
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತದ ಪ್ರಮುಖ ರೈತರು ಸಣ್ಣ ಮತ್ತು ಅತಿ ಸಣ್ಣ ವರ್ಗದವರಾಗಿದ್ದಾರೆ, ಸಮಯಕ್ಕೆ ಸರಿಯಾಗಿ ಮಳೆಬಾರದಿದ್ದರೆ, ಮಾರುಕಟ್ಟೆಯಲ್ಲಿ ರೇಟ್ ಸಿಗದಿದ್ದರೆ , ಎಷ್ಟು ಜನಕ್ಕೆ ಮೂರು ಹೊತ್ತು ಊಟ ಮಾಡುವುದು ಕೂಡ ಆಗುವುದಿಲ್ಲ, ಇಂತಹ ಕಿತ್ತು ತಿನ್ನುವ ಬಡತನವನ್ನು ಬುಡದಿಂದ ಕಿತ್ತು ತೆಗೆಯಲು ಕೇಂದ್ರ ಸರ್ಕಾರವು 2023 ಬಜೆಟ್ ನಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ
ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೆ ಸಿಗುತ್ತದೆಯೋ ಇಲ್ಲವೋ ಚೆಕ್ ಮಾಡಿ https://mahitisara.com/index.php/2023/01/31/pm-kisan-beneficiary-list-out-check-out-for-13thinstallment/
ಈ ಬಾರಿ ಕೇಂದ್ರ ಸರ್ಕಾರವು ಆಹಾರಕ್ಕೆ ಮತ್ತು ಸಾಮಾಜಿಕ ವಿತರಣೆಗೆ ಹೆಚ್ಚು ಮಹತ್ವ ಕೊಟ್ಟಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗರೀಬ್ ಕಲ್ಯಾಣ ಅನ್ನ ಯೋಜನೆ ಘೋಷಣೆ ಮಾಡಿದರು. ಈ ಯೋಜನೆ ಅಡಿ ಒಂದು ವರ್ಷದ ಕಾಲ ಅಂದರೆ ಡಿಸೆಂಬರ್ 2023 ರವರೆಗೂ ಎಲ್ಲಾ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ಸಿಗುವುದಾಗಿ ತಿಳಿಸಿದರು.
ಈ ಹಿಂದೆ ಕೇಂದ್ರ ಸರ್ಕಾರವು 30 ರೂಪಾಯಿ ಕೆಜಿಗೆ ಅಕ್ಕಿಯನ್ನು ಮತ್ತು ಗೋಧಿಯನ್ನು ಖರೀದಿಸಿ , ರಾಜ್ಯ ಸರ್ಕಾರಕ್ಕೆ ಕೆಜಿ ಅಕ್ಕಿಗೆ ರೂ. 3 ಮತ್ತು ಒಂದು ಕೆಜಿ ಗೋಧಿಗೆ ಎರಡು ರೂಪಾಯಿನಂತೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿತ್ತು. ಅದಕ್ಕಾಗಿ ಎರಡು ಲಕ್ಷ ಕೋಟಿ ರೂಪಾಯಿ ಕೇಂದ್ರ ಸರ್ಕಾರವೇ ಭರಸಲಿದೆ.
ಪ್ರತಿ ವರ್ಷ 2.14 ಲಕ್ಷ ಮೆಟ್ರಿಕ್ ಟನ್ ಅಷ್ಟು ಪಡಿತರ ಧಾನ್ಯಗಳನ್ನು ನೀಡುವ ಕೇಂದ್ರದ ಸಹಯೋಗದಿಂದ ರಾಜ್ಯ ಸರ್ಕಾರವು ಆಹಾರ ಇಲಾಖೆಯ ಮೂಲಕ ಒಟ್ಟು 1,50,70,073 ರೇಷನ್ ಕಾರ್ಡ್ ಗಳಿಗೆ ಪಡಿತರ ವಿತರಿಸುತ್ತಿತ್ತು. ಇದರಿಂದ ಎಲ್ಲಾ ಸಬ್ಸಿಡಿ ಧರ ಸೇರಿ ರಾಜ್ಯಕ್ಕೆ 350 – 400 ಕೋಟಿ ರೂಪಾಯಿ ಹೊರೆಯಾಗುತ್ತಿತ್ತು ಆದರೆ ಈಗ ಇಡೀ ದೇಶಕ್ಕೆ ಪಡಿತರ ಧಾನ್ಯ ವಿತರಣೆಗೆ ಜವಾಬ್ದಾರಿ ಹೊತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಉಳಿತಾಯ ಮಾಡಿದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9