
2023-24 ರ ಮಾರುಕಟ್ಟೆ ಋತುವಾಗಿ ಒಟ್ಟು ಹಿಂಗಾರು ಹಂಗಾಮಿನ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (Minimum Support Price) ಹೆಚ್ಚಿಸಿ , ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಮಂಗಳವಾರ ದೃಡೀಕರಣ ನೀಡಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕನಿಷ್ಠ ಬೆಂಬಲ ಬೆಲೆ ಎಂದರೆ ಕೆಲವೋಮ್ಮೆ ಮಾರುಕಟ್ಟೆಯಲ್ಲಿ ಬೆಲೆ ತೀವ್ರ ಕುಸಿತ ಉಂಟಾದಾಗ ರೈತರಿಗೆ ಸಹಾಯವಗಲಿ ಎಂದು ಕೇಂದ್ರ ಸರ್ಕಾರ ‘ಕನಿಷ್ಠ ಬೆಂಬಲ ಬೆಲೆ’ ಯನ್ನು ಜಾರಿಗೆ ತಂದಿತು. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಅನುಗುಣವಾಗಿ ಕೆಲವು ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ.
ಕೃಷಿ ಉತ್ಪಾದನೆ ಹೆಚ್ಚಾಗಿ ಬೆಲೆಗಳು ತೀವ್ರ ಇಳಿಕೆಯಾಗುತ್ತದೆ. ಇದರಿಂದ ರೈತ ಮತ್ತಷ್ಟು ಕಷ್ಟಕ್ಕೆ ಸಿಲುಕುತ್ತಾನೆ. ಹಾಗಾಗಿ ಕೇಂದ್ರ ಸರ್ಕಾರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ. ಇದರಿಂದ ಬೆಲೆ ಕುಸಿತದ ವಿರುದ್ಧ ರೈತರನ್ನು ರಕ್ಷಿಸಬಹುದಾಗಿದೆ. ಇದರಿಂದ ರೈತನಿಗೆ ಆಗುವ ನಷ್ಟವನ್ನು ತಪ್ಪಿಸಬಹುದು ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ.
ಈ ಬೆಲೆಯನ್ನು ಸರಕಾರವೆ ನಿಗದಿಪಡಿಸುತ್ತದೆ. ಮತ್ತು
ಸರಿಯಾದ ಬೆಲೆಗೆ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಮಸ್ಯ ಕೂಡ ಇರುವುದಿಲ್ಲ . ಅಲ್ಲದೆ ಸರ್ಕಾರವು ಸಾರ್ವಜನಿಕ ವಿತರಣೆಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.ರೈತರಿಗೆ ಕನಿಷ್ಠ ಬೆಂಬಲ ಬೆಲೆಗಳು ಸುರಕ್ಷಾ ಕವಚವಿದ್ದಂತೆ . ರೈತರ ಬೆಳೆಗಳಿಗೆ ಕನಿಷ್ಠ ಬೆಲೆಗಳ ಖಾತರಿ ನೀಡುತ್ತದೆ ಈ ಬೆಂಬಲ ಬೆಲೆ. ಬಂಪರ್ ಬೆಳೆ ಬಂದಾಗ ಇಳುವರಿ ಹೆಚ್ಚಿ, ಧಾನ್ಯಗಳ ಉತ್ಪಾದನೆ ಪ್ರಮಾಣ ಹೆಚ್ಚಾದಾಗ ದಿಢೀರ್ ಬೆಲೆ ಕುಸಿತವಾಗುವುದು ಸಾಮಾನ್ಯ . ಇದರಿಂದ ರೈತರಿಗೆ ನಷ್ಟವಾಗದಿರಲಿ ಎಂದೇ ಕನಿಷ್ಠ ಬೆಂಬಲ ಬೆಲೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಬೆಳೆಗಳ ಬೆಲೆಯಲ್ಲಿ ಭಾರೀ ಇಳಿಕೆಯಾದರೆ, ಸರಕಾರವೇ ಬೆಂಬಲ ಬೆಲೆಗೆ ಅನುಗುಣವಾಗಿ ಉತ್ಪನ್ನಗಳನ್ನು ಖರೀದಿ ಮಾಡಿ ಸಂಗ್ರಹಿಸುತ್ತದೆ. ವರದಿಗಳ ಪ್ರಕಾರ ಪ್ರತಿವರ್ಷ ದೇಶದಲ್ಲಿ ಉತ್ಪಾದನೆಯಾಗುವ ಶೇ. 30ರಷ್ಟು ಗೋಧಿ ಮತ್ತು ಭತ್ತವನ್ನು ಸರಕಾರವೇ ಖರೀದಿ ಮಾಡುತ್ತದೆ.
