Spread the love

ಲಂಪಿ ಚರ್ಮ ಗಂಟು ರೋಗವು ದನ ಕರು ಮತ್ತು ಎಮ್ಮೆಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ರೋಗ ವಾಗಿರುತ್ತದೆ. ಇದು ಒಂದು ವೈರಸ್ ಮೂಲಕ ಹರಡುವ ರೋಗವಾಗಿದ್ದು ನೊಣಗಳು ಮತ್ತು ಉಣ್ಣೆಗಳಿಂದ ಜಾನುವಾರುಗಳಿಗೆ ಹರಡುತ್ತದೆ. ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ ಗುಳ್ಳೆಗಳಂತೆ ಹುಟ್ಟುವಿಕೆ ಈ ರೋಗದ ಗುಣಲಕ್ಷಣಗಳಾಗಿವೆ. ಇದನ್ನು ಸಾಮಾನ್ಯವಾಗಿ Lumpy skin disease (LSD) ಎಂದು ಕರೆಯುತ್ತಾರೆ.ಇದಕ್ಕೆ ಔಷಧಿ ಪಡೆಯಲು ಹೈನುಗಾರರು ಸಿಕ್ಕಸಿಕ್ಕ ವೈದ್ಯರ ಮತ್ತು ಮೆಡಿಕಲ್ ಶಾಪ್ಗಳ ಮೊರೆ ಹೋಗುತ್ತಿದ್ದಾರೆ. ಈ ರೋಗವು ವೈರಸ್ ಮುಖಾಂತರ ಹರಡುವ ರೋಗವಾಗಿದ್ದು, ಬೇಗನೆ ಕ್ರಮ ಕೈಗೊಳ್ಳದಿದ್ದರೆ ಬಾರಿ ನಷ್ಟ ಅನುಭವಿಸುವುದು ಖಚಿತ. ಈಗಾಗಲೇ ನಿಮಗೆಲ್ಲರಿಗೂ ತಿಳಿದ ಹಾಗೆ ವೈರಸ್ ಇಂದ ಹರಡುವ ಕಾಯಿಲೆಗಳು ಮನುಷ್ಯನನ್ನು ಕಾಲಕಾಲಾಂತರದಿಂದ ಕಾಡುತ್ತಲೇ ಇವೆ, ನೀವು ಈಗಲೇ ತಿಳಿದಿರುವ ಹಾಗೆ ಕೋವಿಡ್ ಮಹಾಮಾರಿ, ಸುಮಾರು ಎರಡು ವರ್ಷಗಳ ಕಾಲ ಮನುಷ್ಯನನ್ನು ಕಾಡಿತು, ಇದು ಕೂಡ ವೈರಸ್ ಎಂಬುದನ್ನು ನೀವು ತಿಳಿಯಬೇಕಾದ ವಿಷಯ. ಈಗ ಇಂತಹ ವೈರಸ್ ಕಾಯಿಲೆಗಳು ನಮಗೆ ಹಾಲು ಕೊಡುವ ಮತ್ತು ಹೊಲದ ಕೆಲಸದಲ್ಲಿ ಸಹಾಯ ಮಾಡುವಂತಹ ಜಾನುವಾರುಗಳಿಗೂ ಕಾಡುತ್ತಿದೆ. ಲಂಪಿ ಸ್ಕಿನ್ ಡಿಸೀಸ್ ಸಾಮಾನ್ಯವಾಗಿ ಹೇಳಬೇಕೆಂದರೆ ಲಂಪಿ ಚರ್ಮರೋಗ. ಇತ್ತೀಚಿನ ಪ್ರಮಾಣದಲ್ಲಿ ಈ ರೋಗವು ಜಾನುವಾರುಗಳಿಗೆ ಬಾದತಿಯನ್ನು ಉಂಟುಮಾಡುತ್ತಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಈ ರೋಗವನ್ನು ತಡೆಗಟ್ಟಲು ಸರ್ಕಾರವು ನಾಲ್ಕು ನೆರೆಹೊರೆಯ ರಾಜ್ಯಗಳಿಂದ ಜಾನುವಾರುಗಳನ್ನು ಖರೀದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇದನೆ ಮಾಡಿದ್ದಾರೆ. ಮತ್ತು ಜಾನುವಾರುಗಳನ್ನು ಸಾಗನೆ ಮಾಡುವುದನ್ನು ಕೂಡ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 26 ಸಾವಿರಕ್ಕೂ ಅಧಿಕ ಜಾನುವಾರುಗಳು ಈ ರೋಗದಿಂದ ಬಳಲುತ್ತಿವೆ, ಮತ್ತು 16 ಸಾವಿರಕ್ಕೂ ಅಧಿಕ ಜಾನುವಾರುಗಳು ಚಿಕಿತ್ಸೆ ಪಡೆದಿವೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸುತ್ತವೆ.

ಹಾಗಾದರೆ ಈ ರೋಗದ ಗುಣಲಕ್ಷಣಗಳು ಏನು ಎಂದು ತಿಳಿಯೋಣ. ಈ ಸೋಂಕಿನಿಂದ ಬಳಲುತ್ತಿರುವ ಜಾನುವಾರುಗಳು ಅತಿಯಾದ ಜ್ವರ ಅಂದರೆ ಸುಮಾರು 41 ಡಿಗ್ರಿ ಇಂದ ಬಳಲುತ್ತವೆ, ಕಣ್ಣಿನಿಂದ ಧಾರಾಕಾರವಾಗಿ ನೀರು ಸೋರುತ್ತದೆ, ಜಾನುವಾರುಗಳು ಹುಮ್ಮಸ್ಸಿನಲ್ಲಿರದೆ ಯಾವಾಗಲೂ ಅಶಕ್ತತೆಯಿಂದ ಬಳಲುತ್ತವೆ, ಕಾಲುಗಳಲ್ಲಿ ಬಾವು ಉಂಟಾಗುತ್ತದೆ, ಜಾನುವಾರು ಚರ್ಮದ ಮೇಲೆ ಸುಮಾರು ಎರಡರಿಂದ 5 ಸೆಂಟಿಮೀಟರ್ ಅಗಲವಾದಂತ ಗಂಟುಗಳನ್ನು ಕೂಡ ಕಾಣುತ್ತೇವೆ.
ಈ ರೋಗವು ನೊಣಗಳು ಮತ್ತು ಉಣ್ಣೆಗಳಿಂದ ಕೂಡ ಹರಡಲಾಗುತ್ತದೆ. ಕೆಲಸದ ಸಾಮರ್ಥ್ಯ ಉಂಟಾಗುತ್ತದೆ ರೋಗದ ಅಂಶ ತೀವ್ರವದಲ್ಲಿ ಜಾನುವಾರುಗಳು ಸಾವನ್ನು ಕೂಡ ಅಪ್ಪುತ್ತವೆ. ಮಿಶ್ರ ತಳಿಗಳು, ಜರ್ಸಿ ಮತ್ತು ಎಚ್ಎಫ್ ಆಕಳುಗಳು ಈ ರೋಗದಿಂದ ಹೆಚ್ಚಾಗಿ ಬಳಲುತ್ತವೆ ಎಂದು ತಿಳಿಸಿದರು.

ವೈರಸ್ ಸೋಂಕಿನಿಂದ ಸುಮಾರು ಒಂದು ವಾರದ ನಂತರ ಜ್ವರ ಕಾಣಿಸಿಕೊಳ್ಳುತ್ತದೆ. ಈ ಆರಂಭಿಕ ಜ್ವರವು 41 °C (106 °F) ಮೀರಬಹುದು ಮತ್ತು ಒಂದು ವಾರದವರೆಗೆ ಇರುತ್ತದೆ. ಈ ಸಮಯದಲ್ಲಿ, ಎಲ್ಲಾ ಬಾಹ್ಯ ದುಗ್ಧರಸ ಗ್ರಂಥಿಗಳು ಹಿಗ್ಗುತ್ತವೆ. ರೋಗ ಲಕ್ಷಣವನ್ನು ಹೊಂದಿರುವ ಗಂಟುಗಳು, ವೈರಸ್ ಚುಚ್ಚುಮದ್ದಿನ ನಂತರ ಏಳರಿಂದ ಹತ್ತೊಂಬತ್ತು ದಿನಗಳ ನಂತರ ಕಾಣಿಸಿಕೊಳ್ಳುತ್ತವೆ. ಗಂಟುಗಳು ಕಾಣಿಸಿಕೊಳ್ಳುವುದರೊಂದಿಗೆ, ಕಣ್ಣುಗಳು ಮತ್ತು ಮೂಗುಗಳಿಂದ ಸ್ರವಿಸುವಿಕೆಯು ಮ್ಯೂಕೋಪ್ಯುರುಲೆಂಟ್ ಆಗುತ್ತದೆ .

