Spread the love

ರೈತರೇ, ನಿಮಗೆ ತಿಳಿದಿರಬಹುದು ಸಸ್ಯದ ದೇಹದಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಭಾಗ ಇಂಗಾಲ ,ಜಲಜನಕ ಮತ್ತು ಆಮ್ಲಜನಕ ಗಳಿಂದ ಕೂಡಿರುತ್ತದೆ.ಇವುಗಳನ್ನು ಸಸ್ಯವು ಪರಿಸರದಿಂದಲೇ ಪಡೆಯುತ್ತದೆ.ಆದರೆ ಇದರ ಮುಖ್ಯ ಪೋಷಕಾಂಶಗಳಾದ ಸಾರಜನಕ,ರಂಜಕ ಮತ್ತು ಪೊಟ್ಯಾಶ್ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಇವುಗಳನ್ನುಇತರೆ ಮೂಲಗಳಿಂದ ಪೂರೈಸಬೇಕಾಗುತ್ತದೆ.ಹಾಗೂ ಉಳಿದ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತವೆ.

ಸಾರಜನಕದ ಮುಖ್ಯ ಕಾರ್ಯ ಮತ್ತು ಕೊರತೆಯ ಲಕ್ಷಣಗಳು.

ಸಾರಜನಕವು ಸಸ್ಯದ ಬೆಳವಣಿಗೆಯಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಕವಲು ಒಡೆಯುವಿಕೆ, ಹೂವಾಡುವುದು, ಬೆಳವಣಿಗೆ ಹಾಗು ಅಭಿವೃದ್ಧಿಯಲ್ಲಿ ಸಾರಜನಕದ ಪಾತ್ರ ತುಂಬಾ ಮುಖ್ಯವಾದದ್ದು. ಇದರ ಕೊರತೆ ಕಂಡು ಬಂದಲ್ಲಿ ಮೊದಲು ಎಲೆಗಳು ಹಳದಿಯಾಗುತ್ತವೆ. ಕೊರತೆಯು ತೀವ್ರವಾದಲ್ಲಿ ಎಲೆಗಳು ಏಕರೂಪವಾಗಿ ಹಳದಿಯಾಗಿ ಒಣಗುತ್ತವೆ. ಇದರ ಪರಿಣಾಮ ನೇರವಾಗಿ ಹೂ ಅನ್ನು ಕಾಳು ಹಾಗೂ ತೆನೆಯ ಮೇಲೆ ಬೀರುತ್ತದೆ. ಯೂರಿಯ ಗೊಬ್ಬರವು ಪ್ರಮುಖ ಸಾರಜನಕವನ್ನು ಒದಗಿಸುವ ಗೊಬ್ಬರವಾಗಿದೆ. ಅತಿ ಹೆಚ್ಚು ಯೂರಿಯಾ ಬಳಸಿದರು ಕೂಡ ಭೂಮಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಅದಕ್ಕಾಗಿ ಭಾರತೀಯ ರೈತರ ಗೊಬ್ಬರ ಸಹಕಾರಿ ಸಂಸ್ಥೆ(IFFCO) ದ್ರವರೂಪದ ಯೂರಿಯಾ ಅಂದರೆ ನ್ಯಾನೋ ಯೂರಿಯಾ ಎಂಬ ಗೊಬ್ಬರವನ್ನು ಅಭಿವೃದ್ಧಿಪಡಿಸಿದೆ.

ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಕೆಳಗಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಹಣ ಜಮಾ ಆಗುತ್ತದೆ, ಕೂಡಲೇ ಚೆಕ್ ಮಾಡಿಕೊಳ್ಳಿ 👇👇https://mahitisara.com/pm-kisan-13th-installement-benificiery-list-have-been-released/pmkisan/

ನ್ಯಾನೋ ಯೂರಿಯಾ- ಸಂಕ್ಷಿಪ್ತ ಪರಿಚಯ,

ನ್ಯಾನೋ ಅಂದರೆಅತ್ಯಂತ ಚಿಕ್ಕದು,ಒಂದು ವಸ್ತುವಿನ ಗಾತ್ರ ಚಿಕ್ಕದಾದಷ್ಟು ಅದರ ಕ್ರಿಯಾಶೀಲತೆ ಮತ್ತು ಪರಿಣಾಮ ಹೆಚ್ಚಾಗುತ್ತದೆ ಹಾಗೂ ಅನೇಕ ವಿಶೇಷ ಗುಣಗಳನ್ನು ಪಡೆಯುತ್ತದೆ.ಸಾಮಾನ್ಯ ಯೂರಿಯಾದ ಹರಳುಗಳ ಗಾತ್ರವು 2.82 ರಿಂದ 3.06 ಮಿ. ಮೀ ಆಗಿರುತ್ತದೆ. ಇದನ್ನುಮಣ್ಣಿನ ಮೂಲಕಕೊಟ್ಟಾಗಶೇಕಡ 30 ರಿಂದ 50ರಷ್ಟು ಸಾರ್ವಜನಿಕಆವಿಯಾಗಿ ನಷ್ಟವಾಗುತ್ತದೆ.ಹಾಗೂಇದರ ತಯಾರಿಕೆ ಸಾಗಾಣಿಕೆ ಮತ್ತು ಬಳಕೆಗೆ ತುಂಬಾ ಮಾನವ ಸಂಪನ್ಮೂಲ ಬೇಕಾಗುತ್ತದೆ.

