
ಓದುಗರರಿಗೆ ಮಾಹಿತಿಸಾರ ವೆಬ್ಸೈಟ್ ಇಂದ ನಮಸ್ಕಾರಗಳು , ಪ್ರಿಯ ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಯ ಪ್ರಕಾರ, ಯಾವುದೇ ಜಾತಿ ಭೇದ ಭಾವ ಇಲ್ಲದೆ ಪ್ರತಿ ಮನೆಗೂ ಎರಡು ನೂರು ಯೂನಿಟ್ ಉಚಿತ ಕರೆಂಟ್ ನೀಡುವುದಾಗಿ ಕಾಂಗ್ರೆಸ್ ಸರಕಾರ, ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಶುರುವಾಗಲಿದ್ದು, ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಕರೆಂಟ್ ಬಿಲ್ ಮುಖಾಂತರ ಗೃಹ ಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡುವುದು ಮುಖ್ಯವಾಗಿದೆ.
ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ರಿಜಿಸ್ಟರ್ ಹೇಗೆ ಮಾಡಬೇಕು?
ಮೊದಲಿಗೆ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.https://sevasindhugs.karnataka.gov.in/gruhajyothi/login.do
ನಂತರ ಸೇವಾ ಸಿಂಧು ಪೋರ್ಟಲ್ ಗೆ ನೀವು ರಿಜಿಸ್ಟರ್ ಮಾಡಬೇಕು
ನಿಮ್ಮ ಆಧಾರ್ ಸಂಖ್ಯೆ, ಮತ್ತು ವಿದ್ಯುತ್ ಸಂಸ್ಥೆಯ ಹೆಸರನ್ನು ಆಯ್ಕೆಮಾಡಿಕೊಂಡು OTP ಮುಖಾಂತರ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು.
ಗ್ರಹ ಜ್ಯೋತಿ ರಿಜಿಸ್ಟ್ರೇಷನ್ ಅನ್ನು ಮನೆಯ ಸದಸ್ಯರ ಯಾವುದೇ ಹೆಸರಿನಲ್ಲಿ ಕೂಡ ಮಾಡಿಸಬಹುದು, ನಿಮಗೆ ಕೇವಲ ಅವರ ಆಧಾರ್ ಕಾರ್ಡ್ ನಂಬರ್ ಮತ್ತು, ಅವರ ಮೊಬೈಲ್ ನಂಬರ್ ಇದ್ದರೆ ಸಾಕು, ನೀವು ಯೋಜನೆಗೆ ಅರ್ಜಿ ಸಲ್ಲಿಸಬಹುದು.