ಸದ್ಯಕ್ಕೆ ಒಟ್ಟು 23 ಬೆಳೆಗಳಿಗೆ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ . ಅವುಗಳು
7 ಸಿರಿಧಾನ್ಯಗಳು: ಭತ್ತ, ಗೋಧಿ, ಮೆಕ್ಕೆಜೋಳ, ಜೋಳ, ಸಜ್ಜೆ, ಬಾರ್ಲಿ ಮತ್ತು ರಾಗಿ
5 ಬೇಳೆಕಾಳುಗಳು: ಕಡಲೆ, ತೊಗರಿ, ಹೆಸರು, ಉದ್ದು, ಮಸೂರ್
7 ಎಣ್ಣೆಕಾಳುಗಳು: ನೆಲಗಡಲೆ, ರಾಪ್ಸೀಡ್-ಸಾಸಿವೆ, ಸೋಯಾಬೀನ್, ಸೀಸ್ಮಮ್, ಸೂರ್ಯಕಾಂತಿ, ಕುಸುಮೆ, ನೈಗರ್ ಸೀಡ್
4 ವಾಣಿಜ್ಯ ಬೆಳೆಗಳು: ಕೊಬ್ಬರಿ, ಕಬ್ಬು, ಹತ್ತಿ ಮತ್ತು ಕಚ್ಚಾ ಸೆಣಬು
1960 ರ ದಶಕದಲ್ಲಿ ಹಸಿರು ಕ್ರಾಂತಿ ಪ್ರಾರಂಭವಾದಾಗ, ಆಹಾರ ಕೊರತೆಯನ್ನು ತಡೆಗಟ್ಟಲು ಸರಕಾರವು ಆಹಾರ ಧಾನ್ಯಗಳ ಸಂಗ್ರಹಣೆಯನ್ನು ಆರಂಭಿಸಿತು. 1966-67ರಲ್ಲಿ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಗೋಧಿ ಖರೀದಿಯನ್ನು ಆರಂಭಿಸಿತು. ಹೀಗೆ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಪಡಿತರ ರೂಪದಲ್ಲಿ ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಹೀಗೆ ನಂತರ ವಿವಿಧ ಧಾನ್ಯಗಳಿಗು ಕನಿಷ್ಠ ಬೆಂಬಲ ಬೆಲೆಯನ್ನು ನೀಡಲು ಪ್ರಾರಂಭಿಸಿದರು.
ಸರ್ಕಾರವು ವರ್ಷಕ್ಕೆ ಎರಡು ಬಾರಿ ಸುಮಾರು 12 ಧ್ಯಾನಗಳಿಗೆ ಬೆಲೆಯನ್ನು ನಿಗದಿಪಡಿಸುತ್ತದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಅನುಗುಣವಾಗಿ (CACP) ಶಿಫಾರಸುಗಳ ಮೇಲೆ MSP ಅನ್ನು ನಿಗದಿಪಡಿಸಲಾಗಿದೆ , ಕೃಷಿ ಸಚಿವಾಲಯದ ಅಡಿಯಲ್ಲಿ ಬೆಲೆ ನೀತಿಗಾಗಿ ಒಂದು ಉನ್ನತ ಸಲಹಾ ಸಂಸ್ಥೆಯಾಗಿದೆ . CACP ಪ್ರತಿಯಾಗಿ ರಾಷ್ಟ್ರೀಯ ಅವಶ್ಯಕತೆಗಳು, ಲಭ್ಯವಿರುವ ಸಂಪನ್ಮೂಲಗಳು, ರೈತ ವೇತನಗಳು, ಜೀವನ ವೆಚ್ಚ ಮತ್ತು ಉತ್ಪನ್ನ ಸ್ಪರ್ಧಾತ್ಮಕತೆ ಸೇರಿದಂತೆ ವೈವಿಧ್ಯಮಯ ಅಂಶಗಳ ಪ್ರಕಾರ ಬೆಲೆಯನ್ನು ಶಿಫಾರಸು ಮಾಡುತ್ತದೆ. ಆದಾಗ್ಯೂ ಕೆಲವೊಮ್ಮೆ CACP ಶಿಫಾರಸು ಮಾಡುವ ಮತ್ತು ಸರ್ಕಾರವು ಶಿಫಾರಸು ಮಾಡುವ ಬೆಲೆಗಳ ನಡುವೆ ದೊಡ್ಡ ವ್ಯತ್ಯಾಸಗಳಿವೆ. ಬೆಲೆ ನೀತಿಯನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತದೆ.
