Spread the love

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಎಲ್ಲ ರೈತರು ಈ ಮಾಹಿತಿಯನ್ನು ತಿಳಿದಿರಲೇಬೇಕು . ಏಕೆಂದರೆ ನಿಮ್ಮ ಹೊಲಕ್ಕೆ ಬಳಸುವ ರಸಗೊಬ್ಬರಗಳಾದ NPK ಎಂದರೆ ಏನು DAP ಮತ್ತು ಯೂರಿಯಾ ಏನನ್ನು ಸೂಚಿಸುತ್ತದೆ. ಅದರಲ್ಲಿ ಮುಖ್ಯವಾಗಿ ಇರುವ ಮಿಶ್ರಣಗಳು ಯಾವುವು? ಹಾಗೆಯೇ ರಸಗೊಬ್ಬರ/ಸಲ್ವೇಟ್ ಚೀಲದ ಮೇಲೆ ಬರೆದಿರುವ 10- 26-26, 20-20-20 17-17-17 , ಇವು ಏನನ್ನು ಸೂಚಿಸುತ್ತವೆ? ಮತ್ತು ಯಾವ ಬೆಳೆಗೆ ಯಾವ ರಸಗೊಬ್ಬರ ಉಪಯುಕ್ತ ಅನ್ನುವುದು ಈಗ ತಿಳಿಯೋಣ.

ಮನೆಯಲ್ಲಿ ಕುಳಿತು online ಮುಖಾಂತರ voter id ಅಪ್ಲೈ ಮಾಡಿ.

https://mahitisara.com/index.php/2023/01/03/apply-voter-id-application-in-mobile/

ಎನ್(N)- ಸಾರಜನಕ (Nitrogen) ಪಿ(P)- ರಂಜಕ(Phosphorus) ಕೆ(K)- ಗಂಧಕ(Potassium ಅಂಶವೂ ಸಾಮಾನ್ಯವಾಗಿ ಇರುತ್ತದೆ. ರೈತರು ಯಾವುದೇ ಗೊಬ್ಬರ ಅಂಗಡಿಯಲ್ಲಿ ಖರೀದಿ ಮಾಡಿದರು ಈ ಮೂರು ಅಂಶಗಳು ಅದರಲ್ಲಿ ಇದ್ದೇ ಇರುತ್ತದೆ. ಅಕಸ್ಮಾತಾಗಿ 3 ಅಂಶಗಳು ಇಲ್ಲವಾದಲ್ಲಿ ಒಂದು ಅಂಶವಂತೂ ಇದ್ದೇ ಇರುತ್ತದೆ. ಯಾಕೇಂದರೆ ಈ ಮೂರರಲ್ಲಿ ಒಂದು ಅಂಶ ಮಿಶ್ರಣ ರಸಗೊಬ್ಬರದಲ್ಲಿ ಇಲ್ಲವೆಂದರೆ ಅದು ರಸಗೊಬ್ಬರ ಎನಿಸಿಕೊಳ್ಳುವುದಿಲ್ಲ.

ಹಾಗಾದರೆ DAP ಎಂದರೆ ಏನು? ತಿಳಿಯೋಣ ಬನ್ನಿ

ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ಬಳಸುವ ರಸಗೊಬ್ಬರಗಳು ಎಂದರೆ ಅವು DAP ಮತ್ತು ಯೂರಿಯಾ. ಡಿಎಪಿ ಎಂದರೆ ಡೈ ಅಮೋನಿಯಂ ಫಾಸ್ಟೇಟ್ ಎಂದರ್ಥ. ಇದು ಬಹಳ ಉಪಯೋಗಿ ರಸಗೊಬ್ಬರ ಎಂದು ಹೇಳಬಹುದು. ಈ ಡಿಎಪಿ ಒಳಗೆ 18% ಸಾರಜನಕ ಮತ್ತು 46 % ರಂಜಕದ ಅಂಶ ಒಳಗೊಂಡಿರುತ್ತದೆ. ಅದರಂತೆ ಫಾಸ್ಪೇಟ್ ಅಂಶವು ಸೊನ್ನೆ ಇರುತ್ತದೆ. ಯಾವ ಹೊಲಕ್ಕೆ ಅತಿ ಹೆಚ್ಚು ರಂಜಕದ ಅಂಶ ಕಡಿಮೆ ಇರುತ್ತದೆಯೋ ಅಂಥ ಭೂಮಿಗೆ DAP ರಸಗೊಬ್ಬರ ಬಳಸಬೇಕು.

