Spread the love

ಬೆಳೆಗೆ ಬೆಕಾಗುವ ರಸಗೊಬ್ಬರದ ಬ್ರಾಂಡ್‌ಗಳನ್ನು ಏಕರೂಪದಲ್ಲಿ ಬಿಡುಗಡೆ ಮಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ರಸಗೊಬ್ಬರ ಎಂಬ ಯೋಜನೆಯಲ್ಲಿ ‘ಭಾರತ್‌ ಬ್ರಾಂಡ್’ ಎಂಬ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡುವಂತೆ ಎಲ್ಲ ಗೊಬ್ಬರ ಕಂಪನಿಗಳಿಗೆ ಸುಚನೆ‌‌ ನಿಡಿದೆ.ಇದನ್ನು ಕುರಿತು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವಾಲಯವು ಸೂಚನೆ ಹೊರಡಿಸಿದೆ. ಅದರಂತೆ ಎಲ್ಲ ಬ್ರಾಂಡ್‌ನ ಗೊಬ್ಬರ ಕಂಪನಿಗಳು ಯೂರಿಯಾ ಅಥವಾ ಡಿಎಪಿ, ಎಂಓಪಿ ಅಥವಾ ಎನ್‌ಪಿಕೆ ಒಳಗೊಂಡಿರುವ ಎಲ್ಲ ರಸಗೊಬ್ಬರ ಚೀಲಗಳ ಮೇಲೆ ‘ಭಾರತ್ ಡಿಎಪಿ, ‘ಭಾರತ್ ಎಂಓಪಿ’ ಎಂದು ಭಾರತ್‌ ಹೆಸರಿನ ಬ್ರಾಂಡ್ ಹೊಂದಿರಬೇಕು. ಎಂಬ ನಿಯಮವನ್ನು ಜಾರಿಗೆ ತಂದಿತು. ಖಾಸಗಿ ಮತ್ತು ಸಾರ್ವಜನಿಕ ಗೊಬ್ಬರ ಕಂಪನಿಗಳು ಇದನ್ನು‌ ಪಲಿಸಬೇಕು ಎಂದು ಆದೇಶಿಸಿದೆ ಆದರೆ ಇದಕ್ಕೆ ಹಲವು ಕಂಪನಿಗಳು ಸಹಮತಿ ತೋರಿಸಿಲ್ಲ.
ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಮೂಲದ ಕಂಪನಿಗಳು ಒಂದೇ ಬ್ರಾಂಡ್ ಹೆಸರಿನಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಒಂದೇ ಬ್ರಾಂಡ್ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಬೇಕಾಗುತ್ತದೆ, ಭಾರತ್‌ ಬ್ರಾಂಡ್ ಅನ್ನುವ ಹೆಸರು, ಲೋಗೋ ಸಹಿತ ಪ್ರಧಾನ ಮಂತ್ರಿಯ ಸಾರ್ವಜನಿಕ ರಸಗೊಬ್ಬರ ಯೋಜನೆ ಅಥವಾ ಪಿಎಂ ಬಿಜೆಪಿ ಹೊಸ ರಸಗೊಬ್ಬರ ಚೀಲಗಳ ಮುಂಭಾಗದ ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿರಲಿದೆ. ಚೀಲದ ಮುಂದಿನ ಬಾಗದಲ್ಲಿ ಉಳಿದಿರುವ ಸ್ಥಳವು ಹೆಸರು, ಲೋಗೋ, ವಿಳಾಸ ಮತ್ತು ಇತರ ಮಾಹಿತಿ ಸೇರಿದಂತೆ ತಯಾರಕರ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂಬುದು ಕೇಂದ್ರದ ಅದೇಶ‌. ಏಕರೂಪತೆಯನ್ನು ತರವುದು ಈ ಯೋಜನೆಯ ಮುಖ್ಯ ವಿಷಯವಾಗಿದೆ.

