
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಸರಕಾರ ಈಗಾಗಲೇ ಬೆಳೆ ಹಾನಿ ಪರಿಹಾರವನ್ನು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ರೈತರು ಈಗ ಹಣ ತಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದು. ರೈತ ಯಾವುದೇ ಖರ್ಚು ಇಲ್ಲದೆ ಎಲ್ಲಿಗೂ ಹೋಗದೆ ತನ್ನ ಮನೆಯಲ್ಲಿ ಕುಳಿತು ಈ ಕೆಲಸ ಮಾಡಬಹುದು. ಇದಕ್ಕಾಗಿ ರೈತರು ಎಲ್ಲಿಯೂ ಹೋಗಬೇಕಿಲ್ಲ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಬೆಳೆ ಹಾನಿ ಪರಿಹಾರವನ್ನು ಹೇಗೆ ಚೆಕ್ ಮಾಡಬೇಕು?
ಹಂತ 1 ರಾಜ್ಯ ಸರ್ಕಾರ ನಿರ್ಮಿಸಿದ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು 👇https://landrecords.karnataka.gov.in/PariharaPayment/
ಹಂತ 2 ಲಿಂಕ್ ಒತ್ತಿದ ಮೇಲೆ ನಿಮಗೆ ಎರಡು ಆಯ್ಕೆಗಳು ಕಾಣುತ್ತವೆ. ಪರಿಹಾರ ಐಡಿ ಮತ್ತು ಆಧಾರ್ ಮೂಲಕ. ಸಾಮಾನ್ಯವಾಗಿ ರೈತರಿಗೆ ಪರಿಹಾರ ಐಡಿ ತಿಳಿದಿರುವುದಿಲ್ಲ ಹಾಗಾಗಿ ನೀವು ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ಹಂತ 3 ನಂತರ ನೀವು ನಿಮ್ಮ ಬೆಳೆ ಯಾವುದರಿಂದ ಹಾಳಾಗಿದೆ ಎಂಬ ಕಾರಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಬಹುತೇಕ ರೈತರ ಬೆಳೆ ಮಳೆಯಿಂದಾಗಿ ಹಾಳಾಗಿರುತ್ತದೆ. ಹಾಗಾಗಿ ರೈತರು Flood ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ರೈತರು ಯಾವ ವರ್ಷದ ಪರಿಹಾರ ಸ್ಟೇಟಸ್ ಚೆಕ್ ಮಾಡಬೇಕು ಎಂಬ ಆಯ್ಕೆಗಳಿರುತ್ತವೆ. ಅಲ್ಲಿಯೂ ರೈತರು ಯಾವ ವರ್ಷದ ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನುಆಯ್ಕೆ ಮಾಡಿಕೊಳ್ಳಬೇಕು.
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ 13ನೇ ಕಂತಿನ ಹಣ ಸಿಗುತ್ತದೆ ಇಲ್ಲ ಅಂದರೆ ಇಲ್ಲ https://mahitisara.com/index.php/2023/01/31/pm-kisan-beneficiary-list-out-check-out-for-13thinstallment/
ಕಳೆದ ವರ್ಷದ ಸ್ಟೇಟಸ್ ಚೆಕ್ ಮಾಡಬೇಕಾಗಿರುವುದರಿಂದ ನೀವು 2022-23 ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ನಿಮಗೆ ಎರಡು ಆಯ್ಕೆ ಕಾಣುತ್ತವೆ. ಅಲ್ಲಿ ರೈತರು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಕ್ಯಾಪ್ಚ್ಯಾ ಕೋಡ್ ಹಾಕಿದ ನಂತರ ವಿವರಗಳನ್ನುಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ರಿಪೋರ್ಟ್ ತೆರೆದುಕೊಳ್ಳುತ್ತದೆ.
ಅದರಲ್ಲಿ ನಿಮ್ಮ ಜಿಲ್ಲೆಯ ವಿವರ ಇರುತ್ತದೆ, ಅದರ ಪಕ್ಕದಲ್ಲಿ ಯಾವ ಬ್ಯಾಂಕಿಗೆ ಎಷ್ಟು ಹಣ ಜಮವಾಗಿದೆ ಎಂಬ ವಿವರ ಕೂಡ ಇರುತ್ತದೆ.
ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ನಂಬರ್ ಅಲ್ಲಿ ಕಾಣುತ್ತದೆ . ನಿಮ್ಮ ಬೆಳೆ ಹಾನಿ ಪರಿಹಾರ ಸಕ್ಸೆಸ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯೊಂದಿಗೆ ಫ್ಲಡ್ ಹಾಗೂ ಖಾರಿಫ್ ಮತ್ತು ವರ್ಷದ ಮಾಹಿತಿ ಇರುತ್ತೆದ. ಅದರ ಕೆಳಗಡೆ ನಿಮ್ಮಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆ ನಂಬರ್ ಕಾಣಿಸುತ್ತದೆ. ಅದರ ಪಕ್ಕದಲ್ಲಿ ಯಾವ ಬೆಳೆಗೆ ಪರಿಹಾರ ನೀಡಲಾಗಿದೆ ಹಾಗೂ ಎಷ್ಚು ಎಕರೆಗೆ ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ಇರುತ್ತದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9