಿದಾರರಿಗೆ ಒಂದೇ ಪಂಪ್ ಸೆಟ್ ಗೆ ಅರ್ಜಿಯನ್ನು ಸಲ್ಲಿಸಬಹುದು.ಅರ್ಜಿದಾರರು ಕಟ್ಟುವ ಹಣವನ್ನು ಡಿಡಿ ಮುಖಾಂತರ ಪಾವತಿಸಬೇಕು. ಯೋಜನೆಯಲ್ಲಿ ಮೊದಲ ಬಂದವರಿಗೆ ಆದ್ಯತೆಯನ್ನು ಕೊಡಲಾಗುತ್ತದೆ ಹಾಗೂ ಅವರಿಗೆ ಅನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಕಲಚೇತನರವರಿಗೆ ಶೇಕಡ 5% ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗದವರಿಗೆ ಇಲ್ಲಿ ಮೇಲೆ ತಿಳಿಸಿದಂತೆ ಕೊಡಲಾಗುತ್ತದೆ..

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳು:
ಆಧಾರ್ ಸಂಖ್ಯೆ
ಮೊಬೈಲ್ ಸಂಖ್ಯೆ
ವಾಸ ಸ್ಥಳ ಮತ್ತು ವಿಳಾಸ
ಅರ್ಜಿದಾರರ ಹೆಸರು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜಾತಿಯ ಪ್ರಮಾಣ ಪತ್ರವನ್ನು ಕೊಡಬೇಕು
ರೇಷನ್ ಕಾರ್ಡ್ ಇದ್ದಲ್ಲಿ ಅದರ ನಂಬರನ್ನು ಅಮೂದಿಸಬೇಕು. ಅರ್ಜಿದಾರನ ಬ್ಯಾಂಕ್ ಖಾತೆಯ ವಿವರ. ಭೂ ದಾಖಲೆ ಯ ವಿವರಗಳು
ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬೇಕಾದರೆ ಇರುವ ಪೂರಕ ಮಾಹಿತಿ: ಅರ್ಜಿದಾರರು ಆನ್ಲೈನಲ್ಲಿ ಸಲ್ಲಿಸಬೇಕಾದರೆ ಮೊದಲು ನೋಂದಾವನಿಗೆ ಸಂಬಂಧಿಸಿದಂತೆ ವಾಸ ಸ್ಥಳ ಜಮೀನಿನ ವಿವರ ಜಾತಿ ಪ್ರಮಾಣ ಪತ್ರವನ್ನು ಮೇಲೆ ಇರುವಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಾಗೆ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ರೇಷನ್ ಕಾರ್ಡ್ ಪ್ರತಿ ವಿಶೇಷ ಚೇತನ ಪ್ರತಿ ಯೊಂದನ್ನು ಎರಡು ಸೆಟ್ ಜೆರಾಕ್ಸ್ ಮಾಡಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನ ಉಪ ವಿಭಾಗ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ಫಲಾನುಭವಿಗಳು ಆನ್ಲೈನ್ ನೊಂದಾವಣಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಜಾತಿ ವರ್ಗ ಇರುವ ಸ್ಥಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇರುವವರು ಅದನ್ನು ಸರಿಯಾಗಿ ಆಯ್ಕೆ ಮಾಡಬೇಕು ಮತ್ತು ಸಾಮಾನ್ಯ ವರ್ಗದವರು ಅದನ್ನು ಆಯ್ಕೆ ಮಾಡಬೇಕು.ಅದರ ಕೆಳಗಡೆ ಸಾಮರ್ಥ್ಯ ಅಂತ ಇರುತ್ತದೆ ಅಲ್ಲಿ ನೀವು3,5, 7,7.5,10 ಹೆಚ್ ಪಿ ಸೌರ ಪಂಪ್ಸೆಟ್ ಆಯ್ಕೆ ಮಾಡಬೇಕು.
ಭಾವಿಯ ವಿದುದ್ದೀಕರಣ ನೀವು ಈಗಾಗಲೇ ಮಾಡಿಸಿದರೆ ಅದನ್ನು ಹೌದು ಎಂದು ಹಾಕಬೇಕು.
ನೀವು ಈಗಾಗಲೇ ಸರಕಾರಿ ಅನುದಾನಿತ ಪಂಪ್ ಸೆಟ್ ಪಡೆದಿದ್ದಲ್ಲಿ ಹೌದು ಅಂತ ಹಾಕಬೇಕು ಇಲ್ಲವಾದರೆ ಇಲ್ಲ ಎಂದು ಆಯ್ಕೆ ಮಾಡಬೇಕು.

ಭಾವಿಯ ವಿದುದ್ದೀಕರಣ ನೀವು ಈಗಾಗಲೇ ಮಾಡಿಸಿದರೆ ಅದನ್ನು ಹೌದು ಎಂದು ಹಾಕಬೇಕು.
ನೀವು ಈಗಾಗಲೇ ಸರಕಾರಿ ಅನುದಾನಿತ ಪಂಪ್ ಸೆಟ್ ಪಡೆದಿದ್ದಲ್ಲಿ ಹೌದು ಅಂತ ಹಾಕಬೇಕು ಇಲ್ಲವಾದರೆ ಇಲ್ಲ ಎಂದು ಆಯ್ಕೆ ಮಾಡಬೇಕು.
ಅರ್ಜಿದಾರರು ಗಂಗಾ ಕಲ್ಯಾಣ ಯೋಜನೆಯಲ್ಲಿ ಈಗಾಗಲೇ ಫಲಾನುಭವಿಗಳು ಆಗಿದ್ದರೆ ಅಲ್ಲಿ ಹೌದು ಎಂದು ಆಯ್ಕೆ ಮಾಡಬೇಕು ಇಲ್ಲವಾದಲ್ಲಿ ಇಲ್ಲ ಎಂದು ಆಯ್ಕೆ ಮಾಡಬೇಕು.
ಅರ್ಜಿದಾರರ ಹೆಸರು ಮತ್ತು ಸಂಪರ್ಕದ ವಿವರಗಳು:
ಅರ್ಜಿದಾರರ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ನಮೂದಿಸಬೇಕು. ವಯಸ್ಸು ಮತ್ತು ಲಿಂಗ ಪಟ್ಟಿಯನ್ನು ಭರ್ತಿ ಮಾಡಬೇಕು. ತಂದೆ ಮತ್ತು ಗಂಡನ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ಕೊಟ್ಟಿರುವಂತೆ ನಮೂದಿಸಬೇಕು. ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
ಅರ್ಜಿದಾರನ ವಾಸ ಸ್ಥಳದ ವಿವರಗಳು
ಇದರಲ್ಲಿ ಅರ್ಜಿದಾರನ ವಿಳಾಸ ಗ್ರಾಮದ ಹೆಸರು ತಾಲೂಕು ಜಿಲ್ಲೆಯನ್ನು ಸರಿಯಾಗಿ ನಮೂದಿಸಬೇಕು.
ಅರ್ಜಿದಾರನ ಜಮೀನಿನ ವಿವರಗಳು:
ಗ್ರಾಮದ ಹೆಸರು ಗ್ರಾಮ ಪಂಚಾಯಿತಿ ಹೋಬಳಿ ತಾಲೂಕು ಭಾವಿಯ ಒಟ್ಟು ಆಳ ಮತ್ತು ಜಮೀನಿನ ಮಾಲೀಕನ ಹೆಸರನ್ನು ಸರಿಯಾಗಿ ತುಂಬಿರಬೇಕು.