ಕೇಂದ್ರ ಸರ್ಕಾರ ವಾರ್ಷಿಕವಾಗಿ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡುವ ಯೋಜನೆಯಾದ ಪ್ರಧಾನಮಂತ್ರಿ ಭಾರತೀಯ ಜನರ್ವರಕ್ ಪರಿಯೋಜನೆ (ಪಿಎಂ ಬಿಜೆಪಿ)ಯ ಏಕೈಕ ಬ್ರಾಂಡ್‌ ಹೆಸರು, ಬ್ರಾಂಡ್‌ ಲೋಗೋವಿನ‌‌ ಚಿತ್ರವನ್ನು ಕಂಪನಿಗಳು ಗೊಬ್ಬರ ಚೀಲಗಳ ಮುಂಬಾಗದಲ್ಲಿ ಪ್ರದರ್ಶಿಸಬೇಕು. ಚೀಲದ ಒಂದು ಬದಿಗೆ ಕಂಪನಿ ಹೆಸರನ್ನು ಸಣ್ಣದಾಗಿ ಹಾಕುವಂತೆ ಅದೆಶ್ ನಿಡಿದೆ.
ರಷ್ಯಾ ಹಾಗು ಉಕ್ರೇನ್‌ನ ನಡುವೆ ಯುದ್ಧವು ಜಾಗತಿಕ ಶಕ್ತಿ ಮತ್ತು ರಾಸಾಯನಿಕ ಪೋಷಕಾಂಶಗಳ ಮತ್ತು ಗೊಬ್ಬರದ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣದಿಂದಲೇ ಮೇ ತಿಂಗಳಲ್ಲಿ ಸಹಕಾರಿ ಸಂಸ್ಥೆಗಳ ಸದಸ್ಯರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಸಗೊಬ್ಬರದ ಸಬ್ಸಿಡಿ ಬಿಲ್ ಈ ಹಣಕಾಸು ವರ್ಷದಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಮೀರಬಹುದು ಎಂದು ಅಂದಾಜಿಸಿರುವುದಾಗಿ ತಿಳಿಸಿದ್ದರು. ಬಿಲ್ ನ‌ ಪ್ರಮಾಣ ‌ಈ ಬಾರಿ ಸುಮಾರು ಶೇ. ೨೫ ರಷ್ಟು ಹೆಚ್ಚಾಗಿದೆ ಕಳೆದ ವರ್ಷದ ಬಿಲ್ ಕೆವಲ ೧.೬ ಲಕ್ಷ ಕೋಟಿ ಇತ್ತು.
ನವ ದೆಹಲಿಯಲ್ಲಿ ನಡೆದ ‘ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನ-೨೦೨೨’ ಕಾರ್ಯಕ್ರಮದಲ್ಲಿ ಪಿಎಂಬಿಜೆಪಿ ಜತೆಗೆ ೬೦೦ ಪಿಎಂ ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೂ (PM-KSK) ಮೋದಿ ಚಾಲನೆ ನೀಡಿದ್ದಾರೆ. ರೈತರು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆ, ಬೀಜ, ರಸಗೊಬ್ಬರ ಸೇರಿ ಹಲವು ಉತ್ಪನ್ನಗಳು ಕಿಸಾನ್‌ ಸಮೃದ್ಧಿ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಪಿಎಂಕೆಎಸ್‌ಕೆ ಅಡಿಯಲ್ಲಿ ದೇಶಾದ್ಯಂತ ಇರುವ ೩.೩ ಲಕ್ಷ ರಸಗೊಬ್ಬರ ಅಂಗಡಿಗಳನ್ನು ಹಂತ ಹಂತವಾಗಿ ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನಾಗಿ ಮಾರ್ಪಡಿಸುವುದು ಕೂಡ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೇಂದ್ರದ ಸೂಚನೆ ಪ್ರಕಾರ ಹೊಸ ರಸಗೊಬ್ಬರ ಚೀಲಗಳನ್ನು ಮುಂದಿನ ತಿಂಗಳ ಅಕ್ಟೋಬರ್ 2ರಿಂದ ರೈತನಿಗೆ ಪರಿಚಯಿಸಲಿದೆ. ಸೆಪ್ಟೆಂಬರ್ 15 ರಿಂದ ಹಳೆಯ ಮಾದರಿ ಹೊಂದಿರುವ ಚೀಲಗಳನ್ನು ಖರೀದಿಸದಂತೆ ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಎಲ್ಲ ಹಳೆಯ ಗೊಬ್ಬರ ಚೀಲಗಳನ್ನು ಡಿಸೆಂಬರ್‌ ಅಂತ್ಯದವರೆಗೆ ಕಂಪನಿಗಳಿಗೆ ಮಾರಾಟಕ್ಕೆ ಸಮಯ ಅವಕಾಶ ಸಹ ನೀಡಲಾಗಿದೆ