ನೋಡ್ಯುಲರ್ ಗಾಯಗಳು ಎಪಿಡಾರ್ಮಿಸ್ ಅನ್ನು ಮತ್ತು ಒಳಚರಮವನ್ನು ಹೊಂದಿರುತ್ತದೆ, ಆದರೆ ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಇದು ಸ್ನಾಯುವಿನವರೆಗೆ ಕೂಡ ಹರಡುತ್ತದೆ. ಇಂತಹ ಗುಣಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ವಿಶೇಷವಾಗಿ ತೆಲೆ, ಗಂಟಲು, ಕೆಚ್ಚಲು, ಮತ್ತು ಪೆರಿನಿಯಂ ನಲ್ಲಿ ಒಟ್ಟಿಗೆ ಸೇರಿಕೊಂಡು ಹೆಚ್ಚು ಪ್ರಮಾಣದ ರೋಗದ ಸೋಂಕನ್ನು ಕಾಣಬಹುದು.
ಚರ್ಮದ ಗಾಯಗಳನ್ನು ತ್ವರಿತವಾಗಿ ಪರಿಹರಿಸಬಹುದು ಅಥವಾ ಅವು ಗಟ್ಟಿಯಾದ ಉಂಡೆಗಳಾಗಿ ಉಳಿಯಬಹುದು. ಗಾಯಗಳು ಸಹ ಪ್ರತ್ಯೇಕಗೊಳ್ಳಬಹುದು, ಗ್ರ್ಯಾನ್ಯುಲೇಷನ್ ಅಂಗಾಂಶದಿಂದ ತುಂಬಿದ ಆಳವಾದ ಹುಣ್ಣುಗಳು ಮತ್ತು ಆಗಾಗ್ಗೆ . ಗಂಟುಗಳ ಆರಂಭಿಕ ಪ್ರಾರಂಭದಲ್ಲಿ, ಕತ್ತರಿಸಿದ ವಿಭಾಗದ ಮೇಲೆ ಅವು ಕೆನೆ ಬೂದು ಬಣ್ಣದಿಂದ ಬಿಳಿ ಬಣ್ಣವನ್ನು ಹೊಂದಿರುತ್ತವೆ ಮತ್ತು ಸೀರಮ್ ಅನ್ನು ಹೊರಹಾಕಬಹುದು. [2]ಸುಮಾರು ಎರಡು ವಾರಗಳ ನಂತರ, ನೆಕ್ರೋಟಿಕ್ ವಸ್ತುವಿನ ಕೋನ್-ಆಕಾರದ ಕೇಂದ್ರ ಕೋರ್ ಗಂಟುಗಳಲ್ಲಿ ಕಾಣಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ಕಣ್ಣುಗಳು, ಮೂಗು, ಬಾಯಿ, ಗುದನಾಳ, ಕೆಚ್ಚಲು ಮತ್ತು ಜನನಾಂಗಗಳ ಲೋಳೆಯ ಪೊರೆಗಳ ಮೇಲಿನ ಗಂಟುಗಳು ತ್ವರಿತವಾಗಿ ಹುಣ್ಣಾಗುತ್ತವೆ, ವೈರಸ್ ಹರಡಲು ಸಹಾಯ ಮಾಡುತ್ತದೆ.
ಲಂಪಿ ಸ್ಕಿನ್ ಡಿಸೀಸ್ ವೈರಸ್ (LSDV) ಡಬಲ್ ಸ್ಟ್ರಾಂಡೆಡ್ DNA ವೈರಸ್ ಆಗಿದೆ. ಇದು Poxviridae ನ ಕ್ಯಾಪ್ರಿಪಾಕ್ಸ್ ವೈರಸ್ ಕುಲದ ಸದಸ್ಯ . Capripoxviruses (CaPVs) ಚೋರ್ಡೋಪಾಕ್ಸ್ವೈರಸ್ (ChPV) ಉಪಕುಟುಂಬದೊಳಗೆ ಎಂಟು ಕುಲಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ . ಕ್ಯಾಪ್ರಿಪಾಕ್ಸ್ ವೈರಸ್ ಕುಲವು LSDV, ಹಾಗೆಯೇ ಶೀಪಾಕ್ಸ್ ವೈರಸ್ ಮತ್ತು ಆಡುಪಾಕ್ಸ್ ವೈರಸ್ ಅನ್ನು ಒಳಗೊಂಡಿದೆ. CaPV ಸೋಂಕುಗಳು ಸಾಮಾನ್ಯವಾಗಿ ನಿರ್ದಿಷ್ಟ ಭೌಗೋಳಿಕ ವಿತರಣೆಗಳಲ್ಲಿ ನಿರ್ದಿಷ್ಟವಾಗಿ ಹೋಸ್ಟ್ ಆಗಿರುತ್ತವೆ, ಆದರೂ ಅವುಗಳು ಸೆರೋಲಾಜಿಕಲ್ ಆಗಿ ಪರಸ್ಪರ ಪ್ರತ್ಯೇಕಿಸುವುದಿಲ್ಲ.

