class="post-template-default single single-post postid-58 single-format-standard wp-embed-responsive theme-newsup woocommerce-no-js ta-hide-date-author-in-list" >
Spread the love

ನವದೆಹಲಿಯಲ್ಲಿ ನವೆಂಬರ್ ಎರಡು ರಂದು ಹಿಂಗಾರು ಋತುವಿನ ಫಾಸ್ಫಾಟಿಕ್ ಹಾಗೂ ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಅಕ್ಟೋಬರ್ 1, 2022 ರಿಂದ 2023 ಮಾರ್ಚ್ 31ರ ವರೆಗೆ ಸುಮಾರು 51,875 ಕೋಟಿ ರೂಪಾಯಿ ಸಬ್ಸಿಡಿ ದರವನ್ನು ನೀಡಲು ಕೇಂದ್ರ ಸಚಿವ ಸಂಪುಟ ಘೋಷಣೆ ಮಾಡಿದೆ. ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ವಿವಿಧ ಪೋಷಕಾಂಶಗಳಾದ ಸಾರಜನಕ(NITROGEN), ರಂಜಕ(PHOSPHORUS), ಪೊಟ್ಯಾಷ್(POTASH), ಸಲ್ಫರ್(SULPHUR) ಪೊಟ್ಯಾಷ್(ಪಿ)ಗೆ ಪ್ರತಿ ಕಿಲೋ ದರದಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ (NUTRIENT BASED SUBSIDY SCHEME) ಅನ್ನು ಒದಗಿಸುವ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವರ ಸಂಪುಟ ಸಭೆಯಲ್ಲ ಅನುಮೋದನೆ ನೀಡಿದರು.ಕೇಂದ್ರ ಸಚಿವ ಸಂಪುಟ ಸಭೆಯು 2022ರ ಹಿಂಗಾರು ಹಂಗಾಮಿಗೆ ಎoದರೆ 2022 ಅಕ್ಟೋಬರ್ 01 ರಿಂದ 2023 ಮಾರ್ಚ್ 31ರ ವರೆಗೆ ಅನ್ವಯಿಸುತ್ತದೆ, ರಸಗೊಬ್ಬರಗಳ ಪೋಷಕಾಂಶ ಆಧರಿತ ಸಬ್ಸಿಡಿ ಮೊತ್ತವು ಸುಮಾರು 51,875 ಕೋಟಿ ರೂ. ಒದಗಿಸಲು ಅನುಮೋದನೆ ನೀಡಲಾಗಿದೆ. ದೇಶೀಯ ರಸಗೊಬ್ಬರ ಕಾರ್ಖಾನೆಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು, ಸರಕು ಸಬ್ಸಿಡಿ ಮೂಲಕ ಈ ಸಹಾಯಧನ ಒದಗಿಸಲು ನಿರ್ಧರಿಸಲಾಗಿದೆ.

2022-23ರ ಹಿಂಗಾರು ಹಂಗಾಮಿನಲ್ಲಿ ದೇಶದ ರೈತರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳುನ್ನು ಸಬ್ಸಿಡಿ ದರದಲ್ಲಿ ಕೈಗೆ ಸಿಗುವ ಬೆಲೆಗೆ ಸಿಗುವಂತೆ ಮಾಡಲು ಇದು ಸಹಕಾರಿಯಾಗಲಿದೆ. ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳ ಸುಗಮ ಲಭ್ಯತೆ ದೊರೆಯುವುದರಿಂದ ರೈತ ಸಮುದಾಯಕ್ಕೆ ಈ ಯೋಜನೆ ಬೆಂಬಲ ನೀಡಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರುತಲೆ ಇದೆ ಇದನ್ನು ಹಿಡಿತದಲ್ಲಿಡುವ ಉದ್ದೇಶದಿಂದ ಸರ್ಕಾರದ ಈ ಯೋಜನೆಯನ್ನು ಆಯೋಜಿಸಿದೆ.
ಕೇಂದ್ರ ಸರ್ಕಾರವು ರಸಗೊಬ್ಬರ ತಯಾರಕರು, ಮತ್ತು ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು ಪಿ ಮತ್ತು ಕೆ ರಸಗೊಬ್ಬರಗಳನ್ನು ಶೇಕಡಾ 25 ಪ್ರತಿಶತ ರೈತರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಪೋಷಕಾಂಶ ಆಧರಿತ ಸಬ್ಸಿಡಿ(ಎನ್ ಬಿ ಎಸ್) ಯೋಜನೆ ಮೂಲಕ ರೈತಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ಕೈಗೆ ನಿಲುಕುವ ಬೆಲೆಗೆ ರೈತರಿಗೆ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳು ತಲುಪುವಂತೆ ಮಾಡುತ್ತಿದೆ.

ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ ಮತ್ತಿತರ ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಏರಿಕೇಯಿಂದಾಗಿ ರೈತರಿಗೆ ಆಗುವ ಹಣಕಾಸಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು, ಡಿಎಪಿ ಸೇರಿದಂತೆ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವ ಮೂಲಕ ರೈತರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅನುಮೋದಿತ ದರಗಳ ಪ್ರಕಾರ, ದೇಶೀಯ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಇದರಿಂದ ಅವರು ರೈತರಿಗೆ ಕೈಗೆಟುಕುವ ಬೆಲೆಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡುತ್ತಾರೆ.

2022-23ರ ಹಿಂಗಾರು ಸಬ್ಸಿಡಿ. ರೂಪಾಯಿಗಳಲ್ಲಿ.

ಸಾರಜನಕ(ಎನ್)- 98.02

ರಂಜಕ(ಪಿ)- 66.93

ಪೊಟ್ಯಾಷ್(ಕೆ)- 23.65

ಸಲ್ಫರ್(ಎಸ್)- 6.12

ಹೊಸ ದರವು ಕಳೆದ ತಿಂಗಳ 1 ರಿಂದ ಮುಂದಿನ ವರ್ಷ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ರಸಗೊಬ್ಬರಗಳಿಗೆ ಸುಮಾರು 51,875 ಕೋಟಿ ರೂಪಾಯಿಗಳ ಸಬ್ಸಿಡಿಗೆ ಅನುಮೋದನೆ ನೀಡಿದೆ.