ನ್ಯಾನೋ ಯೂರಿಯಾದ ಗುಣಗಳು ಹಾಗೂ ಲಾಭಗಳು:-

ನ್ಯಾನೋ ಯೂರಿಯಾದ ದ್ರಾವಣವು ಶೇ.4ರಷ್ಟು ಸಾರಜನಕವನ್ನು ಹೊಂದಿರುತ್ತದೆ. ಬೆಳೆಯು ನ್ಯಾನೋ ಯೂರಿಯಾವನ್ನು ಹೀರಿಕೊಳ್ಳುವ ಪ್ರಮಾಣ ಶೇ. 80ಕ್ಕಿಂತ ಹೆಚ್ಚಿದೆ. ದ್ರವರೂಪದ ನ್ಯಾನೋ ಯೂರಿಯ 500 ಮಿಲಿ ಮೀಟರ್ ಬಾಟಲಿಯಲ್ಲಿ ದೊರೆಯುವುದು. ಇದು ಒಂದು ಚೀಲ ಸಾಮಾನ್ಯ ಯೂರಿಯಾಗೆ ಸಮವಾಗುತ್ತದೆ. ನ್ಯಾನೋ ಯೂರಿಯಾದ ಕಣಗಳ ಸರಾಸರಿ ಗಾತ್ರವು 20 ರಿಂದ 50 ನ್ಯಾನೋಮೀಟರ್ ಆಗಿರುತ್ತದೆ.

ನ್ಯಾನೋ ಯೂರಿಯಾ ಬಳಸುವುದರಿಂದ ರೈತರು ಶೇ. 50ರಷ್ಟು ಯೂರಿಯಾ ಉಳಿತಾಯ ಮಾಡಬಹುದು. ಇದು ಸಿಂಪಡಿಸಿದ ನಂತರ ಕೆಲವೇ ಕ್ಷಣಗಳಲ್ಲಿ ಕ್ರಿಯಾಶೀಲತೆಗೆ ಒಳಗಾಗುತ್ತದೆ. ಏಕೆಂದರೆ ಇದು ನೇರವಾಗಿ ಪತ್ರ ರಂಧ್ರಗಳ ಮೂಲಕ ಸಸ್ಯದ ದೇಹವನ್ನು ಪ್ರವೇಶಿಸುತ್ತದೆ. ಇದನ್ನು ಬಳಸಲು ಹೆಚ್ಚಿನ ಮಾನವ ಸಂಪನ್ಮೂಲದ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಇದು ತುಂಬಾ ಸಹಕಾರಿಯಾಗುವುದು. ನ್ಯಾನೋ ಯೂರಿಯಾದ ತಯಾರಿಕೆ ಸಾಗಾಣಿಕೆ ಹಾಗೂ ಬಳಕೆ ತುಂಬಾ ಸುಲಭವಾಗಿರುತ್ತದೆ. ನ್ಯಾನೋ ಯೂರಿಯಾ ಬೆಳೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹಾಗೂ ರೈತರು ಅಧಿಕ ಇಳುವರಿಯನ್ನು ಪಡೆಯಬಹುದು.ಹಾಗೂ ಸಾಮಾನ್ಯ ಇರಿಯ ಬಳಸುವುದರಿಂದ ಭೂಮಿ ಮೇಲೆ ಆಗುವ ಕೆಟ್ಟ ಪರಿಣಾಮವನ್ನು ತಡೆಹಿಡಿಯಬಹುದು.

ನ್ಯಾನೋ ಯೂರಿಯಾ ಬಳಸುವ ವಿಧಾನ:-

ಮೇಲೆ ಹೇಳಿದಂತೆ ಮಾರುಕಟ್ಟೆಯಲ್ಲಿ ನ್ಯಾನೋ ಯೂರಿಯಾ ದ್ರವರೂಪದಲ್ಲಿ ದೊರೆಯುತ್ತದೆ.ಆದರಿಂದ ಬೆಳೆಗೆ ಇದನ್ನು ಸಿಂಪಡಣೆ ಮಾಡಬೇಕು. ಒಂದು ಲೀಟರ್ ನೀರಿಗೆ 3 ರಿಂದ 4 ಮಿ. ಲೀ ನ್ಯಾನೋ ಯೂರಿಯ ಬೆರೆಸಬೇಕು.ಇದನ್ನುಬಿತ್ತನೆ ಮಾಡಿದ 30 ದಿನಗಳ ನಂತರ ಮೊದಲನೇ ಸಿಂಪಡಿಯನ್ನು ಮಾಡಬೇಕು, ಹಾಗೂ ಎರಡನೇ ಸಿಂಪರಣೆಯನ್ನು ಹೂವಡುವ ಮೊದಲು ಮಾಡಬೇಕು. ಇದರಿಂದ ರೈತರು ಅಧಿಕ ಇರುವರಿಯನ್ನು ನಿರೀಕ್ಷಿಸಬಹುದು. ನ್ಯಾನೋ ಯೂರಿಯಾ ಬಳಸುವುದರಿಂದ ರೈತರು ಬೆಳವಣಿಗೆ ವೆಚ್ಚವನ್ನು ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *