
ಪ್ರಿಯ ಓದುಗರೆ ಇದೇ ಜನವರಿ 25ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹರ್ಷಕಲಾ – ರಾಷ್ಟ್ರೀಯ ಕೈಮಗ್ಗ ಮೇಳ 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಕಾರ್ಯಕ್ರಮವು ನೇಕಾರರಿಗೆ ಸಹಾಯವಾಗುವಂತ ಹಲವು ಯೋಜನೆಗೆ ಚಾಲನೆ ನೀಡುವ ವೇದಿಕೆ ಕೂಡ ಆಗಿತ್ತು, ಇದಲ್ಲದೆ ಕೈಮಗ್ಗ ವಾಸ್ತು ಪ್ರದರ್ಶನ ಹಾಗೂ ಇತರೆ ಕಾರ್ಯಕ್ರಮಗಳು ಕೂಡ 25 ರಂದು ಜರಗಿದವು.
ನನ್ನ ಕೈಮಗ್ಗ – ನನ್ನ ಹೆಮ್ಮೆ ಎಂಬಂತೆ ಈ ಕಾರ್ಯಕ್ರಮವು ನೇಕಾರರ ಪ್ರೋತ್ಸಾಹಕ್ಕಾಗಿ ಮತ್ತು ಅವರ ಅಭಿವೃದ್ಧಿಗಾಗಿ ಇದನ್ನು ಬೆಂಗಳೂರಿನಲ್ಲಿ ಹಮ್ಮಿಸಲಾಗಿತ್ತು.
ಮನೆಯಲ್ಲಿ ಕುಳಿತು online ಮುಖಾಂತರ voter id ಅಪ್ಲೈ ಮಾಡಿ.https://mahitisara.com/index.php/2023/01/03/apply-voter-id-application-in-mobile/
ನೇಕಾರರ ಹಲವು ಯೋಜನೆಗೆ ಚಾಲನೆ ನೀಡಲಾಯಿತು. ಹಾಗಾದರೆ ಆ ಯೋಜನೆಗಳು ಏನೆಂದು ತಿಳಿಯೋಣ ಬನ್ನಿ
ನೂತನ ಯೋಜನೆಗಳು
ವಿದ್ಯಾ ವಿಕಾಸ ಯೋಜನೆ ಅಡಿ ಎಲ್ಲಾ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡುವುದನ್ನು ಪೂರ್ತಿಯಾಗಿ ನೇಕಾರರ ಬಳಿ ಖರೀದಿಸಬೇಕೆಂದು ಆದೇಶ ನೀಡಲಾಯಿತು.
ಮತ್ತು ವಿವಿಧ ಇಲಾಖೆಯ ಸಮವಸ್ತ್ರಗಳನ್ನು ಶೇಕಡ 25 ರಷ್ಟು ನೇಕಾರರಲ್ಲಿ ಖರೀದಿಸುವ ಆದೇಶ ಸೂಚಿಸಲಾಯಿತು.
5 hp ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗಗಳಿಗೆ ಉಚಿತವಾಗಿ ಸಂಚಲನೆಯನ್ನು ನೀಡಲು ತೀರ್ಮಾನ ಮಾಡಲಾಯಿತು.
ಜನ ವಸತಿ ಪ್ರದೇಶಗಳಲ್ಲಿರುವ ನೇಕಾರರ ಮಗ್ಗದ ಮನೆಗಳಿಗೆ ವಾಸ ಪ್ರಮಾಣ ಪತ್ರ ನೀಡಲು ಆದೇಶ.
ನೇಕಾರರ ಹಿತಕ್ಕಾಗಿ ಸರ್ಕಾರ ಆಯೋಜಿಸಿದ ಯೋಜನೆಗಳು
ನೇಕಾರ ಸಮ್ಮಾನ ನಿಧಿಯ ಅಡಿ ಎಲ್ಲರಿಗೂ ಸೇರಬೇಕಾದ ಹಣ 2000 ರೂಪಾಯಿಯಿಂದ 5000 ರೂಪಾಯಿವರೆಗೆ ಏರಿಕೆ ಮಾಡಲಾಯಿತು.
2023 -24 ಸಾಲಿನ ನೇಕಾರರ ಉದ್ದೇಶಗಳಿಗಾಗಿ 2 ಲಕ್ಷದ ವರೆಗೂ ಬಡ್ಡಿ ರಹಿತ ಸಾಲ ವಿತರಣೆಗೆ ಆದೇಶ.
ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಬಂಕಾಪುರ್ ಹೋಬಳಿ ಖುರಸಪುರ್ ಗ್ರಾಮದಲ್ಲಿ ಆಧುನಿಕ ಜವಳಿ ಪಾರ್ಕ್ ಸ್ಥಾಪಿಸಿ ಸುಮಾರು 3000 ಜನಗಳಿಗೆ ಉದ್ಯೋಗ ಸ್ಥಾಪಿಸುವುದು.
ಮಾಹಿತಿ ಸಾರಾ ವಾಟ್ಸಪ್ ಗ್ರೂಪ್ ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿ ಹಾಗೂ ಇತರೆ ನ್ಯೂಸ್ ಗಳಿಗೆ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಕೂಡಲೇ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9