Spread the love

ಇಂದಿನ ಕಾಲದಲ್ಲಿ ನಾವು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಇದು ನಮ್ಮ ಭೂಮಿಯನ್ನು ಕಲುಷಿತಗೊಳಿಸುತ್ತಿದೆ, ನಾಶ ಮಾಡುತ್ತಿದೆ. ಇದನ್ನು ತಡೆಗಟ್ಟಲು ನಾವು ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹಾಗಾದರೆ ಸಾವಯುವ ಕೃಷಿ ಎಂದರೆ ಏನು ಎಂದು ತಿಳಿಯೋಣ.
ಸಾವಯವ ಕೃಷಿ; ಅಂದರೆ, ಸಸ್ಯಗಳನ್ನು ಬೆಳೆಸಲು ನೈಸರ್ಗಿಕ ಸಂಪನ್ಮೂಲಗಳ ಲಾಭವನ್ನು ಪಡೆದುಕೊಳ್ಳುವುದು ಹಾಗೂ ಯಾವುದೇ ರೀತಿಯಾದಂತಹ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಿಕೊಳ್ಳಲಾಗುವುದಿಲ್ಲ.ಸಾವಯುವ ಕೃಷಿ ಅಳವಡಿಸಿಕೊಂಡು ಬೆಳೆದ ಬೆಳೆಗಳು ಹೆಚ್ಚು ಆರೋಗ್ಯಕರವಾಗಿರುತ್ತದೆ, ಮತ್ತು ಹೆಚ್ಚು ರುಚಿ ನೀಡುತ್ತವೆ ಇದರ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ. ಸಾವಯುವ ಕೃಷಿ ಒಂದು ಪರಿಸರ ಪ್ರೇಮಿ ಪದ್ಧತಿ ಆಗಿದೆ, ಪರಿಸರದಲ್ಲಿ ಉಚಿತವಾಗಿ ಸಿಗುವಂತ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡುವುದು ಈ ಪದ್ಧತಿಯ ಗುಣವಾಗಿದೆ. ಈ ಪದ್ಧತಿಯಲ್ಲಿ ಯಾವುದೇ ಆದಂತ ಕೀಟನಾಶಕಗಳು, ರಸ ಗೊಬ್ಬರಗಳು, ಮತ್ತು ಇತರೆ ಆದಂತ ಕೆಮಿಕಲ್ಸ್ ಅನ್ನು ಬಳಕೆ ಮಾಡುವುದಿಲ್ಲ, ಏಕೆಂದರೆ ಹೆಚ್ಚಿನ ಪೌಷ್ಠಿಕಾಂಶದ ಗುಣಮಟ್ಟದೊಂದಿಗೆ ಆರೋಗ್ಯಕರ ಆಹಾರವನ್ನು ಪಡೆಯುವುದು ಮುಖ್ಯ ಉದ್ದೇಶವಾಗಿದೆ.ಸೂಪರ್ ಮಾರ್ಕೆಟ್ ನಲ್ಲಿ ಖರೀದಿಸಿದ ಹಣ್ಣು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ಬೆಳೆದ ಹಣ್ಣಿನಲ್ಲಿ ತುಂಬಾ ಅಂತರವಿರುತ್ತದೆ. ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದ ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ಪೌಷ್ಟಿಕಾಂಶಗಳಿರುತ್ತವೆ, ತುಂಬಾ ರುಚಿಕರವಾಗಿ ಕೂಡ ಇರುತ್ತವೆ.

ಸಾವಯುವ ಕೃಷಿಯ ಇತಿಹಾಸ : ಸಾವಯುವ ಚಳುವಳಿ ಸುಮಾರು 1930 – 1940 ರ ದಶಕದಲ್ಲಿಯೇ ಪ್ರಾರಂಭವಾಗಿತ್ತು, ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಕಡಿಮೆ ಮಾಡಲು ಈ ಚಳುವಳಿಯು ಪ್ರಾರಂಭವಾಗಿತ್ತು. ರಸಗೊಬ್ಬರವು ಪ್ರಥಮ ಬಾರಿಗೆ ಸೂಪರ್ ಫಾಸ್‌ಪೇಟ್ ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು.
ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಇಂತಹ ರಸಗೊಬ್ಬರಗಳನ್ನು ಪ್ರಾರಂಭ ಮಾಡಿತ್ತು. ಈ ರಸಗೊಬ್ಬರಗಳು ಶಕ್ತಿಯುತವಾಗಿಯೂ ಇದ್ದುದಲ್ಲದೆ ಸುಲಭವಾಗಿ ಸಾಗಾಣಿಕೆ ಮಾಡಬಹುದಾಗಿತ್ತು, ಹಾಗೆಯೇ 1940 ರಲ್ಲಿ ಕೀಟನಾಶಕಗಳ ತಯಾರಿಕೆಯಲ್ಲಿಯೂ ಕೂಡ ವೇಗ ಕಂಡುಬಂದಿತು.ಸರ್ ಆಲ್ಬರ್ಟ್ ಹೊವಾರ್ಡ್ ಅವರನ್ನು ಸಾವಯವ ಬೇಸಾಯದ ಪಿತಾಮಹಾನೆಂದು ವಿಶೇಷವಾಗಿ ಪರಿಗಣಿಸಲಾಗಿದೆ.

ಸಾವಯುವ ಬೇಸಾಯದ ಉತ್ಪನ್ನಗಳನ್ನು ಒಟ್ಟು ಕೃಷಿ ಉತ್ಪನ್ನಗಳಿಗೆ ಪರಗನಿಸಿದಾಗ ಸಾವಯುವ ಉತ್ಪನ್ನಗಳು ಪ್ರಾರಂಭದಿಂದಲೂ ತೀರಾ ಕಡಿಮೆಯಾಗಿಯೇ ಉಳಿದುಕೊಂಡು ಬಂದಿದೆ.
ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸುತ್ತದೆಯಾದರೂ ಅದು ಅನೇಕ ರಾಷ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ, ವಿಶೇಷವಾಗಿ ಯುರೋಪ್ ದೇಶಗಳಲ್ಲಿ.

ಸಾವಯುವ ಕೃಷಿಯ ಮುಖ್ಯಾಂಶಗಳೆಂದರೆ, ಮಣ್ಣನ್ನು ಉತ್ತಮವಾಗಿ ನಿರ್ವಹಿಸುವುದು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಕೀಟಗಳು ಹಾಗೂ ರೋಗಗಳನ್ನು ಜೈವಿಕವಾಗಿ ತಡೆಗಟ್ಟುವುದು.

