ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿರುವಂತಹ ಕೃಷಿಯಾಗಿದೆ. ಹಸು ಸಾಕಾಣಿಕೆ ಖರ್ಚು ಲಾಭ ಸಂಪೂರ್ಣ ಮಾಹಿತಿ ತಿಳಿಯಿರಿ

ಹೈನುಗಾರಿಕೆ ಎಂದರೇನು??
ಹೈನುಗಾರಿಕೆ ಎಂಬುದು ಹಸುಗಳನ್ನು ಸಾಕಾಣಿಕೆ ಮಾಡುವುದು, ಸಾಮಾನ್ಯವಾಗಿ ಹಾಲು ಉತ್ಪಾದನೆ ಮಾಡಲು ಹೈನುಗಳನ್ನು ಬಳಸುತ್ತಾರೆ, ಮತ್ತು ಕುರಿ ಮೇಕೆ, ಗಳನ್ನು ಸಹ ಹಾಲು ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ.
ಹಸು ಸಾಕಾಣಿಕೆ ಖರ್ಚು ಲಾಭ
ಇದನ್ನು ಮಾಡಬೇಕಾದರೆ ಮುಖ್ಯವಾಗಿ ಹಸುಗಳನ್ನು ಕಟ್ಟಲು ಶೆಡ್ ಮಾಡಬೇಕಾದರೆ ಅದಕ್ಕಾಗುವ ಖರ್ಚು ಏನು?
ಮತ್ತು ವಿವಿಧ ತರಹದ ಶೆಡ್ಡು ಗಳು??
- ಪ್ರತಿ ಚದರಾಡಿಗೆ 2000 ದಿಂದ 4000 ಬೇಕಾಗುತ್ತದೆ. ಹೈನುಗಾರಿಕೆ ಮಾಡಬೇಕಾದರೆ ಮುಖ್ಯವಾಗಿ ನೀವು ಯಾವ ಹಸುಗಳನ್ನು ಸಾಕಬೇಕು ಮತ್ತು ಅದರ ಬೆಲೆಗಳು ಎಷ್ಟು?
- ಗಿರ್ ಹಸು ( ಹಾಲು ಕರೆಯುತ್ತಿರುವುದು ) 45 ಸಾವಿರದಿಂದ 70,000.
ಈ ಹಸು ದಿನಕ್ಕೆ 15 ರಿಂದ 20 ಲೀಟರ್ ಹಾಲು ಕರೆಯುವುದು. - HF ಹಸು ( ಹಾಲು ಕರೆಯುತ್ತಿರುವುದು ) 40 ಸಾವಿರದಿಂದ 55,000.
ಈ ಹಸು ದಿನಕ್ಕೆ 20 ರಿಂದ 25 ಲೀಟರ್ ಹಾಲು ಕೊಡುವುದು. - DEONI ( ಡೇನಿ ) ( ಹಾಲು ಕರೆಯುತ್ತಿರುವ ಹಸು ) 50 ಸಾವಿರದಿಂದ 70,000, ಈ ಹಸುವು ದಿನಕ್ಕೆ 15 ರಿಂದ 20 ಲೀಟರ್ ಹಾಲು ಕೊಡುವುದು. ಯಾವುದೇ ಹಸು ಇದ್ದರೂ ಪ್ರತಿದಿನಕ್ಕೆ ಅಂದಾಜು 200 ರಿಂದ 250 ರೂ ಗಳನ್ನ ಲಾಭ ಗಳಿಸಬಹುದಾಗಿದೆ.
ಎಲ್ಲರೂ ಹೈನುಗಾರಿಕೆ ತುಂಬಾ ಸುಲಭ ಎಂದು ತಿಳಿದಿದ್ದಾರೆ, ಆದರೆ ಈ ಹೈನುಗಾರಿಕೆಯಲ್ಲಿ ಹಲವಾರು ರೀತಿ ನೀತಿಗಳನ್ನು ಪಾಲನೆ ಮಾಡಿದರೆ ರೈತರಿಗೆ ಇನ್ನೂ ಹಲವು ಹೆಚ್ಚು ಅಧಿಕ ಸಂಪಾದನೆಯನ್ನು ಮಾಡಬಹುದು. ಈ ಪಾಲನೆಯು ತುಂಬಾ ಸರಳ ವಿಧಾನಗಳಾಗಿದ್ದು, ಆ ವಿಧಾನಗಳನ್ನು ತಿಳಿಯೋಣ ಬನ್ನಿ.
