
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು,
ಪ್ರೀಯ ರೈತರೇ ನಿಮ್ಮ ಹೊಲದಲ್ಲಿರುವ ಬೆಳೆಯು ನಿರಂತರ ಮಳೆಯಿಂದ ಅಥವಾ ಇತರೆ ಪ್ರಕೃತಿಯ ವಿಕೋಪದ ಕಾರಣದಿಂದ ನೀವು ನಷ್ಟದಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಬೆಳೆ ಹಾನಿ ಪರಿಹಾರಕ್ಕಾಗಿ ಸರ್ಕಾರವು ಕೂಡ ರೈತರಿಗೆ ಈಗಾಗಲೇ ಹಲವು ಯೋಜನೆಗಳನ್ನು ಕೈಗೊಂಡಿದೆ. ರೈತರ ಹಿತಕ್ಕಾಗಿ ಮತ್ತು ಹಾನಿಯಾಗದಂತೆ, ರೈತರ ಕಷ್ಟಗಳಿಗೆ ಪರಿಹಾರ ನೀಡಲು ಸರ್ಕಾರವು ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಹಾಗಾಗಿ ರೈತರು ತಮ್ಮ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಲೇಖನದಲ್ಲಿ ನಾವು ಬೆಳೆ ಹಾನಿ ಪರಿಹಾರಕ್ಕೆ ಸರಕಾರದ ಎಲ್ಲ ಯೋಜನೆಯನ್ನು ತಿಳಿಸಿಕೊಡುತ್ತೇವೆ.
ಕಿಸಾನ್ ಕ್ರೆಡಿಟ್ ಕಾರ್ಡ್
ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೂ ಸಾಲ ಪಡೆಯಿರಿ💸💸
ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಒತ್ತಿhttps://mahitisara.com/index.php/2023/01/04/how-to-apply-application-for-kisan-credit-card/
ಯಾವ ರೀತಿಯ ಬೆಳೆ ಹಾನಿಗೆ ಎಷ್ಟು ಪರಿಹಾರ ಎಂದು ತಿಳಿಯೋಣ ಬನ್ನಿ.
ನಿಮ್ಮ ಬೆಳೆಯು ಅಕಸ್ಮಾತಾಗಿ ಕಾಡುಪ್ರಾಣಿಗಳಿಂದ ಆದರೆ. ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂ.ಗಳಿಂದ 1 ಲಕ್ಷ ದವರೆಗೂ ಪಡೆಯಬಹುದು. ಇದರಿಂದ ರೈತರ ಬಹುಕಾಲದ ಬೇಡಿಕೆಗೆ ಉತ್ತರ ಸಿಕ್ಕಂತಾಗುತ್ತದೆ . ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ
ಅಡಿಕೆ, ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ ಟೊಮ್ಯಾಟೊ, ಹಿಪ್ಪುನೇರಳೆ ಸೇರಿ 64 ಬೆಳೆಗಳಿಗೆ ಸರ್ಕಾರವು ಪರಿಹಾರ ಹಣ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ಮತ್ತು ಪರಿಹಾರ ಮೊತ್ತವನ್ನು ಎರಡರಷ್ಟು ಹೆಚ್ಚು ಮಾಡಿದೆ.
ಬೆಳೆ ಹಾನಿಗೆ ಸರಕಾರವು ನೀಡುವ ಪರಿಹಾರದ ಗರಿಷ್ಠ ಮೊತ್ತ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದೆ. ಅದೇ ರೀತಿ ಅಧಿಕಾರಿಗಳ ಸರ್ವೆ ಮುಖಾಂತರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ನಷ್ಟದ ಪರಿಹಾರ ನೀಡಲು ಮುಂದಾಗಿದೆ. 1ಲಕ್ಷದವರೆಗೆ ಸರ್ಕಾರವು ರೈತರಿಗೆ ನೆರವು ನೀಡಲಾಗುವುದು ಎಂದೂ ಘೋಷಣೆ ಮಾಡಿದ್ದಾರೆ . ಕಾಡುಪ್ರಾಣಿಗಳ ಹಾವಳಿಯಿಂದ ಬಹಳ ನಷ್ಟ ಅನುಭವಿಸುತ್ತಿರುವ ರೈತರು ಇದರಿಂದ ಪರಿಹಾರ ದೊರಕುವ ಕೆಲಸ ಸರ್ಕಾರವು ಮಾಡುತ್ತಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ನಿರಂತರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿhttps://chat.whatsapp.com/FA0PdNzN7gPBDMgjXsvVW9