ಪಿಎಂ ಕಿಸಾನ್ ಸಮ್ಮಾನ್‌ ಯೋಜನೆ (ರೈತನ‌ ಬ್ಯಾಂಕ್ ಖಾತೆಗೆ ನಗದು ಜಮಾ ಆಗುವ ಯೋಜನೆ), ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ರೈತರಿಗೆ ಬೆಳೆ ವಿಮೆ ಯೋಜನೆ), ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಉಚಿತ ಆಹಾರ ಮತ್ತು ಆಶ್ರಯ ಯೋಜನೆ)ಗಳು ಹಾಗೆಯೇ ಈ ಯೋಜನೆಯು ಕೂಡ
ಪ್ರಧಾನ ಮಂತ್ರಿಗಳ ಕಚೇರಿ ಹೆಸರನ್ನು ಹೊಂದಿವೆ. ಇದು
ಪಿಎಂ ಹೆಸರಿನ ಯೋಜನೆಗೆ ಸೇರ್ಪಡೆಯಾಗಿದೆ.
ಭಾರತ ಸರ್ಕಾರವು ಕೃಷಿ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಈ ಕಾರಣದಿಂದಾಗಿ, ಸರ್ಕಾರವು ಹಲವರು ಯೋಜನೆಯನ್ನು ಜಾರಿಗೆ ತಂದಿದೆ ಅದರಲ್ಲಿ ನೂತನವಾಗಿ ಇದು ಕೂಡ ಒಂದು.

ಪ್ರಧಾನ ಮಂತ್ರಿಗಳು ಅಕ್ಟೋಬರ್ 17, 22 ರಂದು,ರೈತರಿಗಾಗಿ ೨ ನೂತನ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಒಂದನೆಯದನ್ನು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (PMKSK) ಎಂದು ಕರೆಯಲಾಗುತ್ತದೆ ಮತ್ತು ಎರಡನೆಯದು ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ, ಇದು ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಘೋಷಣೆಯನ್ನು ಹೊಂದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (PMKSK) ಯೋಜನೆಯ ಬಗ್ಗೆ ತಿಳಿದುಕೊಳ್ಳೊನ . ಪ್ರಧಾನಮಂತ್ರಿಯವರು ಸುಮಾರು 600 PM ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ (PM-KSK) ಚಲಾವನೆ ನೀಡಿದ್ದಾರೆ ಇದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು , ದವಸ ಧಾನ್ಯಗಳನ್ನು ಮತ್ತು ಪ್ರವೇಶ ಸೇವೆಗಳನ್ನು ಖರೀದಿಸುವ ಎಲ್ಲಾ ರೈತರಿಗೆ ‘ಆಧುನಿಕ ರಸಗೊಬ್ಬರ ಚಿಲ್ಲರೆ ಅಂಗಡಿ’ಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. . ರಾಷ್ಟ್ರದ 3.3 ಲಕ್ಷಕ್ಕೂ ಹೆಚ್ಚು ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನು ಕ್ರಮೇಣ ಪಿಎಂ-ಕೆಎಸ್‌ಕೆ ಆಗಿ ಪರಿವರ್ತಿಸಲು ಕೇಂದ್ರ ನಿರ್ದರಿಸಿದೆ . ಇದಲ್ಲದೆ, ಅತಿ ಶೀಘ್ರದಲ್ಲೇ ದೇಶಾದ್ಯಂತ ಹೊಸ ಮಳಿಗೆಗಳನ್ನು ತೆರೆಯಲಾಗುವುದು .