
ಆತ್ಮೀಯ ಓದುಗಾರರಿಗೆ ನಮಸ್ಕಾರಗಳು.
ಮೇ 10 ರಂದು ಚುನಾವಣೆ ಮುಗಿದು ಈಗಾಗಲೇ ಫಲಿತಾಂಶ ಹೊರ ಬಿದ್ದಿದ್ದೆ, ಮ್ಯಾಜಿಕಲ್ ನಂಬರ್ ಗಿನ್ನ ಹೆಚ್ಚಿಗೆ ಸ್ಥಾನ ಪಡೆದು ಕಾಂಗ್ರೆಸ್ ಪಕ್ಷವು ಮೇಲು ಕೈ ತೋರುಸಿದೆ.
ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ರಚನೆ ಮಾಡಲು ಗುರುವಾರದಂದು ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮತ್ತು ಈ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಪಕ್ಷವು ಎಲ್ಲಾ ಸಮಾನ ಮನಸ್ಸಿನ ಪಕ್ಷಗಳಿಗೆ ಆಹ್ವಾನವನ್ನು ಕಳುಹಿಸಿದೆ.ಕರ್ನಾಟಕ ಸಚಿವ ಸಂಪುಟದ ಅಂತಿಮ ರೂಪುರೇಷೆ ಒಂದೆರೆಡು ದಿನದಲ್ಲಿ ರೂಪು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಎಂದು ಚರ್ಚಿಸಲು ಶುರು ಮಾಡಿದ್ದಾರೆ ಕಾಂಗ್ರೆಸ್ ಶಾಸಕಾಂಗ ಪಕ್ಷವು (ಸಿಎಲ್‌ಪಿ) ಮುಖ್ಯಮಂತ್ರಿ ಆಯ್ಕೆಯನ್ನು ನಿರ್ಧರಿಸಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಡುವ ನಿರ್ಣಯವನ್ನು ಅಂಗೀಕರಿಸುವ ನಿರೀಕ್ಷೆಯಿದೆ.
ಈಗಾಗಲೇ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷೆಯಾಗಿದ್ದಾರೆ. ಎಲ್ಲರೂ ಕಾಯುತ್ತಿರುವುದು ಈಗ ಯಾರು ಸಿ ಎಂ ಆಗುತ್ತಾರೆ ಎಂಬದು ಎಲ್ಲರ ತಲೆಯಲ್ಲಿ ಕಾಯುತ್ತೀರಾ ಪ್ರಶ್ನೆ.
ನಿಮ್ಮ ಕ್ಷೇತ್ರದಲ್ಲಿ ಯಾರೂ ಮುನ್ನಡೆ ಮತ್ತು ಯಾರು ಹಿನ್ನಡೆ ಎಂಬುದನ್ನು ಈ ಕೆಳಗಿನ ಲಿಂಕ್ ಅನ್ನು ಒತ್ತುವುದರ ಮೂಲಕ ತಿಳಿದುಕೊಳ್ಳಿ
https://results.eci.gov.in/ResultAcGenMay2023/ConstituencywiseS1034.htm?ac=34
ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ, ನಿಮ್ಮ ಕ್ಷೇತ್ರದ ಚುನಾವಣಾ ಫಲಿತಾಂಶ ಮತ್ತು ನಿಗದಿತ ಮತಗಳು ಯಾರು ಯಾರಿಗೆ ಎಷ್ಟು ಬಿದ್ದಿದ್ದವೇ, ಎಂಬುದನ್ನು ಕೂಡ ಈ ಮೇಲಿನ ಲಿಂಕ್ ಅನ್ನು ಒತ್ತುವುದರ ಮೂಲಕ ನೀವು ತಿಳಿಯಬಹುದು.