
ಕಾರವರ , ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿಯ ರೈತರ ಜೀವನಾಡಿ ಎಂದೆ ಪ್ರಸಿದ್ಧವಾದ ಅಡಿಕೆ ಬೆಳೆಯು ಎಲೆ ಚುಕ್ಕೆ ರೋಗದಿಂದ ಬಳಲುತ್ತಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಬುಧವಾರದಂದು ನಿಯೋಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅರವರನ್ನು ಭೇಟಿನೀಡಿ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.ಶಿವಮೊಗ್ಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಅಷ್ಟೇ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ ಇಡೀ ಬೆಳೆಯನ್ನೆ ನಾಶ ಮಾಡುತ್ತಿರುವ ಮತ್ತು ರೋಗವು ವೇಗವಗಿ ಹರಡುತ್ತಿರುವ ಕುರಿತು ನಿಯೋಗ ಕೃಷಿ ಸಚಿವರಿಗೆ ತಿಳಿಸಿದ್ದಾರೆ . ಈ ರೋಗದ ನಿಯಂತ್ರಣಕ್ಕೆ ಔಷಧಿ ಇನ್ನೂ ಲಭ್ಯವಾಗಿಲ್ಲ. ಇದಕ್ಕಾಗಿ ತುರ್ತಾಗಿ ಸಂಶೋಧನೆ ನಡೆಸಬೇಕೆಂದು ಮತ್ತು ಇದಕ್ಕೆ ಕೇಂದ್ರ ಸರ್ಕಾರವು ನೆರವು ನೀಡಬೇಕು ಎಂದು ಮನವಿ ಮಾಡಿದೆ
ಅಡಿಕೆ ಬೆಳೆಗಾರರಿಗೆ ಮತ್ತೊಂದು ತೊಂದರೆ ಎದುರಾಗಿದ್ದು, ದಿನದಿಂದ ದಿನಕ್ಕೆ ಎಲೆ ಚುಕ್ಕಿ ರೋಗ ಮತ್ತಷ್ಟು ಹೆಚ್ಚಾಗುತ್ತಿದೆ , ಬೆಳೆಗಾರರಿಗೆ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಮಳೆ ಹೆಚ್ಚಾದ ಕಾರಣದಿಂದ ಅಗತ್ಯ ಪ್ರಮಾಣದ ಬಿಸಿಲು ಅಡುಕೆ ಬೆಳೆಗೆ ಸಿಗದ ಕಾರಣ ಎಲೆ ಚುಕ್ಕಿ ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಫಸಲು ಕೂಡ ಕಡಿಮೆಯಾಗತೊಡಗಿದೆ.ಎಲೆ ಚುಕ್ಕಿ ರೋಗದಿಂದ ಶಿವಮೊಗ್ಗ, ಕಾರವರ ಹಾಗೂ ನೆರೆಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಅಡಕೆ ತೋಟ ಎಲೆ ಚುಕ್ಕಿ ರೋಗದಿಂದ ಬಳಲುತ್ತಿವೆ . ಆಗುಂಬೆ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಮತ್ತಿತರ ಕಡೆ ತೋಟಕ್ಕೆ ತೋಟವೇ ನಾಶವಾಗಿ ಬೆಳೆಗಾರರು ತತ್ತರಿಸಿದ್ದಾರೆ. ಉತ್ತರ ಕನ್ನಡದ ಶಿರಸಿಯ ಬನವಾಸಿ, ಕೊರ್ಲಕೈ, ಅಂಡಗಿ, ಸಿದ್ಧಾಪುರದ ಹೆಗ್ಗರಣಿ ಮತ್ತಿತರ ಕಡೆ ಕೂಡ ದಾಳಿ ಇಟ್ಟಿದೆ. ಹತೋಟಿಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ವರ್ಷ ಈ ರೋಗವು , ಅಡಕೆ ತೋಟಗಳಲ್ಲಿ ರುದ್ರನರ್ತನ ಮಾಡಲಿದೆ. ಮಳೆನಾಡು ರೈತ ಸಮುದಾಯದ ಜೀವನಾಡಿ ಎಂದೆ ಪ್ರಸಿದ್ದವದ ಅಡಿಕೆ ಬೆಳೆ ಎಲೆ ಚಿಕ್ಕಿ ರೋಗಕ್ಕೆ ತುತ್ತಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಅಕ್ಷರಸಃ ನಲುಗಿ ಹೋಗಿದ್ದಾರೆ.
