Spread the love

ಪ್ರಿಯಾ ರೈತರಿಗೆ ನನ್ನ ನಮಸ್ಕಾರಗಳು,
ವೇಸ್ಟ್ ಡಿಕಂಪೋಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಹಾಗಾದರೆ ಈ ವೇಸ್ಟ್ ಡಿ ಕಂಪೋಸರ್ ಅಂದರೆ ಏನು? ವೇಸ್ಟ್ ಡಿಕಂಪೋಸರ್ ಹಲವು ತರಹದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ ಇದನ್ನು ನಾಟಿ ಹಸುವಿನ ಸಗಣಿಯ ಹೊಳೆಯಲ್ಲಿರುವ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ಲ್ಯಾಬ್ ನಲ್ಲಿ ತಯಾರಿಸಿದ ಒಂದು ಕಲ್ಚರ್. ಇದನ್ನು ಬಳಕೆ ಮಾಡುವುದರಿಂದ ರೈತ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಇದನ್ನು ಬಳಸುವುದರಿಂದ ಆಗುವ ಲಾಭಗಳು.
ಇದು ಮಣ್ಣಿನಲ್ಲಿರುವ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಹೆಚ್ಚಿಸುತ್ತದೆ.

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ.

ಬೆಳೆಯ ಇಳುವರಿ ಹೆಚ್ಚಿಸುತ್ತದೆ ಮತ್ತು ಗಿಡಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೀಜೋಪಚಾರ ಕ್ಕೆ ಬಳಸುವುದರಿಂದ ಬೀಜಗಳ ಮೊಳಕೆ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಿಂದ ಬರುವ ಎಲ್ಲ ರೋಗಗಳನ್ನು ನಿಯಂತ್ರಿಸುತ್ತದೆ.

ಇದರ ನಿರಂತರ ಬಳಕೆಯಿಂದ ಎರೆಹುಳುಗಳಿಗೆ ಸಹಾಯವಾಗುತ್ತದೆ ಅಲ್ಲದೆ ಉಪಯೋಗಕಾರಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಕೂಡ ಹೆಚ್ಚಿಸುತ್ತದೆ. ಭೂಮಿಯು ನಿಧಾನವಾಗಿ ಹದವಾಗುತ್ತ ಬರುತ್ತದೆ
ತೋಟದ ತ್ಯಾಜ್ಯಗಳು ಬೆಳೆ ಉಳಿಕೆಗಳು ಮತ್ತು

ಒರಿಜಿನಲ್ ವೆಸ್ಟ್ ಡಿ ಕಂಪೋಸರ್ ದ್ರಾವಣ ತಯಾರಿಸಲು ಬೇಕಾಗುವ ವಸ್ತುಗಳು
OWDC 1 ಬಾಟಲ್
2ಕೆಜಿ ಸಾವಯವ ಬೆಲ್ಲ
200 ಲೀಟರ್ ಅಳತೆಯ ಪ್ಲಾಸ್ಟಿಕ್ ಡ್ರಮ್
ಬಿದಿರಿನ /ಕಟ್ಟಿಗೆಯ ಕೋಲು
ಮುಚ್ಚಲಿಕ್ಕೆ ಬಟ್ಟೆ ಅಥವಾ ಗೋಣಿಚೀಲ
ಒರಿಜಿನಲ್ ವೇಸ್ಟ್ ಡಿಕಂಪೋಸರ್ ದಾವಣ

ವೆಸ್ಟ್ ಡಿ ಕಂಪೋಸರ್ ನ ತಯಾರಿಸುವ ವಿಧಾನ
ಮೊದಲಿಗೆ ಒಂದು ಡ್ರಮ್ಮಿನಲ್ಲಿ ಅರ್ಧದಷ್ಟು ನೀರು ತುಂಬಿಸಬೇಕು, ನಂತರ 2ಕೆಜಿ ಬೆಲ್ಲವನ್ನು ಪುಡಿ ಮಾಡಿ ಡ್ರಮ್-ಗೆ ಹಾಕಿ ಕೋಲಿನಿಂದ ತಿರುಗಿಸಿ
OWDC ಬಾಟಲ್ ನಲ್ಲಿ ಇರುವ ಸಂಪೂರ್ಣ ದ್ರಾವಣವನ್ನು ಡ್ರಮ್-ಗೆ ಹಾಕಿ ಆಮೇಲೆ ನೀರು ಸಂಪೂರ್ಣವಾಗಿ ತುಂಬಿಸಿ ಕೋಲಿನಿಂದ ತಿರುಗಿಸಿ

ಆಮೇಲೆ ಬಟ್ಟೆಯಿಂದ/ ಗೋಣಿ ಚೀಲದಿಂದ ದ್ರಾವಣವನ್ನು ಮುಚ್ಚಿ ದಾರದಿಂದ ಕಟ್ಟಿ ಬಿಡಿ

ಹೀಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೋಲಿನಿಂದ ತಿರುಗಿಸಬೇಕು. ಹೀಗೆ ಐದು ದಿನವೂ ಮಾಡಬೇಕು ಆಗ ದ್ರಾವಣ ಬೆಳಕಿಗೆ ಸಿದ್ದವಾಗುತ್ತದೆ.