ಎಲ್ಲಾ ರೈತರಿಗೆ ವಿಶೇಷವಾದ ಸೂಚನೆ :
ಈ ಯೋಜನೆಯ ಹೆಸರಿನಲ್ಲಿ ಫೇಕ್ ವೆಬ್ಸೈಟ್ ಗಳು ಜನರಿಂದ ಹಣವನ್ನು ಲೂಟಿ ಮಾಡಲು ಪ್ರಯತ್ನ ಮಾಡುತಿದ್ದರೆ ಅಂತಹ ಸಮಯದಲ್ಲಿ https://cybercrime.gov.in ದಲ್ಲಿ ದೂರನ್ನು ನೋಂದಾಯಿಸಿಕೊಳ್ಳಬೇಕು. ಯಾರು ಕೂಡಾ ಮೋಸ ಹೋಗಬಾರದು.
•ರೈತರಿಗೆ ಕಾಂಪೋನೆಂಟ್ ಅನ್ನುವ ಬಿ ಯೋಜನೆಯಲ್ಲಿ ರೈತರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಯಾವ ದೇಶಕ್ಕಾಗಿ ಅಂದರೆ ಜಾಲ ಮುಕ್ತ ಸೌರಜಲ ಪಂಪ್ ಸೆಟ್ ವಿತರಣೆಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಸರ್ಕಾರದಿಂದ ಸಬ್ಸಿಡಿ ಪಡೆದು ಪಂಪ್ ಸೆಟ್ ಅಳವಡಿಸಿಕೊಳ್ಳಲು ಹೇಳಿದ್ದಾರೆ ಇಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹಳ ಡಿಫ್ರೆಂಟ್ ಇದೆ ಹಾಗೂ ಅರ್ಜಿಯನ್ನು ದಯವಿಟ್ಟು ನೇರವಾಗಿ ಸಲ್ಲಿಸಲು ಹೋಗಬೇಡಿ.
ಅದರಲ್ಲಿ ಒಂದು ಪೇಜ್ ಇಂದ 7 ಪೇಜ್ ನವರಿಗೆ ಒಂದು ಪಿಡಿಎಫ್ ಇದೆ ಅದನ್ನು ನಾನು ಇಲ್ಲಿ ಕೊಟ್ಟಿರುತ್ತೇನೆ ಹಾಗೆ ಆಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಯಾವ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗೂ ಯಾವ ಯಾವ ದಾಖಲಾತಿಗಳು ಬೇಕು ಇನ್ನೊಂದು ಮಾಹಿತಿ ಏನೆಂದರೆ ಸ್ನೇಹಿತರೆ ಅರ್ಜಿಯ ಜೊತೆಗೆ ಡಿಡಿ ಯನ್ನು ತುಂಬಬೇಕಾಗುತ್ತದೆ.
ಇದು ಒಂದು ವಿಶೇಷ ಈ ಡಿಡಿಯನ್ನು ತುಂಬಬೇಕಾದರೆ ಎರಡು ಟೇಬಲ್ ಕೊಡಲಾಗಿದೆ ಟೇಬಲ್ 1 ನಲ್ಲಿ ಎಷ್ಟು ಎಚ್ ಪಿ ಪಂಪನ್ನು ಪಡೆಯಬೇಕಾದರೆ ಎಷ್ಟು ಹಣ ತುಂಬಬೇಕು ಕೇಂದ್ರ ಸರ್ಕಾರ ಹಾಗೂ ರಾಜ ಸರ್ಕಾರ ಎಷ್ಟು ಹಣವನ್ನು ಪಾವತಿಸುತ್ತದೆ. ಅದರ ಬಗ್ಗೆ ಟೇಬಲ್ ಒನ್ನಲ್ಲಿ ಮಾಹಿತಿ ನೀಡಲಾಗಿದೆ.ಟೇಬಲ್ ಟು ದಲ್ಲೂ ಕೂಡ ಒಂದು ಮಾಹಿತಿ ಅದರಲ್ಲಿ ರೈತರು ಎಷ್ಟು ಹಣ ತುಂಬಬೇಕು ಪಂಪ್ ಸೆಟ್ ನ ಬೆಲೆ ಎಷ್ಟು ಇದೆ ಹಾಗೂ ಕೇಂದ್ರ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತದೆ ಹಾಗೂ ರಾಜ್ಯ ಸರ್ಕಾರ ಎಷ್ಟು ಸಬ್ಸಿಡಿ ಕೊಡುತ್ತದೆ ಅದರ ಬಗ್ಗೆ ಮಾಹಿತಿ ಇದರಲ್ಲಿ ನೀಡಲಾಗಿದೆ ಪಿಡಿಎಫ್ ಅನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ ಅಥವಾ ಜೆರಾಕ್ಸ್ ಮಾಡಿಕೊಳ್ಳಿ ಒಂದು ಸಲ ಪಿಡಿಎಫ್ ಅನ್ನು ಸರಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ.
ಬನ್ನಿ ಹಾಗಾದ್ರೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ತಿಳಿದುಕೊಂಡು ಬರೋಣ ಮೊದಲು ಆಫೀಸಲ್ ಯೋಸೈಟ್ ಅನ್ನು ಓಪನ್ ಮಾಡಿಕೊಳ್ಳಿhttps://kredl.karnataka.gov.in/ ಇದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೆಳಗಡೆ ಬಂದ ಮೇಲೆ ಚಟುವಟಿಕೆಗಳು ಮತ್ತು ಮುಖ್ಯಾಂಶಗಳು ಅಂತ ಬರುತ್ತೆ ಅದನ್ನು ಸ್ಕ್ರಾಲ್ ಅಪ್ ಇನ್ನು ಕ್ಲಿಕ್ ಮಾಡಿದಾಗ ಅಲ್ಲಿ ಪಿಎಂ ಕುಸುಮ ಸಿ ಪ್ರಗತಿಯ ಕುರಿತು ಸವೆ ಅಂತ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿದಾಗ ಪಿಎಂ ಕುಸುಮದ ಬಗ್ಗೆ ಸಭೆಯು ನಡೆದ ಫೋಟೋ ಒಂದು ಅಲ್ಲಿ ಬರುತ್ತದೆ
ಪಿಎಂ ಕುಸುಮ ಯೋಜನೆ ಅಡಿಯಲ್ಲಿ 10000 ಹೆಸ್ಕಾಂ ವ್ಯಾಪ್ತಿಯಲ್ಲಿ 65,000 ಬೆಸ್ಕಾಂ ವ್ಯಾಪ್ತಿಯಲ್ಲಿ 1.75 ಲಕ್ಷ ಪಂಪ್ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 2.5 ಲಕ್ಷ ಪಂಪ್ ಸೆಟ್ ಸೇರಿದಂತೆ ಕೃಷಿ ಪಿಡರ್ಗಳನ್ನು ಅನುಕರಣ ಗೊಳಿಸಲಾಗಿದೆ
ಮತ್ತೆ ಹೋಂ ಪೇಜ್ಗೆ ಬಂದಾಗ ಅಲ್ಲಿ ಮತ್ತಷ್ಟು ಓದಿ ಅಂತ ಇರುತ್ತದೆ ಮತ್ತಷ್ಟು ಸುದ್ದಿಗಳು ಅಂತ ಬರುತ್ತದೆ, ಆಗ ಬಂದಾಗ ಮೊದಲನೇ ಲೈನ್ ನಲ್ಲಿ ಬರುವ. ಇನ್ಫಾರ್ಮಶನ್ ಅಂಡ್ ಗೈಡ್ ಲೈನ್ಸ್ ಫಾರ್ ಪ್ರೀತಿ ಸೋಲಾರ್ ಪಂಪ್ ಅಂಡರ್ ಕಂಪೋನೆಂಟ್ ಬಿ ಅಂತ ಬರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಪೂರಕ ಮಾಹಿತಿಗಳು ಮತ್ತು ಮಾರ್ಗಸೂಚಿಗಳು ಅಂತ ಬರುತ್ತದೆ ಇದರಲ್ಲಿ ರೈತರು ಎಷ್ಟು ಹಣವನ್ನು ಪಾವತಿ ಮಾಡಬಹುದ. ಅರ್ಜಿ ಯಾವ ರೀತಿ ಸಲ್ಲಿಸಬಹುದು ಅಂತ ತೋರಿಸಿಕೊಡಲಾಗಿದೆ.

Source: krishirishi.com

One thought on “ರೈತರು ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಶೇ.80ರಷ್ಟು ಸಹಾಯಧನ! ಕುಸುಮ ಯೋಜನೆ”

Leave a Reply

Your email address will not be published. Required fields are marked *