
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಇಂದಿನ ಲೇಖನದಲ್ಲಿ ನಾವು ರೈತರಿಗೆ ಮತ್ತು ಅವರ ಮಕ್ಕಳಿಗೆ ಸರ್ಕಾರ ಆಯೋಜಿತಗೊಂಡಂತ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಸರ್ಕಾರ ರೈತನ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿವೆ. ರೈತರ ಆರ್ಥಿಕ ಸ್ಥಿತಿಯನ್ನು ಹೆಚ್ಚು ಮಾಡಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ.
72 ವರ್ಷದ ಹಿಂದಿನ ಬಂಗಾರದ ಬೆಲೆ ಕೇಳಿದರೆ ನೀವು ಬೆರಗಾಗುವುದು ಖಂಡಿತ https://mahitisara.com/index.php/2023/01/30/gold-price-in-1960s-bill-of-customer-goes-viral-on-internet/
2023 ಹಣಕಾಸು ವರ್ಷದ ಬಜೆಟ್ ಅನ್ನು ಘೋಷಣೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಪ್ರಾಮುಖ್ಯತೆಯಲ್ಲಿ ಇಟ್ಟುಕೊಂಡು ಬಜೆಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಹಾಗಾದರೆ ಬಜೆಟ್ ನಲ್ಲಿ ರೈತರಿಗೆ ಯಾವ ಯಾವ ಯೋಜನೆಗಳು ಸಹಾಯವಾಗಲಿದೆ ಎಂದು ತಿಳಿಯೋಣ ಬನ್ನಿ
ರೈತ ಶಕ್ತಿ ಯೋಜನೆ:
ಈ ಯೋಜನೆ ಅಡಿ ರೈತನಿಗೆ ಕೃಷಿ ಯಂತ್ರೋಪಕರಣಗಳಿಗೆ ಬಳಸುವ ಡೀಸೆಲ್ ಗೆ ಸಬ್ಸಿಡಿ ಹಣವನ್ನು ನೇರ ರೈತನ ಖಾತೆಗೆ ಜಮಾ ಆಗುತ್ತದೆ. ಪ್ರತಿ ಒಂದು ಎಕರೆಗೆ ರೈತ 250 ರೂಪಾಯಿ ಅಷ್ಟು ಹಣ ಪಡೆಯಬಹುದು. ಮತ್ತು ಗರಿಷ್ಠ ಅಂದರೆ 5 ಎಕರೆಗೆ 1250 ರೂಪಾಯಿ ಪಡೆಯಬಹುದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
ಇನ್ನು ನಿಮಗೆ ತಿಳಿದಿರುವ ಹಾಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ , ಈ ಯೋಜನೆ ಅಡಿಯಿಂದ ಎಲ್ಲ ರೈತರಿಗೆ ಕನಿಷ್ಠ 6000 ರೂಪಾಯಿ ಪ್ರತಿ ವರ್ಷಕ್ಕೆ ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಮೂರು ತಿಂಗಳೊಳಗೆ ಕೋಟ್ಯಂತರ ರೈತರಿಗೆ 2 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ 12 ಕಂತುಗಳನ್ನು ವರ್ಗಾವಣೆ ಮಾಡಲಾಗಿದ್ದು, ಶೀಘ್ರದಲ್ಲೇ ರೈತರಿಗೆ ಪಿಎಂ ಕಿಸಾನ್‌ನ 13 ನೇ ಕಂತು ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ರೈತ ವಿದ್ಯಾನಿಧಿ ಯೋಜನೆ:
ಇನ್ನು ಈ ಯೋಜನೆ ಅಡಿ ಎಲ್ಲಾ ರೈತರ ಮಕ್ಕಳಿಗೆ ಶಿಕ್ಷಣದಲ್ಲಿ ಸಹಾಯವಾಗಲೆಂದು ಕರ್ನಾಟಕ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡುವ ನಿರ್ಧಾರ ಮಾಡಿದೆ. . ಈ ಯೋಜನೆಯ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿರುವ ರೈತರ ಮಕ್ಕಳಿಗೆ 2500 ರಿಂದ 11000 ರೂ ವಿದ್ಯಾರ್ಥಿವೇತನದ ಮೊತ್ತವನ್ನು ನೇರ ಲಾಭ ವರ್ಗಾವಣೆ ವಿಧಾನದ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಎಲ್ಲ ಯೋಜನೆಗಳ ಅನುಕೂಲಗಳನ್ನು ರೈತರಿಗಿಂದೆ ಮೀಸಲಿಡಲಾಗಿದೆ. ಹಾಗಾಗಿ ಎಲ್ಲ ರೈತರು ಮತ್ತು ಅವರ ಮಕ್ಕಳು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಮಾಹಿತಿಸಾರ ವಾಟ್ಸಾಪ್ ಗ್ರೂಪ್ ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/ENZMcymGD7L2BVcbrte3lj