MSP ಅನ್ನು ಲೆಕ್ಕಹಾಕಲು ಹಲವಾರು ರೀತಿಯಾದ ವಿಧಾನಗಳಿವೆ ಮತ್ತು 2018 ರ ಯೂನಿಯನ್ ಬಜೆಟ್ ಆಫ್ ಇಂಡಿಯಾದಂತಹ ನೀತಿ ದಾಖಲೆಗಳಲ್ಲಿ ಏನು ಉದ್ದೇಶಿಸಲಾಗಿದೆ ಎಂಬುದು ಯಾವಾಗಲೂ ಸ್ಪಷ್ಟವಾಗಿಲ್ಲ . ಕನಿಷ್ಠ ಬೆಂಬಲ ಬೆಲೆ (Minimum Support Price) ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇದರಿಂದಾಗಿ ಅತಿಯದ ಮಳೆಯ ಕಾರಣದಿಂದ ತತ್ತರಿಸಿರುವ ರೈತರಿಗೆ ಕೊಂಚ ಸಮಾಧಾನದ ಸಮಾಚಾರ ಲಭಿಸಿದೆ 2022-23 ರ ಮಾರುಕಟ್ಟೆ ಹಂಗಾಮಿನ ರಬಿ ಬೆಳೆಗಳಿಗೆ ಎಮ್ಎಸ್ಪಿಯ ಹೆಚ್ಚಳವು ಕೇಂದ್ರದ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ. ಇದರಲ್ಲಿ ಎಮ್ಎಸ್ಪಿಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸಲಾಗಿದೆ. ಇದು ರೈತರಿಗೆ ಸರಿಯದ ಬೆಲೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ನಿರೀಕ್ಷಿತ ಆದಾಯವು ಗೋಧಿ ಮತ್ತು ರಾಪ್ಸೀಡ್ ಮತ್ತು ಸಾಸಿವೆಗೆ (ತಲಾ 100%) ಅತಿ ಹೆಚ್ಚು ಎಂದು ಅಂದಾಜಿಸಲಾಗಿದೆ. ದ್ವಿದಳ ಧಾನ್ಯ (79%) ದಲ್ಲಿ; ಕಡಲೆ (74%); ಬಾರ್ಲಿ (60%); ಕುಸುಬೆ (50%) ನಂತರದ ಸ್ಥಾನದಲ್ಲಿವೆ
ರೈತರು ಎಣ್ಣೆಬೀಜಗಳು (ಸೊಯಾಬಿನ. ಶೇಂಗಾ) ದ್ವಿದಳ ಧಾನ್ಯಗಳು( ಕಡಲೆ , ಬರ್ಲಿ ) ಮತ್ತು ಒರಟು ಸಿರಿಧಾನ್ಯಗಳನ್ನು ದೊಡ್ಡ ಪ್ರದೇಶದಲ್ಲಿ ಬೆಳೆಯುವುದಗಿ , ಹೆಚ್ಚಿನ ಇಳುವರೆಗಾನಗಿ , ಹೊಸ ತಂತ್ರಜ್ಞಾನ ಅಲುವದಿಕೆ -ಪೂರೈಕೆ ನಡುವಿನ ಅಸಮತೋಲನವನ್ನು ಸರಿಪಡಿಸಲು ಕಳೆದ ಕೆಲವು ವರ್ಷಗಳಲ್ಲಿ ಎಮ್ಎಸ್ಪಿಗಳನ್ನು ಈ ಬೆಳೆಗಳ ಪರವಾಗಿ ಮರುಸಂಯೋಜಿಸಲು ಪ್ರಯತ್ನಿಸಲಾಗಿದೆ.
