
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿ ಸಾರಾದ ಅಧಿಕೃತ ಜಾತಾಣದ ವತಿಯಿಂದ ನಮಸ್ಕಾರಗಳು, ನಿಮಗೆಲ್ಲರಿಗೂ ಗೊತ್ತಿರುವಂತೆ ಆಧಾರ್ ಕಾರ್ಡ್ ಎಲ್ಲಾ ಇಲಾಖೆಗಳಲ್ಲೂ ತುಂಬಾ ಬೇಕಾದಂತಹ ದಾಖಲೆಯಾಗಿದೆ. ಈ ಆಧಾರ್ ಕಾರ್ಡನ್ನು ಗುರುತಿಸಲು UADAI 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಒಂದನ್ನು ನೀಡಿರುತ್ತಾರೆ.
ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-schemes/
ಈ ಆಧಾರ್ ಕಾರ್ಡನ್ನು ಅಧಿಕೃತ ಆಧಾರ್ ನೋಂದಣಿ ಕೇಂದ್ರ ಅಥವಾ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಹೊಸದಾಗಿ ಆಧಾರ್ ಕಾರ್ಡನ್ನು ಮಾಡಿಸಲು ಹೋಗಬೇಕಾಗುತ್ತದೆ, ಅದರ ಬದಲು ಈಗ ಸರಳವಾಗಿ ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ಈ ಕೆಳಗಿನ ಲೇಖನಿಯಲ್ಲಿ ತಿಳಿದುಕೊಳ್ಳಿ.
ಸುಲಭವಾಗಿ ಆಧಾರ್ ಕಾರ್ಡ್ ಅನ್ನೋ ಡೌನ್ಲೋಡ್ ಮಾಡುವುದು ಹೇಗೆ???
ಹಂತ 1 :- ಮೊದಲಿಗೆ UIDAI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದಕ್ಕೆ ಈ ಕೆಳಗಿನ ಲಿಂಕ್ ಅನ್ನು ಒತ್ತಿ.
https://uidai.gov.in/
ಹಂತ 2:- ನಿಮಗೆ ಬೇಕಾದ ಅಥವ ಸೂಕ್ತವಾದ ಭಾಷೆಯನ್ನು ಆಯ್ದುಕೊಳ್ಳಿ.
ಹಂತ 3 :- Get Adhaar ಎಂದು ಬರುತ್ತದೆ ಅಲ್ಲಿ ಕ್ಲಿಕ್ ಮಾಡಿ

ಹಂತ 4 :- ಅಲ್ಲಿ ನಿಮ್ಮ ಆಧಾರ್ ಕಾರ್ಡ್ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 5:- ನಂತರ ನಿಮಗೆ ಒಂದು ಸಂದೇಶ ಅಥವಾ ಮೆಸೇಜ್ ನಿಮ್ಮ ರಿಜಿಸ್ಟರ್ ಆದ ಮೊಬೈಲ್ ನಂಬರ್ ಗೆ ಓಟಿಪಿ OTP ಬರುತ್ತದೆ.
ಹಂತ 6 :- ನಂತರ ನೀವು ಅಲ್ಲಿ ಡೌನ್ಲೋಡ್ ಆಧಾರ್ ಎಂದು ಕಾಣುತ್ತದೆ ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು..
ಗಮನಿಸಿ :- ನೀವು ಆಧಾರ್ ಕಾರ್ಡ್ ಗೆ ಹೊಸ ಅರ್ಜಿದಾರರಾಗಿದ್ದರೆ ನಿಮಗೆ ಆಧಾರ್ ಕಾರ್ಡಿನ ನಂಬರ್ ಬದಲು ವೆರಿಚುಯಲ್ ಐಡಿಯನ್ನು ನೀಡುತ್ತಾರೆ ಆ ವರ್ಚುಯಲ್ ಐಡಿ 16 ಅಂಕೆಗಳನ್ನು ಕೂಡಿರುತ್ತದೆ, ನೀವು ಅಲ್ಲಿ ಆಧಾರ್ ಸಂಖ್ಯೆ ನಮೂದಿಸುವ ಜಾಗದ ಬದಲು, ಅದರ ಕೆಳಗೆ ವರ್ಚುಯಲ್ ಐಡಿ ನಮೂದಿಸುವ ಜಾಗವನ್ನು ನೀಡುತ್ತಾರೆ, ಆ ಜಾಗದಲ್ಲಿ ನಿಮಗೆ ಕೊಟ್ಟಿರುವಂತಹ ಆಧಾರ್ ವರ್ಚುಯಲ್ 16 ಅಂಕಿಯ ಐಡಿಯನ್ನು ನಮೂದಿಸಿ ನಂತರ ನಿಮಗೆ ಒಂದು ಓಟಿಪಿ ಬರುತ್ತದೆ, ನಿಮ್ಮ ಆಧಾರ್ ಕಾರ್ಡ್ ಯಾವ ಸ್ಥಿತಿಯಲ್ಲಿದೆ ಎಂದು ನೀವು ತಿಳಿದುಕೊಳ್ಳಬಹುದು ಮತ್ತು ನಿಮ್ಮ ಆಧಾರ್ ಕಾರ್ಡ್ ಸಿದ್ಧವಾಗಿದ್ದರೆ ನಿಮಗೆ ಡೌನ್ಲೋಡ್ ಆಧಾರ್ ಎಂದು ಕಾಣುತ್ತದೆ ಅಲ್ಲಿ ನೀವು ಕ್ಲಿಕ್ ಮಾಡಿದರೆ ನಿಮಗೆ ಸರಳವಾಗಿ ಆಧಾರ್ ಕಾರ್ಡ್ ಯಾವ ಕಚೇರಿ ಅಥವಾ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗುವ ಬದಲು ನಿಮ್ಮ ಮೊಬೈಲ್ ಫೋನ್ನಲ್ಲಿ ನೀವು ತಕ್ಷಣ ಆಧಾರ್ ಕಾರ್ಡನ್ನು ಪಡೆಯಬಹುದು.
[…] ಇದನ್ನೂ ಓದಿ :- ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ?? https://mahitisara.com/how-to-download-adhar-card-in-mobile/news/ […]