ಈ ಕ್ರಮದಿಂದ 2022-23 ಹಿಂಗಾರು ಋತುವಿನಲ್ಲಿ ಸಬ್ಸಿಡಿ ಬೆಲೆಯಲ್ಲಿ ರೈತರಿಗೆ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಸಕ್ರಿಯಗೊಳಿಸುತ್ತದೆ. ಈ ನಿರ್ಧಾರ ಕೃಷಿ ರೈತರಿಗೆ ನೆರವಾಗಲಿದೆ. ರಸಗೊಬ್ಬರಗಳು ಮತ್ತು ಕಚ್ಚಾ ವಸ್ತುಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಚಂಚಲತೆ ಸ್ಥಿರವಾಗಿಸುತ್ತದೆ ಎನ್ನಲಾಗಿದೆ.
ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ ನಗರಗಳಲ್ಲಿನ ಗೊಬ್ಬರ ಅಂಗಡಿಗಳಲ್ಲಿ ಕೂಡ ವಿವಿಧ ಗೊಬ್ಬರದ ದರಪಟ್ಟಿ ಪ್ರದರ್ಶಿಸಬೇಕೆಂಬ ನಿಯಮಗಳಿದ್ದರೂ ಬಹುತೇಕರು ಅದನ್ನು ಪಾಲಿಸುತ್ತಿಲ್ಲ. ಹೆಚ್ಚುವರಿ ದರವೇಕೇ ಎಂದು ಪ್ರಶ್ನಿಸಿದವರಿಗೆ ಯುದ್ಧದ ನೆಪವೊಡ್ಡಿ, ಗೊಬ್ಬರ ಕೊರತೆಯಿದೆ ಎಂದು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗಾಗಿ, ರೈತರು ವಿಧಿಯಿಲ್ಲದೆ ದರ ಏರಿಕೆ ಬಿಸಿಯನ್ನು ಅನುಭವಿಸುತ್ತಿದ್ದಾರೆ.
ಆದರೆ ಕೇಂದ್ರ ಸರಕಾರದ ಈ ಘೋಷಣೆಯಿಂದ ರೈತರಿಗೆ ಯಾವುದೇ ಆದಂತ ಪ್ರಯೋಜನ ಸಿಗುತ್ತಿಲ್ಲ.
ಮಾರುಕಟ್ಟೆಯಲ್ಲಿ ಯುಕ್ರೇನ್ ಮತ್ತು ರಷ್ಯಾ ಯುದ್ಧದ ನೆಪವನ್ನೊಡ್ಡಿ ವ್ಯಾಪಾರಿಗಳು ಎರಡರಷ್ಟು ದುಡ್ಡು ಪಡೆಯುತ್ತಿದ್ದಾರೆ. ಮತ್ತು ರೈತನು ನಷ್ಟವನ್ನು ಅನುಭವಿಸುತ್ತಿದ್ದಾನೆ.
ಗೊಬ್ಬರದ ದರಪಟ್ಟಿ ಪ್ರದರ್ಶಿಸಬೇಕೆಂಬ ಕೇಂದ್ರ ನಿರ್ಧರಿಸಿದ್ದ ನಿಯಮಗಳಿದ್ದರೂ ಬಹುತೇಕರು ಅದನ್ನು ಪಾಲಿಸುತ್ತಿಲ್ಲ.

ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಇದರ ಬಿಸಿ ರೈತರಿಗೆ ತಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಘೋಷಿಸಿರುವ ಸಹಾಯಧನದ ಪ್ರಯೋಜನ ರೈತರಿಗೆ ಆಗುತ್ತಿಲ್ಲ. ಸರಕಾರವೇ ಗರಿಷ್ಠ ಮಾರಾಟ ದರ ನಿಗದಿಪಡಿಸಿದ್ದರೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಮಧ್ಯದವರು ವಸೂಲು ಮಾಡುತ್ತಿದ್ದಾರೆ.

ರೈತರ ಹೊರೆ ತಗ್ಗಿಸಲು ಕೇಂದ್ರ ಸರಕಾರ ಸುಮಾರು 2.5 ಲಕ್ಷ ಕೋಟಿ ರೂ. ಸಬ್ಸಿಡಿ ಅನ್ನು ಘೋಷಿಸಿದ್ದರೂ ಅದು ರೈತರ ಉಪಯೋಗಕ್ಕೆ ಬಾರದಂತಾಗಿದೆ. ಮಾರುಕಟ್ಟೆಯಲ್ಲಿ ಇದೇ ಯುದ್ಧದ ನೆಪವನ್ನೊಡ್ಡಿ ವ್ಯಾಪಾರಿಗಳು ದುಪ್ಪಟ್ಟು ದರ ಪಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲ 50ಕೆ.ಜಿ ತೂಕದ ಚೀಲಕ್ಕೆ ಕನಿಷ್ಠವೆಂದರೂ 400ರೂ.ನಿಂದ ಒಂದು ಸಾವಿರ ರೂ.ವರೆಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ.

ಡಿಎಪಿ ರಸಗೊಬ್ಬರಕ್ಕೆ 50 ಕೆಜಿ ಚೀಲಕ್ಕೆ ಕೇಂದ್ರ ಸರ್ಕಾರ ಸುಮಾರು 2500.65 ರೂ. ಸಬ್ಸಿಡಿ ನೀಡುತ್ತಿದ್ದು, ರೈತರಿಗೆ ಪ್ರತಿ 50 ಕೆ.ಜಿ ಚೀಲವನ್ನು 1350 ರೂ.ಗೆ ನೀಡಲು ದರ ನಿಗದಿಗೊಳಿಸಿದೆ. ಆದರೆ, ರಾಜ್ಯದಲ್ಲಿ ಡಿಎಪಿ ಗೊಬ್ಬರಕ್ಕೆ 1600ರಿಂದ 2000 ರೂ. ಪಡೆಯಲಾಗುತ್ತಿದೆ. 20:20, 16:20 ಕಾಂಪ್ಲೆಕ್ಸ್‌ ಗೊಬ್ಬರಗಳಿಗೆ ಸರಕಾರ ತಲಾ 1500, 1600 ರೂ. ಸಬ್ಸಿಡಿ ಕೊಟ್ಟು, ರೈತರಿಗೆ 1400 ರಿಂದ 1470ರೂ. ನಿಗದಿಪಡಿಸಿದೆ.

ಮಾರುಕಟ್ಟೆಯಲ್ಲಿ ಕಾಂಪ್ಲೆಕ್ಸ್‌ ರಸಗೊಬ್ಬರಗಳನ್ನು ಸುಮಾರು 1600 ರಿಂದ 1700 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಯೂರಿಯಾದ ಪ್ರತಿ 45ಕೆ.ಜಿ ಚೀಲಕ್ಕೆ ಸರಕಾರ 266 ರೂ. ನಿಗದಿಪಡಿಸಿದೆ. ಸಬ್ಸಿಡಿ ರೂಪದಲ್ಲಿ ಪ್ರತಿ ಚೀಲಕ್ಕೆ 800 ರೂ. ಸರಕಾರ ಭರಿಸುತ್ತಿದ್ದು, ದಲ್ಲಾಳಿಗಳು ರೈತರಿಂದ 350ರಿಂದ 400ರೂ.ವರೆಗೆ ಪಡೆಯುತ್ತಿದ್ದಾರೆ.

ದರಪಟ್ಟಿ ಪ್ರದರ್ಶಿಸೋರಿಲ್ಲ
ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ ನಗರಗಳಲ್ಲಿನ ಗೊಬ್ಬರ ಅಂಗಡಿಗಳಲ್ಲಿ ವಿವಿಧ ಗೊಬ್ಬರದ ದರಪಟ್ಟಿ ಪ್ರದರ್ಶಿಸಬೇಕೆಂಬ ನಿಯಮಗಳಿದ್ದರೂ ಬಹುತೇಕರು ಅದನ್ನು ಪಾಲಿಸುತ್ತಿಲ್ಲ. ಹೆಚ್ಚುವರಿ ದರವೇಕೇ ಎಂದು ಪ್ರಶ್ನಿಸಿದವರಿಗೆ ಯುದ್ಧದ ನೆಪವೊಡ್ಡಿ, ಗೊಬ್ಬರ ಕೊರತೆಯಿದೆ ಎಂದು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗಾಗಿ, ರೈತರು ವಿಧಿಯಿಲ್ಲದೆ ದರ ಏರಿಕೆ ಬಿಸಿಯನ್ನು ಅನುಭವಿಸುತ್ತಿದ್ದಾರೆ.