ಪ್ರಪ್ರಥಮವಾಗಿ ಎಲೆಚುಕ್ಕೆ ರೋಗದ ತೀವ್ರತೆಯನ್ನು ಗಮನಿಸಿದ್ದು 2016 ರಲ್ಲಿ. ತ್ರಿಪುರ ರಾಜ್ಯದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿ ಅಡಿಕೆ ಮರದ ಸೋಗೆಗಳು ಹಳದಿಯಾಗಿ ಒಣಗಿದ್ದುವು. ಆಗ ಕಾಸರಗೋಡಿನ ಸಿಪಿಸಿಆರ್‌ಐ ಸಂಸ್ಥೆಯ ವಿಜ್ಞಾನಿಗಳ ತಂಡ ಅಲ್ಲಿಗೆ ಭೇಟಿ ನೀಡಿತ್ತು. ಪರಿಶಿಲಿಸಿದಗ ಅದು ಎಲೆ ಚುಕ್ಕೆ ರೋಗವೆಂದು ಖಚಿತವಾಯಿತು. ಪ್ರಥಮ ವಾಗಿ ಕರ್ನಾಟಕದ ಮೂಡಿಗೆರೆ ತಾಲೂಕಿನ ಕಳಸದ ಮರಸಣಿಗೆ ಪ್ರದೇಶದಲ್ಲೂ ಈ ರೋಗ ಕಾಣಿಸಿಕೊಂಡಿತ್ತು. ಮರಸಣಿಗೆಯಲ್ಲಿ ಮೊದಲು ಕೆಲವೇ ತೋಟಗಳಿಗೆ ಸಮಿತವಾಗಿದ್ದ ರೋಗವು ಮರು ವರ್ಷದಲ್ಲಿ ಸುಮಾರು ತೋಟಗಳಿಗೆ ಹಬ್ಬಿತ್ತು. ಗಾಳಿ ಮುಖಾಂತರ ಹರಡುವ ಕಾರಣ, ಮೊದಲ ಹಂತದಲ್ಲಿ ನಿಯಂತ್ರಣ ಮಾಡದಿದಲ್ಲಿ ಮುಂದೆ ತಡೆಯಲು ಕಷ್ಟ ವಾಗುತ್ತದೆ. ಎಲೆ ಚುಕ್ಕೆ ರೋಗವೆನು ಹೊಸದಾಗಿ ಕಂಡುಬರುವ ರೋಗವಲ್ಲ . ಸಾಮಾನ್ಯವಾಗಿ ಬೆಸಿಗೆ ಮತ್ತು ಮಳೆಗಾಲ ದಲ್ಲಿ ಸ್ವಲ್ಪ ಪ್ರಮಾಣ ದಲ್ಲಿ ಕಂಡು ಬರುವ ರೋಗವಾಗಿದ್ದು ರೋಗ ನಿರ್ವಹಣೆಗೆ ಕ್ರಮಗಳು ಲಭ್ಯವಿದೆ ಆದರೆ ಯಾರೂ ಪಾಲಿಸುವುದಿಲ್ಲ. ಏಕೆಂದರೆ, ಈ ವರೆಗೆ ಈ ರೋಗ ದೊಡ್ಡ ತಲೆನೋವಾಗಿರಲಿಲ್ಲ ಅದರೆ, ತ್ರಿಪುರದಲ್ಲಿ ಕಾಣಿಸಿದ ರೋಗದ ತೀವ್ರತೆ ಸ್ವಲ್ಪ ರೈತರಲ್ಲಿ ಗಾಬರಿ ಹುಟ್ಟಿಸಿತ್ತು. “ಬೆಟ್ಟದಲ್ಲಿ ಅಡಿಕೆಯನ್ನು ಬೆಳೆದಿದ್ದರು. ತಪ್ಪಲಿನಿಂದ ನೋಡಿದಾಗ, ಎಲೆಗಳೆಲ್ಲ ಒಣಗಿ ಜೋತು ಬಿದ್ದಿದ್ದವು. ಹತ್ತಿರಕ್ಕೆ ಹೋಗಿ ಪರೀಕ್ಷಿಸಿದಾಗ ಎಲೆ ಚುಕ್ಕೆ ರೋಗವೆಂದು ಖಚಿತವಾಯಿತು. ಕೆಳಭಾಗದ 3-5 ಎಲೆಗಳು ಹಳದಿಯಾಗುವುದು ಮತ್ತು ಒಣಗಿ ಹೋಗುವುದು ಈ ರೋಗದ ಲಕ್ಷಣಗಳು
ಗಾಬರಿಯಾಗುವ ಅಂಥ ವಿಷಯವಲ್ಲ ಎಂದು ತಿಳಿಯುವ ಸಮಸ್ಯೆಗಳು ಪ್ರಕೃತಿಯಲ್ಲಿ ಒಮ್ಮೆಲೇ ದೊಡ್ಡದಾಗಿ ಕಾಡುತ್ತವೆ ಎಂಬುದಕ್ಕೆ ಇದು ಒಂದು ಒಳ್ಳೆಯ ಉದಾಹರಣ್ ಎಂದರೆ ತಪ್ಪಲ್ಲ
ಎಲೆ ಚುಕ್ಕೆ ರೋಗವು ಫಿಲೋಸ್ಟಿಕ್ಟಾ ಅರೆಕೆ ಮತ್ತು ಕೊಲೆಟೋಟ್ರೈಕಮ್ ಸ್ಪಿಸಿಸ್ ಎನ್ನುವ ಶಿಲೀಂಧ್ರಗಳು ಇದಕ್ಕೆ ಕಾರಣ. ಕೊಲೆಟೋಟ್ರೈಕಮ್ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನೂ ಉಂಟುಮಾಡುತ್ತದೆ. ಹಿಂಗಾರ ಒಣಗುವ ರೋಗದಿಂದ ಒಂದು ವರ್ಷದ ಫಸಲು ಮಾತ್ರ ನಷ್ಟವಾಗುತ್ತದೆ. ಆದರೆ ಎಲೆ ಚುಕ್ಕೆ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲ ದುಷ್ಪರಿಣಾಮ ತೋರುತ್ತದೆ
ಲಕ್ಷಣಗಳು
೧.ಅಡಿಕೆ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕೆ ಮಾಡುವುದು
೨.ಎಲೆಗಳು ಹಳದಿ ಬಣ್ಣದಿಂದ ತುಂಬಿದರೆ ಅದು ಎಲೆ ಚುಕ್ಕೆ ರೋಗವೆಂದರ್ಥ
೩. ಕೆಲವೊಮ್ಮೆ, ಅಂಚು ಇರುವ ಕಪ್ಪು ಮತ್ತು ಕಂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು.
೪. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಸೇರಿ ಇಡೀ ಸೋಗೆಗೆ ಹಬ್ಬಿ ಅದನ್ನು ಒಣಗಿಸುತ್ತವೆ.
೫. ಮೊದಲು ಕೆಳಗಿನ ಸ್ವಲ್ಪವೇ ಎಲೆಗಳು ಹಳದಿ ಬಣ್ಣದಿಂದ ಕೂಡಿರುತ್ತದೆ ನಂತರ ರೋಗದ ತೀವ್ರ ಹೆಚ್ಚಾದಗ ಮೆಲೆಕುಡ ತಲಪುತ್ತದೆ
ರೋಗಕ್ಕೆ ಕಾರಣವಾದ ಅಂಶಗಳು
೧. ಈ ರೋಗವು ಪ್ರಥಮ ಪ್ರಥಮವಾಗಿ ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂಧ್ರಗಳಿಂದ ಉಂಟಾಗುತ್ತದೆ.
೨. ಶಿಲೀಂಧ್ರವು ನೆಲಕ್ಕೆಬಿದ್ದ ಎಲೆಗಳಲ್ಲಿ ವಾಸಿಸುವುದು, ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ.
೩. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ ೧೮ – ೨೪ ಡಿಗ್ರಿ ಸೆ ಮತ್ತು ಹೆಚ್ಚಿನ ಆದ್ರತೆ (೮0 ರಿಂದ ೯0%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗದ ತೀವ್ರ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಹೆಚ್ಚು ಕಂಡು ಬರುತ್ತದೆ
ನಿರ್ವಹಣೆ ಹೇಗೆ….?
೧. ಅಧಿಕ ರೋಗ ಹೊಂದಿರಿವ ಎಲೆಗಳನ್ನು ಕತ್ತರಿಸಿ ತಗೆದು ನಾಶ ಮಾಡುವುದರಿಂದ ಸೋಂಕಿನ ಪ್ರ ಮನ ಕಡಿಮೆಗೋಳ್ಳುವ ಸಾದ್ಯತೆ ಇರುತ್ತದೆ ಆದರೆ, ತೀವ್ರ ಬಾಧೆಯಿರುವಲ್ಲಿ ಇದು ಕೆಲಸ ಮಾಡುವುದು ಕಷ್ಟ
೨. ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡುವುದರಿಂದ ರೋಗ ನಿಯಂತ್ರಣದಲ್ಲಿ
೩.ಈಗ ತಾನೆ ಕಂಡು ಬರುತ್ತಿರುವ ರೋಗವಾದ ಕಾರಣ, ರೋಗದ ಪ್ರಮಾಣವನ್ನು ನಿಯಂತ್ರಿಸಲು ಕೆಲವೊಂದು ಶಿಲೀಂಧ್ರನಾಶಕಗಳನ್ನು ಶಿಫಾರಸ್ಸು ಮಾಡಲಾಗಿದೆ ಇದೇ ಅಂತಿಮವಲ್ಲ. ರೋಗ ಹೆಚ್ಚು ಪ್ರಮಾಣ ದಲ್ಲಿ ಕಂಡು ಬಂದರೆ ತೋಟಗಳಲ್ಲಿ, ಆಗಸ್ಟ್ – ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನಝೋಲ್ ಶಿಲೀಂಧ್ರನಾಶಕವನ್ನು ಎಲೆಗಳಿಗೆ ಸಿಂಪಡಣೆ ಮಾಡಬೇಕು.
ಪ್ರಮಾಣ : ಒಂದು ಲೀಟರ್ ನೀರಿಗೆ ಒಂದು ಮಿಲ್ಲಿಲೀಟರ್. ಎರಡನೆ ಸಿಂಪಡಣೆಗೆ ಕಾರ್ಬೇನ್ಡಜಿಮ್ + ಮಾಂಕೋಜೆಬ್ (ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಬಳಸಬಹುದು. ಅಥವಾ ಅಂತರ್ವ್ಯಾಪಿ ಶಿಲೀಂಧ್ರನಾಶಕಗಳಾದ ಹೆಕ್ಸಾಕೊನಝೋಲ್ / ಟೆಬುಕೊನಝೋಲ್ ಅನ್ನೂ ಬಳಸ
ತೀವ್ರ ರೋಗಬಾಧೆ ಇರುವಲ್ಲಿ, ಜನವರಿ ನಂತರ ಪ್ರೋಪಿಕೊನಝೋಲ್ ಶಿಲೀಂಧ್ರನಾಶಕವನ್ನು ಎಲೆಗಳಿಗೂ ಸಿಂಪಡಿಸಬೇಕು
ಅಡಿಕೆ ಮರದ ಆರೋಗ್ಯಕ್ಕೆ ಸಮತೋಲಿತ ಪೋಷಕಾಂಶ ನೀಡುವುದು ಮುಖ್ಯ. ಪೊಟಾಶಿಯಂ ಅಂಶ ಕಡಿಮೆ ಇರುವುದರಿಂದ ಈ ರೋಗ ಹೆಚ್ಚು ಪ್ರಮಾಣ ದಲ್ಲಿ ಕಂಡು ಬರುತ್ತದೆ ಅಡಿಕೆ ಮರಕ್ಕೆ ಸಾವಯವ ಗೊಬ್ಬರ, ಪೊಟಾಷ್ (240 – 350 ಗ್ರಾಂ), ಯೂರಿಯ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ), ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಗೊಬ್ಬರಗಳನ್ನು ವರುಷಕ್ಕೆ ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ಆಧಾರದ ಮೇಲೆಯೇ ಗೊಬ್ಬರ ನೀಡುವುದು ಉತ್ತಮ. ತೀವ್ರ ಬಾಧಿತ ಎಲೆಗಳನ್ನು ಕತ್ತರಿಸುವುದು ಹಾಗೂ ಶಿಲೀಂಧ್ರನಾಶಕ ಸಿಂಪಡಣೆ ಸುಲಭವಲ್ಲ. ಎಲ್ಲೆಡೆ ನುರಿತ ಕೆಲಸಗಾರರ ಕೊರತೆಯಿದೆ. ಆದರೆ, ಕಾರ್ಬನ್ ಫೈಬರ್ ದೋಟಿ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ನೆರವಾಗಬಹುದು. ಇದನ್ನು ಬಳಸಿ, ಸೋಗೆಯ ಹತ್ತಿರದಿಂದಲೇ ಮಂಜಿನ ರೂಪದಲ್ಲಿ ಸಿಂಪಡಿಸುಬೇಕು
ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಸಿಂಪಡಿಸುವ ಶಿಲೀಂಧ್ರನಾಶಕ ಔಷಧವನ್ನು ಕೃಷಿಕರಿಗೆ ಉಚಿತವಾಗಿ ವಿತರಿಸಲು ಸರಕಾರ ತೀರ್ಮಾನಿಸಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿನಿಡಿದರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಗಾರ ಅವರು ಮಾತನಾಡಿ ಹಿಗೆ ಹೇಳಿದರು , ಇತ್ತೀಚೆಗೆ ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಅಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು . ಸದ್ಯದಲ್ಲೇ ಸುಳ್ಯಕ್ಕೆ ತೋಟಗಾರಿಕೆ ಸಚಿವರು ಬಂದು ರೈತರ ಅಭಿಪ್ರಾಯ ಸಂಗ್ರಹಿಸುವರು ಮತ್ತು ಉಚಿತ ಔಷಧದೊಂದಿಗೆ ಬೆಳೆಗಾರರಿಗೆ ಬೇಕಾದ ದೋಟಿಯನ್ನು ಸಬ್ಸಿಡಿ ದರದಲ್ಲಿ ಒದಗಿಸುವಲಗುವದು ಎಂಬ ಬರವಸೆ ನಿಡಿದರು
ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ಏರುಪೇರು ಆದ ಕಾರಣ ಅಡಿಕೆ ಮರಗಳಿಗೆ ಉಂಟಾದ ಎಲೆ ಚುಕ್ಕಿ ರೋಗ ರೈತನಿಗೆ ಬಹಳ ಹಾನಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣ ಕ್ರಮಕ್ಕಾಗಿ ರಾಜ್ಯ ಸರಕಾರವು 4 ಕೋ.ಟಿ.ರೂ. ಅನುದಾನಕ್ಕೆ ಆದೇಶಿಸಿದೆ.
ಸುಮಾರು 20500 .ಹೆಕ್ಟೇರ್ ಕ್ಕು ಹೆಚ್ಚಿಗಳಂತೆ ದಲ್ಲಿ ಅಡಿಕೆ ಬೆಳೆಯುತ್ತಾರೆ, ಅಡಿಕೆ ಮರಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದೆ. ರೋಗ ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ ನಿಡಲಿದ್ದು 1.50 ಹೆಕ್ಟೇರ್ ಪ್ರದೇಶದವರೆಗೆ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಹಾಯಧಿಯ ರೂಪದಲ್ಲಿ ಅಂದಾಜು 8 ಕೋ.ರೂ. ಅಗತ್ಯವಿದೆ. ಆರಂಭದಲ್ಲಿ 10,000 ಹೆಕ್ಟೇರ್ ಪ್ರದೇಶಕ್ಕೆ ಮೊದಲನೇ ಸಿಂಪಡಣೆಗೆ 4 ಕೋ.ರೂ. ಆವಶ್ಯಕತೆ ಮನಗಂಡು ಸರಕಾರ ಅನುದಾನ ನೀಡಿದೆ.ಹವಾಮಾನ ಆಧರಿತ ವಿಮಾ ಯೋಜನೆಯು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ನೆರವಿಗೆ ಬಂದಿದ್ದು, ಇಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲೇ ಗರಿಷ್ಠ ವಿಮಾ ಮೊತ್ತವೂ ದ.ಕ. ಜಿಲ್ಲೆಯಲ್ಲೇ ವಿತರಣೆಯಾಗುತ್ತಿದೆ.ಜಿಲ್ಲೆಯಲ್ಲಿ 2020-21 ಸಾಲಿ ನಲ್ಲಿ 100 ಕೋ.ರೂ. ಮೊತ್ತ ವಿಮಾ ರೂಪದಲ್ಲಿ ವಿತರಣೆಯಾಗಿದೆ, 2021-22ರ ಸಾಲಿನ ಮೊತ್ತ ಇನ್ನೂ ವಿತರಣೆ ಆಗಿಲ್ಲ, ಆದರೆ ಈ ವರ್ಷದ ಮೊತ್ತ 150 ಕೋಟಿ ರೂ. ಮೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮುಂದಿನ ೨ ವರ್ಷಗಳಲ್ಲಿ ಎಲೆಚುಕ್ಕಿ ರೋಗವನ್ನು ಸಂಪೂರ್ಣ ಹತೋಟಿಗೆ ತರುವ ಯೋಜನೆ ಸಲುವಾಗಿ ಸರಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ರೈತರು ಹೆಕ್ಸ್‌ಕೊನೊಜಾಲ್ ಅಥವಾ ಪ್ರೊಪಿಕೊಜಾಲ್ ದ್ರಾವಣವನ್ನು ಒಂದು ಲೀಟರ್ ನೀರಿಗೆ 1 ಎಂ.ಎಲ್. ನಷ್ಟು ಬೆರೆಸಿ ಸೋಗೆ ಪೂರ್ತಿ ಆವರಿಸುವಂತೆ ಸಿಂಪಡಿಸಲು ಸಲಹೆ ನೀಡಲಾಗಿದೆ.ಎಳನೀರು ಪ್ರದೇಶದ ಅಡಿಕೆ ತೋಟಗಳಲ್ಲಿ ಕಂಡುಬಂದ ಎಲೆ ಚುಕ್ಕಿ ರೋಗ ಕಳಸ ಭಾಗದಿಂದ ಹರಡಿರುವ ಸಾಧ್ಯತೆಯಿದೆ. ಇದೀಗ ರೋಗ ಹತೋಟಿ ಕ್ರಮಕ್ಕೆ ರೈತರು ಬಳಸುವ ಔಷಧ ವೆಚ್ಚಕ್ಕೆ ಸರಕಾರವು ಸಹಾಯಧನ ಒದಗಿಸಿದೆ. ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ , ಬೆಳ್ತಂಗಡಿ ಇಲಖೆ ಕೆ.ಎಸ್.ಚಂದ್ರಶೇಖರ್ ಸ್ಪಷ್ಟ ಪಡಿಸಿದರು. ಹಾಗೆಯೇ ಅಡಿಕೆ ಗೆ ಸಂಬಂಧಿಸಿದ ವಿಷಯ ಎಂದರೆ ಭಾರತವು ನೆರೆಯ ಭೂತಾನ್ ದಿಂದ ಸುಮಾರು ೧೭ ಸಾವಿರ ಟನ್ ಹಸಿ ಅಡಿಕೆಯನ್ನು ಅಮದು ಮಾಡಿಕೊಳ್ಳಲಿದೆ
ಇದರಿಂದ ದೇಶದ ಅಡಿಕೆ ಮಾರುಕಟ್ಟೆಗೆ ಯಾವುದೇ ತೊಂದರೆ ಆಗದು. ಅಡಿಕೆ ಬೆಳೆಗಾರರು ಆತಂಕ ಪಡಬೇಕಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಆ ದೇಶದ ಪ್ರಧಾನಿಗಳು ತಮ್ಮ ದೇಶ ಆರ್ಥಿಕ ಸ್ತಿತಿ ಸಂಕಷ್ಟದಲ್ಲಿದೆ ಎಂದು ನಮ್ಮ ಪ್ರಧಾನಿಗಳ ಬಳಿ ಸಹಾಯ ಬಯಸಿದ್ದರು. ಆ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತವು ಅಲ್ಲಿನ ಪರಿಸ್ಥಿತಿ ಅರಿತು ಸಹಾಯ ಮಾಡಲು ನಮ್ಮ ದೇಶ ಮುಂದಾಯಿತು ಎಂದು ಹೇಳಿದರು.ನಮ್ಮ ದೇಶದ ಮಟ್ಟಿಗೆ ಅದು ಅತ್ಯಂತ ಸಣ್ಣ ಪ್ರಮಾಣವಾಗಿದ್ದು, ಏನೂ ಸಮಸ್ಯೆಯಾಗದು.ಸರಕಾರ ಅಡಿಕೆಗೆ ಹೆಚ್ಚು ತೆರಿಗೆ ಹಾಕಿದ್ದರಿಂದ ಅಡಿಕೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ.ಅತಿವೃಷ್ಟಿ, ಕೊಳೆರೋಗ, ನಳ್ಳಿ (ಎಳೆ ಅಡಿಕೆ) ಉದುರುವುದು ಇತ್ಯಾದಿ ಸಮಸ್ಯೆಗಳು ಜಿಲ್ಲೆಯ ಅಡಿಕೆ ಕೃಷಿಕರನ್ನು ಬಾಧಿಸುತ್ತಿವೆ. ಬೇಸಗೆಯ ಕೊನೆಯಲ್ಲಿ ಬಿಸಿಲಿನ ಝಳಕ್ಕೆ ಎಳೆ ಅಡಿಕೆ ಉದು ರುವುದು, ಜೂನ್ -ಜುಲೈ ತಿಂಗಳ ಸತತ ತೀವ್ರ ಮಳೆಯಿಂದಾಗಿ ಕೊಳೆರೋಗ ಉಂಟಾಗುತ್ತದೆ ಹೀಗಾಗಿ ರೈತ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಲೆ ಇದ್ದಾನೆ . ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಕುಡ ರೈತನಿಗೆ ಯಾವುದೆ ಆದಂತ ಹಾನಿ ಆಗಬಾರದ ಎಂದು ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಸಹಾಯ ಮಾಡುತಿದ್ದಾರೆ.
Useful inf