
ನಮಸ್ಕಾರ ಆತ್ಮೀಯ ರೈತ ಬಾಂಧವರೇ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಮಳೆ ಬ೦ದು 4-10 ದಿನದೊಳಗೆ ದೂರು ದಾಖಲಿಸಿದ ಜಿಲ್ಲೆಯ 22,217 ರೈತರಿಗೆ 12.84 ಕೋಟಿ ರೂ. ಬೆಳೆ ವಿಮೆ ಪರಿಹಾರ ಕೊಡಲು ಸೂಚನೆ: ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ!
ಜಿಲ್ಲೆಯಲ್ಲಿ ಒಟ್ಟು 1,18,924 ರೈತರು ದೂರು ನೀಡಿದ್ದಾರೆ. ಮಾರ್ಗಸೂಚಿ ಅನ್ವಯ 72 ಗಂಟೆಯಲ್ಲಿ ದೂರು ನೀಡಿದ 64,764 ರೈತರಿಗೆ 39.93 ಕೋಟಿ ರೂ. ಈಗಾಗಲೇ ರೈತದ ಖಾತೆಗೆ ಜಮೆಯಾಗಿದೆ ಎಂದು ತಿಳಿಸಿದರು.
ಕಲಬುರಗಿ:ಕಳೆದ 2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಮಳೆ ಬ೦ದು 4-10 ದಿನದೊಳಗೆ ದೂರು ದಾಖಲಿಸಿದ ಜಿಲ್ಲೆಯ 22,217 ರೈತರಿಗೆ 12.84 ಕೋಟಿ ರೂ. ಬೆಳೆ ವಿಮೆ ಪರಿಹಾರವನ್ನು ಇದೇ ಜುಲೈ 18 ರೊಳಗೆ ರೈತರಿಗೆ ಪಾವತಿಸುವಂತೆ ಯೂನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ವಿಮಾ ಕಂಪನಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ
ಇತ್ತೀಚೆಗೆ ವಿಮಾಸಂಸ್ಥೆಯೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮಾ ಕಂಪನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿರುವಂತೆ ವಿಮಾ ಪರಿಹಾರ ನೀಡಬೇಕು ಎಂದಿದ್ದಾರೆ.
ಅಲ್ಲದೆ ಸ್ಥಳೀಯ ವಿಕೋಪನಡಿ ರೈತರಿಂದ ಸ್ವೀಕೃತ ದೂರುಗಳಲ್ಲಿ 8,884 ಪ್ರಕರಣಗಳನ್ನು ವಿಮಾ ಕಂಪನಿ ತಿರಸ್ಕರಿಸಿದ್ದು, ಅದರೆ ದಾಖಲಾತಿಗಳು ಪರಿಶೀಲನೆಗೆ ಸಲ್ಲಿಸಿರುವುದಿಲ್ಲ. ಒಂದು ವಾರದೊಳಗೆ ಸದರಿ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಸಲ್ಲಿಸಿ, ಅವರಿಂದ ಪರಿಶೀಲನೆಗೊಳಪಟ್ಟ ವಿಕೃತ ವರದಿ ಸಲ್ಲಿಸುವಂತೆ ವಿಮಾ ಕಂಪನಿಗೆ ತಿಳಿಸಿದರು.
ಇನ್ನು 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಜಿಲ್ಲೆಯಲ್ಲಿ ಒಟ್ಟು 1,18,924 ರೈತರು ದೂರು ನೀಡಿದ್ದಾರೆ. ಮಾರ್ಗಸೂಚಿ ಅನ್ವಯ 72 ಗಂಟೆಯಲ್ಲಿ ದೂರು ನೀಡಿದ 64,764 ರೈತರಿಗೆ 39.93 ಕೋಟಿ ರೂ. ಈಗಾಗಲೇ ರೈತದ ಖಾತೆಗೆ ಜಮೆಯಾಗಿದೆ ಎಂದು ತಿಳಿಸಿದರು.
ಮೊಬೈಲ್ ನಲ್ಲಿ ಆಧಾರ್ ನಂಬರ್ ಬಳಸಿ ನಿಮ್ಮ ಬೆಳೆ ಪರಿಹಾರ ಚೆಕ್ ಮಾಡುವುದು ಹೇಗೆ
ರೈತರು ಬೆಳೆ ನಷ್ಟವಾದ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು.
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.https://landrecords.karnataka.gov.in/PariharaPayment/
ಅಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ವಿಪತ್ತು (calamity Type) ಕಾಲಂನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.
ವರ್ಷದಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು.
ಒಂದು ಕಳೆದ ವರ್ಷದ ಪರಿಹಾರ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೇ ಎಂಬುದನ್ನು ನೋಡಬೇಕಾದರೆ 2022-2023 ಆಯ್ಕೆ ಮಾಡಿಕೊಳ್ಳಬೇಕು.
ಆಧಾರ್ ಸಂಖ್ಯೆ ನಮೂದಿಸಬೇಕು.
ಕ್ಯಾಪ್ಚ್ಯಾ ಕೋಡ್ ನ್ನು ಪಕ್ಕದಲ್ಲಿ ತಿಳಿಸಿದಂತೆ ನಮೂದಿಸಿ.
ವಿವರಗಳನ್ನು ಪಡೆಯಲು(fetch details) ಬಟನ್ ವತ್ತಿ ವಿವರಗಳನ್ನು ಪಡೆಯಬಹುದು.
ಆನ್ಲೈನ್ ಮೂಲಕ ನಿಮ್ಮ ಖಾತೆಗೂ ಬೆಳೆವಿಮೆ ಬಿಡುಗಡೆಯಾಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ?
ಮೊದಲಿಗೆ ಬೆಳೆ ವಿಮೆ ಅಧಿಕೃತ ವೆಬ್ಸೈಟ್ ಆದಂತಹ ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ನೀಡಿ
ಗೂಗಲ್ ಸರ್ಚ್ ನಲ್ಲಿ ಸಂರಕ್ಷಣೆ(samrakshane) ಎಂದು ಟೈಪ್ ಮಾಡಿ.
ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/
ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
ವರ್ಷ 2022 2023
ಋತು ಮುಂಗಾರು( kharif)
ಮುಂದೆ/GO ಬಟನನ್ನು ಒತ್ತಿ
ಅದಾದ ನಂತರ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/publichome.aspx
ಅಲ್ಲಿ ಮೊದಲನೇ ಆಪ್ಷನ್ ಆದಂತಹ ಪ್ರಪೋಸಲ್ ಮಾರ್ಕ್ ಮಾಡಿ ಅಥವಾ ಕ್ಲಿಕ್ ಮಾಡಿ
ನಂತರ ನಿಮ್ಮ ಪ್ರಪೋಸ ನಂಬರ (ಅಪ್ಲಿಕೇಶನ್ no) ಅಲ್ಲಿ ನಮೂದಿಸಿ ನಂತರ ಕ್ಯಾಚ್ ಅಪ್ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿ.
ಅದಾದ ನಂತರ ನಿಮಗೆ ಯಾವ ಬೆಳೆಗೆ ನೀವು ಬೆಳೆ ವಿಮೆ ಮಾಡಿಸಿದ್ದೀರಿ ಹಾಗೂ ಎಷ್ಟು ರೂಪಾಯಿಗಳು ಮಧ್ಯಂತರ ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಎಂಬುದರ ಮಾಹಿತಿಯನ್ನು ನೀವು ಇದರ ಮೂಲಕ ಪಡೆಯಬಹುದು.