
ಎಲ್ಲ ರೈತ ಬಾಂಧವರಿಗೂ ಮಾಹಿತಿಸಾರ ವೆಬ್ಸೈಟ್ ಇಂದ ನಮಸ್ಕಾರಗಳು. ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ಮುಂಗಾರು ಬೆಳೆಯು ನಾಶವಾಗಿದ್ದು ರೈತನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಸರಕಾರವು ರೈತನಿಗೆ ಆರ್ಥಿಕವಾಗಿ ನೆರವಾಗಲೆಂದು ಕ್ರಾಪ್ ಇನ್ಶೂರೆನ್ಸ್ ಅಂದರೆ ಬೆಳೆ ವಿಮೆಯನ್ನು ಬಿಡುಗಡೆ ಮಾಡಿದೆ. ಬೆಳೆ ವಿಮೆ ಪದ್ಧತಿಯನ್ನು ಸರಕಾರವು ಹಲವು ವರ್ಷಗಳಿಂದ ಕೈಗೊಳ್ಳುತ್ತಾ ಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಒತ್ತಿ
https://www.samrakshane.karnataka.gov.in/publichome.aspx
ಎಲ್ಲ ರೈತ ಬಾಂಧವರಿಗೆ ಇದು ಸಂತಸದ ವಿಷಯವಾಗಿದೆ. ಸರಕಾರ ನಿನ್ನೆ ತಾನೇ ಎಲ್ಲ ರೈತರ ಖಾತೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮಾ ಜಮಾ ಆಗಿದೆ. ಬೆಳೆ ವಿಮೆ ತುಂಬಿದಂತ ಎಲ್ಲ ರೈತರಿಗೆ ನಿನ್ನೆ ಹಣ ಜಮವಾಗಿದೆ. ನಿಮ್ಮ ಖಾತೆಗೂ ಜಮಾ ಆಗಿದೆಯಾ ತಿಳಿದುಕೊಳ್ಳಿ.
ನಿಮಗೆಲ್ಲರಿಗೂ ತಿಳಿದ ಹಾಗೆಯೇ ಉತ್ತರ ಕರ್ನಾಟಕದ ಮುಖ್ಯ ಬೆಳೆಯಾದ ಮೆಣಸಿನಕಾಯಿ, ಮಳೆಗೆ ತುತ್ತಾಗಿ ಬೆಳೆಯು ನೀರು ಪಾಲಾಗಿದೆ, ಸರಕಾರವು ಈ ಬೆಳೆಗೆ ಅಧಿಕ ಬೆಳೆ ವಿಮೆಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಒಂದು ಎಕರೆ ವಿಮೆ ತುಂಬಿದರೆ ನಿಮಗೆ ಎಷ್ಟು ಹಣ ಜಮಾ ಆಗುತ್ತದೆ?
ಮೆಣಸಿನಕಾಯಿ ಬೆಳೆಯು ಬಹಳ ಹಾನಿಯಾಗಿದ್ದ ಕಾರಣ , ಇನ್ಶೂರೆನ್ಸ್ ಕಂಪನಿಯು ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು ಅಧಿಕ ಬೆಳೆ ವಿಮೆ ಬಿಡುಗಡೆ ಮಾಡಲು ನಿರ್ಧರಿಸಿದೆ . ಅಂದರೆ ಪ್ರತಿ ಒಂದು ಎಕರೆ ಮೆಣಸಿನಕಾಯಿ ಬೆಳೆ ವಿಮೆಗೆ ನಿಮಗೆ 13,500 ಜಮಾ ಆಗುತ್ತದೆ. ನಿನ್ನೆ ನನ್ನ ಖಾತೆಗೆ ಹಣ ಜಮಾ ಆಗಿದೆ , ಮತ್ತು ನಮ್ಮ ಜಿಲ್ಲೆ ಗದಗ್ ನ ಎಲ್ಲ ರೈತರಿಗೂ ಕೂಡ ಹಣ ಜಮಾ ಆಗಿದೆ, ಬೇರೆ ಬೇರೆ ಜಿಲ್ಲೆಯ ರೈತರಿಗೆ ಹಂತ ಹಂತವಾಗಿ ಬೆಳೆ ವಿಮೆಯು ಜಮಾ ಆಗಲಿದೆ. ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗುತ್ತದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿಯಬಹುದು.
ಮೊದಲಿಗೆ ನೀವು ಭಾರತದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
https://www.samrakshane.karnataka.gov.in/publichome.aspx
ನಂತರ ಅಲ್ಲಿ ಈ ವರ್ಷ ಅಂದರೆ 2022-23 ಮತ್ತು ಮುಂಗಾರು ಬೆಳೆ ಆಯ್ದುಕೊಂಡು ಸಬ್ಮಿಟ್ ಒತ್ತಬೇಕು.
ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ವಿಮೆಯ ಪ್ರಪೋಸಲ್ ನಂಬರ್ ಅನ್ನು ಹಾಕಿ ಸಬ್ಮಿಟ್ ಒತ್ತಿದರೆ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಲಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.