
ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಭಾರತ ಒಂದು ಕೃಷಿ ಆಧರಿತ ದೇಶ , ದೇಶದ ಆರ್ಥಿಕತೆಯಲ್ಲಿ ಕೃಷಿಯು ಮಹತ್ವವಾದ ಭಾಗವನ್ನು ಹೊಂದಿರುತ್ತದೆ, ದೇಶದ ಅಭಿವೃದ್ಧಿ ಕೃಷಿಯ ಅಭಿವೃದ್ಧಿಯಲ್ಲಿದೆ ಅಂದರೆ ತಪ್ಪಾಗಲಾರದು, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಕೃಷಿ ಅಭಿವೃದ್ಧಿಗಾಗಿ ಹಾಗೂ ರೈತನ ಹಿತಕ್ಕಾಗಿ ಅನೇಕ ಯೋಜನೆಗಳನ್ನು ಕೈಗೊಂಡಿವೆ , ಅದರಲ್ಲಿ ರೈತ ಶಕ್ತಿ ಯೋಜನೆ ಕೂಡ ಒಂದು.
ಜನವರಿ 31 ರಂದು ಧಾರವಾಡದ ಕೃಷಿ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮ ಒಂದರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ನೂತನ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಸಭಾಭವನದ ಸಭಾಂಗಣದಲ್ಲಿ ನಡೆದಂತ ಪೂರ್ವಸಭೆಯಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸಾದವರು ಇದರ ಬಗ್ಗೆ ಮಾಹಿತಿಯನ್ನು ನೀಡಿದರು.
ಹಾಗಾದರೆ ಈ ಯೋಜನೆ ಅಡಿ ರೈತರಿಗೆ ಎಷ್ಟು ಲಾಭವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಈ ಯೋಜನೆಗೆ ಅರ್ಹರಿದ್ದ ರೈತರಿಗೆ ಡೀಸೆಲ್ ಖರೀದಿಸಲು, ಪ್ರತಿ ಎಕರೆಗೆ 10 ಲೀಟರ್ ಗೆ 25 ರೂಪಾಯಿ ಸಬ್ಸಿಡಿ ಅಂತೆ ಸಹಾಯಧನ ನೀಡಲಿದೆ , ಒಂದು ಎಕ್ಕರೆ ಇದ್ದರೆ 250 ರೂಪಾಯಿ, ಎರಡು ಎಕ್ಕರೆ ಇದ್ದರೆ 500 ರೂಪಾಯಿ, ಮೂರು ಎಕ್ಕರೆ ಇದ್ದರೆ 750 ರೂಪಾಯಿ, 4 ಎಕರೆ ಇದ್ದರೆ 1000 ರೂಪಾಯಿಗಳು ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮಾವಾಗುತ್ತವೆ.
ಕೃಷಿ ಇಲಾಖೆಯ ಸಭಾಂಗಣದಲ್ಲಿ ಬೊಮ್ಮಾಯಿಯವರು ಅನೇಕ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದು. ದೇಶದಲ್ಲಿ ಪ್ರಪ್ರಥಮ ಬಾರಿಗೆ ಈ ರೈತ ಶಕ್ತಿ ಯೋಜನೆಗೆ ಕೂಡ ಅವರು ಚಾಲನೆ ನೀಡುತ್ತಾರೆ. ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿರುವ ಕಾರಣ ಸಿರಿಧಾನ್ಯ ಪ್ರದರ್ಶನ, ಸಾವಯುವ ಕೃಷಿ, ನೈಸರ್ಗಿಕ ಕೃಷಿ ಗೆ ಸಂಬಂಧ ಪಟ್ಟಂತ ಹಲವು ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ನೀವು ಇದೇ ರೀತಿ ನಿರಂತರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9