ಹೈನುಗಾರಿಕೆ ಎಂಬುದು ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿದೆ.ಮತ್ತು
ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಅನ್ನು ಒತ್ತಿ
https://kn.vikaspedia.in/agriculture/
ಹೈನುಗಾರಿಕೆಯಲ್ಲಿ ಅಭಿವೃದ್ಧಿ ರೂಪದಲ್ಲಿ ಸರಳ ವಿಧಾನದಲ್ಲಿ ಅತಿ ಹೆಚ್ಚು ಲಾಭ ಪಡೆಯುವುದು ಹೇಗೆ??
- ಹಸುಗಳನ್ನು ಪ್ರತಿದಿನ ಸ್ವಚ್ಛವಾಗಿ ತೊಳೆಯಬೇಕು ಮತ್ತು ಅವು ಇರುವಂತಹ ಜಾಗವನ್ನು ಸಹ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
- ಹೀಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಕ್ರಿಮಿ ಕೀಟಗಳು ಮತ್ತು ಆರೋಗ್ಯದ ಸಮಸ್ಯೆ ಬರುವುದಿಲ್ಲ. ಇದರಿಂದಾಗಿ ಹಸುಗಳು ತುಂಬಾ ಆರೋಗ್ಯದಿಂದ ಹಾಲನ್ನು ಹೆಚ್ಚು ಹೆಚ್ಚು ಕೊಡುತ್ತವೆ.
- ಹಸುಗಳಿಗೆ ಪ್ರತಿನಿತ್ಯ ಬೆಳಗ್ಗೆ ಹಸಿಮೆವನ್ನು ನೀಡಬೇಕು, ಮೇವನ್ನು ಅಚ್ಚುಕಟ್ಟಾಗಿ ಕತ್ತರಿಸಿ ಅವುಗಳಿಗೆ ನೀಡಬೇಕು.
- ನಂತರ 12 ಗಂಟೆಗೆ ನೀರನ್ನು ಕುಡಿಸಿ ಒಣಗಿದ ಮೇವನ್ನು ಹಾಕಬೇಕಾಗುತ್ತದೆ.
- ನಂತರ ಮಧ್ಯಾಹ್ನ ಯಾವುದೇ ಮೇವನ್ನು ಹಾಕದೆ ಅವುಗಳನ್ನು ವಿಶ್ರಾಂತಿ ತೆಗೆದುಕೊಳ್ಳಲು ಬಿಡಬೇಕು.
- ನಂತರ ಸಂಜೆ ಮೂರರಿಂದ ನಾಲ್ಕು ಗಂಟೆ ಒಳಗೆ ಅವುಗಳಿಗೆ ಕಾನ್ಸಂಟ್ರೇಷನ್ ಫುಡ್ ಅಂದರೆ ಫೀಡ್ಸ್ ಕೊಡಬೇಕಾಗುತ್ತದೆ. ನಂತರ ಅವುಗಳನ್ನು ಹಾಲು ಕರೆದು. ಸ್ವಲ್ಪ ಸಮಯದ ನಂತರ ವಿಶ್ರಾಂತಿ ತೆಗೆದುಕೊಳ್ಳಲು ಬಿಡಿ
ಮತ್ತು ಅತಿ ಮುಖ್ಯವಾಗಿ ಒಂದು ಹಸುವಿಗೆ ಪ್ರತಿನಿತ್ಯ ನೂರರಿಂದ 200 ತನಕ ಖರ್ಚಾಗುತ್ತದೆ.
ಈ ರೀತಿ ಹೈನುಗಾರಿಕೆಯಲ್ಲಿ ನೀವು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಿದರೆ ತಿಂಗಳಿಗೆ ಯಾವುದೇ ಅನುಮಾನವಿಲ್ಲದ ಲಕ್ಷ ಹಣವನ್ನು ಗಳಿಸಬಹುದಾಗಿದೆ.
ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/
ಅಟಲ್ ಪಿಂಚಣಿ ಯೋಜನೆ : ಈ ಯೋಜನೆ ಅಡಿ ಎಷ್ಟು ಹಣ ಪಡೆಯಬಹುದು ? ಮತ್ತು ಯಾರು ಅರ್ಹರಿರುತ್ತಾರೆ https://krushidarshana.com/index.php/2023/04/27/atal-pension-yojana-monthly-amount-who-should-apply-for-this-scheme/