
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶ, ದೇಶದ ಆರ್ಥಿಕ ಮುನ್ನಡೆಯಲ್ಲಿ ಕೃಷಿಯು ಒಂದು ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಸರಕಾರವು ಕೂಡ ಕೃಷಿಗೆ ಮುಖ್ಯತೆಯನ್ನು ಕೊಡುತ್ತಲೇ ಬಂದಿದೆ . ಹೀಗೆ ರೈತರಿಗೆ ಸಹಾಯವಾಗಲೆಂದು ಈಗ ಡಿಸಿಸಿ ಬ್ಯಾಂಕ್ ನಿಂದ ತಮ್ಮೆಲ್ಲರಿಗೂ ಒಳ್ಳೆ ಸುದ್ದಿ ಸಿಕ್ಕಿದೆ. ಎಲ್ಲ ರೈತರಿಗೂ ತಮ್ಮ ಕೃಷೆಯಲ್ಲಿ ಏನಾದರೂ ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಅಥವಾ ಇನ್ನೇನಾದರೂ ಬದಲಾವಣೆಗೆ ಹಣ ಬೇಕೇ ಬೇಕು.
ರೈತ ತಮ್ಮ ಹೊಲದಲ್ಲಿ ಏನಾದರೂ ಹೊಸತು ಪ್ರಯತ್ನ ಮಾಡಬೇಕು ಎಂದಿರುತ್ತಾನೆ ಆದರೆ ಹಣದ ವಿಷಯ ಯೋಚನೆ ಮಾಡಿ ಹಿಂಜರಗುತ್ತಾನೆ. ಆದರೆ ಈಗ ರೈತ
ಈ ಡಿಸಿಸಿ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡು ತನ್ನ ಹೊಲದ ಕೆಲಸವನ್ನು ಮಾಡಬಹುದು.
ನಿಮ್ಮ ಹೊಲದಲ್ಲಿ ಹನಿ ನೀರಾವರಿಗಾಗಿ 90% ರಷ್ಟು ಸಹಾಯಧನ https://mahitisara.com/index.php/2023/01/29/90-subsidy-for-drip-irrigation-state-horticulture-department/
ಹಾಗಾದರೆ ಯಾರಿಗಲ್ಲ ಈ ಬ್ಯಾಂಕಿನಿಂದ ಸಾಲ ಸಿಗುತ್ತದೆ?
ಸಾಲ ಪಡೆಯಲು ಬೇಕಾದ ಅರ್ಹತೆಗಳು.
- ಮೊದಲನೆಯದಾಗಿ ನೀವು ಕೃಷಿಕರಾಗಿರಬೇಕು.
- ನೀವು ಡಿಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು.
- ಡಿಸಿಸಿ ಬ್ಯಾಂಕ್ ನಿಂದ ನಾಲ್ಕು ಜನರ ಸಂಘವನ್ನು ನಿರ್ಮಿಸಬೇಕು. ಬ್ಯಾಂಕ್ ಪ್ರತಿ ಸಂಘಕ್ಕೆ ಅತಿ ಕಡಿಮೆ ಬಡ್ಡಿ ದರದಲ್ಲಿ 2,40,000 ರೂಪಾಯಿ ನೀಡುತ್ತದೆ
- ಸಂಘದ 4 ಸದಸ್ಯರಿಗೂ ತಲಾ 60,000 ರೂಪಾಯಿ ಶೇಕಡ 12 ರಬ್ಬಡಿ ದರದಲ್ಲಿ ಸಾಲ ಸಿಗುತ್ತದೆ.
ಸಾಲ ಪಡೆಯಲು ಬೇಕಾದ ದಾಖಲಾತಿಗಳು.
ರೈತನ ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ರೈತನ ಭಾವಚಿತ್ರಗಳು.
ಸಾಲ ಪಡೆಯಲು ತುಂಬ ಬೇಕಾದ ಅರ್ಜಿ ಪತ್ರ
ಈ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನೀವು ಡಿಸಿಸಿ ಬ್ಯಾಂಕಿಗೆ ಒಪ್ಪಿಸಬೇಕು.
ಸಾಲ ಎಷ್ಟು ದಿನಗಳ ನಂತರ ನಿಮ್ಮ ಖಾತೆಗೆ ಬರುತ್ತದೆ?
ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಈ ಬ್ಯಾಂಕಿನಿಂದ ನಿಮಗೆ ಬಹಳ ಕಡಿಮೆ ಅಂದರೆ ಒಂದರಿಂದ ಎರಡು ವಾರದಲ್ಲಿ ನಿಮ್ಮ ಖಾತೆಗೆ 60,000 ರೂಪಾಯಿ ಜಮಾ ಆಗುತ್ತದೆ. ನಾವು ಕೂಡ ಈ ಸಲಕ್ಕೆ ಅರ್ಜಿ ಸಲ್ಲಿಸಿದ್ದೆವು, ನಾವು ಮೂರು ವಾರದ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದೆವು ನಮಗೆ ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಹಣ ಬಂದು ನಮ್ಮ ಖಾತೆಗೆ ಜಮಾ ಆಗಿದೆ. ನೀವು ಕೂಡ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಇದೇ ರೀತಿಯಾಗಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9