ಹೆಚ್ಚುವರಿಯಾಗಿ, ಕೇಂದ್ರ ಪ್ರಾಯೋಜಿತ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ -ಎಣ್ಣೆ ತಾಳೆ ಯೋಜನೆಯನ್ನು ಇತ್ತೀಚೆಗೆ ಸರ್ಕಾರ ಘೋಷಿಸಿದೆ. ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಒಟ್ಟು ರೂ .11,040 ಕೋಟಿಯೊಂದಿಗೆ, ಈ ಯೋಜನೆಯು ಕ್ಷೇತ್ರದ ವಿಸ್ತರಣೆ ಮತ್ತು ಉತ್ಪಾದಕತೆಗೆ ನೆರವು ನೀಡುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿಸುತ್ತದೆ.
ಮಾನವ ದುಡಿಮೆಯ ಕೂಲಿ, ಎತ್ತುಗಳ ಮತ್ತು ಯಂತ್ರದ ಕೆಲಸ, ಭೂಮಿ ಬಿತ್ತುವಿಕೆ , ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಮೊತ್ತ , ಉಪಕರಣಗಳು ಮತ್ತು ಕೃಷಿ ಕಿಟ ನಾಶಕಗಳು , ಬಡ್ಡಿ, ಪಂಪ್ ಸೆಟ್ ಗಳ ಉಪಕರನಕ್ಕೆ ಬೆಕಗುವ ಡೀಸೆಲ್/ವಿದ್ಯುತ್, ಇತ್ಯಾದಿ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಅಂದಾಜು ಮೊತ್ತವು ಇದರಲ್ಲಿ ಸೇರಿವೆ.
ಗೋಧಿ 2015 ರೂ. 110 ರೂ ಏರಿಕೆ 2125 ರೂ.
ಸಾಸಿವೆ 5050 ರೂ. 400 ರೂ ಏರಿಕೆ . 5450 ರೂ.
ಸೂರ್ಯಕಾಂತಿ 5441 ರೂ. 209 ರೂ ಏರಿಕೆ . 5650 ರೂ
ಚನ್ನಂಗಿ ಬೇಳೆ 5500 ರೂ. 500 ರೂ ಏರಿಕೆ. 6000 ರೂ..
ಕಡಲೆ 5230 ರೂ. 105 ರೂ ಏರಿಕೆ . 5335 ರೂ.
ಬಾರ್ಲಿ 1635 ರೂ. 100 ರೂ. ಏರಿಕೆ 1735 ರೂ
ಗೋಧಿ (Wheat) ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 110 ರೂ. ಹೆಚ್ಚಿಸಿ 2125 ರೂ ಗೆ ಎರಿಕೆ ಮಡಲಗಿದೆ . ಹಾಗೆಯೆ, ಸಾಸಿವೆ (Mustard) ಬೆಲೆಯನ್ನು 400 ರೂ. ಹೆಚ್ಚಿಸಿ 5450 ರೂ. ಗೆ, ಹಗೆಯೆ ಸೂರ್ಯಕಾಂತಿ (Sunflower) ಬೆಲೆಯನ್ನು 209 ರೂ. ಹೆಚ್ಚಿಸಿ 5650 ರೂ.ಗೆ,ಹಾಗೆಯೆ ಚನ್ನಂಗಿ ಬೇಳೆ (Lentil) ಬೆಲೆಯನ್ನು 500 ರು. ಹೆಚ್ಚಿಸಿ 6000 ರೂ.ಗೆ, ಹಗೆಯೆ ಕಡಲೆ (Gram) ಬೆಲೆಯನ್ನು 105 ರೂ ಹೆಚ್ಚಿಸಿ 5335 ರೂ.ಗೆ ಹಾಗೂ ಬಾರ್ಲಿ (Barley) ಬೆಲೆಯನ್ನು 100 ರೂ. ಹೆಚ್ಚಿಸಿ 1735 ರೂ.ಗೆ ನಿಗದಿಪಡಿಸಲಾಗಿದೆ.