ಹಲ್ಲಿಲ್ಲದ ಹಾವಂತಾಗಿದೆ ವಿಜಿಲೆನ್ಸ್‌
ರಾಜ್ಯದಲ್ಲಿ ಕೃಷಿ ಸಚಿವರಾದಿಯಾಗಿ ಉನ್ನತಾಧಿಕಾರಿಗಳು ಗೊಬ್ಬರ ವಿತರಣೆ ಅಕ್ರಮಗಳ ಕುರಿತು ದೂರು ಕೊಟ್ಟಾಗಲೆಲ್ಲಾ ವಿಚಕ್ಷಣ ದಳದ ಕಡೆ ಮುಖ ಮಾಡುತ್ತಾರೆ. ಜತೆಗೆ, ವಿಚಕ್ಷಣ ಅಧಿಕಾರಿಗಳಿಂದ ರಾಜ್ಯಾದ್ಯಂತ ಅಕ್ರಮ ಜಾಲವನ್ನು ಭೇದಿಸಲಾಗುತ್ತಿದ್ದು, ಕೃಷಿಗೆ ಪೂರಕ ವಾತಾವರಣ ನೀಡಲಾಗುತ್ತಿದೆ ಎಂದೆಲ್ಲಾ ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ವಿಚಕ್ಷಣ ದಳ ಹಲ್ಲಿಲ್ಲದ ಹಾವಂತಾಗಿದ್ದು, ಅಕ್ರಮಗಳನ್ನು ಕಂಡೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆಂದು ಕೋಲಾರದ ರೈತ ಮಹಿಳೆ ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸಗೊಬ್ಬರಕ್ಕೆ‌ ಸಂಭದಿಸಿದ ಹಾಗೆ ಇತರೆ ಮಾಹಿತಿ
ಒಂದು ರಾಷ್ಟ್ರ ಒಂದು ರಸಗೊಬ್ಬರ. ಭಾರತ್ ಬ್ರಾಂಡ್
ಬೆಳೆಗೆ ಬೆಕಾಗುವ ರಸಗೊಬ್ಬರದ ಬ್ರಾಂಡ್‌ಗಳನ್ನು ಏಕರೂಪದಲ್ಲಿ ಬಿಡುಗಡೆ ಮಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ರಸಗೊಬ್ಬರ ಎಂಬ ಯೋಜನೆಯಲ್ಲಿ ‘ಭಾರತ್‌ ಬ್ರಾಂಡ್’ ಎಂಬ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡುವಂತೆ ಎಲ್ಲ ಗೊಬ್ಬರ ಕಂಪನಿಗಳಿಗೆ ಸುಚನೆ‌‌ ನಿಡಿದೆ.ಇದನ್ನು ಕುರಿತು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವಾಲಯವು ಸೂಚನೆ ಹೊರಡಿಸಿದೆ. ಅದರಂತೆ ಎಲ್ಲ ಬ್ರಾಂಡ್‌ನ ಗೊಬ್ಬರ ಕಂಪನಿಗಳು ಯೂರಿಯಾ ಅಥವಾ ಡಿಎಪಿ, ಎಂಓಪಿ ಅಥವಾ ಎನ್‌ಪಿಕೆ ಒಳಗೊಂಡಿರುವ ಎಲ್ಲ ರಸಗೊಬ್ಬರ ಚೀಲಗಳ ಮೇಲೆ ‘ಭಾರತ್ ಡಿಎಪಿ, ‘ಭಾರತ್ ಎಂಓಪಿ’ ಎಂದು ಭಾರತ್‌ ಹೆಸರಿನ ಬ್ರಾಂಡ್ ಹೊಂದಿರಬೇಕು. ಎಂಬ ನಿಯಮವನ್ನು ಜಾರಿಗೆ ತಂದಿತು. ಖಾಸಗಿ ಮತ್ತು ಸಾರ್ವಜನಿಕ ಗೊಬ್ಬರ ಕಂಪನಿಗಳು ಇದನ್ನು‌ ಪಲಿಸಬೇಕು ಎಂದು ಆದೇಶಿಸಿದೆ ಆದರೆ ಇದಕ್ಕೆ ಹಲವು ಕಂಪನಿಗಳು ಸಹಮತಿ ತೋರಿಸಿಲ್ಲ.
ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಮೂಲದ ಕಂಪನಿಗಳು ಒಂದೇ ಬ್ರಾಂಡ್ ಹೆಸರಿನಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಒಂದೇ ಬ್ರಾಂಡ್ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಬೇಕಾಗುತ್ತದೆ, ಭಾರತ್‌ ಬ್ರಾಂಡ್ ಅನ್ನುವ ಹೆಸರು, ಲೋಗೋ ಸಹಿತ ಪ್ರಧಾನ ಮಂತ್ರಿಯ ಸಾರ್ವಜನಿಕ ರಸಗೊಬ್ಬರ ಯೋಜನೆ ಅಥವಾ ಪಿಎಂ ಬಿಜೆಪಿ ಹೊಸ ರಸಗೊಬ್ಬರ ಚೀಲಗಳ ಮುಂಭಾಗದ ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿರಲಿದೆ. ಚೀಲದ ಮುಂದಿನ ಬಾಗದಲ್ಲಿ ಉಳಿದಿರುವ ಸ್ಥಳವು ಹೆಸರು, ಲೋಗೋ, ವಿಳಾಸ ಮತ್ತು ಇತರ ಮಾಹಿತಿ ಸೇರಿದಂತೆ ತಯಾರಕರ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂಬುದು ಕೇಂದ್ರದ ಅದೇಶ‌. ಏಕರೂಪತೆಯನ್ನು ತರವುದು ಈ ಯೋಜನೆಯ ಮುಖ್ಯ ವಿಷಯವಾಗಿದೆ.
ಕೇಂದ್ರ ಸರ್ಕಾರ ವಾರ್ಷಿಕವಾಗಿ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡುವ ಯೋಜನೆಯಾದ ಪ್ರಧಾನಮಂತ್ರಿ ಭಾರತೀಯ ಜನರ್ವರಕ್ ಪರಿಯೋಜನೆ (ಪಿಎಂ ಬಿಜೆಪಿ)ಯ ಏಕೈಕ ಬ್ರಾಂಡ್‌ ಹೆಸರು, ಬ್ರಾಂಡ್‌ ಲೋಗೋವಿನ‌‌ ಚಿತ್ರವನ್ನು ಕಂಪನಿಗಳು ಗೊಬ್ಬರ ಚೀಲಗಳ ಮುಂಬಾಗದಲ್ಲಿ ಪ್ರದರ್ಶಿಸಬೇಕು. ಚೀಲದ ಒಂದು ಬದಿಗೆ ಕಂಪನಿ ಹೆಸರನ್ನು ಸಣ್ಣದಾಗಿ ಹಾಕುವಂತೆ ಅದೆಶ್ ನಿಡಿದೆ.
ರಷ್ಯಾ ಹಾಗು ಉಕ್ರೇನ್‌ನ ನಡುವೆ ಯುದ್ಧವು ಜಾಗತಿಕ ಶಕ್ತಿ ಮತ್ತು ರಾಸಾಯನಿಕ ಪೋಷಕಾಂಶಗಳ ಮತ್ತು ಗೊಬ್ಬರದ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣದಿಂದಲೇ ಮೇ ತಿಂಗಳಲ್ಲಿ ಸಹಕಾರಿ ಸಂಸ್ಥೆಗಳ ಸದಸ್ಯರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಸಗೊಬ್ಬರದ ಸಬ್ಸಿಡಿ ಬಿಲ್ ಈ ಹಣಕಾಸು ವರ್ಷದಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಮೀರಬಹುದು ಎಂದು ಅಂದಾಜಿಸಿರುವುದಾಗಿ ತಿಳಿಸಿದ್ದರು. ಬಿಲ್ ನ‌ ಪ್ರಮಾಣ ‌ಈ ಬಾರಿ ಸುಮಾರು ಶೇ. ೨೫ ರಷ್ಟು ಹೆಚ್ಚಾಗಿದೆ ಕಳೆದ ವರ್ಷದ ಬಿಲ್ ಕೆವಲ ೧.೬ ಲಕ್ಷ ಕೋಟಿ ಇತ್ತು.