ಹಾಗಾದರೆ ಈ ರೋಗವು ಹೇಗೆ ಹರಡುತ್ತದೆ ಎಂದು ತಿಳಿಯೋಣ. ಸಾಮಾನ್ಯವಾಗಿ ಈ ರೋಗವು ನೊಣ, ಉಣ್ಣೆ ಮತ್ತು ಕಚ್ಚುವ ಕೀಟಗಳಿಂದ ಹರಡುತ್ತದೆ. ಕಲುಷಿತ ಆಹಾರ, ಕಲುಷಿತ ನೀರು, ಮತ್ತು ಸೋಂಕು ಹಂದಿದ ಜಾನುವಾರುಗಳ ನೇರ ಸಂಪರ್ಕದಿಂದ ಇದು ಹರಡುತ್ತದೆ. ಈ ಸೋಂಕಿನ ಹರಡುವಿಕೆ ಪ್ರಮಾಣ 10 ರಿಂದ 20 ರಷ್ಟು ಆಗಿದ್ದು, ಮರಣದ ಪ್ರಮಾಣ ಶೇಕಡ ಒಂದರಿಂದ ಐದರಷ್ಟು ಆಗಿರುತ್ತದೆ.

ಲಂಪಿ ಸ್ಕಿನ್ ಡಿಸೀಸ್ ಅಥವಾ ಲಂಪಿ ಚರ್ಮರೋಗ ದಿಂದ ಪ್ರತಿರಕ್ಷಣೆಗೆ ಎರಡು ವಿವಿಧವಾದ ವಿಧಾನಗಳಿವೆ. ದಕ್ಷಿಣ ಆಫ್ರಿಕಾದಲ್ಲಿ , ಕೋಳಿಗಳ ಮೊಟ್ಟೆಗಳ ಕೊರಿಯೊ-ಅಲಾಂಟೊಯಿಕ್ ಪೊರೆಗಳ ಮೇಲೆ 20 ಪ್ಯಾಸೇಜ್‌ಗಳಿಂದ ವೈರಸ್‌ನ ನೀತ್ಲಿಂಗ್ ಸ್ಟ್ರೈನ್ ಅನ್ನು ಮೊದಲು ದುರ್ಬಲಗೊಳಿಸಲಾಯಿತು . ಈಗ ಲಸಿಕೆ ವೈರಸ್ ಕೋಶ ಸಂಸ್ಕೃತಿಯಲ್ಲಿ ಹರಡುತ್ತದೆ. ಕೀನ್ಯಾದಲ್ಲಿ , ಕುರಿ ಅಥವಾ ಮೇಕೆಪಾಕ್ಸ್ ವೈರಸ್‌ಗಳಿಂದ ಉತ್ಪತ್ತಿಯಾಗುವ ಲಸಿಕೆಯು ಜಾನುವಾರುಗಳಲ್ಲಿ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ತೋರಿಸಲಾಗಿದೆ. ಆದಾಗ್ಯೂ, ಕುರಿ ಮತ್ತು ಮೇಕೆಗಳಲ್ಲಿ ಸುರಕ್ಷಿತ ಬಳಕೆಗೆ ಅಗತ್ಯವಿರುವ ಕ್ಷೀಣತೆಯ ಮಟ್ಟವು ಜಾನುವಾರುಗಳಿಗೆ ಸಾಕಾಗುವುದಿಲ್ಲ. ಈ ಕಾರಣಕ್ಕಾಗಿ ಶೀಪಾಕ್ಸ್ ಮತ್ತು ಮೇಕೆಪಾಕ್ಸ್ ಲಸಿಕೆಗಳನ್ನು ಕುರಿಪಾಕ್ಸ್ ಅಥವಾ ಮೇಕೆಪಾಕ್ಸ್ ಈಗಾಗಲೇ ಸ್ಥಳೀಯವಾಗಿರುವ ದೇಶಗಳಿಗೆ ನಿರ್ಬಂಧಿಸಲಾಗಿದೆ ಏಕೆಂದರೆ ಲೈವ್ ಲಸಿಕೆಗಳು ಒಳಗಾಗುವ ಕುರಿ ಮತ್ತು ಮೇಕೆ ಜನಸಂಖ್ಯೆಗೆ ಸೋಂಕಿನ ಮೂಲವನ್ನು ಒದಗಿಸಬಹುದು.

LSDV ವಿರುದ್ಧ ಸಾಕಷ್ಟು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಒಳಗಾಗುವ ವಯಸ್ಕ ಜಾನುವಾರುಗಳಿಗೆ ವಾರ್ಷಿಕವಾಗಿ ಲಸಿಕೆಯನ್ನು ನೀಡಬೇಕು. ಸರಿಸುಮಾರು, 50% ಜಾನುವಾರುಗಳು ಇನಾಕ್ಯುಲೇಷನ್ ಸ್ಥಳದಲ್ಲಿ ಊತವನ್ನು ( 10-20 ಮಿಲಿಮೀಟರ್ ( 1 ⁄ 2 – 3 ⁄ 4 ಇಂಚು) ವ್ಯಾಸದಲ್ಲಿ) ಅಭಿವೃದ್ಧಿಪಡಿಸುತ್ತವೆ. [3] ಈ ಊತವು ಕೆಲವೇ ವಾರಗಳಲ್ಲಿ ಕಣ್ಮರೆಯಾಗುತ್ತದೆ. ಚುಚ್ಚುಮದ್ದಿನ ನಂತರ, ಡೈರಿ ಹಸುಗಳು ಹಾಲಿನ ಉತ್ಪಾದನೆಯಲ್ಲಿ ತಾತ್ಕಾಲಿಕ ಇಳಿಕೆಯನ್ನು ಪ್ರದರ್ಶಿಸಬಹುದು.

ಈಗ ರೋಗದ ಚಿಕಿತ್ಸೆ ಹಾಗೂ ಸೊಂಕನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯೋಣ.
ಈ ರೋಗವು ವೈರಸ್ ಇಂದ ಹರಡುವ ರೋಗವಾದ ಕಾರಣ ಯಾವುದೇ ಆದಂತ ನಿರ್ದಿಷ್ಟ ಚಿಕಿತ್ಸೆ ಹೊಂದಿರುವುದಿಲ್ಲ. ಜಾನುವಾರುಗಳಿಗೆ ರೋಗದ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ಅನ್ನು ನೀಡಬೇಕಾಗುತ್ತದೆ. ತೀವ್ರವಾದ ಜ್ವರ ಇರುವ ಕಾರಣ ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು, ಚರ್ಮದ ಮೇಲಿನ ಗಾಯಗಳಿಗೆ ಪೊಟ್ಯಾಸಿಯಂ ಪರಮಾಂಗನೇಟ್‌ ದ್ರಾವಣದಿಂದ ತೊಳೆದು ಐಯೋಡಿನ್‌ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು, ರೋಗ ಹರಡುವುದನ್ನು ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರ್ಪಡಿಸಬೇಕು.

