class="post-template-default single single-post postid-257 single-format-standard wp-embed-responsive theme-newsup woocommerce-no-js ta-hide-date-author-in-list" >
Spread the love

ದೇಶಾದ್ಯಂತ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 13ನೇ ಕಂತಿಗಾಗಿ ಕಾಯುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಈ ಯೋಜನೆಯ 12ನೇ ಕಂತು ಬಿಡುಗಡೆಯಾಗಿತ್ತು. ಈಗ ರೈತರು 13ನೇ ಕಂತಿನ ನಿರೀಕ್ಷೆಯಲ್ಲಿದ್ದು, ಶೀಘ್ರವೇ ರೈತರ ಖಾತೆಗೆ ಜಮೆ ಆಗಲಿದೆ ಎಂದು ವರದಿಯಾಗಿದೆ. ಆದರೆ, ಈ ಕುರಿತು ಇದುವರೆಗೂ ಅಧಿಕೃತ ಘೋಷಣೆಯಾಗಿಲ್ಲ. ಕೇಂದ್ರ ಸರ್ಕಾರವು ಹೊಸ ವರ್ಷದಂದು ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ, ಪಿಎಂ ಕಿಸಾನ್‌ನ 13 ನೇ ಕಂತನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಸಾಧ್ಯತೆ ಇದೆ.

ಏನಿದು ಪಿಎಂ ಕಿಸಾನ್ ಯೋಜನೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಪ್ರಯೋಜನಕಾರಿ ಯೋಜನೆಯಾಗಿದೆ. ಕೇಂದ್ರ ಸರ್ಕಾರವು ರೈತ ವರ್ಗಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಕಂತುಗಳಾಗಿ ತಲಾ 2000 ರೂ. ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡುತ್ತದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ರೈತರ ಖಾತೆಗೆ ಇದುವರೆಗೆ 12 ಕಂತುಗಳನ್ನು ಜಮೆ ಮಾಡಿದೆ. ರೈತರು ಈಗ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಈ ವಿಷಯಗಳನ್ನು ಈಗಲೇ ಚೆಕ್‌ ಮಾಡಿ
ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ ಮತ್ತು ನೀವು ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿಗಾಗಿ ಕಾಯುತ್ತಿದ್ದರೆ, ನೀವು ಕಾಳಜಿ ವಹಿಸಬೇಕಾದ ಕೆಲವು ವಿಷಯಗಳಿವೆ. ಈ ವಿಷಯಗಳಲ್ಲಿ ಯಾವುದಾದರೂ ತಪ್ಪಗಳಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗದೆಯೇ ಇರಬಹುದು. ಹೀಗಾಗಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ. ಪಿಎಂ ಕಿಸಾನ್‌ ಯೋಜನೆಯ ಎಲ್ಲ ಕಂತುಗಳ ಹಣ ನಿಮ್ಮ ಖಾತೆಗೆ ಬರಲು ನೀವು ಬಯಸಿದರೆ, ಮೊದಲು ಇ-ಕೆವೈಸಿ ಮಾಡಿಸಿ. PM ಕಿಸಾನ್ ಅವರ ಅಧಿಕೃತ ಪೋರ್ಟಲ್ http://pmkisan.gov.in

ನಿಂದ ಅಥವಾ ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಇ-ಕೆವೈಸಿ ಮಾಡಿಸಬಹುದು.

ಪಿಎಂ ಕಿಸಾನ್ ಯೋಜನೆಯಡಿ, ನೀವು ಕಂತಿನ ಲಾಭವನ್ನು ಪಡೆಯುವುದನ್ನು ಮುಂದುವರಿಸಲು ಬಯಸಿದರೆ, ಇದಕ್ಕಾಗಿ ನೀವು ಭೂಮಿ ಪರಿಶೀಲನೆ ಮಾಡಬೇಕಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಭೂ ಪರಿಶೀಲನೆ ಮಾಡಿಸುವುದು ಅವಶ್ಯಕ.

ಪಿಎಂ ಕಿಸಾನ್‌ನ 13 ನೇ ಕಂತು ಯಾವಾಗ ಬರುತ್ತದೆ?
ಇದುವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12 ಕಂತುಗಳನ್ನು ಮೋದಿ ಸರ್ಕಾರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದೆ. ಇದೀಗ ಫಲಾನುಭವಿಗಳು 13ನೇ ಕಂತುಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ, ಸರ್ಕಾರವು ಫಲಾನುಭವಿಗಳ ಖಾತೆಗೆ 13 ನೇ ಕಂತಿನ ಹಣ ಜಮೆ ಮಾಡಬಹುದು. ಆದರೆ, ಈ ವಿಷಯವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

Leave a Reply

Your email address will not be published. Required fields are marked *