
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು , ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ 13ನೇ ಕಂತಿನ ಕೆಲವು ವಿಷಯಗಳನ್ನು ತಿಳಿಸುತ್ತೇವೆ . ಸಂಪೂರ್ಣ ಮಾಹಿತಿ ಪಡೆಯಲು ಈ ಲೇಖನವನ್ನು ಪೂರ್ತಿ ಓದಿ. ಕೇಂದ್ರ ಸರ್ಕಾರವು 13 ನೇ ಕಂತಿನ 2000 ರೂಪಾಯಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಸಿದ್ಧವಾಗಿದೆ . ಆದರೆ ಲಕ್ಷಾಂತರ ರೈತರು ಕಂತಿನ ಹಣ ನಮಗೆ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ. ರೈತರು ತಮ್ಮ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಮ್ಮ ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಕಲ್ಯಾಣ ಯೋಜನೆ ಅಡಿ ಹೊಲದಲ್ಲಿ ಬೋರ್ವೆಲ್ ಹಾಕಿಸಲು 2.5 ಲಕ್ಷ ಸಹಾಯಧನ https://mahitisara.com/index.php/2023/01/15/ganga-kalyana-scheme-free-borewell-for-minority-people/
ಪ್ರಧಾನಮಂತ್ರಿ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಸರಕಾರವು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಕಳೆದ 2022 ಅಕ್ಟೋಬರ್ 17ರಂದು 12ನೇ ಕಂತಿನ ಹಣವನ್ನು ರೈತರ ಖಾತೆಗೆ ಕೇಂದ್ರ ಸರ್ಕಾರವು ಆಗಲೇ ದುಡ್ಡು ಜಮಾ ಮಾಡಿದೆ ಆದರೆ ಹಲವು ರೈತರಿಗೆ ಈ ಹಣ ಸಿಕ್ಕಿಲ್ಲ.
13ನೇ ಕಂತಿನ ಹಣವನ್ನು ಕೂಡ ಸರ್ಕಾರವು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಆದರೆ ಲಕ್ಷಾಂತರ ರೈತರಲ್ಲಿ ಹಣ ಜಮಾ ಆಗುತ್ತದೆಯೋ ಇಲ್ಲದೆ ಇಲ್ಲವೋ ಎಂಬ ಗೊಂದಲ ಇದೆ. ಏಕೆಂದರೆ ಸರಕಾರವು ಹಲವಾರು ಸಾರಿ eKYC ಮಾಡಿಸಿ ಎಂದು ಹಲವು ಪ್ರಚಾರಣೆ ಮಾಡಿದರು ರೈತರು ಅದನ್ನು ತೆಲೆಗೆ ಹಾಕಿಕೊಂಡಿಲ್ಲ. eKYC ಮಾಡಿಸಿಲ್ಲವೆಂದರೆ 13ನೇ ಕಂತನ ಹಣವು ಕೂಡ ನಿಮ್ಮ ಖಾತೆಗೆ ಜಮ ಆಗುವುದಿಲ್ಲ.
eKYC ಮಾಡಿಸದಿದ್ದರೆ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ನೀವು ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ eKYC ಪೋರ್ಟಲ್ ಮೂಲಕ ಓಟಿಪಿಯಿಂದ ಇದನ್ನು ಮಾಡಿಸಬಹುದು , ಅಥವಾ ನಿಮ್ಮ ಹತ್ತಿರದ ಯಾವುದೇ ಆದಂತ ಸೇವಾಕೇಂದ್ರದಲ್ಲಿ ಕೂಡ ಬಯೋಮೆಟ್ರಿಕ್ ನಿಂದ ಇದನ್ನು ಮಾಡಲಾಗುವುದು.
ಹಾಗಾದರೆ ದುಡ್ಡು ಬರುವುದೇಯೋ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡಬೇಕು?
ಸರ್ಕಾರದ ಈ ಕೆಳಕಂಡಂತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/VillageDashboard_Portal.aspx ನಂತರ ಅವರು ಕೇಳಿದಂತ ಎಲ್ಲ ಮಾಹಿತಿಯನ್ನು ತುಂಬಿ submit ಓತ್ತಬೇಕು.

ನಂತರ ಮೇಲ್ಕಂಡಂತ Aadhar authentication status ಬಟನ್ ಮೇಲೆ ಕ್ಲಿಕ್ ಮಾಡಬೇಕು
Successfully authenticated Authentication failed Suspended by UIDAI Authentication under process Total ineligible
ಮೇಲ್ಕಂಡಂತ 5 ಪಟ್ಟಿಗಳು ಅಲ್ಲಿ ಕಾಣುತ್ತವೆ ಕೊನೆಯದಾದಂತ total ineligible ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ 13ನೇ ಕಂತು ಬರುವುದಿಲ್ಲ ಎಂದರ್ಥ.
ನೀವು ನಿಜವಾಗಿಯೂ ಈ ಯೋಜನೆಗೆ ಅರ್ಹರಿದ್ದು ಕೂಡ ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ ನೀವು ಇನ್ನೂ eKYC ಮಾಡಿಸಿಲ್ಲ ಎಂದರ್ಥ.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ಇದೇ ರೀತಿ ಪಿಎಂ ಕಿಸಾನ್ ಹೊಸ ಮಾಹಿತಿಗಾಗಿ ಮತ್ತು ನಿರಂತರ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9