
ಬೆರಳ ತುದಿಯಲ್ಲೇ ಈಗ ಅಸ್ತಿಯ ಮಾಹಿತಿ ಪಡೆಯಿರಿ, ನಾಗರಿಕರನ್ನು ಡಿಜಿಟಲೈಸ್ ಮಾಡುವತ್ತ ಕರ್ನಾಟಕ ಸರ್ಕಾರದ ಚಿತ್ತ. ಇದರಿಂದ ನಾಗರಿಕರು ತಮ್ಮ ಮೊಬೈಲ್ ನಲ್ಲೆ ನಕ್ಷೆಗಳು ಹಾಗೂ ಡಿಜಿಟಲ್ ರೇಖಾ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ಸರ್ಕಾರವು ದಿಶಾಂಕ್ ಮೂಲಕ ನಾಗರಿಕ ಸೇವೆಗಳನ್ನು (ನಕ್ಷೆಗಳು,ಫ್ಲಾಟ್ಗಳ ಡಿಜಿಟಲ್ ರೇಖಾ ಚಿತ್ರಗಳು ಇತ್ಯಾದಿ)ನೀಡಲು ಯೋಜಿಸಿದೆ. ನಿಮ್ಮ ಹೆಸರು ಮತ್ತು ಮೊಬೈಲ್ ನಂಬರನ್ನು ಬಳಸಿಮಾಹಿತಿಯನ್ನು ಪಡೆಯಬಹುದು.
ಆತ್ಮೀಯ ರೈತ ಬಾಂಧವರೇ ನಿಮಗೆ ಈ ಮೊಬೈಲ್ ಅಪ್ಲಿಕೇಶನ್ ತುಂಬಾ ಸಹಾಯಕವಾಗುವುದು ಹಾಗೂ ತುಂಬಾನೇ ಉಪಯೋಗವಾಗುವುದು. ಈ ಅಪ್ಲಿಕೇಶನ್ ಮೂಲಕ ನೀವು ನಿಂತಿರುವ ಜಾಗದ ಮಾಲೀಕರ ಹೆಸರು ಹಾಗೂ ಸರ್ವೇ ನಂಬರನ್ನು ತಿಳಿಯಬಹುದು, ಹಾಗೂ ಆ ಸರ್ವೇ ನಂಬರ್ ನಲ್ಲಿರುವ ಜಾಗದ ವಿಸ್ತೀರ್ಣವನ್ನು ಕೂಡ ತಿಳಿದು ಡೌನ್ಲೋಡ್ ಕೂಡ ಮಾಡಬಹುದು. ಇದರ ಹೆಸರು ದಿಶಾಂಕ್ ಆಪ್.
ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/free-borewell-upto-2-5lakh-for-formers-through-ganga-kalyana-yojane/government-schemes/
ದಿಶಾಂಕ್ ಅಪ್ಲಿಕೇಶನ್ ಬಗ್ಗೆ ಸಂಕ್ಷಿಪ್ತ ಪರಿಚಯ
ರೈತರೇ ನಿಮಗೆ ಯಾವುದೇ ಹೊಲದ ಬಗ್ಗೆ ಮಾಹಿತಿ ಬೇಕಾದಲ್ಲಿ ಹೊಲದ ಮಾಲೀಕನನ್ನು ನೇರವಾಗಿ ಸಂಪರ್ಕಿಸಬೇಕಿತ್ತು ಆದರೆ ಈಗ ದಿಶಂಕ್ ಅಪ್ಲಿಕೇಶನ್ ಮೂಲಕ ಸಂಪೂರ್ಣ ಮಾಹಿತಿ ಹಾಗೂ ದಾಖಲೆ ಅದರ ಲೊಕೇಶನ್ ಸರ್ವೇ ನಂಬರ್ ವಿಸ್ತೀರ್ಣ ಮಾಲೀಕನ ಹೆಸರು ಇತ್ಯಾದಿ ಇವುಗಳನ್ನು ತಿಳಿಯಬಹುದು ಹಾಗೂ ವಿವರವನ್ನು ಡೌನ್ಲೋಡ್ ಮಾಡಿಕೊಳ್ಳುವ ಒಂದು ಅವಕಾಶ ರೈತರಿಗೆ ತುಂಬಾ ಸಹಕಾರಿಯಾಗಲಿದೆ.
ದಿಶಾಂಕ್ ಅಪ್ಲಿಕೇಶನ್ ನ ಮುಖ್ಯ ಪ್ರಯೋಜನಗಳು:-
ಈ ಅಪ್ಲಿಕೇಶನ್ ನ ಮುಖ್ಯ ಪ್ರಯೋಜನಗಳೆಂದರೆ, ನೀವು ಯಾವುದೇ ಭೂಮಿಗೆ ಹೋದರೆ ಅಥವಾ ಹೊಲ ನೋಡಲು ಹೋದರೆ ಅದರ ಮಾಹಿತಿಗಾಗಿ ಮಾಲೀಕರನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಅಥವಾ ಅವರಿಗಾಗಿ ಕಾಯ್ದು ಭೇಟಿಯಾಗುವುದು ತುಂಬಾ ಸಮಯ ಹಿಡಿಯುತ್ತದೆ. ಆದ್ದರಿಂದ ಈ ಅಪ್ಲಿಕೇಶನ್ ಬಳಸಿದರೆ ನೀವು ನೇರವಾಗಿ ಹೊಲದ ಮಾಲೀಕರು ಇಲ್ಲದಿದ್ದರೂ ಎಲ್ಲ ಮಾಹಿತಿಯನ್ನು ಪಡೆಯಬಹುದು.