ನವ ದೆಹಲಿಯಲ್ಲಿ ನಡೆದ ‘ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನ-೨೦೨೨’ ಕಾರ್ಯಕ್ರಮದಲ್ಲಿ ಪಿಎಂಬಿಜೆಪಿ ಜತೆಗೆ ೬೦೦ ಪಿಎಂ ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೂ (PM-KSK) ಮೋದಿ ಚಾಲನೆ ನೀಡಿದ್ದಾರೆ. ರೈತರು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆ, ಬೀಜ, ರಸಗೊಬ್ಬರ ಸೇರಿ ಹಲವು ಉತ್ಪನ್ನಗಳು ಕಿಸಾನ್‌ ಸಮೃದ್ಧಿ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಪಿಎಂಕೆಎಸ್‌ಕೆ ಅಡಿಯಲ್ಲಿ ದೇಶಾದ್ಯಂತ ಇರುವ ೩.೩ ಲಕ್ಷ ರಸಗೊಬ್ಬರ ಅಂಗಡಿಗಳನ್ನು ಹಂತ ಹಂತವಾಗಿ ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನಾಗಿ ಮಾರ್ಪಡಿಸುವುದು ಕೂಡ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೇಂದ್ರದ ಸೂಚನೆ ಪ್ರಕಾರ ಹೊಸ ರಸಗೊಬ್ಬರ ಚೀಲಗಳನ್ನು ಮುಂದಿನ ತಿಂಗಳ ಅಕ್ಟೋಬರ್ 2ರಿಂದ ರೈತನಿಗೆ ಪರಿಚಯಿಸಲಿದೆ. ಸೆಪ್ಟೆಂಬರ್ 15 ರಿಂದ ಹಳೆಯ ಮಾದರಿ ಹೊಂದಿರುವ ಚೀಲಗಳನ್ನು ಖರೀದಿಸದಂತೆ ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ‌‌‌‌‌‌ ನೀಡಿದೆ. ಎಲ್ಲ ಹಳೆಯ ಗೊಬ್ಬರ ಚೀಲಗಳನ್ನು ಡಿಸೆಂಬರ್‌ ಅಂತ್ಯದವರೆಗೆ ಕಂಪನಿಗಳಿಗೆ ಮಾರಾಟಕ್ಕೆ ಸಮಯ ಅವಕಾಶ ಸಹ ನೀಡಲಾಗಿದೆ
ಪಿಎಂ ಕಿಸಾನ್ ಸಮ್ಮಾನ್‌ ಯೋಜನೆ (ರೈತನ‌ ಬ್ಯಾಂಕ್ ಖಾತೆಗೆ ನಗದು ಜಮಾ ಆಗುವ ಯೋಜನೆ), ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ರೈತರಿಗೆ ಬೆಳೆ ವಿಮೆ ಯೋಜನೆ), ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಉಚಿತ ಆಹಾರ ಮತ್ತು ಆಶ್ರಯ ಯೋಜನೆ)ಗಳು ಹಾಗೆಯೇ ಈ ಯೋಜನೆಯು ಕೂಡ
ಪ್ರಧಾನ ಮಂತ್ರಿಗಳ ಕಚೇರಿ ಹೆಸರನ್ನು ಹೊಂದಿವೆ. ಇದು
ಪಿಎಂ ಹೆಸರಿನ ಯೋಜನೆಗೆ ಸೇರ್ಪಡೆಯಾಗಿದೆ.
ಭಾರತ ಸರ್ಕಾರವು ಕೃಷಿ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಈ ಕಾರಣದಿಂದಾಗಿ, ಸರ್ಕಾರವು ಹಲವರು ಯೋಜನೆಯನ್ನು ಜಾರಿಗೆ ತಂದಿದೆ ಅದರಲ್ಲಿ ನೂತನವಾಗಿ ಇದು ಕೂಡ ಒಂದು. 98

Leave a Reply

Your email address will not be published. Required fields are marked *