
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶ , ಭಾರತದ ಆರ್ಥಿಕ ಅಭಿವೃದ್ಧಿ, ಕೃಷಿ ಅಭಿವೃದ್ಧಿಯಲ್ಲಿದೆ ಅಂದರೆ ತಪ್ಪಾಗಲಾರದು. ಭಾರತ ಎಷ್ಟೇ ಬೆಳೆಯುತ್ತಿದ್ದರು ರೈತನ ಪಾಡು ಇನ್ನು ಹಾಗೆ ಇದೆ, ಅತಿವೃಷ್ಟಿ ಅನಾವೃಷ್ಟಿ , ಮತ್ತು ಧಾನ್ಯವನ್ನು ಹಾಳು ಮಾಡುವ ರೋಗ,ಕೀಟಗಳು ಮತ್ತು ಮಾರುಕಟ್ಟೆಯಲ್ಲಿ ಒಳ್ಳೆಯ ರೇಟ್ ಸಿಗದೇ ಇರುವುದು ಇಂತಹ ಮುಂತಾದ ತೊಂದರೆಗಳಿಂದ ರೈತ ಪೆಟ್ಟು ತಿನ್ನುತ್ತಲೇ ಬಂದಿದ್ದಾನೆ. ಆದರೆ ಈಗ ರೈತ ಕೂಡ ತನ್ನ ಹೊಲದಲ್ಲಿ ಕೋಟಿ ಕೋಟಿ ಗಳಿಸಬಹುದು. ಹೇಗೆಂದು ತಿಳಿಯೋಣ ಬನ್ನಿ.
ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೆ ಜಮಾ ಆಗುತ್ತದೆಯೋ ಇಲ್ಲವೋ? ತಿಳಿದುಕೊಳ್ಳಿ https://mahitisara.com/pm-kisan-13th-installement-benificieary-list-has-been-released-check-whether-your-name-is-there-are-not/pmkisan/
ಇಂದು ನಾವು ಪೋಪ್ಲರ್ ಕೃಷಿಯ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಪೋಪ್ಲರ್ ಮರವು ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ. ಈ ಮರವನ್ನು ಏಷ್ಯಾ, ಉತ್ತರ ಅಮೇರಿಕಾ, ಯುರೋಪ್ ಮತ್ತು ಆಫ್ರಿಕಾದಂತಹ ದೇಶದಲ್ಲಿ ಬೆಳೆಸಲಾಗುತ್ತದೆ. ಈ ಮರವನ್ನು ಪೇಪರ್ ಹಾಳಿ , ಬೆಂಕಿ ಕಡ್ಡಿ , ಲೈಟ್ ಪ್ಲೈವುಡ್ ಈ ತರಹದ ಸಾಮಾನುಗಳನ್ನು ತಯಾರಿಸಲು ಈ ಮರವನ್ನು ಬಳಸಲಾಗುತ್ತದೆ
ಈ ಬೇಸಾಯ ಮಾಡಲು ನಿಮ್ಮ ಹೊಲದ ಮಣ್ಣು ಸುಮಾರು 6 ರಿಂದ 8.5 ph ನಡುವೆ ಇರಬೇಕು, ಮತ್ತು ಒಂದು ಮರದಿಂದ ಇನ್ನೊಂದು ಮರಕ್ಕೆ ಸುಮಾರು 12 ರಿಂದ 15 ಅಡಿ ಇರಬೇಕು.
ಪೋಪ್ಲರ್ ಮರ ಬೆಳೆಸುವುದರಿಂದ ಬಂಪರ್ ಆದಾಯ ಗಳಿಸಬಹುದು. ಪೋಪ್ಲರ್ ಕಡ್ಡಿ ಪ್ರತಿ ಕ್ವಿಂಟಲ್ ಗೆ 700-800 ರೂಪಾಯಿಗೆ ಮಾರಾಟವಾಗುತ್ತೆ. ಈ ಮರದ ಕಟ್ಟಿಗೆ ಸುಲಭವಾಗಿ 2000 ರೂ.ಗೆ ಮಾರಾಟವಾಗುತ್ತದೆ. ಒಂದು ಹೆಕ್ಟೇರ್‌ನಲ್ಲಿ 250 ಮರಗಳನ್ನು ನೆಡಬಹುದು. ಒಂದು ಮರವು ನೆಲದಿಂದ ಸುಮಾರು 80 ಅಡಿ ಎತ್ತರಕ್ಕೆ ಬೆಳೆಯುತ್ತೆ.
ಒಂದು ಹೆಕ್ಟರ್ ನಲ್ಲಿ ಈ ಕೃಷಿ ಮಾಡುವುದರಿಂದ ನೀವು ಕನಿಷ್ಠ 7 ರಿಂದ 8 ಲಕ್ಷ ರೂಪಾಯಿ ಲಾಭ ಪಡೆಯಬಹುದು. ಈ ಕೃಷಿಯಲ್ಲಿ ವೆಚ್ಚವು ಕೂಡ ಕಡಿಮೆ ಬರುವ ಕಾರಣ ಉತ್ತರ ಪ್ರದೇಶದ ಹಲವಾರು ರೈತರು ಈ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಮತ್ತು ಲಕ್ಷ ಲಕ್ಷ ಲಾಭ ಕೂಡ ಪಡೆಯುತ್ತಿದ್ದಾರೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Iaa2LrQV1IDHl8rbkKlxlu