ಇನ್ನು ಗ್ರಾಮ ಪಂಚಾಯಿತಿಗಳಲ್ಲಿ ಭೂಮಿ ಸರ್ವೆ ಮಾಡುವವರು ಅಥವಾ ಬೆಳೆ ಸಮೀಕ್ಷೆ ಮಾಡುವವರು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ ಆಗ ಅವರಿಗೆ ನಿಮ್ಮ ಬೆಳೆಯನ್ನು ಅಪ್ಲೋಡ್ ಮಾಡೋದು ತುಂಬಾ ಸುಲಭವಾಗುತ್ತದೆ ಏಕೆಂದರೆ ಒಂದು ವೇಳೆ ಅವರ ಸಮೀಕ್ಷೆ ಮಾಡಲು ಬಂದಾಗ ನೀವು ಇಲ್ಲದಿದ್ದಲ್ಲಿ ತುಂಬಾ ಕಷ್ಟವಾಗುವುದು ಆದ್ದರಿಂದ ಈ ಅಪ್ಲಿಕೇಶನ್ ಮೂಲಕ ಅವರು ನೇರವಾಗಿ ನಿಮ್ಮ ಹೊಲದ ಪಡೆದುಕೊಳ್ಳುತ್ತಾರೆ ಮಾಹಿತಿಯನ್ನು.
ದಿಶಾಂಕ್ ಅಪ್ಲಿಕೇಶನ್ ಮೊಬೈಲ್ ನಲ್ಲಿ ಅಳವಡಿಕೆ ಹಾಗೂ ಉಪಯೋಗ:-
ಈ ದಿಶಂಕ್ ಅಪ್ಲಿಕೇಶನ್ ನೀವು ನೇರವಾಗಿ ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿಕೊಳ್ಳಬಹುದು. ದಿಶಾಂಕ್ ಎಂದು ಸರ್ಚ್ ಮಾಡಿದರೆ ಸಾಕು ನಿಮಗೆ ಸರ್ಕಾರದಿಂದ ಅಧಿಕೃತಗೊಂಡ ಒಂದು ಅಪ್ಲಿಕೇಶನ್ ದೊರಕುತ್ತದೆ ಅದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಬೇಕು.

ಈ ಅಪ್ಲಿಕೇಶನ್ ಅನ್ನು ಬಳಸುವ ಮುನ್ನ ನಿಮ್ಮ ಲೊಕೇಶನ್ ಅನುಮತಿಯನ್ನು ನೀಡಬೇಕು. ಇದಾದ ನಂತರ ನಿಮಗೆ ಮೇಲೆ ಚಿತ್ರದಲ್ಲಿ ತೋರಿಸಿರುವ ಹಾಗೆ ನೀವು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನೀಡಬೇಕು. ನಂತರ ಓಟಿಪಿ ಹಾಕಿ ಲಾಗಿನ್ ಆಗಬೇಕು.
ನೀವು ಅಪ್ಲಿಕೇಶನ್ ಲಾಗಿನ್ ಆದ ಮೇಲೆ ಅಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಕಾಣುತ್ತವೆ.ಮೊದಲನೆಯದು ನೀವು ಇರುವ ಜಾಗದ ಲೊಕೇಶನ್ ಹಾಗೂ ಅದರ ಹೆಸರು ಅನ್ನು ಏನು ಎಂಬುದನ್ನು ತಿಳಿಸುತ್ತದೆ. ಮತ್ತೊಂದು ಆಯ್ಕೆ ಏನಂದರೆ ನೀವು ಕೇವಲ ಸರ್ವೇ ನಂಬರ್ ಮೂಲಕ ನೇರವಾಗಿ ಅವರ ಭೂಮಿ ಎಲ್ಲಿದೆ ಎಂದು ಸರ್ಚ್ ಮಾಡುವ ಅವಕಾಶ ಕೂಡ ಇದೆ.
ಮತ್ತೊಂದು ಆಯ್ಕೆ ಎಂದರೆ ಮೈ ಲೋಕೇಶನ್ ರಿಪೋರ್ಟ್ ದುಡಿಮೆ ನಿಮಗೆ ತುಂಬಾ ಉಪಯೋಗಕಾರಿಯಾಗುವ ಆಯ್ಕೆ ಏಕೆಂದರೆ ಮೇಲೆ ತಿಳಿಸಿರುವಂತೆ ನೀವು ಯಾವುದೇ ಜಾಗದಲ್ಲಿ ಹೋಗಿ ನಿಂತು ಮೈ ಲೋಕೇಶನ್ ರಿಪೋರ್ಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದಲ್ಲಿ ನಿಮಗೆ ಆ ಜಾಗದ ಸಂಪೂರ್ಣ ಮಾಹಿತಿ ದೊರೆಯುವುದು ಅಂದರೆ ಜಾಗದ ಮಾಲೀಕನ ಹೆಸರು ಜಾಗದ ವಿಸ್ತೀರ್ಣ ಇತ್ಯಾದಿ ದೊರೆಯುವುದು. ಇನ್ನು ನಾಲ್ಕನೇ ಆಯ್ಕೆ ಎಂದರೆ ಮೇಲಿನ ಆಯ್ಕೆಗಳಿಂದ ದೊರೆತಿರುವಂತಹ ಎಲ್ಲಾ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.