Spread the love

ಕೋಳಿ ಆಹಾರವಾಗಿ ಅಜೋಲ್ಲ ಬಳಕೆ

ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವುದು ಒಂದು ಉತ್ತಮ ಕಸಬು ಆಗಿದೆ. ಕೋಳಿಗಳಿಗೆ ಉತ್ತಮ ಸಮತೋಲನವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು.ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ ಪಡೆಯಲು ಸಾಧ್ಯ.

ಕೋಳಿ ಸಾಕಣೆಯ ಒಟ್ಟು ವೆಚ್ಚದಲ್ಲಿ ಶೇಕಡಾ 60 ರಿಂದ 75 ರಷ್ಟು ಭಾಗ ಆಹಾರದ್ದಾಗಿರುತ್ತದೆ.

ಆರ್ಥಿಕ ದೃಷ್ಟಿಯಿಂದ ಈ ವೆಚ್ಚ ಒಂದು ಪ್ರಮುಖ ಅಂಶ.

ಕೋಳಿ ಆಹಾರದಲ್ಲಿ ಮುಖ್ಯವಾಗಿ ಶೇಕಡ 20 ರಿಂದ 24ರಷ್ಟು ಪ್ರಮಾಣ ಸಾರಜನಕವೆ ಆಗಿರುತ್ತದೆ.

ಅಜೊಲ್ಲ ಮತ್ತು ಸ್ಥಳೀಯವಾಗಿ ಸಿಗುವ ಕಡಿಮೆ ವೆಚ್ಚದ ಸಾಮಗ್ರಿಗಳನ್ನು ಉಪಯೋಗಿಸಿ ಆಹಾರ ನೀಡಿದರೆ ಮಾರುಕಟ್ಟೆಯಿಂದ ತಂದ ಆಹಾರದಿಂದ ಆಗುವ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಆದಾಯವನ್ನು ಪಡೆಯಬಹುದು.

ಅಜೋಲಾ ನೀರಿನ ಮೇಲೆ ತೇಲುವೊಂದು ಜಾತಿಯ ಸೇವೆಗಳ ಚಿಕ್ಕ ಸಸ್ಯವಾಗಿದೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ ಅಗತ್ಯ ಅಮೈನು ಆಮ್ಲಗಳು,ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತದೆ.

ಅಸಂಖ್ಯಾತ ಸಸ್ಯಗಳು ಒಂದಕ್ಕೊಂದು ಹೆಣೆದುಕೊಂಡು ನೀರಿನ ಮೇಲೆ ತೇಲಾಡುವ ಒಂದು ಚಾಪೆ ರೂಪ ಪಡೆದಿರುತ್ತದೆ.

ವಿಶ್ವದ್ಯಂತ ಎಂಟು ಜಾತಿ ಅಜೊಲ್ಲಗಳಿವೆ.ಅವುಗಳಲ್ಲಿ ಅಜೋಲಾ ಪಿನ್ನಾಟ ಜಾತಿ ನಮ್ಮ ಪ್ರದೇಶದಲ್ಲಿ ಹೆಚ್ಚಾಗಿ ಪ್ರಚಲಿತವಾಗಿದೆ.

ಅಜೊಲ್ಲ ಮಹತ್ವಗಳು:
ಅಜೋಲಾ ಸಸಾರಜನಕದ ಒಂದು ಉತ್ತಮ ಮೂಲವಾಗಿದ್ದು ಅದರಲ್ಲಿ ಹೆಚ್ಚಿಗೆ ಅಂದರೆ ಶೇಕಡ 20 ರಿಂದ 25 ರಷ್ಟು ಸಂಸಾರ ಜನಕ ಮತ್ತು ಕಡಿಮೆ ಲಿಗ್ನಿನ್ ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.
ಹೈನುರಾಸುಗಳಿಗೆ ಮತ್ತು ಕೋಳಿಗಳಿಗೆ ಅಗತ್ಯವಾದ ಕಚ್ಚಾ ನಾರು,ಪಿಷ್ಠ,ಕೊಬ್ಬು,ಇದಲ್ಲದೆ ಮ್ಯಾಂಗನೀಸ್ ಮತ್ತು ಮ್ಯಾಗ್ನಿಷಿಯಂ,ವಿಟಮಿನ್ 3 ,ವಿಟಮಿನ್ ಬಿ ಇತ್ಯಾದಿ ಪೌಷ್ಟಿಕಾಂಶಗಳು ಅಜೋಲ್ಲದಲ್ಲು ಅಡಕವಾಗಿದೆ.
ಅಜೋಲಾ ತಿನ್ನಿಸುವುದರಿಂದ ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚುತ್ತದೆ.ಕುರಿ,ಮೇಕೆ ಮತ್ತು ಕೋಳಿಗಳ ತೂಕ ಹೆಚ್ಚುತ್ತದೆ ಮತ್ತು ಕೋಳಿಗಳಲ್ಲಿ ಮೊಟ್ಟೆ ಉತ್ಪಾದನೆ ಕೂಡ ಹೆಚ್ಚುತ್ತದೆ.
ಭತ್ತದ ಬೆಳೆಗೆ ಉತ್ತಮ ಸಾರಜನಕದ ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು.
ಒಂದು ಎಕರೆ ಭತ್ತದ ಗದ್ದೆಯಲ್ಲಿ ಬೆಳೆದ ಅಜೋಲ್ಲಾ ಸುಮಾರು 15ರಿಂದ 30 ಕಿಲೋ ಗ್ರಾಂ ಸಾರಜನಕ ಮತ್ತು 60 ರಿಂದ 80 ಕ್ವಿಂಟಲ್ ಗಳಷ್ಟು ಸಾವಯವ ಪದಾರ್ಥ ಗದ್ದೆಗೆ ನೀಡುತ್ತದೆ ಹಾಗೂ ಭತ್ತಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ.
ಅಜೋಲ್ಲಾ ಬಳಕೆಯಿಂದ ಕಳೆಯನ್ನು ನಿಯಂತ್ರಿಸಬಹುದು.
ಎಲ್ಲಾ ಬೆಳೆಗಳಿಗೆ ಹಸಿರೆಲೆ ಗೊಬ್ಬರವಾಗಿ ಬಳಕೆ ಮಾಡಬಹುದು.
ಅಜೊಲ್ಲ ಬಳಕೆಯಿಂದ ಜಾನುವಾರ ಹಾಗೂ ಕೋಳಿ ಆಹಾರದ ವೆಚ್ಚವನ್ನು ಕಡಿಮೆ ಮಾಡಬಹುದು.
ಲುಸರ್ನೇ ಹಾಗೂ ಇತರೆ ಮೇವಿನ ಬೆಳೆಗಳಿಗೆ ಹೋಲಿಸಿದರೆ ಅಜ್ವಲ ಮೇವಿನಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚು ಸಸಾರಜನಕ ಇರುತ್ತದೆ.
ಅಜೋಲಾ ಬೆಳೆಸಲು ಬೇಕಾಗುವ ಅಗತ್ಯತೆಗಳು:
ದ್ಯುತಿಸಂಶ್ಲೇಷಣೆಗೆ ಮತ್ತು ಅಜೋಲ ಬೆಳವಣಿಗೆಗಾಗಿ 25 ರಿಂದ 50 ಪ್ರತಿಶತದಷ್ಟು ಬೆಳಕು ಬೇಕಾಗುತ್ತದೆ.
ಅಜೋಲಾ ಬೆಳವಣಿಗೆಗೆ ನೀರು ಮೂಲಭೂತ ಅವಶ್ಯಕತೆಯಾಗಿದೆ ಹಾಗಾಗಿ ಕನಿಷ್ಠ ನಾಲ್ಕು ಅಂಗೂಲದಷ್ಟು ನೀರಿನ ಮಟ್ಟ ಇಡುವುದು ಅಗತ್ಯ.
ಅಜೋಲಾ ಬೆಳವಣಿಗೆಗಾಗಿ ಉಷ್ಣಾಂಶ 20 ರಿಂದ 300 ಆಗಿರಬೇಕು.
ಅಜೋಲಾ ಬೆಳವಣಿಗೆಗಾಗಿ ತೇವಾಂಶ ಶೇಕಡ 85 ರಿಂದ 90 ರಷ್ಟು ಆಗಿರಬೇಕು.
ಅಜೋಲಾ ಬೆಳವಣಿಗೆಗಾಗಿ ನೀರಿನ ರಸಸಾರ 5 ರಿಂದ 7ರ ಒಳಗೆ ಇರಬೇಕು.
ಅಜೋಲ್ಲ ಬೆಳವಣಿಗೆಗಾಗಿ 20 ppm ರಂಜಕ ಬೇಕಾಗುತ್ತದೆ.
ಅಜೋಲಾ ಬೆಳೆಯುವ ಸ್ಥಳ:
ಅಜೋಲಾ ಬೆಳೆಸುವ ಸ್ಥಳ ಜಾನುವಾರುಗಳ ಕೊಟ್ಟಿಗೆ ಹಾಗೂ ನೀರು ನಿರಂತರ ಸರಬರಾಜು ಆಗುವ ಸ್ಥಳದಲ್ಲಿ ಜಾಗದಲ್ಲಿ ಇರಬೇಕು.
ಅಜೋಲ ಗುಂಡಿಗಳು ಗಿಡದ ನೆರಳಿನಲ್ಲಿ ಇರಬೇಕು.
ಅಜೋಲ್ಲಾಗೆ ಗುಂಡಿ ಮಾಡುವ ಸ್ಥಳದಲ್ಲಿ ಗಿಡಗಳ ಬೇರು ಮತ್ತು ಮುಳ್ಳು ಇರಬಾರದು.
ಗುಂಡಿಗಾತ್ರ ಮತ್ತು ನಿರ್ಮಾಣ:
ಗುಂಡಿಯ ಗಾತ್ರ ಜಾನುವಾರುಗಳ ಸಂಖ್ಯೆ ಅವುಗಳಿಗೆ ಬೇಕಾಗುವ ಪೂರಕ ಆಹಾರ ಮತ್ತು ಸಂಪನ್ಮೂಲಗಳ ಲಭ್ಯತೆ ಮೇಲೆ ಅವಲಂಬಿಸುತ್ತದೆ.
ಕಡಿಮೆ ಸಂಖ್ಯೆ ಜಾನುವಾರುಗಳನ್ನು ಹೊಂದಿರುವವರಿಗೆ 6×4 ಫೂಟ್ ಗಾತ್ರದ ಅಜೋಲ ಗುಂಡಿ ದಿನಕ್ಕೆ ಒಂದರಿಂದ ಒಂದೂವರೆ ಕೆಜಿ ಎಷ್ಟು ಅಜೋಲಾ ಉತ್ಪಾದನೆ ಮಾಡಬಹುದು.
ಗುಂಡಿಯ ಒಳಾವರಣವನ್ನು ಪ್ಲಾಸ್ಟಿಕ್ ಹಾಳಿಯಿಂದ ಮುಚ್ಚಬೇಕು,ಇದು ಗುಂಡಿಯ ಪಕ್ಕದಲ್ಲಿ ಬೇರುಗಳು ಪ್ಲಾಸ್ಟಿಕ್ ಹಾಳೆಯನ್ನು ಭೇದಿಸಿ ಬರುವುದನ್ನು ತಡೆಯುತ್ತದೆ.ಅಜೋಲಾ ಉತ್ಪಾದನೆ ವಿಧಾನ:

10-15 ಕೆಜಿ ಫಲವತ್ತತೆವುಳ್ಳ ಜರಡಿ ಮಣ್ಣಿನ ಜೊತೆ 5 ಕೆಜಿ ಜರಡಿ ಹಿಡಿದ ಸಗಣಿ ಮಿಶ್ರಣವನ್ನು ಗುಂಡಿಯಲ್ಲಿ ಇರುವ 3/4 ಅಂಶ ನೀರಿನ ಜೊತೆ ಸಮವಾಗಿ ಬೆರೆಸಬೇಕು.
6×4 ಫೂಟ್ ಗಾತ್ರದ ಗುಂಡಿಗೆ 1 ಕೆಜಿ ತಾಜಾ ಅಜೋಲ ಕಲ್ಚರ್ ಮಾಡಬೇಕಾಗುತ್ತದೆ.
ಅಜೋಲಾ ಕಲ್ಚರ್ ಹಾಕಿದ 10-15 ದಿನಗಳಲ್ಲಿ ಅಜೋಲ ಗುಂಡಿಯ ತುಂಬಾ ಬೆಳೆಯುತ್ತದೆ.
ಅಜೋಲಾ ಕಲ್ಚರ್ ಹಾಕಿದ ನಂತರ ಗುಂಡಿಯನ್ನು ಹಸಿರು ನೆಡೆದಿಂದ ಮುಚ್ಚಬೇಕು ಇದರಿಂದ ನೆರಳು ಬೀಳುತ್ತದೆ ಹಾಗೂ ಗಿಡದ ಎಲೆ ಮತ್ತು ಕಸ ಕಡ್ಡಿ ಬೀಳುವುದನ್ನು ತಡೆಗಟ್ಟಬಹುದು.
ಎರಡು ವಾರಗಳಿಂದ ಸುಮಾರು ಒಂದು ಕೆಜಿ ಹಸುವಿನ ಸಗಣಿ ಮತ್ತು ಸುಮಾರು 20-30 ಗ್ರಾಂ ಸೂಪರ್ ಪಾಸ್ಪೆಟ್ ಅನ್ನು ಒದಗಿಸುವುದರಿಂದ ಉತ್ತಮವಾದ ಬೆಳವಣಿಗೆ ಕಾಣಬಹುದು.
ಮಣ್ಣಿನಲ್ಲಿ ಸಾರಜನಕ ಪ್ರಮಾಣ ಹೆಚ್ಚಿಗೆ ಸೇರುವುದನ್ನು ತಪ್ಪಿಸಲು ಮತ್ತು ಲಘು ಪೋಷಕಾಂಶಗಳ ಕೊರತೆಯನ್ನು ತಡೆಗಟ್ಟಲು ಸುಮಾರು 5 ಕೆಜಿ ಮಣ್ಣನ್ನು 30 ದಿನಗಳಿಗೊಮ್ಮೆ ತಾಜಾ ಮಣ್ಣಿನಿಂದ ಬದಲಾಯಿಸಬೇಕು.
ಉತ್ತಮ ಅಜೋಲಾ ಬೆಳವಣಿಗೆಗಾಗಿ ಶೇಕಡ 25 ರಿಂದ 30ರಷ್ಟು ನೀರನ್ನು 10 ದಿನಗಳಿಗೊಮ್ಮೆ ಸಿಹಿನೀರಿನೊಂದಿಗೆ ಬದಲಾಯಿಸುವಾಗತ್ಯವಾಗಿದೆ. ಕೊಯ್ಲು:

ಅಜೋಲವನ್ನು ಒಂದು ರಂಧ್ರವುಳ್ಳ ಪ್ಲಾಸ್ಟಿಕ್ ಟ್ರೇಗಳಲ್ಲಿ ಕೊಯ್ಲು ಮಾಡಬೇಕು.
ಅಜೋಲವನ್ನು ಸಗಣಿ ವಾಸನೆಯಿಂದ ಹೋಗಲಾಡಿಸಲು ನೀರಿನಿಂದ ತೊಳೆಯಬೇಕು.
ತೊಳೆಯುವುದರಿಂದ ಸಣ್ಣ ಸಸಿಗಳನ್ನು ಬೇರ್ಪಡಿಸಬಹುದು.
ಕೋಳಿ ಆಹಾರವಾಗಿ ಅಜೋಲ್ಲಾ ಬಳಕೆ:
ಪ್ರತಿ ಕೋಳಿಗಳಿಗೆ 80 ರಿಂದ 90 ಗ್ರಾಂ ಅಜೋಲ್ಲ ಪ್ರತಿದಿನಕ್ಕೆ ನೀಡಬಹುದು
ಅಥವಾ ಅಜೋಲ್ಲವನ್ನು ಟ್ರೇಗಳಲ್ಲಿ ಇರಿಸಿ ಅದನ್ನು 3 ರಿಂದ 7 ದಿನಗಳವರೆಗೆ ಅಥವಾ ಕಂದು ಬಣ್ಣಕ್ಕೆ ತಿರುಗುವವರೆಗೆ ಬಿಸಿಲಿನಲ್ಲಿ ಒಣಗಲು ಇಡಬೇಕು.
ಒಣಗಿದ ಅಜೋಲ್ಲವನ್ನು ಪುಡಿ ಮಾಡಿ ಕೋಳಿ ಆಹಾರದಲ್ಲಿ ಶೇ.15 ರಿಂದ 20ರಷ್ಟು ಬಳಸಬಹುದು.

ಖರ್ಚು ವೆಚ್ಚ:
6×4 ಫೂಟ್ ಗುಂಡಿಯಲ್ಲಿ ಅಜೋಲಾ ಉತ್ಪಾದನೆ ಮಾಡಲು ರೂ.500/- ಖರ್ಚಾಗುತ್ತದೆ
ಅಜೋಲಾ ಉಪಯೋಗಿಸುವುದರಿಂದ ಕೋಳಿಗಳಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಹಾಗೂ ಕೋಳಿ ಆಹಾರದ ಪ್ರಮಾಣವನ್ನು ಶೇಕಡ 15 ರಿಂದ 20 ರಷ್ಟು ಕಡಿಮೆ ಮಾಡಬಹುದು.
ಇದರಿಂದ ಒಬ್ಬ ರೈತ ವರ್ಷಕ್ಕೆ ರೂ.5,000 ದಿಂದ 8000/- ಅಧಿಕ ನಿವ್ವಳ ಲಾಭ ಪಡೆಯಬಹುದು.

Leave a Reply

Your email address will not be published. Required fields are marked *