ಯೂರಿಯಾ:

ಇದರಲ್ಲಿ ಸಾರಜನಕ 46% ಇರುತ್ತದೆ. ಇದು ಮುಖ್ಯವಾಗಿ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅಥವಾ ಕಾಂಡಗಳು ಚೆನ್ನಾಗಿ ಸದೃಢವಾಗಲು ಬಳಸಲಾಗುವುದು. ಇದರ ಜೊತೆಗೆ ಹಲವಾರು ಬಗೆಯ ರಸಗೊಬ್ಬರಗಳು ಇವೆ.

ನೀವು ರಸಗೊಬ್ಬರ ಚೀಲದ ಮೇಲೆ 10-26-26 ಈ ತರಹದ ಅಂಕೆಗಳನ್ನು ನೋಡಿರುತ್ತೀರಿ. ಇದರ ಅರ್ಥ ಸಾರಜನಕ 10%, ರಂಜಕ-26% ಮತ್ತು ಪೊಟ್ಯಾಷಿಯಂ -26 % ಈ ರಸಗೊಬ್ಬರವು ಈ ತರಹವಾಗಿ ಮುಂತಾದ ರಸಗೊಬ್ಬರದ ಮಿಶ್ರಣವನ್ನು ಹೊಂದಿರುತ್ತದೆ. ಈ ರಸಗೊಬ್ಬರವನ್ನು ಸಾಮಾನ್ಯವಾಗಿ ಕಬ್ಬಿನ ಬೆಳೆಗೆ ಬಳಸಲಾಗುವುದು.

20-20-20 – ಇದರಲ್ಲಿ NPK ಅಂಶವು ಸಮವಾಗಿದ್ದು ಇದನ್ನು ಹೆಚ್ಚಾಗಿ ಕಡಿಮೆ ಅವಧಿಯ ಬೆಳೆಗಳಾದ ಹೆಸರು, ಉದ್ದು ರಾಜ್ಯಾ ಕುಸುಬೆ ಬೆಳೆಗಳಿಗೆ ಬಳಸಲಾಗುವುದು.

17-17-17 ಇದರಲ್ಲಿ NPK ಅಂಶವು ಸಮವಾಗಿದ್ದು ಇದನ್ನು ಹೆಚ್ಚಾಗಿ ದೀರ್ಘಕಾಲರ ಬೆಳೆಗಳಾದ ಕಬ್ಬು, ಪಪ್ಪಾಯ, ತೊಗರಿ ಮತ್ತು ಬಾಳೆಯಲ್ಲಿ ಬಳಸಲಾಗುವುದು.

ರಸಗೊಬ್ಬರದ ಬಗ್ಗೆ ರೈತರಿಗೆ ಅತಿ ಮುಖ್ಯವಾಗಿ ತಿಳಿದಿರಬೇಕಾದ ಅಂಶಗಳು:

• ಸರಕಾರದ ಸಬ್ಸಿಡಿಯಲ್ಲಿ ರಸಗೊಬ್ಬರ ಪಡೆಯುವುದು ಸೂಕ್ತ.

ರಸಗೊಬ್ಬರಗಳ ಬಳಕೆ ಅತಿ ಹೆಚ್ಚು ಕೂಡ ಅತಿ ಹೆಚ್ಚು ಮತ್ತು ಅತಿ ಕಡಿಮೆ ಕೂಡ ಆಗಬಾರದು. ಯಾಕೆಂದರೆ ಅತಿ ಹೆಚ್ಚಿನ ರಸಗೊಬ್ಬರದ ಬಳಕೆ ದೀರ್ಘಕಾಲಕ್ಕೆ ಭೂಮಿಯನ್ನು ಬಂಜರು ಮಾಡಬಹುದು.

ಸಾವಯವ ಗೊಬ್ಬರವನ್ನು ಹೆಚ್ಚಿಗೆ ಉಪಯೋಗಿಸಲು ಪ್ರಯತ್ನ ಮಾಡಿ.

ಯಾವುದೇ ಗೊಬ್ಬರ ಹಾಕುವ ಮೊದಲು, ಹೊಲದಲ್ಲಿರುವ ಕಳೆ ತೆಗೆಯಬೇಕು.

ಹೊಲಕ್ಕೆ ನೀರುಣಿಸಿದ ನಂತರ ಅಥವಾ ಮಳೆ ಬಂದ ನಂತರ ರಸಗೊಬ್ಬರ ಬಳಸಿದರೆ ಉತ್ತಮ.

ಮಾಹಿತಿ ಸಾರ ವಾಟ್ಸಾಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9

Leave a Reply

Your email address will not be published. Required fields are marked *