ಬೇಸಾಯಕ್ಕೆ ಮಣ್ಣು ಆಧಾರವಾಗಿದೆ, ಹೆಚ್ಚಿನ ಸಂಖ್ಯೆಯ ಕೀಟಗಳು, ಸೂಕ್ಷ್ಮಾಣು ಜೀವಿಗಳು ಇತರೆ ಸಸ್ಯಗಳು ಕೂಡ ಇದರಲ್ಲಿ ವಾಸಿಸುತ್ತವೆ. ತುಂಬಾ ಮುಖ್ಯ ವಾದ ಪಾತ್ರವನ್ನು ನಿಭಾಯಿಸುತ್ತವೆ.
ಆದ್ದರಿಂದ ತರಕಾರಿಗಳನ್ನು ಬೆಳೆಯುವ ವಿಷಯ ಬಂದಾಗ, ಏನು ಮಾಡಲಾಗುತ್ತದೆ:ಕತ್ತರಿಸಿದ ಹುಲ್ಲನ್ನು ಹಸಿಗೊಬ್ಬರವಾಗಿ ಬಳಸಿ.
ಬೆಳೆ ತಿರುಗುವಿಕೆಯನ್ನು ಮಾಡಿ: ವಿಭಿನ್ನ ಕುಟುಂಬಗಳ ಪರ್ಯಾಯ ಸಸ್ಯಗಳನ್ನು ಮತ್ತು ವಿಭಿನ್ನ ಚಕ್ರಗಳಲ್ಲಿ ಒಂದೇ ಸ್ಥಳದಲ್ಲಿ ವಿಭಿನ್ನ ಪೌಷ್ಟಿಕಾಂಶದ ಅಗತ್ಯತೆಗಳನ್ನು ಹೊಂದಿರುತ್ತದೆ. ಈ ರೀತಿಯಾಗಿ, ಮಣ್ಣು ಖಾಲಿಯಾಗದಂತೆ ತಡೆಯಲಾಗುತ್ತದೆ ಮತ್ತು ಕೀಟಗಳು ಮತ್ತು / ಅಥವಾ ರೋಗಗಳಿಂದ ಸಸ್ಯಗಳು ಪರಿಣಾಮ ಬೀರುವ ಅಪಾಯವನ್ನು ಕಡಿಮೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿ.ಈರುಳ್ಳಿ ಮತ್ತು ಗಜ್ಜರೆಗಳಂತ ಪರಸ್ಪರ ಸಹಾಯ ಮಾಡುವ ಒಂದೇ ಕಥಾವಸ್ತುವಿನಲ್ಲಿ ಹಲವಾರು ಜಾತಿಗಳ ಬೆಳೆಯನ್ನು ಬೆಳೆಯುವುದು ಈ ಪದ್ಧತಿಯ ಗುಣಲಕ್ಷಣ. ಮಣ್ಣು ಫಲವತ್ತಾಗಲು ಮಿಶ್ರ ಗೊಬ್ಬರ, ಕತ್ತರಿಸಿದ ಹುಲ್ಲು, ಬಳಕೆಗೆ ಬಾರದಂತ ತರಕಾರಿಗಳು, ಮರದ ಬೂದಿ, ಮೊಟ್ಟೆ ಮತ್ತು ಬಾಳೆಹಣ್ಣಿನ ಸಿಪ್ಪೆಗಳು, ಹಾಗೂ ಮರದಿಂದ ಉದರಿದಂತ ಎಲೆಗಳಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು.ಕೀಟ ಮತ್ತು ರೋಗಗಳನ್ನು ನಿಯಂತ್ರಣ ಮಾಡುವ ರೀತಿ, ನೈಸರ್ಗಿಕ ಉತ್ಪನ್ನಗಳುಉದಾಹರಣೆಗೆ, ಕ್ರೈಸಾಂಥೆಮಮ್‌ನ ಒಣಗಿದ ಹೂವುಗಳಿಂದ ಹೊರತೆಗೆಯಲಾದ ಪೈರೆಥ್ರಿನ್‌ಗಳಂತಹವು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಕೀಟನಾಶಕ ವಿಷವನ್ನು ಉತ್ಪಾದಿಸುವ ಏರೋಬಿಕ್ ಬ್ಯಾಕ್ಟೀರಿಯಾಗಳು. ಇವುಗಳನ್ನು ಬಳಸಿ ಬೆಳೆಗಳನ್ನು ವಿವಿಧ ರೀತಿಯ ರೋಗಗಳಿಂದ ಕಾಪಾಡಬಹುದು.ದನಕರ ಮತ್ತು ಬೆಳೆಗಳನ್ನು ಕೂಡಿ ಮಿಶ್ರ ಕೃಷಿ ಭೂಮಿಯನ್ನಾಗಿ ಅಳವಡಿಸಿಕೊಳ್ಳಬಹುದು. ಇದರ ಪ್ರಯೋಜನವೆಂದರೆ ಸಾರಜನಕ ದಿಂದ ತುಂಬಿದ ಹುಲ್ಲಿನಿಂದ ಮಣ್ಣು ಫಲವತ್ತಾಗಿರುತ್ತದೆ. ಬಿಳಿ ಕ್ಲೋವರ್ ಅಥವಾ ಅಲ್ಫಾಲ್ಫ ಹುಲ್ಲು ಬೆಳೆಸುವುದರಿಂದ ಮತ್ತು ದ್ವಿದಳ ಧಾನ್ಯಗಳ
ಬೆಳೆಗಳನ್ನು ಬೆಳೆಯುವುದರಿಂದ ಕೂಡ ಮಣ್ಣನ್ನು ಫಲವತ್ತಾಗಿರಿಸಬಹುದು. ದನ ಕರುಗಳಿಲ್ಲದೆ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಆಗ ಹೊರಗಿನ ವಸ್ತುಗಳಿಂದ ಹೆಚ್ಚಿಗೆ ಅವಲಂಬನೆ ವಾಗಬೇಕಾಗುತ್ತದೆ. ಮಿಶ್ರ ಗೊಬ್ಬರ, ಮರದ ಬೂದಿ, ಮರದಿಂದ ಉದರಿದ ಎಲೆಗಳು, ಹಾಗೂ ಮೊಟ್ಟೆ ಮತ್ತು ಮುಂತಾದ ವಸ್ತುಗಳ ಮೇಲೆ ಅವಲಂಬನೆ ವಾಗಬೇಕಾಗುತ್ತದೆ.

ಬೆಳೆಗಳಿಗೆ ಬೇಕಾದ ಪೌಷ್ಟಿಕಾಂಶಗಳನ್ನು ನೀಡಿದ ನಂತರ ಕಳೆಗಳನ್ನು ನಿಯಂತ್ರಣ ಮಾಡುವುದು ಬಹಳ ಮುಖ್ಯವಾದದ್ದು. ಕಳೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವ ವಿಧಾನ : ಅವುಗಳಲ್ಲಿ ಕೈಯಿಂದ ಕಳೆ ಕೀಳುವುದು, ಒದ್ದೆ ಹುಲ್ಲನ್ನು ಬೇರುಗಳ ಬಳಿ ಹೊದಿಸುವುದು, ಕಾರ್ನ್ ಗ್ಲುಟೆನ್ ಮೀಲ್, ಸಹಜವಾದ ಪ್ರೀಮಿರ್‌ಗೆನ್ಸ್ ಹರ್‌ಬಿಸೈಡ್, ಬೆಂಕಿ, ಬೆಳ್ಳುಳ್ಳಿ ಮತ್ತು ಲವಂಗದೆಣ್ಣೆ, ಬೊರಾಕ್ಸ್, ಪೆಲರ್ ಗೋನಿಕ್ ಆಸಿಡ್ ಸೋಲರೈ ಜೇಷನ್ (ಸುಮಾರು 4–6 ವಾರಗಳ ಕಾಲ ಬೆಚ್ಚನೆಯ ವಾತಾವರಣದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್‌ನ್ನು ಅಗಲವಾಗಿ ಹೊದಿಸುವುದು), ವೈನ್‌ಗಾರ್, ಮತ್ತಿತರ ಬೇರೆ ಬೇರೆ ಮನೆಯಲ್ಲಿ ಬಳಸುವ ಭತ್ತದ ಬೇಸಾಯದಲ್ಲಿ ಇತ್ತೀಚೆಗೆ ಕಂಡು ಹಿಡಿದಿರುವ ನಿವಾರಣೆಗಳು: 45–65  ಒಂದು ನಿವಾರಣೋಪಾಯವೆಂದರೆ ಬಾತುಕೋಳಿ ಹಾಗೂ ಮೀನುಗಳನ್ನು ಭತ್ತದ ಗದ್ದೆಗಳಲ್ಲಿ ಬಿಡುವುದು. ಅವು ಕಳೆಯನ್ನು ಮಾತ್ರವಲ್ಲದೆ ಕ್ರಿಮಿಕೀಟಗಳನ್ನು ಸಹ ತಿನ್ನುತ್ತವೆ.

