Spread the love

ಪಿಎಂ ಕಿಸಾನ್ ಯೋಜನೆ 14ನೇ ಕಂತು ಪಡೆಯಲು ಏನು ಮಾಡಬೇಕು? ಬನ್ನಿ ಇನ್ನೂ ಈ ಯೋಜನೆಯ ಲಾಭ ಪಡೆಯದೆ ಇರುವವರು ಕೂಡಲೇ ನೋಡಿ.

ಪ್ರೀಯ ರೈತರೇ, Pm ಕಿಸಾನ್ 13ನೇ ಕಂತಿನ ಮೊತ್ತವನ್ನು 27/32/2023 ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದು, ನಮ್ಮ ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಒತ್ತಿ

https://exlink.pmkisan.gov.in/aadharekyc.aspx
ಮುಖ್ಯವಾಗಿ ಹೇಳಬೇಕೆಂದರೆ ಪಿಎಂ ಕಿಸಾನ್ ಯೋಜನೆ ಹಣವು ಈಗಾಗಲೇ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೆಲವು ರೈತರಿಗೆ ಇನ್ನೂ ಪಿಎಂ ಕಿಸಾನ್ ಯೋಜನೆ ತಮ್ಮ ಅಪ್ಲಿಕೇಶನ್ ನಂಬರ್ ಗೊತ್ತು ಇಲ್ಲದೆ ಇರುವುದು ಮುಖ್ಯ ಸಂಗತಿ ಆಗಿದೆ. ಅದೇ ರೀತಿ ಇ- ಕೆವೈಸಿ ಮಾಡಿಸದಿದ್ದರೆ 14ನೇ ಕಂತು ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪಿಎಂ-ಕಿಸಾನ್ ಯೋಜನೆ ಎಂದರೇನು?
ಎಲ್ಲಾ ರೈತರಿಗೆ ರೂ. 20೦0 ಮೋದಿ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ 6,000 ರೂ. ಸಚಿವ ಪಿಯೂಷ್ ಗೋಯಲ್ ಅವರು ಫೆಬ್ರವರಿ 1, 2019 ರಂದು 2019 ರ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು ಪರಿಚಯಿಸಿದರು.

14 ನೇ ಕಂತು ಬರಲು ರೈತರು ಯಾವ ಕೆಲಸ ಮಾಡಬೇಕು?
ಮೂಲಗಳ ಪ್ರಕಾರ ಪಿಎಂ-ಕಿಸಾನ್ ನ ವಾರ್ಷಿಕ ವೆಚ್ಚ ರೂ. 75,000 ಕೋಟಿ. ಈ ಯೋಜನೆಯಲ್ಲಿ ಪ್ರತಿಯೊಬ್ಬ ರೈತರು ರೂ. 6000 ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ, ಅದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ. ಸುಮಾರು 8 ಕೋಟಿ ಅರ್ಹ ರೈತರಿಗೆ ಸರ್ಕಾರ 16,000 ಕೋಟಿ ರೂ.ಗಳನ್ನು ವಿತರಿಸಿದೆ. ಮತ್ತೊಂದೆಡೆ, ರೈತರು ತಮ್ಮ KYC ಅನ್ನು PM ಕಿಸಾನ್ ಯೋಜನೆಗಾಗಿ ನವೀಕರಿಸಿದರೆ ಲಾಭ ಪಡೆಯಬಹುದು. OTP-ಆಧಾರಿತ ತಂತ್ರವನ್ನು ಬಳಸಿಕೊಂಡು MKISAN ಪೋರ್ಟಲ್‌ನಲ್ಲಿ ಫಲಾನುಭವಿಗಳು eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇ- ಕೆವೈಸಿ ಹೇಗೆ ಮಾಡಿಸಬೇಕು?
ಈ ಕೆವೈಸಿ ಎರಡು ವಿಧಾನಗಳಲ್ಲಿ ಮಾಡಬಹುದು. ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ನಿಮ್ಮ ಬೆರಳಿನ ಗುರುತಿನ ಮುಖಾಂತರ ಹಾಗೂ ಇನ್ನೊಂದು ನಿಮ್ಮ ಮೋಬೈಲ್ ಮೂಲಕ ಮಾಡಬಹುದು.

ಮೋಬೈಲ್ ಮೂಲಕ ಇ-ಕೆವೈಸಿ ಮಾಡುವ ವಿಧಾನ –
ಈ ಲಿಂಕ್ ಉಪಯೋಗಿಸಿ https://exlink.pmkisan.gov.in/aadharekyc.aspx ಅಥವಾ

  • ಗೂಗಲ್ ನಲ್ಲಿ ಪಿಎಂ ಕಿಸಾನ್ ಇ- ಕೆವೈಸಿ ಎಂದು ಹುಡುಕಬೇಕು.
  • ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಬೇಕು.
  • ನಂತರ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಬೇಕು.
  • ಓಟಿಪಿ ಬರುತ್ತದೆ. ನಂತರ ಅಲ್ಲಿ ಸಬ್ಮಿಟ್ ಕೊಡಬೇಕು ಆವಾಗ ಆಧಾರ್ ಕಾರ್ಡ್ ಆಧಾರಿತ ಓಟಿಪಿ ಬರುತ್ತದೆ. ಅಲ್ಲಿ 6 ಸಂಖ್ಯೆ ಓಟಿಪಿ ಹಾಕಿದಾಗ ಇ- ಕೆವೈಸಿ ಸಂಪೂರ್ಣ ಆಗುತ್ತದೆ.

ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/

ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/

Leave a Reply

Your email address will not be published. Required fields are marked *