ಒಂದು ಕ್ವಿಂಟಲ್ ಗೋದಿ ಬೆಳೆಯಲು 10೦೦ ರಕ್ಕು ಹೆಚ್ಚು ರೂ ಖರ್ಚಾಗುತ್ತದೆ. ಹಾಗೆಯೇ ಇತರ ಬೆಳೆಗಳ ಖರ್ಚನ್ನು ಅಂದರೆ ಉಳುಮೆ , ಬಿತ್ತನೆ , ಕಳೆ ಕೀಳುವುದು, ರಾಸಾಯನಿಕ ಸಿಂಪಡಿಸುವುದು, ರಸಗೊಬ್ಬರ ಚೆಲ್ಲುವುದು ಕಟಾವು ಮಾಡುವುದು. ಇವುಗಲನ್ನು ಗಮನದಲ್ಲಿ ಇರಿಸಿಕೊಂಡು ರೈತರಿಗೆ ನಷ್ಟ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಅನ್ಯ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ’, ಬೆಲೆ ಏರಿಕೆ ಹಣದುಬ್ಬರಕ್ಕೆ ಕಾರಣ ಆಗುವುದಿಲ್ಲ ಎಂದು ಸಂಪುಟ ಸಭೆ ಬಳಿಕ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವುದು ಎಂಎಸ್ಪಿ ( Minimum support price ) ಏರಿಕೆಯ ಉದ್ದೇಶವಾಗಿದೆ ಎನ್ನಲಾಗಿದೆ
ರಬಿ (MSP) 2023-24: ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ಖಾರಿಫ್ ಬೆಳೆಗಳ ಹೊಸ ಕನಿಷ್ಠ ಬೆಂಬಲ ಬೆಲೆ (Minimun support price) ಬಿಡುಗಡೆ ಮಾಡುವ ಮೂಲಕ ರೈತರಿಗೆ ದೊಡ್ಡ ಪರಿಹಾರವನ್ನು ಒದಗಿಸಿತ್ತು. ಇದೇ ಸರಣಿಯಲ್ಲಿ . ರಬಿ ಋತುವಿನ 6 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲ, ರಬಿ ಋತುವಿನ ಮುಖ್ಯ ಬೆಳೆಗಳಾದ ಗೋಧಿ, ಹುರುಳಿ, ಉದ್ದು, ಸಾಸಿವೆ ಮುಂತಾದವುಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.3 ರಿಂದ 9 ರಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ದಾರ ಮಡಲಗಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ನಿಗದಿಪಡಿಸಿದರು. ಹಾಗೆಯೇ ರೈತ ಮಿತ್ರ ರಿಗೆ ಇನ್ನೊಂದು ಮುಖ್ಯ ವಿಷಯ ಎಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ರಾಜ್ಯದ 50 ಲಕ್ಷಕ್ಕು ರೈತರಿಗೆ 1007.26 ಕೋಟಿ ರು. ಸೇರಲು ಪಟ್ಟಿದೆ. ದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆಗೆ ಚಾಲನೆ ನಿಡಿದರು
ವಿಧಾನಸೌಧದಲ್ಲಿ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್ ಮೀಟ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಲವು ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡ ಈ ಸಭೆಯಲ್ಲಿ ಹಾಜರಿದ್ದರು.ಮಾರ್ಚ್ 2019ರಿಂದ ಜುಲೈ 2022 ರವರೆಗೆ ರಾಜ್ಯದ 53. ಲಕ್ಷಕ್ಕು ಅಧಿಕ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಬರೋಬ್ಬರಿ 9968.57 ಕೋಟಿ ರು. ಆರ್ಥಿಕ ಸಹಾಯಧನ ಪಡೆದಿವೆ. ಮತ್ತು 2022-23ನೇ ಸಾಲಿನಲ್ಲಿ 1251.98 ಕೋಟಿ ರು. ಸಹಾಯಧನ ವರ್ಗಾವಣೆಯಾಗಿದೆ.ರಾಜ್ಯ ಸರ್ಕಾರವು ಕೇಂದ್ರದಿಂದ ಅನುಮೋದಿಸಲ್ಪಟ್ಟರೈತ ಕುಟುಂಬಗಳಿಗೆ 2019ರಿಂದ ಇಲ್ಲಿಯವರೆಗೆ 4821.37 ಕೋಟಿ ರು. ಆರ್ಥಿಕ ಸಹಾಯಧನ ನೀಡಿದೆ. 2022-23ನೇ ಸಾಲಿನಲ್ಲಿ 956.71 ಕೋಟಿ ರು. ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲು ಮಂಜೂರಾತಿ ನೀಡಲಾಗಿದೆ.