ಬೇಸಾಯ ಶಾಸ್ತ್ರದ ಒಂದು ಭಾಗವಾಗಿರುವ ಸಾವಯುವ ಕೃಷಿ ಪದ್ಧತಿಯ ಆರ್ಥಿಕತೆ ಮಾನವ ಸಮಾಜವನ್ನು ಕುರಿತು ಪರಿಪೂರ್ಣವಾದ ಪರಿಣಾಮ ಮಾಡುತ್ತದೆಯಲ್ಲದೆ. ಆರ್ಥಿಕತೆ ಪರಿಮಿತಿ ವಿಶಾಲವಾಗಿದ್ದರು ಕೃಷಿವಿಜ್ಞಾನದ ಆರ್ಥಿಕತೆ ಬೇಸಾಯ ಮಟ್ಟದಲ್ಲಿ ನಡೆಯುವ ಗರಿಷ್ಠ ಉತ್ಪನ್ನ ಹಾಗೂ ಸಾಮರ್ಥ್ಯದತ್ತ ಹೆಚ್ಚು ಗಮನ ನೀಡುತ್ತದೆ. ಯುರೋಪ್ ಯೂನಿಯನ್ ಹಾಗೂ ಮುಂತಾದವುಗಳು ಸಾವಯವ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಲು ಸಹಾಯಧನವನ್ನು ಒದಗಿಸುತ್ತಿದೆ. ಏಕೆಂದರೆ ಇಂತಹ ರಾಷ್ಟ್ರಗಳು ಕಡಿಮೆ ವೆಚ್ಚದಲ್ಲಿ ಕೆಲಸವನ್ನು ಮಾಡುತ್ತವೆ ಎಂದುನಂಬಲಾಗುವುದು. ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮತ್ತು ಸಾಗಿಸಲು ಕೃಷಿ ಬಗ್ಗೆ ಬಹಳ ತಿಳುವಳಿಕೆ ಮತ್ತು ಕಾರ್ಮಿಕರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತಾರೆ. ಇದು ಬಂಡವಾಳದ ಮೇಲೆ ಆಧಾರಿತವಾಗಿದ್ದು ಇದಕ್ಕೆ ಹೆಚ್ಚಿನ ಪ್ರಮಾಣವಾದ ಶಕ್ತಿ ಮತ್ತು ಸಿದ್ಧಪಡಿಸಿದ ವಸ್ತುಗಳು ಬೇಕಾಗುತ್ತವೆ.

ಸಾವಯುವ ಕೃಷಿ ಭೂಮಿಯು ವಿಶ್ವದಾದ್ಯಂತ ಹಂಚಿಕೆಯಾಗಿದ್ದು. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಎಂದರೆ ಶೇಕಡ 39 ರಷ್ಟು, ಸುಮಾರು 11.8 ಮಿಲಿಯನ್ ಹೆಕ್ಟರ್ ಅಷ್ಟು ವಿಸ್ತೀರ್ಣ ಹೊಂದಿದೆ. ಯೂರೋಪ್ ದೇಶಗಳು ಒಟ್ಟು ಸಾವಯವ ಕೃಷಿ ಭೂಮಿಯಲ್ಲಿ ಶೇಕಡಾ 23 ರಷ್ಟಿರುತ್ತದೆ (6.9 ಮಿಲಿಯನ್ ಹೆಕ್ಟೇರ್). ಇದರ ನಂತರ ಬರುವುದೆಂದರೆ ಲ್ಯಾಟಿನ್ ಅಮೆರಿಕ ಶೇಕಡಾ 19 ರಷ್ಟು (5.8 ಮಿಲಿಯನ್ ಹೆಕ್ಟೇರ್). ಏಷಿಯಾದಲ್ಲಿ ಶೇಕಡಾ 9.5 ರಷ್ಟು ಉತ್ತರ ಅಮೇರಿಕ ಶೇಕಡಾ 7.2 ರಷ್ಟು. ಆಫ್ರಿಕಾ ಕೇವಲ ಶೇಕಡಾ 3 ಮಾತ್ರ ಪಡೆದಿದೆ. ರಾಷ್ಟದ ಪ್ರಕಾರವಾಗಿ ಸಾವಯವ ಬೇಸಾಯ ವನ್ನೂ ನೋಡಿ.ಕೃಷಿಯಲ್ಲಿ ಸಾಮಾನ್ಯವಾಗಿ ಬಳಸುವ ರಸಗೊಬ್ಬರ, ಪೌಷ್ಟಿಕಾಂಶಗಳು, ಹೆಚ್ಚುವರೇ ನೀರು, ರೋಗವನ್ನು ತಡೆಗಟ್ಟಲು ಬಳಸುವ ಕೆಮಿಕಲ್ಸ್ ಮತ್ತು ಕೀಟನಾಶಕಗಳು ಬಹಳ ವೆಚ್ಚಗಳನ್ನು ಉಂಟುಮಾಡುತ್ತವೆ. ಇಂತಹ ಅಂಶಗಳನ್ನು ಸಾವಯುವ ಕೃಷಿ ಪದ್ಧತಿಯು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ಕೇವಲ ಖರ್ಚು ಕಡಿಮೆ ಮಾಡುವುದಲ್ಲದೆ ಆರೋಗ್ಯಕರ ಮತ್ತು ರುಚಿಕರ ಪದಾರ್ಥಗಳು ಇದರಿಂದ ಬೆಳೆಯಲಾಗುತ್ತದೆ ಹೀಗಾಗಿ ಇದು ಒಂದು ಪ್ರೇರಣೆಯಾಗಿ ಉಳಿದಿದೆ.

ಸಾವಯುವ ಕೃಷಿಯೂ ಯಾವುದೇ ಆದಂತ ಅಥವಾ ಬಹಳ ಕಡಿಮೆಯ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತದೆ. ಕೆಲವು ಕೀಟನಾಶಕಗಳು ಪರಿಸರಕ್ಕೆ ಮತ್ತು ಮಾನವನ ದೇಹಕ್ಕೆ ಆನೆ ಉಂಟು ಮಾಡುತ್ತದೆ. ಸಾವಯವ ಕೃಷಿಯು ಜೈವಿಕ ಅಂದರೆ
ಬಿಟಿ (ಬ್ಯಾಕ್ಟೀಯಾ ವಿಷಾಹಾರಿ), ಪೈರೆಥ್ರಮ್, ರೋಟೆನೊನ್[ಸೂಕ್ತ ಉಲ್ಲೇಖನ ಬೇಕು], ತಾಮ್ರ ಮತ್ತು ಗಂಧಕ ಇಂತಹ ಸೂಕ್ಷ್ಮಾಣು ಜೀವಿಗಳನ್ನು ಉಪಯೋಗಿಸಿಕೊಂಡು ಕೀಟಗಳನ್ನು ನಾಶ ಮಾಡುತ್ತದೆ . ಈ ಕೀಟನಾಶಕಗಳನ್ನು ಸಾವಯವ ವ್ಯವಸಾಯಿಗಳಲ್ಲಿ ಶೇಕಡ 10 ಗಿಂತಲೂ ಕಡಿಮೆ ಜನರು ನಿಯತವಾಗಿ ಬಳಸುತ್ತಾರೆ ಎಂದು ಸಮೀಕ್ಷೆಗಳು ತಿಳಿಸುತ್ತವೆ; ಕ್ಯಾಲಿಫೋರ್ನಿಯಾದಲ್ಲಿನ ತರಕಾರಿ ಬೆಳೆಗಾರರು 5.3% ರಷ್ಟು ರೊಟೆನನ್ ಅನ್ನು ಮತ್ತು 1.7% ರಷ್ಟು ಪೈರೆಥ್ರಮ್ (ಲೋಟರ್ 2003:26)ಬಳಸುತ್ತಾರೆ ಎಂದು ಮತ್ತೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ಕಡಿಮೆಗೊಳಿಸುವಿಕೆ ಮತ್ತು ವರ್ಜನೆಯು ತಾಂತ್ರಿಕವಾಗಿ ಸವಾಲಾಗಿದೆ.ಕೆಲವು ಸಾವಯವ ಬೇಸಾಯಗಳು ಕೀಟನಾಶಕಗಳ ಬಳಕೆಯಿಂದ ಪೂರ್ಣವಾಗಿ ವರ್ಜಿತಗೊಳ್ಳಲು ನಿರ್ವಹಿಸುತ್ತವೆ, ಸಾವಯವ ಕೀಟನಾಶಕಗಳನ್ನು ಸಾಮಾನ್ಯವಾಗಿ ಇತರ ಕೀಟ ನಿಯಂತ್ರಣ ನೈಪುಣ್ಯಗಳಿಗೆ ಪೂರಕವಾಗಿರುವಂತೆ ಬಳಸಲಾಗುತ್ತವೆ.

ಸಾವಯುವ ಕೃಷಿಯಲ್ಲಿ ಸಾಧನೆ :
ಸಾವಯವ ಕೃಷಿಯ ಮೂಲಕ ಗ್ರಾಹಕರಿಗೆ ಆರೋಗ್ಯಕರ ಮತ್ತು ಒಳ್ಳೆಯ ಗುಣಮಟ್ಟದ ಉತ್ಪನ್ನಗಳು ನೀಡುತ್ತಿರುವ ಕೃಷಿಕರಲ್ಲಿ ತಂಕಚಾನ್ ಚೆಂಪೊಟ್ಟಿ ಕೂಡ ಒಬ್ಬರು. ಸಣ್ಣ ವಯಸ್ಸಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ ತಂಚನ್ ಅವರು ಈಗ ಸಾವಯವ ಕೃಷಿಯು ಅವರ ಜೀವನದ ಒಂದು ಭಾಗವಾಗಿದೆ. ಅನೇಕ ವರ್ಷಗಳ ಕಾಲ ಎಷ್ಟೋ ಕಂಪನಿಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿರುವ ತಂಕಚನ್, ಈಗ ಸುಮಾರು 22 ಎಕ್ಕರೆ ಸಾವಯುವ ಕೃಷಿ ತೋಟಕ್ಕೆ ಯಜಮಾನರಾಗಿದ್ದಾರೆ.
ಅವರ ಫಾರ್ಮ್‍ನ ಹೆಸರು ಚೆಂಪೊಟ್ಟಿ ಎಸ್ಟೇಟ್. 58 ವರ್ಷ ವಯಸ್ಸಿನ ತಂಕಚನ್‍ಗೆ ತಮ್ಮ ಫಾರ್ಮ್ ಅತ್ಯಂತ ಇಷ್ಟದ ಜಾಗವಂತೆ. ಅವರ ಪತ್ನಿ ಜೆಸ್ಸಿ ಕೂಡ ಕೃಷಿಯ ಕೆಲಸದಲ್ಲಿ ಪತಿಗೆ ಸಾಥ್ ನೀಡುತ್ತಿದ್ದಾರೆ.
ಇವರು ಇವರ ತೋಟದಲ್ಲಿ ಅಡಿಕೆ, ನಟ್ ಮಗ್, ಕೋ ಕೋ, ತೆಂಗು ಮತ್ತು ಹಲವು ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ, ಇವರ ಎಸ್ಟೇಟ್ ನಲ್ಲಿ 17000ಕ್ಕೂ ಅಧಿಕ ಗಿಡಗಳಿವೆ.
” ನಾವು ಸಾವಯವ ಉತ್ಪನ್ನಗಳಿಂದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ಕೂಡ ತಯಾರಿಸುತ್ತೇವೆ. ವೇಸ್ಟೇಜನ್ನು ಕಡಿಮೆ ಮಾಡುವುದು ಮತ್ತು ಉತ್ಪನ್ನಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವುದು ನಮ್ಮ ಗುರಿ” ಎನ್ನುತ್ತಾ ತಂಕಚನ್. ಸಾವಯವ ಕೃಷಿ ತೆಂಕಚನ್ ಅವರ ಕೈ ಬಿಟ್ಟಿಲ್ಲ, ಇಂದು ಅವರು ತಮ್ಮ ಚೆಂಪೊಟ್ಟಿ ಎಸ್ಟೇಟ್‍ನಿಂದ ವರ್ಷಕ್ಕೆ ಸುಮಾರು 35 ಲಕ್ಷ ರೂ.ಗಳಷ್ಟು ಆದಾಯ ಗಳಿಸುತ್ತಿದ್ದಾರೆ.