ಲಕ್ಷ ಡೋಸ್‌ ಲಸಿಕೆ
ಈ ಸೋಂಕು ಮೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿದ್ದು, ಸರಕಾರವು ಸೋಂಕನ್ನು ತಡೆಗಟ್ಟುವ ಪ್ರಮಾಣಗಳನ್ನು ಕೈಗೊಂಡಿದೆ. ಸೋಂಕಿಗೆ ಬೇಕಾದ ಲಸಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಈಗಾಗಲೇ ಇಂಥ ತಾಲೂಕಿನಲ್ಲಿ ಇರಿಸಿಕೊಳ್ಳಲಾಗಿದೆ.
ಸುಮಾರು ಒಂದು ಲಕ್ಷ ಡೋಸ್‌ ಲಸಿಕೆ ಜಿಲ್ಲೆಗೆ ಬರುತ್ತಿದೆ ಎನ್ನುತ್ತಾರೆ ಪಶುಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್‌. ಒಂದು ವೇಳೆ ಒಂದು ಗ್ರಾಮದ ಹಸುವಿನಲ್ಲಿ ಈ ಸೋಂಕು ಕಂಡು ಬಂದಲ್ಲಿ ಅದರ ಸುತ್ತಮುತ್ತಲಿನ ಹಸುಗಳಿಗೆ ಮತ್ತು ಸುತ್ತಮುತ್ತ ಊರಿನ ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಸಾಮೂಹಿಕವಾಗಿ ಲಸಿಕೆ ವಿತರಣೆ ಮಾಡುವಷ್ಟು ತೀವ್ರವಾಗಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮ ವಹಿಸದಿದ್ದರೆ ಈ ಸೋಂಕು ಬಾರಿ ನಷ್ಟ ಮಾಡಬಹುದು .

ವೈರಸ್ ಸೋಂಕಿತ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲ ಸಾಮಗ್ರಿಗಳನ್ನು ಸ್ವಚ್ಛವಾಗಿ ತೊಳೆಯಬೇಕು, ಸೋಂಕಿತ ಜಾನುವಾರುಗಳಿಗೆ ಪೌಷ್ಟಿಕವಾದ ಆಹಾರವನ್ನು ಒದಗ ಗಿಸಬೇಕು, ಹಸಿರುಮೆವು, ಲವಣ ಮಿಶ್ರಣ, ನೀರಿಗೆ ಬೆಲ್ಲದ ಮಿಶ್ರಣ ಹಾಕಿ ಕುಡಿಸಬೇಕು, ಉಪ್ಪು ಹಾಗೂ ಅಡಿಗೆ ಸೋಡಾ ನೀರಿನಲ್ಲಿ ಮಿಶ್ರಣ ಮಾಡಿ ದಿನಕ್ಕೆ ಆರು ಸಾರಿ ಅಂತೆ ಕುಡಿಸಬೇಕು. ಹಾಗೂ ಉಣ್ಣೆಗಳಿಂದ ಮತ್ತು ನೊಣಗಳಿಂದ ಸೋಂಕನ್ನು ಹರಡುವುದನ್ನು ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು, ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು, ರೋಗಗ್ರಸ್ತ ಜಾನುವಾರು ಮರಣ ಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.