ವೇಸ್ಟ್ ಡಿಕಂಪೋಸರ್ ಬಳಸುವ ವಿಧಾನ


ಬೆಳಗ್ಗೆ ನೀರು ಕೊಡುವಾಗ ಒಂದು ಕನಿಷ್ಠ 500 ಲೀಟರ್ ನಿಂದ 1000 ಲೀಟರ್ ದ್ರಾವಣ ವನ್ನು ತಯಾರಿಸಿ ಗಿಡಗಳ ಹತ್ತಿರ ಕೊಡುವುದರಿಂದ ಉತ್ತಮವಾದ ಪರಿಣಾಮವನ್ನು ಪಡೆಯಬಹುದು/ ಹನಿ ನೀರಾವರಿಯಿಂದ ಕೊಡಬಹುದು/ದ್ರಾವಣವನ್ನು ಬಕೇಟ್ನಲ್ಲಿ ತೆಗೆದುಕೊಂಡು ಗಿಡಗಳ ಬುಡಕ್ಕೆ ಕೂಡ ಚೆಲ್ಲಬಹುದು. ದ್ರಾವಣ ಕೊಡುವ ಮೊದಲು ಭೂಮಿಯು ತೇವಾಂಶದಿಂದ ತುಂಬಿರಬೇಕು ಬೀಜಗಳ ಉಪಚಾರಕ್ಕೆ ತಯಾರಾದ ಬೀಜಗಳನ್ನು ಕನಿಷ್ಠ ಮೂವತ್ತು ನಿಮಿಷಗಳವರೆಗೆ OWDC ದ್ರಾವಣದಲ್ಲಿ ಇಟ್ಟು ನೆರಳಿನಲ್ಲಿ ಒಣಗಿಸಿ ಆಮೇಲೆ ಬೀಜ ಬಿತ್ತನೆ ಮಾಡಬಹುದು

ಬೆಳೆ ವಿಮೆ ಹಣ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿhttps://mahitisara.com/pm-kisan-belevime-if-not-credited-do-this-work/government-schemes/

OWDC ಸಿಂಪರಣೆ ಮಾಡುವ ವಿಧಾನ
ವಾರಕ್ಕೆ ಒಂದು ಸಾರಿ ಸಿಂಪರಣೆ ಮಾಡುವುದಾದರೆ 50ರಷ್ಟು ದ್ರಾವಣ ಮತ್ತು 50 ರಷ್ಟು ನೀರನ್ನು ಒಂದು ಕ್ಯಾನ್ ಗೆ ಬಳಸಬಹುದು
ಪ್ರತಿ ಮೂರು ದಿನಕ್ಕೆ ಒಂದು ಸಿಂಪರಣೆ ಮಾಡುವುದಾದರೆ 40ರಷ್ಟು ದ್ರಾವಣ ಮತ್ತು 60 ರಷ್ಟು ನೀರನ್ನು ಬಳಸಬಹುದು
ಮರವಳಿ ಅಥವಾ ಹಣ್ಣಿನ ಗಿಡಗಳಿಗೆ ಸಿಂಪರಣೆ ಮಾಡುವುದಾದರೆ 60ರಷ್ಟು ದ್ರಾವಣ ಮತ್ತು 40ರಷ್ಟು ನೀರನ್ನು ಬಳಸಿ
ಬೆಳೆ ಕಟಾವು ಆದ ಮೇಲೆ ಉಳಿದಿರುವ ಕಾಂಡಗಳ ಮತ್ತು ಬೆಳವಣಿಗೆಗಳ ಮೇಲೆ 500ರಿಂದ 1000 ಲೀಟರ್ ದ್ರಾವಣ ಸಿಂಪರಣೆ ಮಾಡಿ ಅಥವಾ ಅದರ ಮೇಲೆ ಚೆಲ್ಲಿ ಇದರಿಂದ ಬೆಳೆ ಉಳಿಕೆಗಳು ಕಳಿಸು ಬೇಗ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/GXLaYA9JrR827Z5X31a9WC

4 thoughts on “ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.”

Leave a Reply

Your email address will not be published. Required fields are marked *