
ಆತ್ಮೀಯ ರೈತ ಬಾಂಧವರಿಗೆ ಕೃಷಿ ಸಂಜೀವಿನಿ ಅಧಿಕೃತ ಜಾಲತಾಣದ ಕಡೆಯಿಂದ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮೋದಿ ಅವರು ಒಂದು ಮಹತ್ವದ ಯೋಜನೆಯನ್ನು ಬಿಟ್ಟಿದ್ದಾರೆ ಅದನ್ನು ಪಡೆದುಕೊಳ್ಳುವುದು ಹೇಗೆ, ಪಡೆದುಕೊಳ್ಳುವ ವಿಧಾನ ಮತ್ತು ಎಲ್ಲಿ ಯಾವ ಕಡೆ ಅರ್ಜಿ ಸಲ್ಲಿಸಬೇಕು ಎಂಬ ವಿವರ ಈ ಕೆಳಗಿನ ಲೇಖನದಲ್ಲಿದೆ. ಈ ಯೋಜನೆಯ ಹೆಸರು ಪಿಎಂ FPO ಯೋಜನೆ.ಈ ಪಿಎಂ ಕಿಸಾನ್ FPO ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ವ್ಯವಹಾರವನ್ನು ಮಾಡುವುದಕ್ಕಾಗಿ 15 ಲಕ್ಷ ರೂಗಳನ್ನು ಸಾಲವನ್ನಾಗಿ ನೀಡುತ್ತಿದೆ.
ಈ ಸಾಲವನ್ನು ಪಡೆದುಕೊಳ್ಳುವ ವಿಧಾನ ಈ ಕೆಳಗಿನಂತಿದೆ.
ಮೊದಲು 11 ರೈತರು ಒಟ್ಟುಗೂಡಿ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರಚಿಸಬೇಕು, ನಂತರ ಅರ್ಜಿ ಸಲ್ಲಿಸಬೇಕು ನಂತರ 15 ಲಕ್ಷ ರೂಗಳನ್ನು ಸಾಲವಾಗಿ ಕೊಡುತ್ತಾರೆ.ಈ 2023-2024 ರ ವೇಳೆಗೆ ಸುಮಾರು 1000 ಗುಂಪುಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯು ರೈತರನ್ನು ಸ್ವಾವಲಂಬಿಯಾಗಿ ಮಾಡಲು ಮತ್ತು ಅವರ ವಾರ್ಷಿಕ ಆದಾಯವನ್ನು ಹೆಚ್ಚಿಸಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಕೈಗೊಂಡಿದ್ದಾರೆ. ಈ ಯೋಜನೆಯಡಿ 15 ಲಕ್ಷ ರೂಗಳು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಹಣವನ್ನು ರೈತರು ಕೃಷಿ ವ್ಯವಹಾರಕ್ಕಾಗಿ ಬಳಕೆ ಮಾಡಬೇಕು ಉದಾಹರಣೆಗೆ, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಮತ್ತು ಕೃಷಿ ಯಂತ್ರೋಪಕರಣಗಳ ವ್ಯವಹಾರವನ್ನು ಮಾಡಲು ಬಳಸಬೇಕು. ಇದಕ್ಕೆಲ್ಲ 11 ಜನ ರೈತರ ಒಪ್ಪಿಗೆ ಇರಬೇಕು.
ಈ ಯೋಜನೆಯನ್ನು ಪಡೆಯಲು ಬೇಕಾದ ದಾಖಲಾತಿಗಳು? ಮತ್ತು ಅರ್ಹತೆಗಳು??
ಸಂಸ್ಥೆ ಅಥವಾ ಸಂಘವನ್ನು ನಿರ್ಮಿಸುವವರು 11 ಜನ ರೈತರು ಕೂಡ ಭಾರತೀಯರಾಗಿರಬೇಕು.
11 ಜನರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪುಸ್ತಕ ಪಾಸ್ಪೋರ್ಟ್ ಸೈಜ್ ಫೋಟೋ,ಮತ್ತು ನೀವು ಸಂಸ್ಥೆಯ ಯಾವ ಕಾರಣಕ್ಕಾಗಿ ನೀವು ಸ್ಥಾಪಿಸುತ್ತಿದ್ದೀರಿ ಯಾವ ಕಾರಣಕ್ಕಾಗಿ ನೀವು ಸಾಲ ಪಡೆಯುತ್ತಿದ್ದೀರಿ ಎಂಬುವ ಮಾಹಿತಿಯನ್ನು ನಿಖರವಾಗಿ ತಿಳಿಸಬೇಕು.
[…] ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆhttps://mahitisara.com/pm-fpo-scheme-upto-15-lakh-loan-facilities-for-farmers/government-schemes/ […]