ಇದು ರೈತನಿಗೆ ಬೇಕಾದ ಕೃಷಿ-ಇನ್‌ಪುಟ್‌ಗಳಾದ ಗೊಬ್ಬರ ಮತ್ತು ಬೀಜಗಳನ್ನು ವಿತರಿಸುವುದಲ್ಲದೆ , ಬೀಜ ಮತ್ತು ಮಣ್ಣಿನ ಪರೀಕ್ಷೆ ಗು ಸಹಾಯ ಮಾಡುತ್ತದೆ

ಇನ್ನು ಎರಡನೆಯ ಯೋಜನೆ ಬಗ್ಗೆ ಹೇಳಬೇಕೆಂದರೆ ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪ್ರಿಯೋಜನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪ್ರಿಯೋಜನಾ – ಒಂದು ರಾಷ್ಟ್ರ ಒಂದು ರಸಗೊಬ್ಬರ ಎಂಬ ಆಯೋಗಕ್ಕೆ ಚಲಾವಣೆ ನೀಡಿದ್ದಾರೆ. ಈ ಯೋಜನೆಯ ಮುಖ್ಯ ಸಂದೇಶ ಎಂದರೆ ಒಂದೇ ಬ್ರಾಂಡ್ ಅಡಿಯಲ್ಲಿ ಪ್ರತಿ ಸಬ್ಸಿಡಿ ರಸಗೊಬ್ಬರ – ಭಾರತ್. ಈ ಯೋಜನೆಯನ್ನು ಅವರ ಎರಡು ದಿನಗಳ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಸಮಯದಲ್ಲಿ ಆರ೦ಭವಾಯಿತು. ಈ ಯೋಜನೆಯ ಹಿಂದಿನ ಉದ್ದೇಶವು ರಸಗೊಬ್ಬರಗಳ ಕ್ರಾಸ್-ಕ್ರಾಸ್ ಕುಶಲತೆಯನ್ನು ತಪ್ಪಿಸುವುದು ಮತ್ತು ಹೆಚ್ಚಿನ ಸರಕು ಸಾಗಣೆ ಸಬ್ಸಿಡಿಯನ್ನು ಕಡಿಮೆ ಮಾಡುವುದು ಆಗಿದೆ.
ಸಾಕಷ್ಟು ಮಾಹಿತಿಯೊಂದಿಗೆ ಚಿಲ್ಲರೆ ವ್ಯಾಪಾರಿಗಳನ್ನು ಬಲವರ್ಧನೆ ಮಾಡುವ ಉದ್ದೇಶದಿಂದ, ಕೇಂದ್ರವು ಚಿಲ್ಲರೆ ವ್ಯಾಪಾರಿಗಳಿಗೆ ತರಬೇತಿಯನ್ನು ನೀಡುತ್ತದೆ, ಇದನ್ನು ವರ್ಷಕ್ಕೆ ೨ ಬಾರಿ ಹಮ್ಮಿಕೊಳ್ಲಲಗುತ್ತದೆ . ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನಿಗಳು ತರಬೇತಿಗಾಗಿ ಹಲವಾರು ವಿಷಯಗಳಲ್ಲಿ ಭಾಗವಹಿಸುತ್ತಾರೆ , ಅದು ಹೀಗಿರಬಹುದು ರಸಗೊಬ್ಬರಗಳ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡುವುದು‌, ಸಾವಯವ ಗೊಬ್ಬರಗದ ಮಹತ್ವ ಮತ್ತು ಅದನ್ನು ಸಿಂಪಡಣೆ ಮಾಡುವ ವಿದಾನ , ಹೊಸ ಯುಗದ ರಸಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳು ಮತ್ತು ಇನ್ನಷ್ಟು. ಹೆಚ್ಚು ರಸಗೊಬ್ಬರ ಬಳಸುವುದರಿಂದ ಆಗುವ ಹಾನಿ ಹೀಗೆ ಸಾಕಷ್ಟು ವಿಷಯದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಒನ್ ನೇಷನ್ ಒನ್ ಗೊಬ್ಬರ’ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ, ‘ಇನ್ನು ಮುಂದೆ , ಏಕರೂಪದ ಹಾಗು ಇನ್ನು ಗುಣಮಟ್ಟದ ಯೂರಿಯಾವನ್ನು ಒಂದೇ ಹೆಸರಿನಲ್ಲಿ ಅದು ಭಾರತ ಬ್ರ್ಯಾಂಡ್ ಹೆಸರಿನಲ್ಲಿ ದೇಶದ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ . ಒಂದು ರಾಷ್ಟ್ರ ಒಂದು ರಸಗೊಬ್ಬರ ರೂಪದಲ್ಲಿ , ರೈತನ ಕೈ ಗೆ ನಿಲುಕುವ ಮತ್ತು ಉತ್ತಮ ಗುಣಮಟ್ಟದ ‌‌ ರಸಗೊಬ್ಬರಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಂದು ದೇಶ ಒಂದು ರಸ ಗೊಬ್ಬರದಿಂದ ರೈತರು ಉತ್ತಮ ಗೊಬ್ಬರ ಪಡೆಯುತ್ತಾರೆ. ರಸಗೊಬ್ಬರಗಳ ಉತ್ಪಾದನಾ ತಂತ್ರಜ್ಞಾನ ಮತ್ತು ಗುಣಮಟ್ಟದಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂದು ಹೇಳಿದರು.
ಇದರಿಂದ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು ರೈತನ ಬೆಳೆಗೆ ಸಂಬಂಧಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು. ಇದರಿಂದ ಇನ್ ಪುಟ ದರವನ್ನು ಕಡಿಮೆಮಾಡಿ ಹೆಚ್ಚಿನ ಇಳುವರಿ ತಗೆಯಲು ಸಾದ್ಯವಾಗುತ್ತದೆ. ಭಾರತವು ಶೀಘ್ರದಲ್ಲೇ ಜಾಗತಿಕವಾಗಿ ಕೃಷಿ ಉತ್ಪನ್ನಗಳ ಸಮರ್ಥ ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮಲಿದೆ’ ಎಂದು ಮೋದಿ ಅವರು ಹೇಳಿದರು. ಮೋದಿ ಅವರು ಇಂಡಿಯನ್ ಎಡ್ಜ್ ಎಂಬ ನೂತನ ಇ-ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇದು ರಸಗೊಬ್ಬರಗಳಿಗೆ ಸಂಬಂಧಿಸಿದೆ. ಇದರ ಮೂಲಕ ದೇಶೀಯ ಮತ್ತು ಅಂತರಾಷ್ಟ್ರೀಯ ರಸಗೊಬ್ಬರಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಎಂದರೆ ರೈತರ ಇತ್ತೀಚಿನ ಬೆಳವಣಿಗೆಗಳು, ಬೆಲೆ ಪ್ರವೃತ್ತಿಗಳು, ವಿಶ್ಲೇಷಣೆ, ಲಭ್ಯತೆ, ಬಳಕೆ, ಯಶಸ್ಸಿನ ಕಥೆಗಳ ಬಗ್ಗೆ ತಿಳಿಯಬಹುದು. ಒಂದೇ ರೀತಿಯ ಎಲ್ಲಾ ರಸಗೊಬ್ಬರಗಳು ರಸಗೊಬ್ಬರ ನಿಯಂತ್ರಣ ಆದೇಶದಿಂದ (ಎಫ್‌ಸಿಒ) ನಿರ್ದಿಷ್ಟಪಡಿಸಿದ ಪೋಷಕಾಂಶಗಳನ್ನು ಹೊಂದಿರಬೇಕು. ಇದರಿಂದಾಗಿ ಯಾವುದೇ ತರಹದ ಅನ್ಯಯ ರೈತನಿಗೆ ಆಗುವುದಿಲ್ಲ . ಮತ್ತು ಗುಣಮಟ್ಟದ ರಸಗೊಬ್ಬರ ಕಡಿಮೆ ದರದಲ್ಲಿ ರೈತ ಪಡೆಯಬಹುದು. ಇದೆ ರೀತಿಯಾಗಿ ರಸಗೊಬ್ಬರದ ದಕ್ಷತೆಯನ್ನು ಹೆಚ್ಚಿಸಲು ಸಸ್ಯಗಳಿಗೆ ಪೋಷಕಾಂಶಗಳ ರುಪದಲ್ಲಿ ನ್ಯಾನೋ ಯೂರಿಯಾವನ್ನು ಬಿಡುಗಡೆ ಮಾಡಲಾಯಿತು.

ಸಸ್ಯಗಳಿಗೆ ಪೋಷಕಾಂಶಗಳು ಅತ್ಯಮೂಲ್ಯವಾದದ್ದು. ಅದರಲ್ಲಿ ಪ್ರಮುಖವದದ್ದು ಸಾರಜನಕ. ಎಲ್ಲಾ ಜೀವಗಳಿಗೂ ಎದು ಅತ್ಯಗತ್ಯವಾಗಿದೆ ಎಂದು ಒಂದು ಮೂಲಧಾತು ಜೀವದ್ರವ್ಯ ದಲ್ಲಿರುವ ಪ್ರೋಟೀನ್ .   ಜೀವದ್ರವ್ಯ ಪ್ರತೀ ಜೀವಿಯೂ ಬದುಕಲು ಅತ್ಯಗತ್ಯವಾದ ದ್ರವವಾಗಿದೆ. ಮನುಷ್ಯ ಮತ್ತು ಹೆಚ್ಚಿನ ಪ್ರಾಣಿಗಳು ಸಸ್ಯಗಳನ್ನು ಅಥವಾ ಬೇರೆ ಪ್ರಣಿಗಳನ್ನು ತಿಂದು ಸಾರಜನಕದ ಆವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ. ಸಸ್ಯಗಳು ಭೂಮಿಯಲ್ಲಿರುವ ಸಾರಜನಕವನ್ನು‌ ಬೇರಿನ ಮೂಲಕ ಹೀರಿ ಬದುಕುತ್ತವೆ.
1.5% ರಷ್ಟು ಸಸ್ಯದಲ್ಲಿ ಸಾರಾಜನಕದ ಅಂಶವಿರುತ್ತದೆ. ಸಾರಾಜನಕವನ್ನು ಯೂರಿಯಾ ಮೂಲಕ ಸಸ್ಯಗಳಿಗೆ ಒದಗಿಸಲು ಬಳಸುತ್ತಾರೆ. ಇಫ್ಕೋ ಕಂಪನಿಯು ಪ್ರಪ್ರಥಮ ಬಾರಿಗೆ ನ್ಯಾನೋ ಯೂರಿಯಾವನ್ನು ತಯಾರು‌ ಮಾಡಿತು . 2019 ರಲ್ಲಿ ರೈತರಿಗೆ ವಿತರಣೆ ಮಾಡಲು ಪ್ರಾರಂಭಿಸಲಾಯಿತು.
ನ್ಯಾನೋ ಯೂರಿಯಾ ಅತಿ ಸೂಕ್ಷ್ಮವಾಗಿದ್ದು ಪರಿಣಾಮಕಾರಿಯಾಗಿ ಸಸ್ಯಗಳು ಹೀರಿಕೊಳ್ಳುತ್ತವೆ. ನ್ಯಾನೋ ಯೂರಿಯಾವನ್ನು ಭೂಮಿಗೆ ಹಾಕುವಂತಿಲ್ಲ ನೇರವಾಗಿ ಸಸ್ಯಗಳಿಗೆ ಸಿಂಪಡಿಸಬೇಕು. ನ್ಯಾನೋ ಯೂರಿಯಾ ಬಾಟಲ್‌ಗಳಲ್ಲಿ ಲಭ್ಯವಿದ್ದು 2021 ರಲ್ಲಿ ಮಾರುಕಟ್ಟೆಗೆ ಬಂದ ವರ್ಷವಾಗಿದೆ.
ಇದರ ಪ್ರತೀಕ N, ಪರಮಾಣು ಸಂಖ್ಯೆ ೭, ಪರಮಾಣುತೂಕ ೧೪.೦೦೮. ಸಾಂದ್ರತೆ 0೦ ಉಷ್ಣತೆ ಮತ್ತು ೭೬೦ mm ಒತ್ತಡದಲ್ಲಿ ಒಂದು ಲೀಟರ್ ಅನಿಲ ೧.೨೫೦೫ ಗ್ರಾಮ್ ತೂಗುತ್ತದೆ; ಅಥವಾ ೧,೦೦೦ ಪಾಲು ವಾಯುವಿಗಿಂತ ೦.೯೬೭ ರಷ್ಟು ತೂಗುತ್ತದೆ. ನೈಟ್ರೊಜನ್ ಅನಿಲದ ಪ್ರತೀಕ N2. ದ್ರವನಬಿಂದು ೨೦೯.೮೬ºC, ಕ್ವಥನ ಬಿಂದು -೧೯೫.೮ºC. ಅವಧಿಕ ಉಷ್ಣತೆ -೧೪೭ºC. ಅವಧಿಕ ಸಂಮರ್ದ ೩೩.೫ ವಾಯುಮಂಡಲಗಳು. ಪ್ರಕೃತಿಯಲ್ಲಿ ನೈಟ್ರೊಜನ್ನಿನ ಎರಡು ಸಮಸ್ಥಾನಿಗಳು 14N ಮತ್ತು 15N, ೯೯.೬೩೫:೦.೦೩೬೫ ಪ್ರಮಾಣದಲ್ಲಿವೆ. ನೈಟ್ರೊಜನ್ನಿನ ವಿಕಿರಣಪಟು ಸಮಸ್ಥಾನಿಗಳು 12N, 13N, 16N, 7N.
ರೈತರಿಗೆ ಅನುಕೂಲವಾಗ ಬೇಕು ಎಂಬ ಉದ್ದೆಶದಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ರೈತರಿಗೆ ಕಡಿಮೆ ದರದಲ್ಲಿ ಮತ್ತು ಗುಣಮಟ್ಟದ ರಸಗೊಬ್ಬರ ತಲುಪಿಸುವ ಹಾಗೂ ಸಾಗಣೆ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡುವ ದಿಸೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ರಸಗೊಬ್ಬರ ಉತ್ಪಾದನೆ ಘಟಕಗಳಿಂದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಇದುವರೆಗೆ ೭೦೦ರಿಂದ ೭೫೦ ಕಿ.ಮೀ ಇರುವುದನ್ನು ಇನ್ನು ಮುಂದೆ ೫೦೦ ಕಿ.ಮೀ.ಗೆ ಇಳಿಸಲು ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಕ್ಷಿಪ್ರವಾಗಿ ರಸಗೊಬ್ಬರ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಸದ್ಯ, ರಸಗೊಬ್ಬರದ ಸಾಗಣೆಗಾಗಿಯೇ ಕೇಂದ್ರ ಸರ್ಕಾರವು ೬-೯ ಸಾವಿರ ಕೋಟಿ ರೂ. ವ್ಯರ್ಥವಾಗುತಿತ್ತು‌‌. ನೂತನ ಯೋಜನೆಯಿಂದ ಈ ವೆಚ್ಚವನ್ನು ಕಡಿಮೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *