
ಎಲ್ಲಾ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿಸಾರ ದಿಂದ ನಮಸ್ಕಾರಗಳು, ಈ ಲೇಖನದಲ್ಲಿ ನಿಮಗೆ ಬೆಳೆ ಹಾನಿ ಪರಿಹಾರದ ಬಗ್ಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಭಾರತ ಎಷ್ಟೇ ಮುಂದುವರೆದರು ರೈತನ ಪಾಡು ಇನ್ನು ಸರಿಯಾಗಿಲ್ಲ . ಹಲವಾರು ತೊಂದರೆಗಳಿಂದ ತತ್ತರಿಸುತ್ತಿದ್ದಾನೆ. ಭಾರತ ಸರ್ಕಾರವು ರೈತನಿಗೆ ಆರ್ಥಿಕವಾಗಿ ನೆರವಾಗಲೆಂದು ಬೆಳೆ ಹಾನಿ ಪರಿಹಾರ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಮತ್ತು ಅದನ್ನು ಹಂತ ಹಂತವಾಗಿ ಪ್ರತಿ ಜಿಲ್ಲೆಯ ರೈತನ ಖಾತೆಗೆ ಜಮಾ ಮಾಡುತ್ತಾ ಬರುತ್ತಿದೆ.
ಈಗಾಗಲೇ ಹಲವಾರು ಜಿಲ್ಲೆಯ ರೈತರಿಗೆ ಹಣ ತಲುಪಿದ್ದು , ಉಳಿದ ಜಿಲ್ಲೆಗಳಿಗೆ ಶೀಘ್ರದಲ್ಲೇ ಹಣ ಜಮಾ ಆಗಲಿದೆ. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಕೊಪ್ಪಳ,ದಾವಣಗೆರೆ ಇದರ ಜೊತೆಗೆ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಬೆಳೆ ಹಾನಿ ಪರಿಹಾರದ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ.
ಇವತ್ತು ಮತ್ತೊಂದು ಜಿಲ್ಲೆಯ ಬೆಳೆ ಹಾನಿ ಪರಿಹಾರದ ಮಾಹಿತಿ ನಿಮಗೆ ಸಿಗಲಿದೆ.4 ನೇ ಹಂತದ ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಿದೆ. 2022-23 ನೇ ಸಾಲಿನ ಮುಂಗಾರು ಬೆಳೆಯ ರೈತರಿಗೆ ಹಂಗಾಮಿನಲ್ಲಿ ಹಾನಿಯಾದ 4 ನೇ ಹಂತಗಳಲ್ಲಿ 2039 ಪಲಾನುಭವಿಗಳಿಗೆ, ಸುಮಾರು 2.15 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎಂದು ಜಿಲ್ಲಾಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಪ್ರವಾಹ, ಆಕಾಲಿಕ ಮಳೆಗೆ ಬೆಳೆ ಹಾನಿಯಾಗಿ ರೈತ ಕಷ್ಟ ಅನುಭವಿಸುತ್ತಿದ್ದ ಎಲ್ಲ ರೈತರ ಬೆಳೆ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ 5 ನೇ ಹಂತದಲ್ಲಿ 2,574 ರೈತರಿಗೆ 2.23 ಕೋಟಿ ರೂ ಗಳ ಇನ್ ಪುಟ ಸಬ್ಸಿಡಿ ಯನ್ನು ಜಮೆ ಮಾಡಲು ಆದೇಶ ನೀಡಿದೆ.
ಅತಿ ಶೀಘ್ರದಲ್ಲೇ ರೈತನ ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದ್ದು, ಜಿಲ್ಲೆಯ ಅನುಸಾರವಾಗಿ ರೈತನ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಮುಂದುವರಿದ ಮಾತನಾಡಿದ ಅವರು ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಬಿಡುಗಡೆಯಾಗಲಿದೆ. ಇದನ್ನು ರೈತರ ಹಿತದೃಷ್ಟಿಯಿಂದ ಕಾರ್ಯವನ್ನು ನಿರ್ವಹಿಸಿ ಯಶಸ್ವಿಯಾಗಿ ಮಾಡಲಿದ್ದಾರೆ. ಬೆಳೆ ಹಾನಿಯ ಪರಿಹಾರವನ್ನು ಕೇಂದ್ರ ಸರ್ಕಾರ ಹೇಗೆ ಹಣವನ್ನು ಬಿಡುಗಡೆ ಮಾಡುತ್ತದೆಯೋ ಅದೇ ಮಾದರಿಯಲ್ಲಿ. ಕರ್ನಾಟಕ ಸರ್ಕಾರವು ಕೂಡ ಒಣಬೇಸಾಯಕ್ಕೆ ರೂ.13500, ನೀರಾವರಿಗೆ ಬರೋಬ್ಬರಿ ರೂ.25000 ಮತ್ತು ತೋಟಗಾರಿಕೆಗೆ ರೂ.28000 ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಬೆಳೆ ಹಾನಿ ಪರಿಹಾರವನ್ನು ಹೇಗೆ ಚೆಕ್ ಮಾಡಬೇಕು?
ಹಂತ 1 ರಾಜ್ಯ ಸರ್ಕಾರ ನಿರ್ಮಿಸಿದ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು 👇
https://landrecords.karnataka.gov.in/PariharaPayment/
ಹಂತ 2 ಲಿಂಕ್ ಒತ್ತಿದ ಮೇಲೆ ನಿಮಗೆ ಎರಡು ಆಯ್ಕೆಗಳು ಕಾಣುತ್ತವೆ. ಪರಿಹಾರ ಐಡಿ ಮತ್ತು ಆಧಾರ್ ಮೂಲಕ. ಸಾಮಾನ್ಯವಾಗಿ ರೈತರಿಗೆ ಪರಿಹಾರ ಐಡಿ ತಿಳಿದಿರುವುದಿಲ್ಲ ಹಾಗಾಗಿ ನೀವು ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.
ಹಂತ 3 ನಂತರ ನೀವು ನಿಮ್ಮ ಬೆಳೆ ಯಾವುದರಿಂದ ಹಾಳಾಗಿದೆ ಎಂಬ ಕಾರಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಬಹುತೇಕ ರೈತರ ಬೆಳೆ ಮಳೆಯಿಂದಾಗಿ ಹಾಳಾಗಿರುತ್ತದೆ. ಹಾಗಾಗಿ ರೈತರು Flood ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ರೈತರು ಯಾವ ವರ್ಷದ ಪರಿಹಾರ ಸ್ಟೇಟಸ್ ಚೆಕ್ ಮಾಡಬೇಕು ಎಂಬ ಆಯ್ಕೆಗಳಿರುತ್ತವೆ. ಅಲ್ಲಿಯೂ ರೈತರು ಯಾವ ವರ್ಷದ ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನುಆಯ್ಕೆ ಮಾಡಿಕೊಳ್ಳಬೇಕು.
ಅದರಲ್ಲಿ ನಿಮ್ಮ ಜಿಲ್ಲೆಯ ವಿವರ ಇರುತ್ತದೆ, ಅದರ ಪಕ್ಕದಲ್ಲಿ ಯಾವ ಬ್ಯಾಂಕಿಗೆ ಎಷ್ಟು ಹಣ ಜಮವಾಗಿದೆ ಎಂಬ ವಿವರ ಕೂಡ ಇರುತ್ತದೆ.