
ಎಲ್ಲಾ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವ ಹಾಗೆ, ಯಾವುದೇ ಕೃಷಿಗೆ ಸಂಬಂಧಿಸಿದ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಹೊಲದ ಉತಾರವು ಬೇಕೇ ಬೇಕು. ಹಿಂದೆ ಇದೇ ಉತಾರ ತೆಗೆಯಬೇಕೆಂದರೆ ನಾವು ಸರ್ಕಾರಿ ಕಚೇರಿಗೆ ಹೋಗಿ ಗಂಟೆಗಟ್ಟಲು ಕುಳಿತು ತೆಗೆಸಬೇಕಾಗಿತ್ತು. ಆದರೆ ಈಗ ನೀವು ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲಿನಲ್ಲಿ ನಿಮ್ಮ ಹೊಲದ ಉತಾರವನ್ನು ಪಡೆಯಬಹುದು.
72 ವರ್ಷದ ಹಿಂದೆ ಬಂಗಾರದ ಬೆಲೆ ಎಷ್ಟು ಇತ್ತು ನಿಮಗೆ ಗೊತ್ತಾ https://mahitisara.com/index.php/2023/01/30/gold-price-in-1960s-bill-of-customer-goes-viral-on-internet/
ಹೌದು ಮಿತ್ರರೇ , ನೀವು ಈಗ ನಿಮ್ಮ ಮೊಬೈಲಿನಲ್ಲಿ ಉಚಿತವಾಗಿ ನಿಮ್ಮ ಹೊಲದ ಪಹಣಿ ಅಥವಾ ಉತಾರವನ್ನು ತೆಗೆದುಕೊಳ್ಳಬಹುದು. ಹೇಗೆ ಎಂದು ತಿಳಿಯೋಣ ಬನ್ನಿ
ಈ ಪಹಣಿಯಲ್ಲಿ ಅಥವಾ ಉತಾರದಲ್ಲಿ ಹೊಲದ ಸರ್ವೆ ನಂಬರ್, ವಿಸ್ತೀರ್ಣ ಮತ್ತು ಎಷ್ಟು ಜನ ವಾರಸ್ದಾರ್ ಇದ್ದಾರೆ ಎಂಬ ಮಾಹಿತಿಯನ್ನು ಪಡೆಯಬಹುದು.
ಮೊಬೈಲ್ ನಲ್ಲಿ ಉತಾರವನ್ನು ತೆಗೆಯುವುದು ಹೇಗೆ?
ಹಂತ 1, ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್‌ಗೆ ನೀವು ಭೇಟಿ ನೀಡಬೇಕು 👇https://landrecords.karnataka.gov.in/Service2/
ಹಂತ 2 ನಂತರ current year ಮೇಲೆ ಕ್ಲಿಕ್ ಮಾಡಿ

ಹಂತ 3 ನಂತರ ಅಲ್ಲಿ ಕೇಳಿದಂತ ಎಲ್ಲ ಮಾಹಿತಿ ಅಂದರೆ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮವನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಹಾಕಿ “Go” ಮೇಲೆ ಕ್ಲಿಕ್ ಮಾಡಿ
ಹಂತ 4 ನಂತರ ಸರ್ ನಾಕ್,ಹಿಸ್ಸಾ ನಂಬರ್,ಅವಧಿ ಮತ್ತು ವರ್ಷ ಆಯ್ಕೆ ಮಾಡಿ, “ವಿವರಗಳನ್ನು ಕರೆತರು” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಉತಾರ “ವಿಕ್ಷಣೆ”ಗೆ ಲಭ್ಯವಾಗುತ್ತದೆ.
ಈ ರೀತಿ ನೀವು ಯಾವುದೇ ಕಷ್ಟವಿಲ್ಲದೆ, ಖರ್ಚಿಲ್ಲದೆ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲಿನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಪಹಣಿಯನ್ನು ತೆಗೆಯಬಹುದು.
ಮಾಹಿತಿಸಾರ ವಾಟ್ಸಪ್ ಗ್ರೂಪ್ ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9