
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶವಾಗಿದ್ದು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ರೈತನ ಪಾಲು ಮಹತ್ವದ್ದಾಗಿದೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರವು ರೈತನ ಏಳಿಗೆಗೆಂದು ರೈತನ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ನೀಡುತ್ತಲೇ ಬಂದಿದೆ. ನಿಮಗೆ ಬೆಳೆವಿಮೆ ಜಮಾ ಆಗಿದೆಯೋ ಇಲ್ಲವೋ ? ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪಿಎಂ ಕಿಸಾನ್ 13ನೇ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿ https://mahitisara.com/pm-kisan-13th-installment-deposit-27th-at-3-pm/%e0%b2%95%e0%b3%83%e0%b2%b7%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/
ಬೆಳೆ ವಿಮೆಯನ್ನು ಎಲ್ಲಿ ಮಾಡಿಸಬೇಕು?
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹಿಂಗಾರು ಬೆಳೆ ವಿಮೆಗೆ ಈಗಾಗಲೇ ಅರ್ಜಿ ಕರೆಯಲಾಗಿದೆ. ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯ ಫಲಾನುಭವಿಯಾಗಲು ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಗಳಿಗೆ , ಗ್ರಾಮ ಒನ್ ಕೇಂದ್ರಗಳಿಗೆ ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಅರ್ಜಿ ಸಲ್ಲಿಸಲು ಹೊಲದ ಉತಾರ, ಬ್ಯಾಂಕ್ ಪಾಸ್ ಬುಕ್ , ಮತ್ತು ಆಧಾರ್ ಕಾರ್ಡನ್ನು ನೀಡಬೇಕಾಗುತ್ತದೆ. ಯಾವ ಬೆಳೆಗೆ ವಿಮೆ ಮಾಡಿಸಿದ್ದೋರೋ ವಿಮೆ ಕಂಪನಿಗೆ ನೀವು ಬೆಳೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.
ರೈತರು ಯಾವ ಕಂಪನಿಗೆ ಬೆಳೆ ವಿಮೆಯನ್ನು ಕಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ಲಿಂಕ್ ಅನ್ನು ಒತ್ತಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. https://www.samrakshane.karnataka.gov.in/
ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ, ಮತ್ತು ಎಷ್ಟು ಹಣ ಜಮಾ ಆಗಿದೆ, ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು.
ಬೆಳೆ ಹಾನಿ ಮಾಹಿತಿ ಪಡೆಯಲು ಜಿಲ್ಲೆಯ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 18001801551 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ : ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/DWwuT4zbwG379nGfgQTydZ