
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಸರ್ಕಾರವು 5 ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ತಿಂಗಳಿಗೆ 2000 ರೂ ಗಳನ್ನು ಕೊಡುವ ಭರವಸೆಯನ್ನು ಈಗ ಈಡೇರಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆ, ಮಹಿಳೆಯರಿಗೆ ತಿಂಗಳಿಗೆ 2000.
ಜುಲೈ 19 ರಿಂದ ಅರ್ಜಿ ಅಹ್ವಾನ
ಸರ್ಕಾರವು 5 ಗ್ಯಾರಂಟಿ ನೀಡಿತ್ತು ಅದರಲ್ಲಿ ಮೊದಲನೇ ಗೃಹಜ್ಯೋತಿ ಯೋಜನೆ ಅಡಿ ಎಲ್ಲಾ ಮನೆಗಳಿಗೂ ಅದರದೇ ಅದ ನಿಯಮ ಬದ್ಧಗಳನ್ನು ಅನುಸರಿಸುತ್ತಾ ವಿದ್ಯುತ್ ಉಚಿತವಾಗಿ ನೀಡುತ್ತಿದೆ, ಮತ್ತು ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುವ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಈಗ ತಿಂಗಳಿಗೆ 2000 ರೂ ನೀಡುವ ಅರ್ಜಿಯನ್ನು ಯಾವ ರೀತಿ ಹಾಕಬೇಕು ಎಂಬುದರ ಬಗ್ಗೆ ಈ ಕೆಳಗೆ ಮಾಹಿತಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಒತ್ತಿ 👇👇
https://www.karnataka.gov.in/storage/pdf-files/Gruha%20Laxmi%20GO.pdf
ಅರ್ಜಿ ಹಾಕಲು ಬೇಕಾಗಿರುವ ದಾಖಲಾತಿಗಳು.
- ಮನೆ ಒಡತಿಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಪುಸ್ತಕ
- ಫೋಟೋ
- (ಫೋನ್ ಒಟಿಪಿ ಬೇಕಾದ್ದಲ್ಲಿ )
- ಮತ್ತು ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿ.
ಈ ಅರ್ಜಿಯನ್ನು ನಿಮ್ಮ ಹತ್ತಿರದ CSC ಅಥವಾ ಸೇವಾ ಸಿಂಧೂ, ಗ್ರಾಮ ಒನ್ ಕೇಂದ್ರ ಗಳಲ್ಲಿ ಅರ್ಜಿ ಹಾಕಿರಿ.