ಲಂಪಿ ಚರ್ಮ ರೋಗ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಕ್ಯಾಪ್ರಿ ಫಾಕ್ಸ್ ಎಂಬ ವೈರಸ್ಸಿನಿಂದ ಹರಡುತ್ತದೆ, ದನ ಕರು, ಎಮ್ಮೆಗಳು ಅದರಲ್ಲೂ ಕೂಡ ಮಿಶ್ರ ತಳಿಗಳು ಅಂದರೆ ಜರ್ಸಿ, ಎಚ್ಎಫ್ ಹೀಗೆ ಮುಂತಾದವುಗಳಲ್ಲಿ ಈ ರೋಗದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಹಾಲಿಗೂ ಮತ್ತು ಗಂಟಿಗೂ ಯಾವುದೇ ಆದಂತ ಸಂಬಂಧ ಇರುವುದಿಲ್ಲ. ಸೋಂಕಿತ ಜಾನುವಾರುಗಳು ಹಾಲು ಸೇವನೆ ಮಾಡುವುದರಿಂದ ಯಾವುದೇ ಆದಂತಹ ಹಾನಿ ಆಗುವುದಿಲ್ಲ ಎಂದು ಪಶು ಪಾಲನೆಯ ಸಂಶೋಧಕರಾದಂತಹ ಡಾಕ್ಟರ್ ಸಿದ್ದಪ್ಪ ಅವರು ತಿಳಿಸಿದ್ದಾರೆ. ಹಾಲನ್ನು ಕಾಯಿಸಿ ಕುಡಿಯುವುದರಿಂದ ವೈರಸ್ ಪ್ರಮಾಣ ಇದ್ದರೂ ಅದು ಯಾವುದೇ ಆದಂತ ಹಾಲಿ ಮಾಡುವುದಿಲ್ಲ ಮತ್ತು ಹಾಲು ಕಾಯಿಸುವುದರಿಂದ ವೈರಸ್ ಪ್ರಮಾಣ ಇದ್ದರೂ ಅದು ಸತ್ತು ಹೋಗುತ್ತದೆ. ಮತ್ತು ಹಾಲು ಸ್ವಚ್ಛವಾಗುತ್ತದೆ. ಎಂದು ತಿಳಿಸಿದರು ವೈರಸ್ ಹರಡುವಿಕೆಯು ಹಾಲಿನ ಸೇವನೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಆದಾಗ್ಯೂ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಹಿರಿಯ ಅಧಿಕಾರಿಯೊಬ್ಬರು, ಚರ್ಮ ಗಂಟು ಪ್ರಾಣಿಜನ್ಯವಲ್ಲದ ಸೋಂಕು ಮತ್ತು ಪ್ರಾಣಿಗಳಿಂದ ಮಾನವರಿಗೆ ಹರಡುವುದಿಲ್ಲ ಎಂದು ಹೇಳಿದರು.
ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವಾಗಿದೆ. ಕುದಿಸಿದ ನಂತರ ಅಥವಾ ಕುದಿಸದೆ ನೀವು ಹಾಲನ್ನು ಕುಡಿದರೂ ಸಹ ಯಾವುದೇ ಸಮಸ್ಯೆಯಿಲ್ಲ” ಎಂದು ಐವಿಆರ್‌ಐ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಾಂತಿ ಈ ತಿಂಗಳ ಆರಂಭದಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿದರೆ ರೋಗ ಮತ್ತು ಹಾಲಿನ ಉತ್ಪಾದನೆಯ ಮೇಲೆ ಅದರ ಪರಿಣಾಮವನ್ನು ತಡೆಯಬಹುದು. ಜಾನುವಾರುಗಳಿಗೆ ಮೊದಲ ಬಾರಿಗೆ ಸೋಂಕು ತಗುಲಿದರೆ ಮತ್ತು ಲಸಿಕೆ ಹಾಕಿಸದಿದ್ದರೆ, ಹಾಲಿನ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಸೆಪ್ಟೆಂಬರ್ 2020 ರಲ್ಲಿ ಭಾರತದಲ್ಲಿ ಮೊದಲ ಚರ್ಮ ಗಂಟು ರೋಗದ ಪ್ರಕರಣಗಳು ವರದಿಯಾಗಿದ್ದವು.

Leave a Reply

Your email address will not be published. Required fields are marked *