
ಪ್ರಿಯ ಓದುಗರೇ ಮನುಷ್ಯರಿಗೆ ಕ್ಯಾನ್ಸರ್ ಗಡ್ಡೆಗಳಾಗುವುದು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ. ಹಾಗೆಯೇ ಇದರಿಂದ ಚಿಕಿತ್ಸೆ ಪಡೆದಿರುವುದು ಕೂಡ ಕೇಳಿರುತ್ತೀರಿ. ಆದರೆ ಹಾವಿಗೆ ಆಗಿದ್ದ ಕ್ಯಾನ್ಸರ್ ಗಡ್ಡೆಯನ್ನು ವೈದ್ಯರೊಬ್ಬರು ಶಸ್ತ್ರ ಚಿಕಿತ್ಸೆ ಮೂಲಕ ಆ ಹಾವಿಗೆ ಮರುಜನ್ಮ ನೀಡಿದ್ದಾರೆ. ಇದೊಂದು ಅಸಾಧ್ಯವಾದ ಘಟನೆಯೆಂದರೆ ತಪ್ಪಾಗಲಾರದು.
ಧಾರವಾಡದ ಪಶು ಪ್ರಿಯರಾದಂತ ಸೋಮಶೇಖರ್ ಚನ್ನಾಶೆಟ್ಟಿ ಡಿಸೆಂಬರ್ 28ರಂದು ಧಾರವಾಡದ ಒಂದು ಏರಿಯಾದಲ್ಲಿಂದ, ಹಾವು ಅಡಗಿಕೊಂಡಿದೆ ಎಂದು ಒಂದು ಮನೆಯಿಂದ ಕರೆ ಬಂದ ಕಾರಣ, ಅವರು ಹಾವಿನ ರಕ್ಷಣೆಗೆಂದು ತೆರಳಿದ್ದ ಅವರು ಕಂಡಿದ್ದು ಆಭರಣ ಹಾವು. ಈ ಹಾವಿನ ವಿಶೇಷತೆ ಎಂದರೆ ಇವು ವಿಷಕಾರಿ ಇರುವುದಿಲ್ಲ ಹಾಗೂ ನೋಡಲು ತುಂಬಾ ಸುಂದರವಾಗಿರುತ್ತವೆ. ಇವರು ಹಾವನ್ನು ಕೈಯಲ್ಲಿ ಹಿಡಿದು ತಲೆಯ ಮೇಲೆ ಉಬ್ಬಿದ ಜಾಗವನ್ನು ಕಂಡು, ಸೂಕ್ಷ್ಮವಾಗಿ ಗಮನಿಸುತ್ತಾರೆ, ನಂತರ ಅವರು ಆ ಹಾವನ್ನು ಕೃಷಿ ವಿಶ್ವವಿದ್ಯಾಲಯ ಪಶು ಆಸ್ಪತ್ರೆಯ ಹಿರಿಯ ವೈದ್ಯರಾದಂತ ಡಾಕ್ಟರ್ ಅನಿಲ್ ಕುಮಾರ್ ಪಾಟೀಲ್, ಅವರ ಹತ್ತಿರ ತೆಗೆದುಕೊಂಡು ಬರುತ್ತಾರೆ.
ಕಷ್ಟಕರವಾಗಿದ್ದ ಶಾಸ್ತ್ರ ಚಿಕಿತ್ಸೆ

ಹಾವು ಅತ್ಯಂತ ಸೂಕ್ಷ್ಮವಾದ ಜೀವಿ ಮತ್ತು ಅದರ ಚರ್ಮ ಅದಕ್ಕಿಂತ ಸೂಕ್ಷ್ಮ ವಾದದ್ದು, ಹೀಗಾಗಿ ಶಸ್ತ್ರಚಿಕಿತ್ಸೆ ಅಷ್ಟು ಸುಲಭವಾಗಿರಲಿಲ್ಲ. ಚಿಕಿತ್ಸೆಗೆ ತಂದಂತ ಹಾವನ್ನು ಡಾಕ್ಟರ್ ಅನಿಲ್ ಕುಮಾರ್ ಪಾಟೀಲ್ ಅವರು ಸಂಪೂರ್ಣ ಪರಿಶೀಲನೆ ಮಾಡಿದ ನಂತರ ಎಲಬುಗಳ ಮೇಲೆ ಟ್ಯೂಮರ್ ಬೆಳೆದಿದೆ ಎಂದು ತಿಳಿಸಿದರು. ನಂತರ ಶಸ್ತ್ರ ಚಿಕಿತ್ಸೆಗೆ ಬೇಕಾದಂತ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ ಇದು ಹಾವಿನ ತಲೆಯ ಮೇಲೆ ಕ್ಯಾನ್ಸರ್ ಗಡ್ಡೆ ಎಂದು ಖಚಿತಪಡಿಸುತ್ತಾರೆ.
ಆಸ್ಪತ್ರೆಯ ಸಹಾಯಕರ ಸಹಕಾರದಿಂದ, ಆ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲು ಯಶಸ್ವಿಯಾಗಿದ್ದಾರೆ.
ಹಾವಿಗೆ ಮರುಜನ್ಮ ನೀಡಿದ ಡಾಕ್ಟರ್ ಅನಿಲ್ ಕುಮಾರ್ ಪಾಟೀಲ್
ಹಾವು ತುಂಬ ಸೂಕ್ಷ್ಮವಾದಂತಹ ಜೀವಿಗಳಾಗಿದ್ದು, ಚಿಕಿತ್ಸೆ ಮಾಡುವುದು ಸುಲಭದ ಮಾತಾಗಿರಲಿಲ್ಲ, ಅದರ ಕಣ್ಣು ಮತ್ತು ತಲೆಯ ಮೇಲೆ ಕ್ಯಾನ್ಸರ್ ಗಡ್ಡೆ ಬೆಳೆದಿದ್ದು ಅದನ್ನು ತೆಗೆಯುವುದು ಸವಾಲಾಗಿತ್ತು. ಸುಮಾರು ಒಂದುವರೆ ಗಂಟೆಗಳ ಕಾಲ ಈ ಶಾಸ್ತ್ರ ಚಿಕಿತ್ಸೆ ನಡೆದಿದ್ದು ಕ್ಯಾನ್ಸರ್ ಗಡ್ಡೆಯನ್ನು ತೆಗೆಯಲು ಇವರು ಯಶಸ್ವಿಯಾಗುತ್ತಾರೆ. ಈಗ ಒಂದೆರಡು ದಿನ ಹಾವನ್ನು ಸೋಮಶೇಖರ್ ಅವರ ಬಳಿಯೇ ಇರಿಸಿಕೊಳ್ಳಲು ಸೂಚಿಸಿದ್ದೇನೆ. ಕಾರಣ ಹಾವಿಗೆ ಇನ್ನೂ ಎರಡು ದಿನ ಡ್ರೆಸ್ಸಿಂಗ್ ಅವಶ್ಯಕತೆ ಇದ್ದು ಅದನ್ನು ಸೋಮಶೇಖರ್ ಅವರೇ ಮಾಡಲಿದ್ದಾರೆ. ಹಾವಿನ ಪ್ರಾಣಕ್ಕೆ ಯಾವುದೇ ಆದಂತ ತೊಂದರೆ ಇಲ್ಲ ಎಂದು ಡಾಕ್ಟರ್ ಅನಿಲ್ ಕುಮಾರ್ ಪಾಟೀಲ್ ಅವರು ತಿಳಿಸಿದ್ದಾರೆ.
ಮಾಹಿತಿ ಸಾರ : ಹೀಗೆ ದಿನನಿತ್ಯದ ಕೃಷಿಗೆ ಸಂಬಂಧಿಸಿದಂತ, ಉದ್ಯೋಗ ಸಂಬಂಧಿಸಿದಂತ, ಹಾಗೆ ಇತರೆ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ.
https://chat.whatsapp.com/FA0PdNzN7gPBDMgjXsvVW9