Spread the love

ಪ್ರಿಯ ಓದು ಗರರಿಗೆ ಮಾಹಿತಿ ಸರ್ ವೆಬ್ಸೈಟ್ ನಿಂದ ನಮಸ್ಕಾರಗಳು, ಕಾಂಗ್ರೆಸ್ ಸರಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ದ ಬಗ್ಗೆ ರಾಮಲಿಂಗ ರೆಡ್ಡಿ ಅವರು ಮಹತ್ವದ ಘೋಷಣೆ ನೀಡಿದ್ದಾರೆ. ಈಗಾಗಲೇ ಅದರ ಎಲ್ಲಾ ವೆಚ್ಚದ ಬಗ್ಗೆ ಲೆಕ್ಕಾಚಾರ ಮಾಡಿದ್ದು ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿ ಮನೆಗೆಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಅರ್ಜಿ 👇👇
https://mahitisara.com/free-200-unit-electricity-from-newly-formed-congress-government/news/

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಹೇಳಿದಂತೆ ಎಲ್ಲಾ ಗ್ಯಾರಂಟಿಗಳನ್ನು ಹಂತಹಂತವಾಗಿ ಈಡೇರಿಸುತ್ತದೆ ಎಂದು ತಿಳಿಸಿದವರು , ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪಯಣವನ್ನು ಸದ್ಯದಲ್ಲಿ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಸುಮಾರು 3200 ಕೋಟಿ ರೂಪಾಯಿ ಪ್ರತಿವರ್ಷಕ್ಕೆ ಖರ್ಚು ಆಗಲಿದ್ದು , ಕೆಎಸ್ಆರ್ಟಿಸಿ ಈಗಾಗಲೇ ನಷ್ಟದಲ್ಲಿರುವ ಕಾರಣ ಸರಕಾರ ಸಹಾಯಧನ ಬಿಡುಗಡೆ ಮಾಡಿದರೆ ಯೋಜನೆಯನ್ನು ತಕ್ಷಣದಲ್ಲಿ ಜಾರಿಗೆ ತಾಗುವುದು ಎಂದು ಸಂಭಾಷಣೆ ನೀಡಿದರು.

ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ವರ್ಗಾವಾರು, ನಿಗಮವಾರು ಆರ್ಥಿಕ ವೆಚ್ಚವನ್ನು ಎಪ್ರಿಲ್ 2023ರಲ್ಲಿದ್ದಂತೆ ಲೆಕ್ಕ ಹಾಕಿರುವ ನಿಗಮಗಳು ಒಟ್ಟಾರೆ 4,220.88 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ. ಕೆಎಸ್ ಆರ್‌ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರೂ., ಬಿಎಂಟಿಸಿಗೆ 770.16 ಕೋಟಿ ರೂ., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರೂ. ಆರ್ಥಿಕ ವೆಚ್ಚವಾಗಲಿದೆ.

ರಾಜ್ಯ ವ್ಯಾಪಿ 4 ರಸ್ತೆ ಸಾರಿಗೆ ನಿಗಮಗಳ ಪೈಕಿ ಒಟ್ಟು 23,978 ವಾಹನಗಳಿವೆ. ಈ ಪೈಕಿ ಸಿಬ್ಬಂದಿ ಸಂಖ್ಯೆಯು 1,04,450 ರಷ್ಟು ಇದೆ ಜೊತೆಗೆ ಪ್ರತಿದಿನ 82.51 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ ಅದೇ ರೀತಿ ನಿಗಮಗಳ ಪೈಕಿ ಒಟ್ಟು 40 ವಿಭಾಗಗಳು ಹಾಗೂ 240 ಘಟಕಗಳಿದ್ದು, ಪ್ರತೀ ನಿತ್ಯ ಒಟ್ಟು 2,313 ಲಕ್ಷ ಗಳಷ್ಟು ಸಾರಿಗೆ ಆದಾಯ ಬರುತ್ತಿದೆ. ಪ್ರಸ್ತುತ ವಾರ್ಷಿಕವಾಗಿ 8,946.85 ಕೋಟಿ ರೂ. ಆದಾಯ ಬಂದಿದೆ ಎಂದು ಅವರು ವಿವರಿಸಿದರು.

ಯಾವುದೇ ಷರತ್ತು ವಿಧಿಸುವ ಚಿಂತನೆ ನಮಗಿಲ್ಲ ಮಂಗಳವಾರ ಕೇಂದ್ರ ಕಚೇರಿಯಲ್ಲಿ ಕೆಎಸ್ಸಾರ್ಟಿಸಿ ನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ಸಂಬಂಧ ಇಂದು ಸಭೆ ನಡೆಸಲಾಗಿದೆ. ಆದಾಯ, ಪ್ರಯಾಣಿಕರ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಸಂಗ್ರಹಿಸಲಾಗಿದೆ.

Leave a Reply

Your email address will not be published. Required fields are marked *