ನಾಲ್ಕು ನೈಸರ್ಗಿಕ ಸಮಗ್ರಗಳು ಅಂದರೆ, ಗೋಮೂತ್ರ, ಸೆಗಣಿ ಮತ್ತು ಇತರ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ತಯಾರಿಸುವ ಮಿಶ್ರಣವಾದ ಜೀವಾಮೃತವನ್ನು ಬಳಸುತ್ತಾರೆ ಅದು ಮಣ್ಣಿನ ಗುಣಮಟ್ಟವನ್ನು ಮತ್ತು ಫಲವತ್ತತೆಯನ್ನು ಸುಧಾರಿಸಲು ತುಂಬಾ ಸಹಾಯ ಮಾಡುತ್ತದೆ.

ಭೂಮಿ ಸಾವಯವ ಕೃಷಿಗೆ ಸಿದ್ಧವಾದಾಗ, ತಂಕಚನ್ ನಾಲ್ಕು ಪದರದ ವಿಧಾನವನ್ನು ಅಳವಡಿಸಿಕೊಂಡು ವಿವಿಧ ರೀತಿಯ ವಾಣಿಜ್ಯ ಬೆಲೆಗಳನ್ನು ಬೆಳೆಯಲು ನಿರ್ಧರಿಸಿದರು. “ನಾನು ಮೊದಲನೇ ಪದರದಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದೇನೆ. ಎರಡನೇ ಪದರ ಅಡಿಕೆ ಮರಗಳಿಗೆ ಮೀಸಲು ಮತ್ತು ಮೂರನೇ ಪದರದಲ್ಲಿ ಕೋಕೋ ಮರಗಳು ಮತ್ತು ಪೇರಲೆ, ಮಾವಿನ ಹಣ್ಣು ಇತ್ಯಾದಿ ಹಣ್ಣಿನ ಮರಗಳು. ನಾಲ್ಕನೇ ಪದರದಲ್ಲಿ ಶುಂಠಿ, ಅರಸಿನ , ಮರ ಗೆಣಸು, ಗೆಣಸು, ಆಲೂಗಡ್ಡೆ ಇತ್ಯಾದಿಗಳನ್ನು ನೆಟ್ಟಿದ್ದೇವೆ “ ಎಂದು ತಮ್ಮ ಕೃಷಿ ವಿಧಾನದ ಮಾಹಿತಿ ನೀಡುತ್ತಾರೆ ಅವರು.

“ಪ್ರಸ್ತುತ ನಮ್ಮ ಬಳಿ 30 ವರ್ಷಕ್ಕಿಂತ ಹಳೆಯ ಸುಮಾರು 1000 ತೆಂಗಿನ ಮರಗಳಿವೆ, 6 ವರ್ಷಕ್ಕಿಂತ ಹಳೆಯ ಸುಮಾರು 4,000 ಅಡಿಕೆ ಮರಗಳು ಮತ್ತು ಸುಮಾರು 8 ವರ್ಷ ಹಳೆಯ 3,500 ಕೋಕೋ ಗಿಡಗಳಿವೆ” ಎನ್ನುತ್ತಾರೆ ಅವರು. ಆ ಮರಗಿಡಗಳಲ್ಲದೆ, ಚೆಂಪೊಟ್ಟಿ ಎಸ್ಟೇಟ್‍ನಲ್ಲಿ ಚೆರ್ರಿ, ಪ್ಯಾಶನ್ ಫ್ರುಟ್, ಹಲಸು, ಮುಳ್ಳು ರಾಮಫಲ ಮತ್ತು ಇನ್ನೂ ಅನೇಕ ರೀತಿಯ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ.

ಸಾವಯುವ ಕೃಷಿಯೂ ಪರಿಸರಕ್ಕೆ ಮಾತ್ರವಲ್ಲ ಉಪಯುಕ್ತವಾದದ್ದು, ಆರೋಗ್ಯಕರ ಮತ್ತು ಪರಿಸರ ಸ್ನೇಹದಂತ ಈ ಪದ್ಧತಿಯನ್ನು ಅಳವಡಿಸಿಕೊಂಡು ಎಷ್ಟೋ ರೈತರು ದೇಶಕ್ಕೆ ಪ್ರೇರಣೆಯಾಗಿದ್ದಾರೆ.

ಹೀಗೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ

mahitisara.com

Leave a Reply

Your email address will not be published. Required fields are marked *