Spread the love

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 2022 -23 ಸಾಲಿನಲ್ಲಿ ಉಚಿತ ಬೋರವೆಲ್ ಅನ್ನು ಪಡೆಯಲು ಅರ್ಜಿ ಹಾಕಬೇಕೇ. ಇಲ್ಲಿದೆ ನೋಡಿ ಅದರ ಬಗ್ಗೆ ಮಾಹಿತಿ
ರೈತರೇ ಎಷ್ಟು ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರವೆಲ್ ಅನ್ನು ಹಾಕಿಸಲು ಸಹಾಯಧನ ನೀಡುತ್ತಿದೆ ಎಂದು ತಿಳಿಯೋಣ.

ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೆ ಸಿಗುತ್ತದೆಯೋ ಇಲ್ಲವೋ ಕೂಡಲೇ ತಿಳಿಯಿರಿ https://mahitisara.com/pm-kisan-new-updates-and-ekyc-awareness/pmkisan/

ಕರ್ನಾಟಕ ರಾಜ್ಯಾದ್ಯಂತ ಎಲ್ಲ ಇರುವ ಮಡಿವಾಳ ಮಾಚಿದೇವ ಸಮುದಾಯದ ಅಭಿವೃದ್ಧಿ ನಿಗಮ, ಸವಿತಾ ಸಮುದಾಯದ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, 2022 – 2023 ನೇ ಸಾಲಿನ ರೈತರಿಗೆ ಉಚಿತವಾಗಿ ಜಮೀನಿನಲ್ಲಿ ಬೋರ್ವೆಲ್ ಅನ್ನು ಹಾಕಿಸಿಕೊಳ್ಳಲು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಮತ್ತೆ ಹೊಸ ಅರ್ಜಿಯನ್ನು ಹಾಕಲು ಕರೆಯಲಾಗಿದೆ. ಈ ಬಾರಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ದೊಡ್ಡದಾದ ಬದಲಾವಣೆ ಮಾಡಲಾಗಿದ್ದು ಅರ್ಜಿ ಸಲ್ಲಿಸುವ ರೈತರಿಗೆ ಒಳ್ಳೆಯ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಬದಲಾಗಿರುವ ಹೊಸ ನಿಯಮ ಏನು ಅಂದರೆ ಹಾಗೂ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಆಗಿರುವ ದೊಡ್ಡ ಬದಲಾವಣೆ ಅನ್ನು ಮತ್ತು ಅರ್ಜಿಗಳನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಅದಕ್ಕೆ ಬೇಕಾಗುವ ದಾಖಲೆ ಯಾವು ಯಾವು ಎಂದು ತಿಳಿಯಿರಿ.

ಯಾವ ಆಡಳಿತ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬೋರವೆಲ್ ಹಾಕಿಸಲು ಸಹಾಯಧನ ಇದೆ?
ಡಿ. ದೇವರಾಜ ಅರಸು ಅವರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ – ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಬೋವಿ ಸಮುದಾಯದ ಅಭಿವೃದ್ಧಿ ನಿಗಮ.
ಕರ್ನಾಟಕ ಮಡಿವಾಳ ಮಾಚಿದೇವ ಸಮುದಾಯ ಅಭಿವೃದ್ಧಿ ನಿಗಮದಿಂದ, ಹಾಗೂ ಸವಿತಾ ಸಮುದಾಯ ನಿಗಮ, 2022-23ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಯನ್ನು ಪ್ರವರ್ಗ-1ರಡಿಯಲ್ಲಿ ಬರುವ ಕ್ರಮ ಸಂಖ್ಯೆ: 53(ಎ) ಯಿಂದ 53(ಎ) ವರೆಗಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರ ಅವಕಾಶ ಸಿಗಲಿದೆ ಎಂಬುದು ಈಗಾಗ್ಲೇ ತಿಳಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಬೋರವೆಲ್ ಹಾಕಿಸಲು ರೈತ ಎಷ್ಟು ಆಡಳಿತಕ್ಕೆ ಕಟ್ಟಬೇಕಾ ಅಥವಾ ಎಗೆ ಎಂದು ತಿಳಿಯಿರಿ.
ಮುಖ್ಯವಾಗಿ ಹೇಳಬೇಕೆಂದರೆ ಈ ಯೋಜನೆ ಅಡಿಯಲ್ಲಿ ಬೋರವೆಲ್ ಹಾಕಿಸಲು ಘಟಕವೆಚ್ಚ ಎಂದು 2.50ಲಕ್ಷರೂ.ಗಳಾಗಿರುತ್ತದೆ. ಇದರಲ್ಲಿ ರೂ.2.00ಲಕ್ಷಗಳ ಸಹಾಯಧನವಾಗಿ ಮತ್ತು ಹೆಚ್ಚುವರಿಯಾಗಿ ಆಗತ್ಯವಿದ್ದಲ್ಲಿ ರೂ.50,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ 3 ವರ್ಷಗಳ ಮರುಪಾವತಿ ಅವಧಿಯೊಂದಿಗೆ ನೀಡಲಾಗುತ್ತದೆ ಎಂಬುದು ಎಂಬಲಾಗಿದೆ.ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.00ಲಕ್ಷಗಳಾಗಿರುತ್ತದೆ. ಇದರಲ್ಲಿ ರೂ.3.50ಲಕ್ಷಗಳ ಸಹಾಯಧನ ಮತ್ತು ಹೆಚ್ಚುವರಿಯಾಗಿ ಅಗತ್ಯವಿದ್ದಲ್ಲಿ ರೂ.50,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ 3 ವರ್ಷಗಳ ಮರುಪಾವತಿ ಅವಧಿಯೊಂದಿಗೆ ಉಪಜಾತಿಗೆ ನೀಡಲಾಗುತ್ತದೆ. ಎಂಬುದು ಈ ಗಂಗಾ ಕಲ್ಯಾಣ ದ ಯೋಜನಾ.

ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳು ಮತ್ತು ಷರತ್ತು ಗಳು?

• ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ನಿವಾಸಿಯಾಗಿರಬೇಕು.
• ಕೇಂದ್ರ ಆಧಾರ್ ಆಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಬೇಕೇ ಬೇಕು . ಅರ್ಜಿದಾರರ ಹೆಸರು ಸೇರಿದವರಾಗಿರಬೇಕು.
• ಆಧಾರ್ ಕಾರ್ಡ ಮತ್ತು ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್‌ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು.
• ಸವಿತಾ ಸಮುದಾಯ ಒಳಗೊಂಡ ಉಪಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
• ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷ ಕ್ಕೂ ಹೆಚ್ಚಾಗಿರಬಾರದು.
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
• ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು.
• ಕುಟುಂಬದ ಒಬ್ಬರಿಗೆ ಅಷ್ಟೇ ಈ ಸೌಲಭ್ಯವನ್ನು ಒದಗಿಸಲಾಗುವುದು.
• ಸರ್ಕಾರದ ನಿಗಮವು ಕಾಲ ಕಾಲಕ್ಕೆ ವಿಧಿಸುವ ನಿಬಂಧನೆಗಳನ್ನು ಹೊಂದಿರಬೇಕು

ಅರ್ಜಿ ಸಲ್ಲಿಕೆಯನ್ನು ಎಲ್ಲಿ?ಮತ್ತು ಹೇಗೆ? ಹಾಗೂ ಕೊನೆಯ ದಿನಾಂಕ ಎಷ್ಟು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-02-2023 ರಿಂದ 03-03-2023ರವರೆಗೆ ನಿಗದಿ ಪಡಿಸಲಾಗಿದೆ.ಎಂದು ಹಾಗೂ ಅರ್ಜಿಯನ್ನು ರೈತರು ಸೇವಾ ಸಿಂಧು ಪೋರ್ಟಲ್ ನ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್‌ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಅಡಿಯಲ್ಲಿ ಇದೆ.
• ಸೇವಾ ಸಿಂಧು ತಂತ್ರಾಂಶದ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಮೂಡಿಸಿದೆ.
• ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಗಳಲ್ಲಿರುವ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಡಿ.ದೇವರಾಜ
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ನಿಗಮದ ಮುಖ್ಯ ವೆಬ್‌ ಸೈಟ್ https://kssd.karnataka.gov.in
• ಮಡಿವಾಳ ಮಾಚಿದೇವ ಸಮುದಾಯ ಫಲಾನುಭವಿಗಳು ಮುಖ್ಯ ವೆಬ್ಸೈಟ್ http://www.kmmd.karnataka.gov.inಸಹಾಯ ಪಡೆಯಬೇಕು.
• ನಿಗಮದ ಸಹಾಯವಾಣಿ ಅರ್ಜಿದಾರರು ಅರ್ಜಿಗಳನ್ನು ದಿನಾಂಕ: 03-03-2023ರವರೆಗೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್‌, ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಮತ್ತು ಇನ್ನಿತರ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.


ಬೋರವೆಲ್ ಹಾಕಿಸಲು 2.5 ಲಕ್ಷ ಸಹಾಯಧನ ಮತ್ತು 3.5 ಲಕ್ಷ ಈಗ ಕೂಡಲೇ ಅರ್ಜಿ ಸಲ್ಲಿಸಿ
September 7, 2022

14 thoughts on “ಬೋರ್ವೆಲ್ ಹಾಕಿಸಲು 2.5 ಲಕ್ಷದಷ್ಟು ಸಹಾಯದ, ಕೂಡಲೇ ಅರ್ಜಿ ಸಲ್ಲಿಸಿ”

Leave a Reply

Your email address will not be published. Required fields are marked *