Spread the love

ನಮ್ಮ ಎಲ್ಲ ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು ಪಿಎಂ ಕಿಸಾನ್ ಯೋಜನೆಯಲ್ಲಿ ಈ ವಾರದಲ್ಲಿ ಹೊಸ ಅಪ್ಲೇಟ್ ಬಂದಿದೆ ಮೊದಲು ನೀವು ಯಾವುದೇ ಕಂತು ಬರಬೇಕಾದರೆ ಅದಕ್ಕೂ ಮುನ್ನವೇ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆಯನ್ನು ಮಾಡುತ್ತಿದ್ದರು. ಇದರ ಸಹಾಯದಿಂದ ನಿಮ್ಮ ಊರಿನ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಊರಿನಲ್ಲಿ ಪಿಎಂ ಕಿಸಾನ್ ಕಂತಿನ ಹಣ ಬಂದವರ ಹೆಸರಲ್ಲಿ ನಿಮ್ಮ ಹೆಸರು ಇದೇಯೋ ಇಲ್ಲವೋ ಎಂದು ನೀವು ಚೆಕ್ ಮಾಡಿಕೊಳ್ಳುತ್ತಿದ್ದೀರಿ. ಆದರೆ ಈ ಹೊಸ ಅಪ್ಡೇಟ್ ನಿಮಗೆ ಇಲ್ಲಿಯತನಕ ಎಷ್ಟು ಹಣ ಅಂದರೆ ಎಷ್ಟು ಕಂತಿನ ಹಣವನ್ನು ಯಾವ ವರ್ಷದಲ್ಲಿ ಬಂದಿವೆ ಹೇಗೆ ಬಂದಿದೆ ಮತ್ತು ಎಷ್ಟು ಬಂದಿದೆ ಅವುಗಳ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲವೋ ಮೊದಲು ನೋಡಿಕೊಳ್ಳಿ https://mahitisara.com/index.php/2023/01/31/pm-kisan-beneficiary-list-out-check-out-for-13thinstallment/

ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ , ನೀವು eKYC ಮಾಡಿಸಿಲ್ಲ ಎಂದರ್ಥ ನೀವು ಕೂಡಲೇ ನಿಮ್ಮ ಹತ್ತಿರದ ಇಂಟರ್ನೆಟ್ ಸೆಂಟರ್ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಕೂಡಲೇ eKYC ಮಾಡಿಸಿಕೊಳ್ಳಿ



ಏನಿದು ಹೊಸ ಬದಲಾವಣೆ ಮತ್ತು ಯಾಕೆ?

ನೀವು ಇಲ್ಲಿಯ ತನಕ ಕೇವಲ ನೀವು ನಿಮ್ಮ ಬೆನ್ನಿ ಪಿಸೆರಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವಾಗ ಇಲ್ಲಿವರೆಗೆ ನಿಮಗೆ ಎಷ್ಟು ಹಣ ಸಂದಾಯವಾಗಿದೆ ಎಂದು ಮಾತ್ರ ತಿಳಿಯುತ್ತಿತ್ತು ಆದರೆ ಇದೀಗ ಹೊಸ ಅಪೇಟ್ನಲ್ಲಿ ನಿಮ್ಮ ಊರಿನ ಯಾವುದೇ ಫಲಾನುಭವಿಗಳಿಗೆ ಅಂದರೆ ಯಾರು ಯಾರು ನಿಮ್ಮ ಊರಿನಲ್ಲಿ ಪಿಎಂ ಕಿಸಾನ್ ಹಣ ಪಡೆಯುತ್ತಿದ್ದರೆ ಮತ್ತು ಎಷ್ಟು ಪಡೆದಿದ್ದಾರೆ ಅಥವಾ ಬಂದಿದೆ ಮತ್ತು ಎಷ್ಟು ಕಂತುಗಳಲ್ಲಿ ರೈತರ ಖಾತೆಗೆ ಜಮೆ ಆಗಿದೆ. ಇದನ್ನು ಸಹ ಹೊಸದಾಗಿ ನೋಡಬಹುದು.



ಈ ಹೊಸ ತಂತ್ರಜ್ಞಾನದಿಂದ ರೈತರಿಗೆ ಆಗುವ ಉಪಯೋಗಗಳೇನು?

ಆತ್ಮೀಯ ಸ್ನೇಹಿತರೆ ನೀವು ಕೇವಲ ಸ್ವಂತ ನಿಮ್ಮ ಸ್ಟೇಟಲ್ಲಿ ಚೆಕ್ ಮಾಡಿದಾಗ ಕೆಲವೊಮ್ಮೆ ಯಾವುದೋ ಕಾರಣಗಳಿಂದ ಹಣ ಜಮೆಯಾಗಿರುವುದಿಲ್ಲ ಅದರಿಂದ ನೀವು ಇನ್ನು ಯಾರಿಗೂ ಹಣ ಬಂದಿಲ್ಲವೆಂದು ಸುಮ್ಮನೆ ಇರುತ್ತಿರಿ ಅದಕ್ಕಾಗಿ ನಿಮ್ಮ ಊರಿನಲ್ಲಿ ಎಷ್ಟು ಮಂದಿಗೆ ಎಷ್ಟು ಹಣ ಬಂದಿದೆ. ಅಂದರೆ ಉದಾಹರಣೆಗೆ ನಿಮಗೆ ಮೂರು ಕಂತುಗಳು ಬಂದು ನಿಮ್ಮ ಊರಿನಲ್ಲಿ ಇನ್ನೊಬ್ಬರಿಗೆ ನಾಲ್ಕು ಕಂತುಗಳು ಹಣ ಜಮಯಾಗಿದೆ. ಇಂತಹ ಸಮಸ್ಯೆಗಳಿಗೆ ನೀವು ಮತ್ತೆ ಪರಿಹಾರ ಹುಡುಕಿಕೊಳ್ಳಬಹುದು.ಇದರಿಂದಾಗಿ ರೈತರು ತಮ್ಮ ಪರಸ್ಪರ ಒಬ್ಬರ ಖಾತೆಗೆ ಇನ್ನೊಬ್ಬರ ಖಾತೆಗೆ ಎಷ್ಟು ಕಂತಿನ ಹಣ ಜಮೆಯಾಗಿವೆ ಮತ್ತು ನಿಮ್ಮ ಖಾತೆಗೆ ಎಷ್ಟು ಕಂತಿನ ಹಣ ಜಮೆಯಾಗಿವೆ ಮತ್ತು ಯಾವ ವರ್ಷದಲ್ಲಿ ಜಮಯಾಗಿವೆ ಮತ್ತು ಯಾವ ದಿನಾಂಕದಲ್ಲಿ ಜಮೇಯ ಗಿವೆ . ಎಲ್ಲವನ್ನೂ ನೋಡಿಕೊಳ್ಳುವ ಅವಕಾಶ ಈ ಹೊಸ ಅಪೇಟ್ನಲ್ಲಿ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನೀಡಲಾಗಿದೆ. ನಿಮಗೆ ಇನ್ನು ಈ ಹೊಸ ಅಪ್ಡೇಟ್ನ ಬಗ್ಗೆ ತಿಳಿದಿಲ್ಲ ಎಂದರೆ ಅಥವಾ ಅದನ್ನು ನೋಡಲು ಬರುವುದಿಲ್ಲ ಎಂದರೆ ಕೆಳಗಿನ ಪಟ್ಟಿಯಲ್ಲಿ ಅದರ ಬಗ್ಗೆ ತಿಳಿಯಿರಿ.

ಈಗ ಮನೆಯಲ್ಲಿ ಕುಳಿತು online ಮೂಲಕ voter ID ಅಪ್ಲೈ ಮಾಡಿ.https://mahitisara.com/index.php/2023/01/03/apply-voter-id-application-in-mobile/


ಈ ಹೊಸ ಬದಲಾವಣೆ ಬಗ್ಗೆ ನೀವು ನಿಮ್ಮ ಸ್ವಂತ ಫೋನಿನಲ್ಲಿ ನೋಡಿಕೊಳ್ಳಬಹುದು ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ಗಮನಿಸಿ ಮತ್ತು ಅದೇ ತರ ನಿಮ್ಮ ಫೋನಿನಲ್ಲಿ ನೋಡಿಕೊಳ್ಳಿ.

ಹಂತ 1 https://pmkisan.gov.in/grievance.asಮೊದಲಿಗೆ ನೀವು ಗೌರ್ನಮೆಂಟ್ ಆಫೀಸಿಯಲ್ ವೆಬ್ಬೆಟ್ ಅನ್ನು ಸಂಪರ್ಕಿಸಲು ಎಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅದಾದ ನಂತರ . ಮೊದಲಿಗೆ ನಿಮಗೆ ಇಲ್ಲಿ ರಿಜಿಸ್ಟ್ರೇಷನ್ ನಂಬರ್ ಅಥವಾ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ಅದನ್ನು ಹಾಕಿ ತದನಂತರ ಒಂದು ಕ್ಯಾಪ್ಟರ್ ಕೋಡ್ ನೀಡುತ್ತಾರೆ ಅದನ್ನು ಅಲ್ಲಿ ಸರಿಯಾಗಿ ಒಡೆದು ಓಕೆ ಮಾಡಿ ಇದಾದ ಮೇಲೆ ” Get data” ಇದರ ಮೇಲೆ ಕ್ಲಿಕ್ ಮಾಡಿ.

ಹಂತ 2 :- ಗೆಟ್ ಡಾಟಾ ಹೊಡೆದ ಮೇಲೆ ನಂತರ ಈಗ ಪಂಚಾಯತ್ ಡ್ಯಾಶ್ ಬೋರ್ಡ್ ಓಪನ್ ಆಗಿರುತ್ತದೆ ಇದರಲ್ಲಿ ನಿಮಗೆ ಗೊತ್ತಿರುವ ಹಾಗೆ ಮೊದಲಿಗೆ ನಿಮ್ಮ ಜಿಲ್ಲೆ ಹೆಸರು ಅದಾದ ನಂತರ ನಿಮ್ಮ ತಾಲೂಕು ಹೆಸರು ನಂತರ ಮೇಲೆ ನಿಮ್ಮ ಬ್ಲಾಕ್ ಹೆಸರನ್ನು ಹಾಕಬೇಕು ಇದಾದ ಮೇಲೆ ನಿಮ್ಮ ಊರು ಅಥವಾ ವಿಲೇಜ್ ಹೆಸರನ್ನು ಆಯ್ಕೆ ಮಾಡಲು ಕೇಳುತ್ತದೆ ಅದನ್ನು ಆಯ್ಕೆ ಮಾಡುವುದು ಅಂದರೆ ಅಲ್ಲಿ ಕೆಳಗಡೆ ತೋರಿಸುತ್ತದೆ ನೀವು ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟೆಲ್ಲ ಮಾಡಿದ ನಂತರ ಕೆಳಗಡೆ ಒಂದು “Submit” ಎಂಬ ಬಟನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3 :- Summary, payment status,Aadhar
authentication status, online registration status ( ಸುಮ್ಮರಿ,ಪೇಮೆಂಟ್, ಆಧಾರ್ ಅಥೆಂಟಿಕೇಶನ್, ಆನ್ಲೈನ್ ರಿಜಿಸ್ಟ್ರೇಷನ್ ಸ್ಟೇಟಸ್,) ಈ ನಾಲ್ಕು ಆಯ್ಕೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ ಅದರಲ್ಲಿ ನೀವು ಎರಡನೇ ಆಯ್ಕೆ ಎಂದರೆ ಪೇಮೆಂಟ್ ಸ್ಟೇಟಸ್ ಆಯ್ಕೆಮಾಡಿಕೊಳ್ಳಿ (payment status).

ಹಂತ 4 :- select financial year ಅಂದರೆ ನಿಮಗೆ ಯಾವ ವರ್ಷದ ಹಣ ಸಂದಾಯವಾಗಿರುವ ಡೀಟೇಲ್ಸ್ ನಿಮಗೆ ಬೇಕು ಅಥವಾ ಆ ವರ್ಷವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ತಕ್ಷಣವೇ ನಿಮಗೆ ಕೆಳಗಡೆ ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಹೆಸರು ಮತ್ತು ಅವರ ತಂದೆ ಹೆಸರು ಮತ್ತು ಎಷ್ಟು ಕಂತುಗಳು ಅವರಿಗೆ ಜಮೆಯಾಗಿವೆ, ಮತ್ತು ಪ್ರತ್ಯೇಕವಾಗಿ ಅವರ ಊರಿನ ಅಥವಾ ನಿಮ್ಮ ಅಕ್ಕ ಪಕ್ಕದ ರೈತರ ಹೆಸರುಗಳಲ್ಲಿ ಯಾವ ಯಾವ ಕಂತಿನಲ್ಲಿ ಎಷ್ಟೆಷ್ಟು ಹಣ ಜಮಯಾಗಿದೆ ಎಂದು ನೀವು ಅವರ ಬಗ್ಗೆ ತಿಳಿಯಬಹುದು ನಿಮ್ಮಿಬ್ಬರ ವ್ಯತ್ಯಾಸವನ್ನು ನೋಡಿ ನಿಮಗೆ ಅಷ್ಟು ಹಣ ಬಂದಿದೆ ಇಲ್ಲೋ ತಿಳಿದುಕೊಳ್ಳಿ.

ಹಂತ 5 :- ಒಂದು ಊರಲ್ಲಿ ಸುಮಾರು ಸಾವಿರಾರು ಕಿಂತ ಹೆಚ್ಚು ಫಲಾನುಭವಿಗಳು ಇರುತ್ತಾರೆ. ಅಂತಹ ಒಂದು ದೊಡ್ಡ ಪಟ್ಟಿಯಲ್ಲಿ ನಮ್ಮ ಹೆಸರನ್ನು ಹೇಗೆ ನೋಡುವುದು? ಅದಕ್ಕೆ ನಾವು ಒಂದು ವಿಶೇಷ ಸೂಚನೆಯನ್ನು ನಿಮಗೆ ನೀಡುತ್ತೇವೆ. ನೀವು ಈ ಲಿಂಕ್ ಅನ್ನು ನಿಮ್ಮ ಗೂಗಲ್ ಕ್ರೋಮ್ ನಲ್ಲಿ ಓಪನ್ ಮಾಡಿದಾಗ ಅಲ್ಲಿ ನಿಮಗೆ ಬಲಭಾಗದ ಮೇಲೆ ಮೂಲೆಯಲ್ಲಿ ಮೂರು ಚುಕ್ಕಿಗಳು ಕಾಣಿಸಿಕೊಳ್ಳುತ್ತವೆ ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ find in page ಆಯ್ಕೆ ಕಾಣುತ್ತದೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಿ ಅದನಂತರ ನೀವು ನಿಮ್ಮ ಹೆಸರಿನ ಮೊದಲನೇ ಅಕ್ಷರ ಉದಾಹರಣೆಗೆ ನಿಮ್ಮ ಹೆಸರು Mallikarjun ಇದ್ದರೆ ನೀವು ಅಲ್ಲಿ Malli.. ಇಷ್ಟು ಟೈಪ್ ಮಾಡಿದರೆ ಸಾಕು ಈ ಹೆಸರಿನ ತರ ಇರುವ ಒಟ್ಟಾರೆ ನಿಮ್ಮ ಊರಿನಲ್ಲಿ ಎಷ್ಟು ಹೆಸರು Mallikarjun ಎಂದು ಇದ್ದಿದ್ದಾರೆ ಅವರೆಲ್ಲರ ಹೆಸರು ನಿಮಗೆ ಕಣ್ಣಿಗೆ ಕಾಣಿಸುತ್ತದೆ ಅದರಲ್ಲಿ ನಿಮ್ಮದು ಒಂದು ಆಗಿರುತ್ತದೆ.

ಹಂತ 6 :- ಇದಾದ ನಂತರ ಕೊನೆಗೆ ನಿಮ್ಮ ಖಾತೆಗೆ ಎಷ್ಟು ಎಷ್ಟು ಕಂತುಗಳು ಹಣ ಜಮಯಾಗಿದೆ, ಮತ್ತು ಎಷ್ಟು ಹಣ ಜಮೆಯಾಗಿವೆ. ಮತ್ತು ನಿಮ್ಮ ಊರಿನಲ್ಲಿ ಎಷ್ಟು ಜನರ ಖಾತೆಗಳಿವೆ, ನಿಮ್ಮ ಎಲ್ಲರಿಗೂ ಕೂಡ ಸಮನಾದ ಕಂತುಗಳಲ್ಲಿ ಹಣ ಬಂದಿದ್ಯ ಇಲ್ಲವೋ ಎಂದು ಈ ರೀತಿ ಮಾಡಿ ತಿಳಿಯಿರಿ. ಇಷ್ಟೆಲ್ಲ ಕೂಡ ಪಿಎಂ ಕಿಸಾನ್ ನ ಹೊಸ ಅಪ್ಡೇಟ್.

ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿhttps://chat.whatsapp.com/FA0PdNzN7gPBDMgjXsvVW9

One thought on “ಪಿಎಂ ಕಿಸಾನ್ ಹೊಸ ಬದಲಾವಣೆ, ನಿಮ್ಮ ಖಾತೆಗೆ ಎಷ್ಟು ಹಣ ಜಮವಾಗಿದೆ, ನೋಡಿಕೊಳ್ಳಿ”

Leave a Reply

Your email address will not be published. Required fields are marked *