
ಎಲ್ಲ ರೈತ ಬಾಂಧವರಿಗೆ ಮಾಹಿತಿ ಸಾರ ಇಂದ ಎಲ್ಲರಿಗೂ ನಮಸ್ಕಾರಗಳು. ಈಗಿನ ಕಾಲದಲ್ಲಿ ತಂತ್ರಜ್ಞಾನ ಮುಗಿಲು ಮುಟ್ಟಿದೆ. ಎಲ್ಲ ಕೆಲಸವೂ ಕಂಪ್ಯೂಟರ್ ಮೇಲೆ ಅವಲಂಬಿತವಾಗಿದೆ. ಹಾಗೆ ಎಲ್ಲ ರೈತರಿಗೂ ಉಪಯೋಗವಾಗಲೆಂದು ಹೊಸತೊಂದು ತಂತ್ರಜ್ಞಾನ ಒಂದು ಬಿಡುಗಡೆ ಮಾಡಿದ್ದಾರೆ. ಕಿಸಾನ್ ಜಿಪಿಟಿ ? ಏನಿದು ಕಿಸಾನ್ ಜಿ ಪಿ ಟಿ ? ಇದರಿಂದ ರೈತನಿಗೆ ಏನು ಉಪಯೋಗ ? ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಕಿಸಾನ್ ಜಿಪಿಟಿ ಎಂಬುದು ಚಾಟ್ ಜಿಪಿಟಿಯ ಒಂದು ಭಾಗ. ಚಾಟ್ ಜಿ ಪಿ ಟಿ ಒಂದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮುಖಾಂತರ ಕೆಲಸ ಮಾಡುವ ತಂತ್ರಜ್ಞಾನ . ಇದರಲ್ಲಿ ನೀವು ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ , ಯಾವುದೇ ವಿಷಯಕ್ಕೆ ಸಂಬಂಧಿಸಿದ ಹಾಗೆ ಪ್ರಶ್ನೆ ಕೇಳಿದರು. ಅದು ನಿಮಗೆ ಸ್ಪಷ್ಟವಾಗಿ ಉತ್ತರ ನೀಡುತ್ತದೆ. ಇದು ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಎಲ್ಲರೂ ಅದನ್ನು ಬಳಕೆ ಮಾಡಬಹುದು.
ಕಿಸಾನ್ ಜಿಪಿಟಿ : ರೈತನ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
ರೈತನಿಗೆ ಸಹಾಯವಾಗಲೆಂದು ಈಗ ಅದೇ ಮಾದರಿಯಾಗಿ ಕಿಸಾನ್ ಜಿಪಿಟಿ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರೈತ ತನಗೆ ಇದ್ದ ತೊಂದರೆಯನ್ನು ಕೇವಲ ಮಾತನಾಡಿ ಸಬ್ಮಿಟ್ ಒತ್ತಿದರೆ . ಕಿಸಾನ್ ಜಿಪಿಟಿ ನಿಮಗೆ ಅದಕ್ಕೆ ಉತ್ತರ ನೀಡುತ್ತದೆ. ರೈತ ತನಗೆ ಬೇಕಾದ ಪ್ರಶ್ನೆಯನ್ನು ರೆಕಾರ್ಡ್ ಮಾಡಿ ಕಳಿಸಿದರೆ ಸಾಕು.
ಸೆಕೆಂಡ್ ನಲ್ಲಿ ನಿಮ್ಮ ಪ್ರಶ್ನೆಗೆ ಅದು ಉತ್ತರ ನೀಡುತ್ತದೆ . ಉದಾಹರಣೆಗಾಗಿ ಶೇಂಗಾ ಬೆಳೆಗೆ ಎಲೆ ಚುಕ್ಕಿ ರೋಗ ಬಂದಿದ್ದರೆ , ನೀವು ಅದನ್ನು ವಾಯ್ಸ್ ರೆಕಾರ್ಡ್ ಮಾಡಿ ಸಬ್ಮಿಟ್ ಒತ್ತಿದರೆ ಸಾಕು ಅದು ನಿಮಗೆ ರೋಗ ನಿಯಂತ್ರಣದ ಎಲ್ಲಾ ಮಾಹಿತಿಯನ್ನು ನೀಡುತ್ತದೆ.
ಕಿಸಾನ್ ಜಿಪಿಟಿಯನ್ನು ಹೇಗೆ ಬಳಸಬೇಕು?
ಮೊದಲಿಗೆ ನೀವು ಕಿಸಾನ್ ಜಿಪಿಟಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. 👇👇
https://kissangpt.com/
ನಂತರ ನಿಮಗೆ ಯಾವ ಭಾಷೆ ಬೇಕು ಅದನ್ನು ಆಯ್ಕೆ ಮಾಡಬೇಕು ಉದಾಹರಣೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ,ತೆಲುಗು, ತಮಿಳು, ಮಲಯಾಳಂ, ಮತ್ತು ಇನ್ನಿತರ ನಿಮ್ಮ ಸ್ಥಳೀಯ ಭಾಷೆಗಳು ಕೂಡ.

ಇರುತ್ತದೆ.ಅದರಲ್ಲಿ ಒಂದು ಆಯ್ಕೆ ಮಾಡಿ ನಂತರ,” AI ಕೇಳಿ ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. , ಆಗ ರೆಕಾರ್ಡಿಂಗ್ ಸ್ಟಾರ್ಟ್ ಆಗುತ್ತದೆ, ನಂತರ ನಿಮಗೆ ಬೇಕಾದ ಪ್ರಶ್ನೆಯನ್ನು ಕೇಳಿ, ಆಮೇಲೆ ರೆಕಾರ್ಡ್ ಸ್ಟಾಪ್ ಮಾಡಬೇಕು, ಆಮೇಲೆ ಅದು ಎರಡೇ ಸೆಕೆಂಡ್ ನಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತದೆ.
